Shree Veera Simhasana Sheela Matha

Shree Veera Simhasana Sheela Matha Claimed

ಶ್ರೀ ವೀರಸಿಂಹಾಸನ ಶಿಲಾಮಠ

Average Reviews

Description

ಶ್ರೀ ವೀರಸಿಂಹಾಸನ ಶಿಲಾಮಠ – ಸೋಮಹಳ್ಳಿ

ಕರ್ತೃ – ಪರಮ ಪೂಜ್ಯ ಶ್ರೀ ಗಂಗಾದರೇಶ್ವರ ಮಹಾಸ್ವಾಮಿಗಳು

ಚಾಮರಾಜನಗರ ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿರುವಶ್ರೀ ವೀರಸಿಂಹಾಸನ ಶಿಲಾಮಠವು ಜಾಗೃತ ಕೇಂದ್ರವಾಗಿದ್ದು ಗುಂಡ್ಲುಪೇಟೆ ತಾಲ್ಲೂಕಿನಸೋಮಹಳ್ಳಿಯಲ್ಲಿ ಅಸ್ತಿತ್ತ್ವದಲ್ಲಿದೆ. ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿಶಿಷ್ಯವರ್ಗದ ಪರಂಪರೆಯಲ್ಲಿ ಬೆಳೆದು ಬಂದಿರುವ ಶ್ರೀಮಠದ ಕರ್ತೃ ಗುರುಗಳೆಂದು ಪರಮಪೂಜ್ಯ ಮಹಾತಪಸ್ವಿ ಶ್ರೀ ಗಂಗಾಧರೇಶ್ವರ ಮಹಾಸ್ವಾಮಿಗಳನ್ನು ಗುರುತಿಸಲಾಗಿದ್ದುಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲ.ನಂಜನಗೂಡು ಭಾಗದಿಂದ ಸಂಚಾರ ಬಂದ ಶಿವಯೋಗಿ ಶ್ರೀಗಂಗಾಧರೇಶ್ವರರು ಅನೇಕ ಸ್ಥಳಗಳಲ್ಲಿ ಅನುಷ್ಠಾನಗೊಂಡು ಭಕ್ತರನ್ನುದ್ದರಿಸುತ್ತಾಸೋಮಹಳ್ಳಿಯ ಹೊರಭಾಗದ ಪ್ರಶಾಂತ ಸ್ಥಳದಲ್ಲಿ ಬಂದು ಅನುಷ್ಠಾನಗೊಂಡರು. ತಮ್ಮಧೀರ್ಘಾನುಷ್ಠಾನದಿಂದ ಎಚ್ಚೆತ್ತ ಶಿವಯೋಗಿಗಳು ಭಕ್ತರ ಕೈಂಕರ್ಯಗಳನ್ನು ನೋಡಿಸಂತೋಷಗೊಂಡು ಭಕ್ತರ ಒತ್ತಾಸೆಯಂತೆ ಇಲ್ಲಿಯೇ ನೆಲೆನಿಂತು ಮಠವನ್ನು ಸ್ಥಾಪಿಸಿದರು.ಸೋಮಹಳ್ಳಿಯ ಶ್ರೀ ವೀರಸಿಂಹಾಸನ ಶಿಲಾಮಠದ ಪ್ರಸಿದ್ದಿಯನ್ನು ಕೇಳಿತಿಳಿದಿದ್ದ ಸುತ್ತಲಿನ63 ಪಾಳೇಗಾರರು ಮಠಕ್ಕೆ ಬಂದು ಗುರುಗಳ ದರ್ಶನ ಪಡೆದು ಅವರಿಗೆ ಕಾಣಿಕೆಗಳನ್ನುಸಮರ್ಪಿಸಿ ಆಶೀರ್ವಾದ ಪಡೆದರು. ಇಂತಹ ಮಹಾಗುರುಗಳು ಶ್ರೀಮಠದಲ್ಲಿಯೇನಿರ್ವಿಕಲ್ಪ ಸಮಾದಿಯಾಗಿದ್ದು ಇಂದಿಗೂ ಅಸಂಖ್ಯಾತ ಭಕ್ತರನ್ನು ಮುನ್ನಡೆಸುತ್ತಿದ್ದಾರೆ ಎಂಬನಂಬಿಕೆ ಜನಜನಿತವಾಗಿದೆ.ಶ್ರೀಮಠದ ಗುರು ಪರಂಪರೆಯಲ್ಲಿ ಒಟ್ಟು ಆರು ಜನ ಶ್ರೀಗಳು ಶ್ರೀಮಠದಆಡಳಿತವನ್ನು ನಡೆಸಿದ್ದಾರೆಂದು ತಿಳಿದು ಬರುತ್ತಿದ್ದು ಇವರಲ್ಲಿ ಪ್ರಮುಖವಾಗಿ ಗುರುತಿಸುವಗುರುಗಳೆಂದರೆ ಲಿಂ|| ಶ್ರೀ ಷ.ಬ್ರ. ಸಿದ್ದಮಲ್ಲಿಕಾರ್ಜುನ ಮಹಾಸ್ವಾಮಿಗಳು. ದೇವನೂರು ಶ್ರೀಗುರುಮಲ್ಲೇಶ್ವರ ದಾಸೋಹ ಮಠದ ಗುರುಗಳಾಗಿದ್ದ ಶ್ರೀ ಭಿಕ್ಷದ ರಾಚಪ್ಪ ಮಹಾಸ್ವಾಮಿಗಳಪರಮ ಶಿಷ್ಯರಾದ ಶ್ರೀ ಸಿದ್ದಮಲ್ಲಿಕಾರ್ಜುನ ಮಹಾಸ್ವಾಮಿಗಳು ಗುರುಗಳ ಆಶೀರ್ವಾದಬಲದಿಂದ 1922ರಲ್ಲಿ ಶ್ರೀ ಮಠದ ಪಟ್ಟಾಧಿಕಾರ ಸ್ವೀಕರಿಸಿ ಮಠದ ಚಿತ್ರಣವನ್ನೇಬದಲಿಸಿದರು.ಶ್ರೀ ಸಿದ್ದಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಹಾ ಶಿವಯೋಗಿಗಳಾಗಿದ್ದುಶ್ರೀಮಠಕ್ಕೆ ಹಿಂದಿನ ವೈಭವವನ್ನು ಮರಳಿ ತಂದರು. ಧಾರ್ಮಿಕ ಆಚರಣೆಗಳನ್ನುಚುರುಕುಗೊಳಿಸಿದ ಶ್ರೀಗಳು ಶ್ರೀಮಠದಲ್ಲಿ ದಾಸೋಹ ಕಾರ್ಯವನ್ನು ನಡೆಸತೊಡಗಿದರು.ನಾಡಿನಾದ್ಯಂತ ಸಂಚರಿಸುತ್ತಾ ಭಕ್ತರನ್ನು ಸಂಘಟಿಸಿದ ಶ್ರೀಗಳು ಶ್ರೀಮಠವನ್ನು ಸಂಪೂರ್ಣಜೀರ್ಣಾಭಿವೃದ್ದಿಗೊಳಿಸಿ ವಿಸ್ತರಿಸಿದರು. ಅಲ್ಲದೇ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಕ್ತರಉದ್ದಾರಕ್ಕಾಗಿ 23 ಶಾಖಾ ಮಠಗಳನ್ನು ತೆರೆದಿದ್ದು ಇಂದಿಗೂ ಈ ಎಲ್ಲಾ ಶಾಖಾ ಮಠಗಳುಶ್ರೀಮಠದ ಅಧೀನದಲ್ಲಿವೆ. ಇಂತಹ ಮಹಾನ್ ಚೇತನ ಶ್ರೀಗಳು 1950ರಲ್ಲಿ ಲಿಂಗೈಕ್ಯರಾದರು.ಶ್ರೀ ಸಿದ್ದಮಲ್ಲಿಕಾರ್ಜುನ ಮಹಾಸ್ವಾಮಿಗಳ ನಂತರ ಬಂದ ಶ್ರೀ ಷ.ಬ್ರ. ಪಟ್ಟದ ಗುರುಮಲ್ಲ ಮಹಾಸ್ವಾಮಿಗಳು ಗುರುಗಳ ಹಾದಿಯಲ್ಲಿಯೇ ಕ್ರಿಯಾಶೀಲರಾಗಿ ಧಾರ್ಮಿಕಆಚರಣೆಗಳೊಂದಿಗೆ ಶ್ರೀಮಠವನ್ನು ಅಭಿವೃದ್ದಿಗೊಳಿಸಿದ್ದಾರೆ. ಶ್ರೀಗಳು ತಾವಿರುವಾಗಲೇಈಗಿನ ಶ್ರೀಗಳಾದ ಶ್ರೀ ಷ.ಬ್ರ. ಪಟ್ಟದ ಸಿದ್ದಮಲ್ಲ ಮಹಾಸ್ವಾಮಿಗಳನ್ನು ತಮ್ಮಉತ್ತರಾಧಿಕಾರಿಗಳನ್ನಾಗಿ ನೇಮಿಸಿಕೊಂಡು ಗುರು ಆಶೀರ್ವಾದ ನೀಡಿದ್ದರು. ಇಂತಹಗುರುಗಳು 1971ರ ಸೆಪ್ಟಂಬರ್ ಆರಂಭದಲ್ಲಿ ಲಿಂಗೈಕ್ಯರಾಗಿದ್ದು 15 ದಿನಗಳ ನಂತರ ಈಗಿನಶ್ರೀಗಳನ್ನು ಪಟ್ಟಕ್ಕೆ ತರಲಾಯಿತು.1971ರಲ್ಲಿ ತೆರಕಣಾಂಬಿ ಮಠದ ಲಿಂ|| ಶ್ರೀ ಷ.ಬ್ರ. ಮಹಾದೇವಮಹಾಸ್ವಾಮಿಗಳಿಂದ ಶ್ರೀಮಠಕ್ಕೆ ಪಟ್ಟಾಧಿಕಾರದ ಅನುಗ್ರಹ ಪಡೆದ ಶ್ರೀ ಷ.ಬ್ರ. ಸಿದ್ದಮಲ್ಲಮಹಾಸ್ವಾಮಿಗಳು ಕಳೆದ ನಾಲ್ಕುವರೆ ದಶಕಗಳಲ್ಲಿ ಶ್ರೀಮಠವನ್ನು ಸಮಾಜಮುಖಿಯಾಗಿಅಭಿವೃದ್ದಿಗೊಳಿಸಿದ್ದಾರೆ. ಪುರಾತನ ಮಠದ ಕಟ್ಟಡವನ್ನು ಅವಶ್ಯಕತೆಗನುಗುಣವಾಗಿ ವಿಸ್ತರಿಸಿನವೀಕರಿಸಿರುವ ಶ್ರೀಗಳು ಶ್ರೀಮಠದ ಶಾಖಾಮಠಗಳಿಗೆ ಭಿಕ್ಷದ ಮರಿಗಳನ್ನು ನೇಮಿಸಿಅನ್ನದಾಸೋಹ ನಡೆಸುತ್ತಿದ್ದಾರೆ. ಕೇವಲ ಅನ್ನ ನೀಡಿದರೆ ಸಾಲದು ಎಂದರಿತ ಶ್ರೀಗಳು ಶಿಕ್ಷಣದಾಸೋಹಕ್ಕಾಗಿ 1983-84ರಲ್ಲಿ “ಶ್ರೀ ಗಂಗಾಧರೇಶ್ವರ ವಿದ್ಯಾಸಂಸ್ಥೆ”ಯನ್ನು ಪ್ರಾರಂಭಿಸಿಅದರಡಿಯಲ್ಲಿ ಪ್ರಾಥಮಿಕದಿಂದ ಪದವಿವರೆಗಿನ ಹಾಗೂ ಸಂಸ್ಕøತ ಪಾಠಶಾಲೆಯನ್ನುನಡೆಸುತ್ತಿದ್ದಾರೆ.ಶ್ರೀಮಠದಲ್ಲಿ ಗುರುಪರಂಪರೆಯ 2 ಗದ್ದುಗೆಗಳಿದ್ದು ಉಳಿದ ಗುರುಗಳಗದ್ದುಗೆಗಳಲ್ಲಿ 01 ಮಠದ ಹತ್ತಿರದ ಭಕ್ತರ ಹೋದಲ್ಲಿ ಹಾಗೂ ಉಳಿದೆರಡು ಶ್ರೀಮಠದತೋಟದಲ್ಲಿದೆ. ಇವುಗಳಿಗೆ ವಿಶೇಷ ಸಂದರ್ಭಗಳಲ್ಲಿ ಸಹಸ್ರ ಬಿಲ್ವಾರ್ಚನೆ ಸಹಿತ ವಿಶೇಷಪೂಜಾ ಕೈಂಕರ್ಯಗಳು ನಡೆಯುತ್ತವೆ. ಶಿವರಾತ್ರಿ, ಶ್ರಾವಣ, ಕಾರ್ತಿಕ ಹಾಗೂದನುರ್ಮಾಸಗಳಲ್ಲಿ ವಿಶೇಷ ಪೂಜೆ ನಡೆಸಿ ಬರುವ ಭಕ್ತಿರಗೆ ನಿತ್ಯ ದಾಸೋಹ ಕಲ್ಪಿಸಲಾಗಿದೆ.ಶ್ರೀಗಳು ಪ್ರತಿ ವಷ್ ಮಾರ್ಚ್ ತಿಂಗಳ ಹುಣ್ಣಿಮೆಯಂದು ಶ್ರೀ ಸಿದ್ದಮಲ್ಲಿಕಾರ್ಜುನಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಆಯೋಜಿಸುತ್ತಿದ್ದು ಹರಗುರುಚರಮೂರ್ತಿಗಳಿಂದ ಧಾರ್ಮಿಕ ಹಾಗೂ ಸಾಮಾಜಿಕ ವಿಷಯಗಳ ಮೇಲೆ ಉಪನ್ಯಾಸಕೊಡಿಸುತ್ತಾ ಬಂದಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಪಟ್ಟದ ಸಿದ್ದಮಲ್ಲ ಮಹಾಸ್ವಾಮಿಗಳು
Date of Birth :
06-06-1945
Place :
ಮಲ್ಲನಗುಳಿ, ತಾಳವಾಡಿ ತಾ||
Pattadikara :
ಸೆಪ್ಟಂಬರ್ 1971
Photo :

Programs

ಮಾರ್ಚ್ ತಿಂಗಳ ಹುಣ್ಣಿಮೆಯಂದು ಶ್ರೀ ಸಿದ್ದಮಲ್ಲಿಕಾರ್ಜುನ
ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವ
ಶಿವರಾತ್ರಿಗೆ ಜಾಗರಣೆ, ವಿಶೇಷ ಪೂಜೆ
ಕಾರ್ತಿಕ ಮಾಸದಲ್ಲಿ ಪ್ರತಿ ಸೋಮವಾರ ದೀಪೋತ್ಸವ

Institutions

ಸಂಸ್ಕøತ ಪಾಠಶಾಲೆ
ಕಿರಿಯ / ಹಿರಿಯ ಪ್ರಾಥಮಿಕ / ಪೌq್ರsÀಶಾಲೆ
ಪದವಿ ಪೂರ್ವ / ಡಿ.ಎಡ್., ಕಾಲೇಜ್
ವಿದ್ಯಾರ್ಥಿ ನಿಲಯ

Photos

Full Address Kannada

ಶ್ರೀ ವೀರಸಿಂಹಾಸನ ಶಿಲಾಮಠ
ಸೋಮಹಳ್ಳಿ - 571 109
ಗುಂಡ್ಲುಪೇಟೆ ತಾ||, ಚಾಮರಾಜನಗರ ಜಿಲ್ಲೆ

Map

Near by Places

ಬೇಗೂರು ಗೇಟ್ - 7 ಕಿ.ಮೀ.
ಬೇಗೂರು - 10 ಕಿ.ಮೀ.
ನಂಜನಗೂಡು - 32 ಕಿ.ಮೀ.
ಗುಂಡ್ಲುಪೇಟೆ - 19 ಕಿ.ಮೀ.

Statistic

12 Views
0 Rating
0 Favorite
0 Share
error: Content is protected !!