Shree Ujjayini Shakha Matha

Shree Ujjayini Shakha Matha

ಶ್ರೀ ಉಜ್ಜಯಿನಿ ಶಾಖಾ ಮಠ

Average Reviews

Description

ಶ್ರೀ ಉಜ್ಜಯಿನಿ ಶಾಖಾ ಮಠ

ಕರ್ತೃ – ಶ್ರೀ ಷ.ಬ್ರ. ಜಡೆ ಮಹಾಂತ ಶಿವಾಚಾರ್ಯ ಸ್ವಾಮಿಗಳು

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ನಂದೀಪುರ ಗ್ರಾಮದಹೊರವಲಯದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಉಜ್ಜಯಿನಿ ಶಾಖಾ ಮಠವು ಈ ಭಾಗದಧಾರ್ಮಿಕ ಚಟುವಟಿಕೆಗಳ ಕೇಂದ್ರಬಿಂದುವಾಗಿ ಬೆಳೆದಿದೆ. ಪುರಾತನ ಕಾಲದ ಶ್ರೀ ಉಜ್ಜಯಿನಿಶಾಖಾ ಮಠದ ಕರ್ತೃ ಗುರುಗಳೆಂದು ಶ್ರೀ ಷ.ಬ್ರ. ಜಡೆ ಮಹಾಂತ ಶಿವಾಚಾರ್ಯಸ್ವಾಮಿಗಳನ್ನು ಗುರುತಿಸಲಾಗಿದ್ದು ಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲ.ಸಂಚಾರದಲ್ಲಿ ಬಂದ ಶ್ರೀ ಜಡೆಮಹಾಂತ ಶಿವಾಚಾರ್ಯ ಸ್ವಾಮಿಗಳು ಇಲ್ಲಿನೆಲೆನಿಂತು ಧರ್ಮೋಪದೇಶವನ್ನು ಮಾಡುವ ಮೂಲಕ ಭಕ್ತರಲ್ಲಿ ಧಾರ್ಮಿಕಜಾಗೃತಿಯನ್ನುಂಟು ಮಾಡಿದರು. ಭಕ್ತರು ಗುರುಗಳಿಗಾಗಿ ಗ್ರಾಮದ ಒಳಭಾಗದಲ್ಲಿಮಠವನ್ನು ಸ್ಥಾಪಿಸಿಕೊಟ್ಟು ಸಹಕಾರ ನೀಡಿದರು. ಈ ಮಠದಲ್ಲಿ ಧಾರ್ಮಿಕ ಆಚರಣೆಗಳನ್ನುಮುನ್ನಡೆಸುತ್ತಿದ್ದ ಶ್ರೀಗಳು ಲಿಂಗೈಕ್ಯರಾದ ನಂತರ ಇಲ್ಲಿ ಗುರುಗಳ ಗದ್ದುಗೆಯನ್ನುಸ್ಥಾಪಿಸಲಾಗಿದೆ.ಕರ್ತೃ ಗುರುಗಳ ನಂತರದಲ್ಲಿ ಶ್ರೀ ಷ.ಬ್ರ. ಮಹಾಲಿಂಗ ಶಿವಾಚಾರ್ಯಸ್ವಾಮಿಗಳು ಹಾಗೂ ಶ್ರೀ ಷ.ಬ್ರ. ಮರುಳಸಿದ್ದ ಶಿವಾಚಾರ್ಯ ಸ್ವಾಮಿಗಳು ಮಠವನ್ನುಮುನ್ನಡೆಸಿದ್ದು ತಮ್ಮ ಕಾರ್ಯಕ್ರಮಗಳ ಮೂಲಕ ಭಕ್ತರನ್ನು ಸಂಪಾದಿಸಿದ್ದರು. ಇವರೀರ್ವರಗದ್ದುಗೆಗಳನ್ನು ಊರ ಹೊರಗಿನ ಮಠದ ಜಮೀನಿನಲ್ಲಿ ನಿರ್ಮಿಸಲಾಗಿ ಎಲ್ಲಾ ಗದ್ದುಗೆಗಳಿಗೆಭಕ್ತರೇ ನಿರಂತರವಾಗಿ ಪೂಜೆ ಮಾಡಿಕೊಂಡು ಬಂದರು.ಶ್ರೀ ಮರುಳಸಿದ್ದ ಶಿವಾಚಾರ್ಯರ ನಂತರ ಮೂವತ್ತೆಂಟು ವರ್ಷಗಳ ಕಾಲ ಮಠಖಾಲಿ ಉಳಿದು ಊರ ಒಳಗಿನ ಮಠ ಜೀರ್ಣಗೊಳ್ಳತೊಡಗಿತು. ಆಗ ಶ್ರೀಮಠಕ್ಕೆ ಪ್ರಸ್ತುತಶ್ರೀಗಳಾದ ಶ್ರೀ ಷ.ಬ್ರ. ನಂದೀಶ್ವರ ಶಿವಾಚಾರ್ಯ ಸ್ವಾಮಿಗಳನ್ನು ನೇಮಕ ಮಾಡಲಾಯಿತು.ಶ್ರೀಗಳು ಅಧಿಕಾರ ವಹಿಸಿಕೊಂಡ ನಂತರ ಊರ ಹೊರಭಾಗದ ಗದ್ದುಗೆಗಳಿದ್ದ ಜಮೀನಿನಲ್ಲಿನೂತನ ಕಟ್ಟಡವನ್ನು ನಿರ್ಮಿಸಿ ಮಠವನ್ನು ಸ್ಥಳಾಂತರಿಸಿದರು. ಆನಂತರ 1998ರಲ್ಲಿಶ್ರೀಮಠದ ಪಟ್ಟಾಧಿಕಾರವನ್ನು ಶ್ರೀ ರಂಭಾಪುರಿ ಹಾಗೂ ಶ್ರೀ ಉಜ್ಜಯಿನಿ ಜಗದ್ಗುರುಗಳಸಮ್ಮುಖದಲ್ಲಿ ಸ್ವೀಕರಿಸಿದರು. ಶ್ರೀಗಳು ಹೆಚ್ಚು ಕ್ರಿಯಾಶೀಲರಾಗಿ ಧಾರ್ಮಿಕಆಚರಣೆಗಳೊಂದಿಗೆ ಶ್ರೀಮಠವನ್ನು ಅಭಿವೃದ್ದಿಗೊಳಿಸುತ್ತಿದ್ದು ಇನ್ನೂ ಹೆಚ್ಚಿನ ಅಭಿವೃದ್ದಿಕಾರ್ಯಗಳು ನಡೆಯಬೇಕಿವೆ.

Swamiji

Swamiji Name :
ಶ್ರೀ ಷ.ಬ್ರ. ನಂದೀಶ್ವರ ಶಿವಾಚಾರ್ಯ ಸ್ವಾಮಿಗಳು
Place :
ನಂದೀಪುರ, ತರೀಕೆರೆ ತಾ||
Pattadikara :
05-02-1998
Photo :

Programs

ಯುಗಾದಿ, ಬಸವಜಯಂತಿ, ದಸರ ಹಾಗೂ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ

Photos

Full Address Kannada

ಶ್ರೀ ಉಜ್ಜಯಿನಿ ಶಾಖಾ ಮಠ
ನಂದೀಪುರ, ಗಡಿಹಳ್ಳಿ ಪೋಸ್ಟ್ - 577 547
ತರೀಕೆರೆ ತಾ||, ಚಿಕ್ಕಮಗಳೂರು ಜಿಲ್ಲೆ

Map

Near by Places

ಅಂತರಘಟ್ಟಿ - 8 ಕಿ.ಮೀ.
ಅಜ್ಜಂಪುರ - 15 ಕಿ.ಮೀ.
ತರೀಕೆರೆ - 35 ಕಿ.ಮೀ.

Statistic

55 Views
0 Rating
0 Favorite
0 Share
error: Content is protected !!