Shree Virakta Maha Samsthana Matha

Shree Virakta Maha Samsthana Matha Claimed

ಶ್ರೀ ವಿರಕ್ತ ಮಹಾಸಂಸ್ಥಾನ ಮಠ

Average Reviews

Description

ಶ್ರೀ ವಿರಕ್ತ ಮಹಾಸಂಸ್ಥಾನ ಮಠ

ಕರ್ತೃ – ಶ್ರೀ ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು

ತುಮಕೂರು ಜಿಲ್ಲೆ ತಮ್ಮಡಿಹಳ್ಳಿಯ ಗುಡ್ಡದ ಪಕ್ಕದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ವಿರಕ್ತಮಹಾಸಂಸ್ಥಾನ ಮಠವು ತನ್ನ ಪ್ರಾಚೀನ ಶ್ರೀಮಂತ ಪರಂಪರೆಯಿಂದಾಗಿ ಈ ಭಾಗದಲ್ಲಿಪ್ರಸಿದ್ಧಿಯಲ್ಲಿದೆ. ಕಟ್ಟಿಗೆ ಹಳ್ಳಿಯಲ್ಲಿ ಶ್ರೀ ಮಠದ ಮೂಲ ಮಠವಿದ್ದು ಕ್ರಮೇಣಚಿಕ್ಕನಾಯಕನಹಳ್ಳಿ ಬಳಿಯ ತಗಬೇಘಟ್ಟದ ಬಿಲ್ವ ವನದಲ್ಲಿಗೆ ಸ್ಥಳಾಂತರಗೊಂಡಿದೆ. ನಂತರವಿರಕ್ತಮಠದ ಸನಿಹದಲ್ಲೇ ಇದ್ದ ಹೊಸ ಕಟ್ಟೆಗೆ ಹೊಸ ಕಟ್ಟೆಯಿಂದ ಮಲ್ಲಿಕಾರ್ಜುನನನೆಲೆವೀಡಾದ ಮಲ್ಲಿಕಾರ್ಜುನ ಕ್ಷೇತ್ರದ ತಮ್ಮಡಿಹಳ್ಳಿಯಲ್ಲಿ ನೆಲೆಗೊಂಡಿದೆ.ಈ ರೀತಿಯಾಗಿ ತಮ್ಮಡಿಹಳ್ಳಿಯಲ್ಲಿ ನೆಲೆಗೊಂಡಿರುವ ಶ್ರೀ ವಿರಕ್ತ ಮಠದ ಕರ್ತೃಗುರುಗಳು ಶ್ರೀ ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳಾಗಿದ್ದು ಇವರ ಕರ್ತೃಗದ್ದುಗೆ ಕಟ್ಟಿಗೆಹಳ್ಳಿಯ ಮೂಲ ಮಠದಲ್ಲಿ ಸ್ಥಾಪಿತಗೊಂಡಿದೆ. ನಂತರದ ಪರಂಪರೆಯಲ್ಲಿ 1720 ರಿಂದ1740ರ ಕಾಲಘಟ್ಟದ ಶ್ರೀ ಮುಪ್ಪಿನ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಗದ್ದುಗೆ ತಗಬೇಘಟ್ಟದಬಿಲ್ವವನದಲ್ಲಿದ್ದು ನಂತರದ ಕೆಲ ಗುರುಗಳ ಬಗ್ಗೆ ತಿಳಿದುಬರುವುದಿಲ್ಲ.ನಂತರದ ಶ್ರೀ ಸಂಗಮೇಶ್ವರ ಮಹಾಸ್ವಾಮಿಗಳು, ಶ್ರೀ ಸಿದ್ದೇಶ್ವರ ಸ್ವಾಮಿಗಳಕುರಿತು ಅಲ್ಪ ಮಾಹಿತಿ ತಿಳಿದು ಬರುತ್ತದೆ. ನಂತರದಲ್ಲಿ ಪಟ್ಟಕ್ಕೆ ಬಂದ ಶ್ರೀ ನಿ.ಪ್ರ.ಸ್ವ. ಕರಿಬಸವದೇಶಿಕೇಂದ್ರ ಮಹಾಸ್ವಾಮಿಗಳು ಆಧ್ಯಾತ್ಮ ಚಿಂತಕರಾಗಿದ್ದು ಇವರ ಕಾಲದಲ್ಲಿ ಶ್ರೀ ಮಠದಸರ್ವಾಂಗೀಣ ಅಭಿವೃದ್ಧಿಯಾಗಿದೆ. ನಂತರದ ಶ್ರೀ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳುಇದನ್ನು ಮುಂದುವರೆಸಿಕೊಂಡು ಬಂದಿದ್ದು, ಹಿಂದಿನ ಶ್ರೀಗಳಾದ ಶ್ರೀ ಮಲ್ಲಿಕಾಜುನಸ್ವಾಮಿಗಳನ್ನು 1956ರಲ್ಲಿ ನೇಮಕಗೊಳಿಸಿ 1965ರಲ್ಲಿ ಲಿಂಗೈಕ್ಯರಾದರು.ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಕಾಯಕ ನಿಷ್ಠೆಯ ಜೊತೆಗೆ ಶೈಕ್ಷಣಿಕಕಾರ್ಯಗಳಿಗೆ ಒತ್ತುಕೊಟ್ಟು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಇವರ ಕಾಲದಲ್ಲಿ ಶ್ರೀಮಠವು ಧಾರ್ಮಿಕ, ಆರ್ಥಿಕ, ಶೈಕ್ಷಣಿಕವಾಗಿ ಅಭಿವೃದ್ಧಿಯನ್ನು ಸಾಧಿಸಿ ಸದೃಢವಾಗಿರೂಪುಗೊಂಡಿತು. ಇವರ ಕಾಲದಲ್ಲಿ ಊರ ಒಳಗಿದ್ದ ಶ್ರೀ ಮಠವು ಊರ ಹೊರಗೆಸ್ಥಳಾಂತರಗೊಂಡಿದೆ. ಪ್ರಸ್ತುತ 2005ರ ನವೆಂಬರ್ 14 ರಂದು ಶ್ರೀ ಮಠದ ಅಧಿಕಾರವಹಿಸಿಕೊಂಡಿರುವ ಶ್ರೀ ಮ.ನಿ.ಪ್ರ. ಡಾ|| ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರಮಹಾಸ್ವಾಮಿಗಳು ಶ್ರೀ ಮಠವನ್ನು ಸರ್ವ ರೀತಿಯಲ್ಲೂ ಅಭಿವೃದ್ಧಿಪಡಿಸುತ್ತಿದ್ದಾರೆ. ಶ್ರೀಮಠದಲ್ಲಿ ಪ್ರತಿ ವರ್ಷ ಶ್ರೀ ಸಿದ್ಧರಾಮೇಶ್ವರ ಜಯಂತಿ ಹಾಗೂ ಶ್ರೀ ಮಲ್ಲಿಕಾರ್ಜುನ ಸ್ವಾಮಿಜಾತ್ರೆಯನ್ನು ನಡೆಸಲಾಗುತ್ತಿದೆ.

Swamiji

Swamiji Name :
ಶ್ರೀ ಮ. ನಿ. ಪ್ರ. ಡಾ|| ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಮಹಾಸ್ವಾಮಿಗಳು
Date of Birth :
28-08-1975
Place :
ಬಾಗಿಲಘಟ್ಟ, ಅರಸೀಕೆರೆ ತಾ||
Pattadikara :
14-11-2005

Programs

ಪ್ರತಿ ಅಮವಾಸ್ಯೆಗೆ ಶಿವಾನುಭವ ಗೋಷ್ಠಿ ಮತ್ತು ಧಾರ್ಮಿಕ ಸಮ್ಮೇಳನ ನಾಗರ ಅಮವಾಸೆಯಂದು ಕುಂಭಾಭಿಷೇಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ಜ್ಯೇಷ್ಠ ಮಾಸದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾತ್ರೆ ಹಾಗೂ ಶ್ರೀ ಸಿದ್ಧರಾಮೇಶ್ವರ ಜಯಂತಿ

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ ಪದವಿ ಕಾಲೇಜು ಪದವಿ ಪೂರ್ವ / ಐ.ಟಿ.ಐ. ಕಾಲೇಜ್ ಸಂಸ್ಕøತ ವಿದ್ಯಾಲಯಗಳು ವಿದ್ಯಾರ್ಥಿ ನಿಲಯ

Photos

Full Address Kannada

ಶ್ರೀ ವಿರಕ್ತ ಮಹಾಸಂಸ್ಥಾನ ಮಠ ತಮ್ಮಡಿಹಳ್ಳಿ, ಕುಪ್ಪೂರು ಪೋ. - 572 214 ಚಿಕ್ಕನಾಯಕನಹಳ್ಳಿ ತಾ||, ತುಮಕೂರು ಜಿಲ್ಲೆ

Map

Near by Places

ಕುಪ್ಪೂರು - 3 ಕಿ.ಮೀ. ಚಿಕ್ಕನಾಯಕನಹಳ್ಳಿ - 13 ಕಿ.ಮೀ. ತುಮಕೂರು - 75 ಕಿ.ಮೀ.

Statistic

8 Views
0 Rating
0 Favorite
0 Share
error: Content is protected !!