ಅಫಜಲಪುರ ತಾಲ್ಲೂಕು ಕೇಂದ್ರದಿಂದ 10 ಕಿ.ಮೀ. ದೂರದಲ್ಲಿರುವ ಬಳೂರಗಿಗ್ರಾಮದಲ್ಲಿ ಪೂಜ್ಯ ಶ್ರೀ ಶಾಂತಲಿಂಗೇಶ್ವರ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವಪುರಾತನ ಕಾಲದ ಶ್ರೀ ವಿರಕ್ತಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಕ್ರಮಗಳ ಮೂಲಕ ಈ ಭಾಗದ ಜನರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುವಲ್ಲಿಶ್ರಮಿಸುತ್ತಿದೆ. ಶ್ರೀ ಶಾಂತಲಿಂಗೇಶ್ವರ ಮಹಾಸ್ವಾಮಿಗಳು ಶ್ರೀಮಠದ ಕರ್ತೃಗುರುಗಳಾದರೂಇವರ ಬಗ್ಗೆಯಾಗಲೀ ನಂತರದ ಪರಂಪರೆಯ ಗುರುಗಳ ಬಗ್ಗೆಯಾಗಲೀತಿಳಿದುಬರುವುದಿಲ್ಲ. ಶ್ರೀಮಠದಲ್ಲಿ ಕರ್ತೃಗುರುಗಳ ಗದ್ದುಗೆಯನ್ನು ಕಾಣಬಹುದಾಗಿದ್ದುಇನ್ನುಳಿದ ಗದ್ದುಗೆಗಳ ಕುರಿತು ತಿಳಿದುಬರುವುದಿಲ್ಲ.ಹಿಂದಿನ ಗುರುಗಳಾದ ಶ್ರೀ ಮ.ನಿ.ಪ್ರ. ಶಾಂತಲಿಂಗ ಮಹಾಸ್ವಾಮಿಗಳು ಶ್ರೀಮಠದಅಧಿಕಾರವನ್ನು ವಹಿಸಿಕೊಂಡು ಮುನ್ನಡೆಸಿದ್ದು ಇವರ ಕಾಲಾ ನಂತರ ಶ್ರೀಮಠವು 15ವರ್ಷಗಳಿಗೂ ಅಧಿಕ ಕಾಲ ಖಾಲಿ ಉಳಿದಿದೆ. ಶ್ರೀಮಠವು ದೀರ್ಘ ಕಾಲ ಖಾಲಿಉಳಿದಿದ್ದನ್ನು ಕಂಡ ಭಕ್ತರು ಪುರಾತನ ಪರಂಪರೆಯ ಮಠಕ್ಕೆ ಪ್ರಸ್ತುತ ಶ್ರೀಗಳಾದ ಶ್ರೀಮ.ನಿ.ಪ್ರ. ಶಂಭುಲಿಂಗ ಮಹಾಸ್ವಾಮಿಗಳನ್ನು ನೇಮಕಗೊಳಿಸಿದರು.ಪ್ರಸ್ತುತ ಶ್ರೀಗಳಾದ ಶ್ರೀ ಮ.ನಿ.ಪ್ರ. ಶಂಭುಲಿಂಗ ಮಹಾಸ್ವಾಮಿಗಳು 1998ರಏಪ್ರಿಲ್ 23ರಲ್ಲಿ ಶ್ರೀಮಠದ ಪಟ್ಟಕ್ಕೆ ಬಂದಿದ್ದು ಶ್ರೀ ಮಠವನ್ನು ಅಭಿವೃದ್ದಿಪಥದತ್ತಮುನ್ನಡೆಸುತ್ತಿದ್ದಾರೆ. ವೈಧಿಕ, ಜ್ಯೋತಿಷ್ಯ, ಸಂಸ್ಕøತ ಅಭ್ಯಾಸವನ್ನು ಹಾವೇರಿಯಲ್ಲಿ ಅಭ್ಯಸಿಸಿದಶ್ರೀಗಳು ಶಿವಯೋಗ ಮಂದಿರದಲ್ಲಿ ವೇದ, ಉಪನಿಷತ್ತು, ಆಧ್ಯಾತ್ಮ ಶಿಕ್ಷಣವನ್ನುಅಭ್ಯಸಿಸಿದರು. 1978ರಲ್ಲಿಯೇ ಶ್ರೀಮಠಕ್ಕೆ ಆಗಮಿಸಿದ ಶ್ರೀಗಳು ಜೀರ್ಣಗೊಂಡ ಪುರಾತನಕಟ್ಟಡವನ್ನು ಅಭಿವೃದ್ದಿಪಡಿಸಿದರು. ಅಲ್ಲದೇ ಮಠದಲ್ಲಿ ಧಾರ್ಮಿಕ ಆಚರಣೆಗಳನ್ನುಚುರುಕುಗೊಳಿಸಿ ನಂತರವಷ್ಟೇ 1998ರಲ್ಲಿ ಪಟ್ಟಾಧಿಕಾರ ಸ್ವೀಕರಿಸಿದರು.ಶ್ರೀಗಳು ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಶ್ರಾವಣ ಮಾಸದಲ್ಲಿನಿತ್ಯ ರುದ್ರಾಭಿಷೇಕ ಹಾಗೂ ಭಕ್ತರಿಂದ ಪಾದಪೂಜೆಗಳನ್ನು ನಡೆಸಿಕೊಂಡು ಬರುತ್ತಿದ್ದುಯುಗಾದಿಯ ಪಾಡ್ಯದಿಂದ ಅಕ್ಷಯ ತೃತೀಯದವರೆಗೂ ಶ್ರೀಮಠದ ಜಾತ್ರೆಯನ್ನುಆಯೋಜಿಸುತ್ತಿದ್ದಾರೆ.