Shree Virakta Matha

Shree Virakta Matha Claimed

ಶ್ರೀ ವಿರಕ್ತ ಮಠ

Average Reviews

Description

ಶ್ರೀ ವಿರಕ್ತ ಮಠ – ಹಂಗಳ

ಕರ್ತೃ – ಶ್ರೀ ನಿ.ಪ್ರ. ನಿರಂಜನ ಶಿವಯೋಗಿಗಳು

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಗ್ರಾಮವು ತಾಲ್ಲೂಕುಕೇಂದ್ರದಿಂದ 9 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರವಲಯದಲ್ಲಿ ಅಸ್ತಿತ್ತ್ವದಲ್ಲಿರುವಶ್ರೀ ವಿರಕ್ತ ಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳ ಮೂಲಕಪ್ರಸಿದ್ದಿಯಲ್ಲಿದೆ. ಸುಮಾರು 150 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ವಿರಕ್ತಮಠದಸ್ಥಾಪಕರು ಶ್ರೀ ನಿ.ಪ್ರ.ಸ್ವ. ನಿರಂಜನ ಶಿವಯೋಗಿಗಳು.ಕುಣಿಗಲ್ ತಾಲ್ಲೂಕು ಚಿಕ್ಕಮಸ್ಕಲ್ ಗ್ರಾಮದಿಂದ ಸಂಚಾರ ಹೊರಟ ಕರ್ತೃಗುರುಗಳು ದಟ್ಟಡವಿಯಾಗಿದ್ದ ಈ ಪ್ರದೇಶದಲ್ಲಿ ನೆಲೆನಿಂತು ಅನುಷ್ಠಾನಗೊಂಡಿದ್ದರು. ಆಸಮಯದಲ್ಲಿ ಭಕ್ತರು ಗುರುಗಳ ದರ್ಶನಕ್ಕೆ ಆಗಮಿಸತೊಡಗಿ ಗುರುಗಳ ಅನುಷ್ಠಾನಕ್ಕೆ ಭಂಗಬಂದು ಮುಂದೆ ಹೊರಟರು. ಆಗ ಭಕ್ತರು ಇಲ್ಲೇ ನೆಲೆ ನಿಲ್ಲಬೇಕೆಂದು ಬೇಡಿಕೊಂಡಾಗಅವರ ಅಪೇಕ್ಷೆಗೆ ಒಲಿದು ಇಲ್ಲಿಯೇ ನೆಲೆನಿಂತು ಶ್ರೀಮಠದ ಜ್ಯೋತಿಯನ್ನು ಬೆಳಗಿಸಿ ಭಕ್ತರಶ್ರೇಯೋಭಿವೃದ್ಧಿಗೆ ಶ್ರಮಿಸಿದರು.ಕರ್ತೃ ಗುರುಗಳ ನಂತರದ ಶ್ರೀ ನಿ.ಪ್ರ.ಸ್ವ ಜಡೆ ಮಹಾಸ್ವಾಮಿಗಳುಮಹಾತಪಸ್ವಿಗಳಾಗಿ ಹಿರಿಯ ಗುರುಗಳು ತೋರಿಸಿಕೊಟ್ಟ ಧರ್ಮ ಮಾರ್ಗದಲ್ಲಿಶ್ರೀಮಠವನ್ನು ಮುನ್ನಡೆಸಿ ಲಿಂಗೈಕ್ಯರಾದರು. ಇವರ ನಂತರ ಶ್ರೀ ನಿ.ಪ್ರ.ಸ್ವ ಮುದ್ದುವೀರಸ್ವಾಮಿಗಳು ಹಾಗೂ ಹಿಂದಿನ ಶ್ರೀಗಳಾದ ಶ್ರೀ ನಿ.ಪ್ರ.ಸ್ವ. ನಿರಂಜನ ಮಹಾಸ್ವಾಮಿಗಳುಶ್ರೀಮಠವನ್ನು ಪ್ರಗತಿಪಥದಲ್ಲಿ ಮುನ್ನಡೆಸಿದ್ದು ಶ್ರೀಮಠವು ಸ್ವಾವಲಂಭನೆ ಸಾದಿಸಲುಕಾರಣಕರ್ತರಾದರು. ತಮ್ಮ ಜೀವಿತಾವದಿಯಲ್ಲಿಯೇ ಈಗಿನ ಶ್ರೀಗಳನ್ನು ಪಟ್ಟಕ್ಕೆ ತಂದಿದ್ದ ಶ್ರೀನಿರಂಜನ ಸ್ವಾಮಿಗಳು 1976ರಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ನಿ.ಪ್ರ.ಸ್ವ. ನಿರಂಜನ ಜಡೆಸ್ವಾಮಿಗಳು 1957ರ ಜೂನ್01ರಂದು ಶ್ರೀಮಠದ ಪಟ್ಟಕ್ಕೆ ಬಂದಿದ್ದು ಹಿರಿಯ ಗುರುಗಳ ಮಾರ್ಗದರ್ಶನದಲ್ಲಿಪರಿಪಕ್ವಗೊಂಡವರು. 1976ರಲ್ಲಿ ಹಿಂದಿನ ಗುರುಗಳ ಐಕ್ಯಾ ನಂತರ ಶ್ರೀಮಠದ ಪೂರ್ಣಅಧಿಕಾರ ವಹಿಸಿಕೊಂಡ ಶ್ರೀಗಳು ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಲುಶ್ರಮಿಸಿದ್ದಾರೆ. ಶ್ರೀಮಠದಲ್ಲಿ 4 ಗದ್ದುಗೆಗಳಿದ್ದು ಎಲ್ಲಾ ಗದ್ದುಗೆಗಳು ನಿತ್ಯ ಪೂಜೆಗೆ ಒಳಪಟ್ಟಿವೆ.ಪ್ರಸ್ತುತ ಶ್ರೀಗಳು 1990ರಲ್ಲಿ ನಿರಂಜನ ಶಿವಯೋಗಿಗಳ ಹೆಸರಿನಲ್ಲಿ ವಿದ್ಯಾಸಂಸ್ಥೆಯನ್ನುಪ್ರಾರಂಭಿಸಿ ಈ ಭಾಗದ ಬಡ ಮಕ್ಕಳಿಗೆ ನೆರವಾಗಿದ್ದಾರೆ.

Swamiji

Swamiji Name :
ಶ್ರೀ ನಿ.ಪ್ರ. ನಿರಂಜನ ಜಡೆ ಸ್ವಾಮಿಗಳು
Date of Birth :
10-04-1946
Place :
ಹಂಗಳ, ಗುಂಡ್ಲುಪೇಟೆ ತಾ||
Pattadikara :
01-06-1957
Photo :

Programs

ಮಹಾಶಿವರಾತ್ರಿ ಮತ್ತು ಬಸವ ಜಯಂತಿಗೆ ವಿಶೇಷ
ಪೂಜಾ ಕಾರ್ಯಕ್ರಮಗಳು
ಫೆಬ್ರುವರಿ ತಿಂಗಳಲ್ಲಿ ಹಿರಿಯ ಗುರುಗಳ ಆರಾಧನೆ

Institutions

ಕಿರಿಯ / ಹಿರಿಯ ಪ್ರಾಥಮಿಕ ಶಾಲೆ
ಫ್ರೌಢಶಾಲೆ
ವಿದ್ಯಾರ್ಥಿ ನಿಲಯ

Photos

Full Address Kannada

ಶ್ರೀ ವಿರಕ್ತ ಮಠ
ಹಂಗಳ - 571 126
ಗುಂಡ್ಲುಪೇಟೆ ತಾ||, ಚಾಮರಾಜನಗರ ಜಿಲ್ಲೆ

Map

Near by Places

ಹಂಗಳ - 1 ಕಿ.ಮೀ.
ಗುಂಡ್ಲುಪೇಟೆ - 9 ಕಿ.ಮೀ.
ಚಾಮರಾಜನಗರ - 44 ಕಿ.ಮೀ.-
ಮೈಸೂರು - 68 ಕಿ.ಮೀ.

Statistic

12 Views
0 Rating
0 Favorite
0 Share
error: Content is protected !!