Shree Vanakallu Malleshwara Maha Sukshetra Matha
Claimed
ಶ್ರೀ ವನಕಲ್ಲು ಮˉÉ್ಲೀಶ್ವರ ಮಹಾಸುಕ್ಷೇತ್ರ ಮಠ
Average Reviews
Description
ಶ್ರೀ ವನಕಲ್ಲು ಮಲ್ಲೇಶ್ವರ ಮಹಾಸುಕ್ಷೇತ್ರ ಮಠ – ಹೆಗ್ಗುಂದ ಅಂಚೆ
ಕರ್ತೃ – ಪೂಜ್ಯ ಶ್ರೀ ಸದಾಶಿವಯ್ಯನವರು
ಶ್ರೀ ವನಕಲ್ಲು ಮಲ್ಲೇಶ್ವರ ಮಹಾಸುಕ್ಷೇತ್ರವು ಪುರಾತನವಾದದ್ದಾಗಿದ್ದು ಇಲ್ಲಿಪಂಚಪಾಂಡವರು ಓಡಾಡಿರುವ, ಅವರು ಇದ್ದಂತಹ ಸ್ಥಳದಲ್ಲಿ ಪ್ರಾಚೀನ ವೀರಗಲ್ಲು ಮತ್ತುಮಾಸ್ತಿಗಲ್ಲು, ಧರ್ಮರಾಯನ ಹೆಸರಿನಲ್ಲಿ ಪವಾಡರಾಯ ದೇವಸ್ಥಾನವಿದ್ದು ಬರಗಾಲದಸಮಯದಲ್ಲಿ ಸುತ್ತಲಿನ ಗ್ರಾಮಸ್ಥರು ಇಲ್ಲಿ ಜಾತ್ರೆ ಮಾಡಿದರೆ ಮಳೆ ಬರುತ್ತದೆಂಬ ಪ್ರತೀತಿಇದೆ. ಆದರೆ ಇವುಗಳೆಲ್ಲವೂ ಜನಪದರ ನಂಬುಗೆಗಳಾಗಿದ್ದು ಇಂದಿಗೂ ಇಲ್ಲಿಯ ಜನರುಮುಂದುವರೆಸಿಕೊಂಡು ಬರುತ್ತಿದ್ದಾರೆ.ಶ್ರೀ ವನಕಲ್ಲು ಮಲ್ಲೇಶ್ವರ ಕ್ಷೇತ್ರವು ನಗರದ, ಜನವಸತಿ ಕೇಂದ್ರಗಳ ಯಾವುದೇಜಂಜಾಟಕ್ಕೆ ಒಳಪಡದ ಶಾಂತ ವಾತಾವರಣದ, ಪ್ರಕೃತಿಯ ಮಡಿಲಿನಲ್ಲಿದ್ದು ಈ ಕ್ಷೇತ್ರಕ್ಕೆಬರುವ ಜನರು ಇಲ್ಲಿಯ ಪರಿಸರಕ್ಕೆ ಮನಸೋಲುತ್ತಾರೆ. ಇಲ್ಲಿ ಪ್ರತಿಷ್ಠಾಪಿತಗೊಂಡಿರುವಶಿವಲಿಂಗವು ವಿಶಿಷ್ಠವಾಗಿದ್ದು ಇಲ್ಲಿ ಶಿವನ ಪಕ್ಕದಲ್ಲಿ ಗಂಗೆ ಮತ್ತು ಗೌರಿಯನ್ನುಸ್ಥಾಪಿಸಿರುವುದು ವಿಶೇಷವೆನಿಸುತ್ತದೆ. ಪುರಾತನ ಕಾಲದಿಂದಲೂ ಅಸ್ತಿತ್ತ್ವದಲ್ಲಿರಬಹುದಾದಇಲ್ಲಿಯ ಶಿವಲಿಂಗವನ್ನು ಮೊದಲು ಹೋಳ್ಕಲ್ ಮಲ್ಲೇಶ್ವರವೆಂದು ಕರೆಯುತ್ತಿದ್ದು ಕಾಲಕ್ರಮೇಣ ಶ್ರೀ ವನಕಲ್ಲು ಮಲ್ಲೇಶ್ವರನೆಂಬ ನಾಮಾಂಕಿತವಾಗಿದೆ.ಶ್ರೀ ವನಕಲ್ಲು ಮಲ್ಲೇಶ್ವರ ಬೆಟ್ಟ ಇಂತಹ ಪುಣ್ಯ ಕ್ಷೇತ್ರವು ದಟ್ಟ ಕಾನನದಲ್ಲಿದ್ದು ಸುತ್ತಲೂ ಬಂಡೆಗಳು.ಮರಗಿಡಗಳಿಂದ ಆವೃತ್ತಗೊಂಡಿತ್ತು. ಇಲ್ಲಿಗೆ 1965-70ರ ಆಸುಪಾಸಿನಲ್ಲಿ ಬೆಣಚನಹಳ್ಳಿಯಿಂದ ಬಂದವರು ಈ ಕ್ಷೇತ್ರದ ಉದ್ದಾರಕರಾದ ಪೂಜ್ಯ ಶ್ರೀ ಸದಾಶಿವಯ್ಯನವರು.ಸದಾ ಕರ್ಮಯೋಗದಲ್ಲಿ ತಲ್ಲೀನರಾದ, ತಜ್ಞಮನೋಭಾವಿ, ವೈರಾಗ್ಯಶಾಲಿ ಶ್ರೀಸದಾಶಿವಯ್ಯನವರು ಇಲ್ಲಿಗೆ ಬಂದು ಸುತ್ತಲಿನ ಪ್ರದೇಶವನ್ನು ತಮ್ಮ ಪರಿಶ್ರಮದಿಂದಬಯಲುಗೊಳಿಸಿ ಭಕ್ತರು ಮಲ್ಲೇಶ್ವರನ ದರ್ಶನಕ್ಕೆ ಸುಲಲಿತವಾಗಿ ಬಂದುಹೋಗಲುಮಾರ್ಗ ಕಲ್ಪಿಸಿದರು.ಶ್ರೀ ಸದಾಶಿವಯ್ಯನವರು ಆತ್ಮಗಣಪತಿ, ಷಣ್ಮುಕ, ವೀರಭದ್ರ ಮುಂತಾದವಿಗ್ರಹಗಳನ್ನು ಪ್ರತಿಷ್ಠಾಪಿಸುವುದರ ಜೊತೆಗೆ ಬಂದ ಭಕ್ತರಿಗೆ ಭವಿಷ್ಯವನ್ನು ಹೇಳುತ್ತಾ ಅವರಕಷ್ಟುಸುಖಗಳಿಗೆ ಕಿವಿಯಾದರು. ಶ್ರೀಕ್ಷೇತ್ರವು ಶ್ರೀ ಸದಾಶಿವಯ್ಯನವರ ಮುಂದಾಳತ್ವದಲ್ಲಿಬಹುಬೇಗನೇ ಪ್ರಸಿದ್ದಿಗೆ ಬಂದಿತು. ಭಕ್ತರ ಬರುವಿಕೆ ಹೆಚ್ಚಾಯಿತು. ಶ್ರೀಗಳು ಬಂದ ಭಕ್ತರಿಗೆಆದರ್ಶ ಪುರುಷರ ವಿಚಾರಗಳನ್ನು, ಸತ್ಪುರುಷರ ಸತ್ಸಂಗದ ಕಥೆಗಳನ್ನು ಹೇಳುತ್ತಾಮನಶ್ಶಾಂತಿ ನೀಡುತ್ತಿದ್ದರು. ಇಂತಹ ಕಾಯಕಯೋಗಿಗಳು ಶ್ರೀಮಠವನ್ನು ಉನ್ನತಹಂತಕ್ಕೆಕೊಂಡೊಯ್ದು ಲಿಂಗದೊಳಗಾದರು.ಶ್ರೀ ಸದಾಶಿವಯ್ಯನವರು ಐಕ್ಯರಾದ ನಂತರ ಸುಕ್ಷೇತ್ರಕ್ಕೆ ಶ್ರೀ ಸಿದ್ದಯೋಗಾನಂದಮಹಾಸ್ವಾಮಿಗಳು ಶ್ರೀ ಚಿತ್ರದುರ್ಗದ ಶರಣರ ಅಪ್ಪಣೆಯಂತೆ ಬಂದು ಮುನ್ನಡೆಸಿದರು. ಶ್ರೀಸಿದ್ದಯೋಗಾನಂದ ಸ್ವಾಮಿಗಳು ಮೂಲ ಕೊಪ್ಪಳ ಜಿಲ್ಲೆಯ “ದರೋಜಿ”ಯವರಾಗಿದ್ದುಸಾಂಸಾರಿಕ ಜೀವನವನ್ನು ಬಿಟ್ಟು ಯೋಗದ್ಯಾನ, ಆಧ್ಯಾತ್ಮದ ವೈರಾಗ್ಯ ತಾಳಿಸನ್ಯಾಸಿಯಾಗಬೇಕೆಂದು ಮನೆಬಿಟ್ಟು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕು ಮಲ್ಲಾಡಿಹಳ್ಳಿರಾಘವೇಂದ್ರ ಆಶ್ರಮಕ್ಕೆ ಬಂದವರು. ಇಲ್ಲಿ ಕೆಲಕಾಲವಿದ್ದು ಯೋಗ, ಆಯುರ್ವೇದಗಳ ಬಗ್ಗೆಅರಿಯುತ್ತಾ ಶ್ರೀ ಮುರುಘಾ ಶರಣರ ಸಂಪರ್ಕಕ್ಕೆ ಬಂದರು. ತದನಂತರ ಶ್ರೀಗಳುಚಿತ್ರದುರ್ಗದ ರಂಗಯ್ಯನ ಬಾಗಿಲ ಹತ್ತಿರದ ಶ್ರೀ ಕಬೀರಾನಂದಾಶ್ರಮದಲ್ಲಿ ಎರಡುವರ್ಷಗಳ ಕಾಲ ಸೇವೆ ಸಲ್ಲಿಸಿ 1993-1994ರ ವೇಳೆಗೆ ಶ್ರೀ ವನಕಲ್ಲು ಮಲ್ಲೇಶ್ವರ ಸುಕ್ಷೇತ್ರಕ್ಕೆಆಗಮಿಸಿದರು.ಶ್ರೀ ಸಿದ್ದಯೋಗಾನಂದ ಸ್ವಾಮಿಗಳು ಇಲ್ಲಿನ ಸುತ್ತಮುತ್ತಲಿನ ಜನರನ್ನು ವಿಶ್ವಾಸಕ್ಕೆತೆಗೆದುಕೊಂಡು ಹಂತ-ಹಂತವಾಗಿ ಸುಕ್ಷೇತ್ರವನ್ನು ಅಭಿವೃದ್ದಿಗೊಳಿಸಿದರು. ಶ್ರೀಗಳುಪರಿಶ್ರಮದಿಂದ ದೇವರ ಮಂದಿರವನ್ನು ನಿರ್ಮಿಸಿ, ಅನಾಥ ಮಕ್ಕಳ ಕುಠೀರ, ಬಯಲುರಂಗಮಂದಿರ, ದಾಸೋಹ ಮಂದಿರ, ಪಾಠಶಾಲೆ, ವಿದ್ಯಾರ್ಥಿಗಳ ಅನುಕೂಲಕ್ಕಾಗಿವಸತಿಗೃಹ, ತೇರಿನಮನೆ, ಭಕ್ತರು ಭಕ್ತಿಯನ್ನು ಪ್ರದರ್ಶಿಸಲು ವರ್ಷಕ್ಕೊಮ್ಮೆ ಜಾತ್ರೆ ಮಾಡಲುಎಲ್ಲಾ ಸುತ್ತಲಿನ ಭಕ್ತರ ಸಹಯೋಗದೊಂದಿಗೆ ಬ್ರಹ್ಮರಥವನ್ನು ನಿರ್ಮಿಸಿದರು. ಶ್ರೀಗಳೇ ಸ್ವತಃಜಾತ್ರೆಯ ಸಂದರ್ಭದಲ್ಲಿ ಮತ್ತು ಮಕ್ಕಳ ನಿತ್ಯ ಪ್ರಸಾದಕ್ಕೆ ಪ್ರತಿ ಗ್ರಾಮಗಳಿಗೆ ಬೇಟಿಕೊಟ್ಟು ಭಿಕ್ಷೆಬೇಡಲು ಬರುತ್ತಿದ್ದರು. ಹಳ್ಳಿಗೆ ಏಕರಾತ್ರಿ, ಪಟ್ಟಣಕ್ಕೆ ಪಂಚರಾತ್ರಿಗಳೆಂಬ ಸೂತ್ರದನ್ವಯ ಕಾಯಾ, ವಾಚ, ಮನಸಾರೆ ರೂಡಿಸಿಕೊಂಡು ತಮ್ಮ ಕೆಲಸ ತಾವೇ ಮಾಡಿಕೊಂಡು ಬಂದಶ್ರೀಗಳು 2010ರ ಆಗಸ್ಟ್ 19ರಂದು ಲಿಂಗದೊಳಗಾದರು.ಶ್ರೀ ಸಿದ್ದಯೋಗಾನಂದ ಶ್ರೀಗಳು ಲಿಂಗೈಕ್ಯರಾದ ನಂತರ ಸುತ್ತಲಿನ ಗ್ರಾಮಗಳಭಕ್ತರೇ ಶ್ರೀ ವನಕಲ್ಲು ಮಲ್ಲೇಶ್ವರ ಕ್ಷೇತ್ರ ಹಿತರಕ್ಷಣಾ ಸೇವಾ ಸಮಿತಿಯನ್ನು ಸ್ಥಾಪಿಸಿಕೊಂಡುಕ್ಷೇತ್ರದ ಎಲ್ಲಾ ಕಾರ್ಯಕ್ರಮಗಳನ್ನು ಮುನ್ನಡೆಸಿಕೊಂಡು ಬಂದರು. ನಂತರ ಕ್ಷೇತ್ರಕ್ಕೆಗುರುಗಳ ಅವಶ್ಯಕತೆಯನ್ನು ಮನವರಿತು ಚಿತ್ರದುರ್ಗದ ಡಾ. ಶ್ರೀ ಶಿವಮೂರ್ತಿಮುರುಘಾಶರಣರಿಗೆ ಬೇಡಿಕೆ ಇಟ್ಟಾಗ ಶ್ರೀಗಳು 2012ರ ಜುಲೈ 23ರಂದು ಈಗಿನ ಶ್ರೀಗಳಾದಶ್ರೀ ಬಸವರಮಾನಂದ ಸ್ವಾಮಿಗಳನ್ನು ಚರಮೂರ್ತಿಗಳನ್ನಾಗಿ ನೇಮಿಸಿದರು. ಶ್ರೀಬಸವರಮಾನಂದ ಸ್ವಾಮಿಗಳು ಶರಣರ ಮಾರ್ಗದರ್ಶನದಲ್ಲಿ ಕ್ಷೇತ್ರವನ್ನು ಮುನ್ನಡೆಸಿ2015ರ ಮಾರ್ಚ್ 09ರಂದು ಪಟ್ಟಾಧಿಕಾರವನ್ನು ಸ್ವೀಕರಿಸಿದರು. ಸ್ನಾತ್ತಕ ಪದವೀದರರಾದಶ್ರೀಗಳು ಕ್ರಿಯಾಶೀಲರಾಗಿದ್ದು ಶ್ರೀ ಕ್ಷೇತ್ರವನ್ನು ಭಕ್ತರ ಸಹಕಾರದೊಂದಿಗೆ ಉನ್ನತ ಹಂತಕ್ಕೆಕೊಂಡೊಯ್ಯುತ್ತಿದ್ದಾರೆ.ಶ್ರೀಕ್ಷೇತ್ರದಲ್ಲಿ ಪ್ರತಿವರ್ಷ ಫೆಬ್ರವರಿ 28 ರಿಂದ ಮಾರ್ಚ್ 09ರವರೆಗೆ ಜಾತ್ರಾಮಹೋತ್ಸವ ನಡೆಯುತ್ತಿದ್ದು ವಿವಿಧ ಧಾರ್ಮಿಕ, ಸಾಂಸ್ಕøತಿಕ, ಸಾಮಾಜಿಕಕಾರ್ಯಕ್ರಮಗಳು ಆಯೋಜನೆಗೊಂಡಿರುತ್ತವೆ. ಶ್ರೀಮಠದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿಸಾಧನೆಗೈದ ಸಾದಕರಿಗೆ ಅನೇಕ ಪ್ರಶಸ್ತಿ-ಸನ್ಮಾನಗಳಿಂದ ಗೌರವಿಸಲಾಗುತ್ತಿದೆ. ಶ್ರೀಸಿದ್ದಯೋಗಾನಂದ ಶ್ರೀ ಪ್ರಶಸ್ತಿ (ವನಕಲ್ಲು ಶ್ರೀ), ವಿಶ್ವಜ್ಯೋತಿ ಅಂತರರಾಷ್ಟ್ರೀಯ ಪ್ರಶಸ್ತಿ,ಜಗಜ್ಯೋತಿ ರಾಷ್ಟ್ರೀಯ ಪ್ರಶಸ್ತಿ, ನಿರ್ಮಲಜ್ಯೋತಿ ರಾಜ್ಯ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನುನಿಡಿ ಗೌರವಿಸಲಾಗುತ್ತದೆ. ಪ್ರಸ್ತುತ ಶ್ರೀಗಳು ಸ್ವತಃ ಸಾಹಿತಿಗಳಾಗಿದ್ದು ಕಾವ್ಯಸುದೆ, ಚುಟುಕುಸಿಂದು, ವನಕಲ್ಲು ಅರಳಿ, ವನಕಲ್ಲು ವಚನಾಮೃತಗಳಂತಹ ಕೃತಿಗಳನ್ನು ರಚಿಸಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ಬಸವರಮಾನಂದ ಮಹಾಸ್ವಾಮಿಗಳು
Date of Birth :
23-06-1988
Place :
ಸಣ್ಣಕಿಟ್ಟದಹಳ್ಳಿ, ಹೊಸದುರ್ಗ ತಾ||
Pattadikara :
09-03-2015
Photo :
Programs
ಪ್ರತಿ ಅಮವಾಸೆಗೆ ರುದ್ರಾಭಿಷೇಕ
ಕಾರ್ತಿಕದಲ್ಲಿ ಕಾರ್ತಿಕ ಮಹೋತ್ಸವ
ಪ್ರತಿ ತಿಂಗಳು 23ರಂದು “ಶರಣ ಸಂಗಮ”
ಆಗಸ್ಟ್ 19ಕ್ಕೆ 2ನೇ ಶ್ರೀಗಳ ಪುಣ್ಯಾರಾಧನೆ
ಫೆಬ್ರುವರಿ 28 ರಿಂದ ಮಾರ್ಚ್ 09ರವರೆಗೆ ಶ್ರೀ ವನಕಲ್ಲು ಮಲ್ಲೇಶ್ವರ ಜಾತ್ರಾ
ಮಹೋತ್ಸವ (ದನಗಳ ಜಾತ್ರೆ, ಕರ್ತೃಗಳ ಸ್ಮರಣೋತ್ಸವ, ಯವಕರಿಗೆ ಕ್ರೀಡೆ,
ರೈತರ ಸಮಾವೇಶ, ಕವಿಕಾವ್ಯ ಸಮ್ಮೇಳನ, ನಾಟಕೋತ್ಸವ, ಸಾಂಸ್ಕøತಿಕ ಸಮಾವೇಶ
ವಚನ ಸಾಹಿತ್ಯ ವಿಜಯ ರಥೋತ್ಸವ)
Photos
Full Address Kannada
ಶ್ರೀ ವನಕಲ್ಲು ಮಲ್ಲೇಶ್ವರ ಮಹಾಸುಕ್ಷೇತ್ರ ಮಠ
ಹೆಗ್ಗುಂದ ಅಂಚೆ, ಸೋಂಪುರ ಹೋಬಳಿ - 562 111
ನೆಲಮಂಗಲ ತಾ||, ಬೆಂಗಳೂರು ಗ್ರಾಮಾಂತರ ಜಿಲ್ಲೆ