Shree Varanasi Hirematha

Shree Varanasi Hirematha Claimed

ಶ್ರೀ ವಾರಣಾಸಿ ಹಿರೇಮಠ

Average Reviews

Description

ಶ್ರೀ ವಾರಣಾಸಿ ಹಿರೇಮಠ

ಕರ್ತೃ – ಶ್ರೀ ಷ.ಬ್ರ. ಗಂಗಾಧರ ಶಿವಾಚಾರ್ಯ ಸ್ವಾಮಿಗಳು

ಯಾದಗಿರಿ ಜಿಲ್ಲಾ ಕೇಂದ್ರದಿಂದ 30 ಕಿ.ಮೀ. ದೂರದಲ್ಲಿರುವ ಎಲ್ಹೇರಿ ಗ್ರಾಮದಲ್ಲಿಶ್ರೀ ಷ.ಬ್ರ. ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಸುಮಾರು 10ನೇಶತಮಾನದಲ್ಲೇ ಸ್ಥಾಪಿತಗೊಂಡಿದೆಯೆಂದು ಹೇಳಲಾಗಿರುವ ಶ್ರೀ ವಾರಣಾಸಿ ಹಿರೇಮಠವುಅಸ್ತಿತ್ವದಲ್ಲಿದ್ದು ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿ ಪಂಚಪೀಠಗಳಸಂಪ್ರದಾಯದಲ್ಲಿ ಬೆಳೆದುಬಂದಿದೆ.ಕರ್ತೃಗುರುಗಳಾದ ಶ್ರೀ ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳುತಪೋನಿಷ್ಠರೂ, ಅನುಷ್ಠಾನಪ್ರಿಯರೂ ಆಗಿದ್ದು ಸದಾ ಸಂಚಾರದಲ್ಲಿರುತ್ತಿದ್ದರು. ಹೀಗೆಸಂಚಾರ ಮಾಡುತ್ತಾ ಎಲ್ಹೇರಿ ಗ್ರಾಮಕ್ಕೆ ಬಂದಿರುವ ಶ್ರೀಗಳು ಊರ ಹೊರಗಿನ ಪ್ರದೇಶದಲ್ಲಿದೀರ್ಘ ಅನುಷ್ಠಾನ ಕೈಗೊಂಡು ಭಕ್ತರನ್ನುದ್ಧರಿಸಿದ್ದಾರೆ. ಇವರ ತಪೋಶಕ್ತಿಗೆ ಬೆರಗಾದಗ್ರಾಮಸ್ಥರು ಶ್ರೀಗಳಿಗೆ ಊರ ಒಳಗೆ ಶ್ರೀಮಠವನ್ನು ಸ್ಥಾಪಿಸಿಕೊಟ್ಟಿರಬಹುದೆಂದುಹೇಳಲಾಗಿದೆ.ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮಿಗಳು ಅಥವಾ ಆನಂತರದ ಪರಂಪರೆಯಲ್ಲಿ ಬಂದಿರಬಹುದಾದ ಶ್ರೀಗಳಲ್ಲಿ ಒಬ್ಬರು ವಾರಣಾಸಿ ಕಡೆಯಿಂದ ಬಂದು ಎಲ್ಹೇರಿಗ್ರಾಮದಲ್ಲಿ ನೆಲೆಗೊಂಡಿದ್ದಿರಬಹುದು. ಆ ಕಾರಣಕ್ಕಾಗಿ ಶ್ರೀಮಠಕ್ಕೆ ಶ್ರೀ ವಾರಣಾಸಿ ಹಿರೇಮಠವೆಂದು ಹೆಸರು ಬಂದಿರಬಹುದು. ಆದರೆ ಇಂತಹ ಪುರಾತನ ಮಠದ ಪರಂಪರೆಯುದಾಖಲಾಗದೇ ಇರುವುದರಿಂದ ಸ್ಪಷ್ಟತೆಯಿಲ್ಲ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಗಂಗಾಧರ ಶಿವಾಚಾರ್ಯ ಸ್ವಾಮಿಗಳು ತಮ್ಮಧಾರ್ಮಿಕ ಆಚರಣೆಗಳಿಂದಾಗಿ, ತತ್ವಾದರ್ಶಗಳಿಂದಾಗಿ ಈ ಭಾಗದಲ್ಲಿ ಹೆಸರಾಗಿದ್ದು ಅಪಾರಸಂಖ್ಯೆಯ ಭಕ್ತರನ್ನು ಹೊಂದಿದ್ದಾರೆ. ಈ ಇಳಿವಯಸ್ಸಿನಲ್ಲಿಯೂ ಕುಗ್ಗದ ಉತ್ಸಾಹದೊಂದಿಗೆಶ್ರೀಮಠವನ್ನು ಮುನ್ನಡೆಸುತ್ತಿರುವ ಶ್ರೀಗಳು ಭಕ್ತರ ಪಾಲಿನ ದೇವರಾಗಿದ್ದಾರೆ. ಶ್ರೀಮಠದಲ್ಲಿಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಆಷಾಢ ಮಾಸದಲ್ಲಿ ಶ್ರೀ ಷ.ಬ್ರ. ಕೊಟ್ಟೂರೇಶ್ವರಶಿವಾಚಾರ್ಯರ ಪುಣ್ಯಾರಾಧನೆಯನ್ನು ನಡೆಸುತ್ತಿದ್ದು, ಮಾರ್ಗಶಿರ ಶುದ್ಧಪಂಚಮಿಗೆಲಕ್ಷದೀಪೋತ್ಸವವನ್ನು ಆಯೋಜಿಸಲಾಗುತ್ತಿದೆ.

Swamiji

Swamiji Name :
ಶ್ರೀ ಷ.ಬ್ರ. ಗಂಗಾಧರ ಶಿವಾಚಾರ್ಯ ಸ್ವಾಮಿಗಳು
Date of Birth :
1932
Place :
ಬೂದಪುರ, ಸೇಡಂ ತಾ||
Photo :

Programs

ಆಷಾಢ ಹುಣ್ಣಿಮೆ ಆದ ನಂತರದ ಏಳನೇ ದಿನದಂದು
ಲಿಂ. ಶ್ರೀ ಷ.ಬ್ರ. ಕೊಟ್ಟೂರೇಶ್ವರ ಶಿವಾಚಾರ್ಯರ ಪುಣ್ಯಾರಾಧನೆ
ಹಾಗೂ ಪಂಚಮಿಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
ಮಾರ್ಗಶಿರ ಮಾಸದ ಶುದ್ಧ ಪಂಚಮಿಗೆ ಲಕ್ಷದೀಪೋತ್ಸವ.

Photos

Full Address Kannada

ಶ್ರೀ ವಾರಣಾಸಿ ಹಿರೇಮಠ
ಎಲ್ಹೇರಿ - 585 321
ಯಾದಗಿರಿ ತಾ|| ಜಿ||

Map

Near by Places

ಗುರುಮಠಕˉï - 30 ಕಿ.ಮೀ.
ಯಾದಗಿರಿ - 30 ಕಿ.ಮೀ.
ಶಹಾಪುರ - 60 ಕಿ.ಮೀ.

Statistic

148 Views
0 Rating
0 Favorite
0 Share
error: Content is protected !!