ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕು ಕೊಡ್ಲಿಪೇಟೆ ಗ್ರಾಮದಿಂದಸುಮಾರು 1 ಕಿ.ಮೀ. ಅಂತರದಲ್ಲಿರುವ ದೊಡ್ಡಕೊಡ್ಲಿಯ ಹೊರವಲಯದಲ್ಲಿಸ್ಥಾಪಿತಗೊಂಡಿರುವ ಶ್ರೀ ಊರ ಮಠವು ಶ್ರೀಮದ್ ಉಜ್ಜಯಿನಿ ಸದ್ದರ್ಮ ಪೀಠದಶಾಖಾಮಠವಾಗಿ ಶಿಷ್ಯವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ. ಶ್ರೀಮಠದ ಮೂಲಮಠವು ಊರ ಒಳಗಡೆಯಿದ್ದು ಮಠದ ಕರ್ತೃ ಗುರುಗಳು ಹಾಗೂ ನಂತರದ ಪರಂಪರೆಯಬಗ್ಗೆ ನಿಖರ ಮಾಹಿತಿಗಳು ಲಭ್ಯವಿಲ್ಲ.ಶ್ರೀಮಠವು ಕೊಡಗಿನ ಆಗಿನ ರಾಜರ ಕಾಲದಲ್ಲಿ ಸ್ಥಾಪಿತಗೊಂಡಿದ್ದು ಮೂಲಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲ. ಶ್ರೀಮಠದ ಹಿಂದಿನ ಶ್ರೀಗಳಾದ ಲಿಂ|| ಶ್ರೀ ಷ.ಬ್ರ.ಶಾಂತವೀರ ಮಹಾಸ್ವಾಮಿಗಳು ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದಭಕ್ತರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುತ್ತಾ ಮಠವನ್ನು ಮುನ್ನಡೆಸಿದ್ದು 1940ರಲ್ಲಿಲಿಂಗೈಕ್ಯರಾಗಿದ್ದಾರೆ.ಹಿಂದಿನ ಶ್ರೀಗಳಾದ ಶ್ರೀ ಶಾಂತವೀರ ಸ್ವಾಮಿಗಳು ಲಿಂಗೈಕ್ಯರಾದ ನಂತರ ಕೆಲವರ್ಷಗಳ ಕಾಲ ಮಠವು ಖಾಲಿ ಉಳಿದಿದ್ದು ನಂತರದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರುಪ್ರಸ್ತುತ ಶ್ರೀಗಳನ್ನು ಕರೆತಂದು 1948ರಲ್ಲಿ ಪಟ್ಟಾಧಿಕಾರ ಮಾಡಿದ್ದಾರೆ. 1931ರಲ್ಲಿಸೋಮವಾರಪೇಟೆ ತಾಲ್ಲೂಕು ಊರುಗುತ್ತಿ ಗ್ರಾಮದಲ್ಲಿ ಜನಿಸಿದ ಶ್ರೀ ಷ.ಬ್ರ. ಸಿದ್ದಲಿಂಗಶಿವಾಚಾರ್ಯ ಸ್ವಾಮಿಗಳು ಶ್ರೀಮಠದ ಅಧಿಕಾರ ಸ್ವೀಕರಿಸಿ ಕಳೆದ ಆರೂವರೆ ದಶಕಗಳಿಂದಮಠವನ್ನು ಸರ್ವರೀತಿಯಲ್ಲೂ ಅಭಿವೃದ್ದಿಪಡಿಸುತ್ತಿದ್ದಾರೆ.ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಇತ್ತೀಚೆಗೆ 2010ರಲ್ಲಿ ಮಠದ ಭಕ್ತರಸಹಕಾರದೊಂದಿಗೆ ಊರ ಹೊರಗಿನ ನಿಸರ್ಗದಲ್ಲಿ ಹೊಸ ಮಠವನ್ನು ಸ್ಥಾಪಿಸಿ ಮಠದಆಡಳಿತವನ್ನು ಸ್ಥಳಾಂತರಿಸಿದ್ದಾರೆ. ಶ್ರೀಗಳು ಶ್ರೀಮಠದಲ್ಲಿ ನಿತ್ಯ ಧಾರ್ಮಿಕಆಚರಣೆಗಳೊಂದಿಗೆ ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜಾ ಕಾರ್ಯಕ್ರಮಗಳು ಹಾಗೂಶಿವದೀಕ್ಷಾ, ಲಿಂಗ ಪೂಜೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
1931
Place :
ಊರಗುತ್ತಿ, ಸೋಮವಾರಪೇಟೆ ತಾ||
Pattadikara :
1948
Photo :
Programs
ಚೈತ್ರ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
ಶ್ರಾವಣ ಮಾಸದಲ್ಲಿ ನಿತ್ಯ ಪೂಜೆ, ಶಿವದೀಕ್ಷಾ, ಲಿಂಗಪೂಜೆ ಕಾರ್ಯಕ್ರಮಗಳು ನಡೆಯುತ್ತವೆ.
Photos
Full Address Kannada
ಶ್ರೀ ಊರ ಮಠ ದೊಡ್ಡಕೊಡ್ಲಿ,
ಕೊಡ್ಲಿಪೇಟೆ ಪೋಸ್ಟ್ - 571 231
ಸೋಮವಾರಪೇಟೆ ತಾ||, ಕೊಡಗು ಜಿಲ್ಲೆ