Shree Veera Simhasana Matha

Shree Veera Simhasana Matha Claimed

ಶ್ರೀ ವೀರಸಿಂಹಾಸನ ಮಠ

Average Reviews

Description

ಶ್ರೀ ವೀರಸಿಂಹಾಸನ ಮಠ – ಕುಂತೂರು

ಶ್ರೀ ಷ.ಬ್ರ. ಶಿವಪ್ರಭು ಸ್ವಾಮಿಗಳು

ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲ್ಲೂಕಿನ ಕುಂತೂರು ಗ್ರಾಮದಲ್ಲಿಅಸ್ತಿತ್ವದಲ್ಲಿರುವ ಶ್ರೀ ವೀರಸಿಂಹಾಸನ ಮಠ ಸುಕ್ಷೇತ್ರವು ತನ್ನ ಧಾರ್ಮಿಕ, ಸಾಮಾಜಿಕಕಾರ್ಯಚಟುವಟಿಕೆಗಳ ಮೂಲಕ ಪ್ರಸಿದ್ದಿಯಲ್ಲಿದೆ. ಶ್ರೀಮಠವು ಮಲೆಮಹಾದೇಶ್ವರರಿಗಿಂತಲೂ ಪೂರ್ವದಲ್ಲಿಯೇ ಅಸ್ತಿತ್ವದಲ್ಲಿತ್ತೆಂದು ಹೇಳಲಾಗಿದ್ದು ಶ್ರೀಮಠದಕಾಲಮಾನವು ಸುಮಾರು ಕ್ರಿ.ಶ. 1500 ಎನ್ನಲಾಗಿದೆ. ಶ್ರೀಮಠದ ಕರ್ತೃಗುರುಗಳು ಶ್ರೀ ಮಲೆಮಹದೇಶ್ವರರಿಗೆ ದೀಕ್ಷೆ ನೀಡಿದ್ದರೆಂದು ತಿಳಿದುಬರುತ್ತದೆ.ಶ್ರೀ ವೀರಸಿಂಹಾಸನ ಮಠದ ಕರ್ತೃ ಗುರುಗಳು ಗುರು ಮತ್ತು ವಿರಕ್ತರುಆಗಿದ್ದಾರೆಂದು ಹೇಳಲಾಗಿದ್ದು ಶ್ರೀ ಷ. ಬ್ರ. ಗುರುಶಾಂತ ಮಲ್ಲಿಕಾರ್ಜುನ ಮಹಾಸ್ವಾಮಿಗಳುಮತ್ತು ಶ್ರೀ. ಮ.ನಿ.ಪ್ರ. ಪ್ರಭು ಮಹಾಸ್ವಾಮಿಗಳು ಶ್ರೀಮಠದ ಸ್ಥಾಪಕರೆಂದು ಹೆಸರಿಸಲಾಗಿದೆ.ಆದರೆ ದಾಖಲೆಗಳ ಕೊರತೆಯಿದ್ದು ಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲ. ಸುಮಾರು 15ನೇಶತಮಾನದಲ್ಲಿಯೇ ಶ್ರೀಮಠವು ಸ್ಥಾಪಿತಗೊಂಡಿತೆಂದು ಹೇಳಲಾದರೂ ಅಲ್ಲಿಂದಇಲ್ಲಿಯವರೆಗಿನ ಇತಿಹಾಸದ ಬಗ್ಗೆ ಸ್ಪಷ್ಟವಾದ ಮಾಹಿತಿ ತಿಳಿದು ಬರುವುದಿಲ್ಲ.ಶ್ರೀಮಠದ ಹಿಂದಿನ ಶ್ರೀಗಳಾದ ಶ್ರೀ. ಷ.ಬ್ರ. ಶಿವಪ್ಪ ಮಹಾಸ್ವಾಮಿಗಳುಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿ 2005ರಲ್ಲಿ ಲಿಂಗೈಕ್ಯರಾಗಿದ್ದಾರೆ. ಹಿಂದಿನಶ್ರೀಗಳಿರುವಾಗಲೇ 2000ದ ಮಾರ್ಚ್ ತಿಂಗಳಲ್ಲಿ ಅಧಿಕಾರ ಸ್ವೀಕರಿಸಿ ಬಂದಿರುವ ಪ್ರಸ್ತುತಶ್ರೀಗಳಾದ ಶ್ರೀ. ಷ.ಬ್ರ. ಶಿವಪ್ರಭು ಸ್ವಾಮಿಗಳು ಶ್ರೀಮಠದ ಚಿತ್ರಣವನ್ನೇ ಸಂಪೂರ್ಣವಾಗಿಬದಲಾಯಿಸಿದ್ದಾರೆ. ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿರುವ ಶ್ರೀಗಳು ಭಕ್ತರಸಹಕಾರದೊಂದಿಗೆ ಶ್ರೀಮಠವನ್ನು ಪ್ರಗತಿಪಥದತ್ತ ಕೊಂಡೊಯ್ಯುತ್ತಿದ್ದಾರೆ.ಶ್ರೀಮಠದ ಆವರಣದಲ್ಲಿ ಏಳು ಗದ್ದುಗೆಗಳಿದ್ದು ಮಲೆ ಮಹದೇಶ್ವರ ಬೆಟ್ಟದಲ್ಲಿಕೆಲವು, ಇದೇ ಊರಿನ ಸಮೀಪದ ಪ್ರಭುದೇವರ ಬೆಟ್ಟದಲ್ಲಿ ನಾಲ್ಕು ಗದ್ದುಗೆಗಳನ್ನುಕಾಣಬಹುದಾಗಿದೆ. ಶ್ರೀ ಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಶ್ರಾವಣ ಮಾಸದಲ್ಲಿಮಹೇಶ್ವರ ಜಯಂತಿ ಹಾಗೂ ಶ್ರೀ ಹಿರಿಯಗುರುಗಳ ಪುಣ್ಯಸ್ಮರಣೋತ್ಸವ ನಡೆಸಲಾಗುತ್ತದೆ.ಬಸವ ಜಯಂತಿಯನ್ನು ಆಚರಿಸುವ ಶ್ರೀಗಳು ದೀಪಾವಳಿಯಲ್ಲಿ ಅಲ್ಲಮ ಪ್ರಭುಗಳಉತ್ಸವವನ್ನು ನಡೆಸುತ್ತಾ ಬಂದಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಶಿವಪ್ರಭು ಸ್ವಾಮಿಗಳು
Date of Birth :
04-07-1971
Place :
ರಾಗಿಬೊಮ್ಮನಹಳ್ಳಿ, ಮಳವಳ್ಳಿ ತಾ||
Pattadikara :
ಮಾರ್ಚ್ 2000
Photo :

Programs

ಶಿವರಾತ್ರಿಗೆ ಜಾಗರಣೆ
ಬಸವ ಜಯಂತಿ ಆಚರಣೆ
ಶ್ರಾವಣ ಮಾಸದಲ್ಲಿ ಮಹೇಶ್ವರ ಜಯಂತಿ ಹಾಗೂ ಶ್ರೀ ಹಿರಿಯ
ಗುರುಗಳ ಪುಣ್ಯ ಸ್ಮರಣೋತ್ಸವ
ದೀಪಾವಳಿಗೆ ಅಲ್ಲಮ ಪ್ರಭುಗಳ ಉತ್ಸವ
ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ, ದೀಪೋತ್ಸವ

Photos

Full Address Kannada

ಶ್ರೀ ವೀರಸಿಂಹಾಸನ ಮಠ
ಕುಂತೂರು
ಕೊಳ್ಳೇಗಾಲ ತಾ||, ಚಾಮರಾಜನಗರ ಜಿಲ್ಲೆ

Map

Statistic

89 Views
0 Rating
0 Favorite
0 Share
error: Content is protected !!