ಚಾಮರಾಜನಗರ ಜಿಲ್ಲಾ ಕೇಂದ್ರದಿಂದ 17 ಕಿ.ಮೀ. ದೂರದಲ್ಲಿರುವ ಹರವೆಗ್ರಾಮದ ಮಧ್ಯಭಾಗದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ವಿರಕ್ತಮಠವು ಈ ಭಾಗದ ಪ್ರಮುಖಧಾರ್ಮಿಕ ಕೇಂದ್ರವಾಗಿ ಬೆಳೆದು ಬಂದಿದೆ. ಉತ್ತರದ ಕಡೆಯಿಂದ ಸಂಚಾರ ಮಾಡುತ್ತಾಅಲ್ಲಲ್ಲಿ ನೆಲೆಗೊಂಡು ಅನುಷ್ಠಾನದಲ್ಲಿರುತ್ತಾ ಕೊನೆಯಲ್ಲಿ ಈ ಭಾಗಕ್ಕೆ ಆಗಮಿಸಿದ ಶ್ರೀಮ.ನಿ.ಪ್ರ.ಸ್ವ. ಚನ್ನಬಸವ ಮಹಾಸ್ವಾಮಿಗಳು ಊರಿನ ಗ್ರಾಮಸ್ಥರ ನೆರವಿನಿಂದ ಮಠವನ್ನುಅಭಿವೃದ್ದಿಗೊಳಿಸಿದರು. ತಮ್ಮ ಧಾರ್ಮಿಕ ಆಚರಣೆಗಳು ಹಾಗೂ ಉಪನ್ಯಾಸಗಳಿಂದ ಧರ್ಮಜಾಗೃತಿಯನ್ನುಂಟು ಮಾಡಿದ ಶ್ರೀಗಳು ವೀರಶೈವ ಧರ್ಮ & ಶರಣ ತತ್ತ್ವವನ್ನು ಬೆಳೆಸಲುನೆರವಾದರು.ಕರ್ತೃ ಗುರುಗಳ ನಂತರದ ಪರಂಪರೆಯಲ್ಲಿ ಶ್ರೀ ಮ.ನಿ.ಪ್ರ.ಸ್ವ. ಶಿವಲಿಂಗಮಹಾಸ್ವಾಮಿಗಳು ಅಧಿಕಾರ ನಡೆಸಿದ್ದು ತದನಂತರದ ಶ್ರೀ ಮ.ನಿ.ಪ್ರ.ಸ್ವ. ಶ್ರೀಕಂಠಮಹಾಸ್ವಾಮಿಗಳು ಸಂಸ್ಕøತ, ವೇದ ಹಾಗೂ ಆಗಮ ಕಲಿತು ಧಾರ್ಮಿಕ ಚಟುವಟಿಕೆಗಳನ್ನುಶ್ರೀಮಂತಗೊಳಿಸಿ 1930ರಲ್ಲಿ ಲಿಂಗೈಕ್ಯರಾದರು. ಇವರುಗಳ ನಂತರ 1939ರಲ್ಲಿ ಶ್ರೀಮಠದಪಟ್ಟಕ್ಕೆ ಬಂದ ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ.ಸ್ವ. ಶಿವನಂಜ ಮಹಾಸ್ವಾಮಿಗಳ ಕಾಲದಲ್ಲಿಶ್ರೀಮಠವು ಉತ್ತುಂಗಕ್ಕೇರಿತು. ಅತ್ಯುತ್ತಮ ವಾಗ್ಮಿಗಳಾಗಿದ್ದ ಶ್ರೀಗಳು ಧರ್ಮದಿಂದ ನಾಡನ್ನುಸಚ್ಚಾರಿತ್ರೆಯಿಂದ ಕಟ್ಟಲು ಸಾಧ್ಯ ಎಂಬ ಮಾರ್ಗದಲ್ಲಿ ಧರ್ಮಬೋಧನೆ ಮಾಡುತ್ತಾಸಮಾಜದ ಅಭ್ಯುದಯಕ್ಕೆ ಶ್ರಮಿಸಿದರು.ಶ್ರೀಮಠದ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿದ ಶ್ರೀಗಳು ಮಠಕ್ಕೆ ಆಸ್ತಿಯನ್ನುರೂಡಿಸಿ ಅನೇಕ ಜನೋಪಯೋಗಿ ಕಾರ್ಯಗಳಿಗೆ ದಾನ ಮಾಡಿದ್ದಾರೆ. ಇಂತಹಮಹಾಗುರುಗಳು 2000ದ ಡಿಸಂಬರ್ 02ರಂದು ಲಿಂಗೈಕ್ಯರಾಗಿದ್ದು ಅಂದೇ ಈಗಿನಶ್ರೀಗಳಾದ ಶ್ರೀ ಮ.ನಿ.ಪ್ರ.ಸ್ವ. ಸರ್ಪಭೂಷಣ ಸ್ವಾಮಿಗಳನ್ನು ಅಧಿಕಾರಕ್ಕೆ ತರಲಾಗಿದೆ. ಪ್ರಸ್ತುತಶ್ರೀಗಳು ಹಿರಿಯ ಗುರುಗಳಂತೆಯೇ ಕ್ರಿಯಾಶೀಲರಾಗಿ ಭಕ್ತರ ಸಹಕಾರದೊಂದಿಗೆ ಶ್ರೀಮಠಹಾಗೂ ಸಮಾಜದ ಅಭ್ಯುದಯಕ್ಕೆ ಶ್ರಮಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ.ಸ್ವ. ಸರ್ಪಭೂಷಣ ಸ್ವಾಮಿಗಳು
Date of Birth :
08-07-1974
Place :
ಹರವೆ, ಚಾಮರಾಜನಗರ ತಾ||
Pattadikara :
02-12-2000
Photo :
Programs
ಪ್ರತಿ ಅಮವಾಸೆ ಮತ್ತು ಹುಣ್ಣಿಮೆಗೆ ವಿಶೇಷ ಪೂಜೆ
ಶಿವರಾತ್ರಿಗೆ ವಿಶೇಷ ಪೂಜೆ ಕಾರ್ಯಕ್ರಮಗಳು
Institutions
ಸಂಸ್ಕøತ ಪಾಠಶಾಲೆ
ಕಿರಿಯ / ಹಿರಿಯ ಪ್ರಾಥಮಿಕ / ಫ್ರೌಢ ಶಾಲೆ
Photos
Full Address Kannada
ಶ್ರೀ ವಿರಕ್ತ ಮಠ
ಹರವೆ - 571 128
ಚಾಮರಾಜನಗರ ತಾ|| ಮತ್ತು ಜಿಲ್ಲೆ