ಚಿತ್ರದುರ್ಗ ಪಟ್ಟಣದ ಕೋಟೆ ಪ್ರದೇಶದ ರಂಗಯ್ಯನ ಬಾಗಿಲ ಬಳಿ ಸ್ಥಾಪಿತಗೊಂಡಿರುವ ಶ್ರೀ ಉಜ್ಜಯಿನಿ ಮಠವು ಶ್ರೀಮದ್ ಉಜ್ಜಯಿನಿ ಪೀಠದ ಶಾಖಾಮಠವಾಗಿಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ. ಶ್ರೀಮಠದ ವಂಶಸ್ಥರು ಕಾಳಿಕಾಉಜ್ಜಯಿನಿ ನಗರದ ಹತ್ತಿರದ ಭಾನುಮತಿ ಪಟ್ಟಣದಿಂದ ಕರ್ನಾಟಕಕ್ಕೆ ಉಜ್ಜಯಿನಿ ಪೀಠದಮೂಲ ಜಗದ್ಗುರು ಶ್ರೀ ಮರುಳಾರಾಧ್ಯರ ಜೊತೆ ಬಂದು ಇಲ್ಲಿ ನೆಲೆಸಿ ಶ್ರೀಮಠವನ್ನುಸ್ಥಾಪಿಸಿದರು ಎಂದು ಹೇಳಲಾಗಿದೆ.ಚಿತ್ರದುರ್ಗದ ಶ್ರೀ ಉಜ್ಜಯಿನಿ ಮಠವು ಶ್ರೀಮದ್ ಉಜ್ಜಯಿನಿಯ ಪೀಠಕ್ಕೆಬಹಳಷ್ಟು ನಿಕಟವಾದ ಸಂಬಂಧವನ್ನು ಹೊಂದಿದ್ದು ಶ್ರೀಮಠದ ಧಾರ್ಮಿಕ ಆಚರಣೆಗಳಲ್ಲಿಕಂಡುಬರುತ್ತದೆ. ಶ್ರೀಮಠದ ಕರ್ತೃಗುರುಗಳು ಶ್ರೀ ಷ.ಬ್ರ.ಪಟ್ಟದ ಮರುಳಸಿದ್ಧ ಶಿವಾಚಾರ್ಯಸ್ವಾಮಿಗಳೆಂದು ಹೇಳಲಾಗಿದ್ದು ಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲ. ಶ್ರೀಮಠದ ಪರಂಪರೆಯವಿಶಿಷ್ಟ ಸಂಪ್ರದಾಯವೆಂದರೆ, ಶ್ರೀಮಠದ ಗುರುಗಳ ಪಟ್ಟಾದಿಕಾರ ಮಹೋತ್ಸವವನ್ನುಉಜ್ಜಯಿನಿ ಪೀಠದಲ್ಲಿಯೇ ಜಗದ್ಗುರುಗಳಿಂದ ನಡೆಸಲಾಗುವುದು.ಶ್ರೀಮಠದ ಪರಂಪರೆಯಲ್ಲಿ ಇಲ್ಲಿನವರೆಗೂ ಸುಮಾರು 9 ಜನ ಶ್ರೀಗಳು ಅಧಿಕಾರನಡೆಸಿರಬಹುದೆಂದು ಹೇಳಲಾಗಿದ್ದು ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಪರಮೇಶ್ವರಶಿವಾಚಾರ್ಯ ಸ್ವಾಮಿಗಳು ಉಜ್ಜಯಿನಿ ಪೀಠದಲ್ಲಿ ಪಟ್ಟಾಧಿಕಾರ ವಹಿಸಿಕೊಂಡು ಬಂದುಶ್ರೀಮಠವನ್ನು ಅಭಿವೃದ್ದಿಪಡಿಸಿದ್ದಾರೆ. ಶ್ರೀಗಳು ವೀರಶೈವ ತತ್ವ ಹಾಗೂತಪೋನುಷ್ಠಾನದಲ್ಲಿ ಹೆಚ್ಚು ಪರಿಣಿತಿ ಪಡೆದಿದ್ದು ಭಕ್ತರನ್ನು ಸಂಪಾದಿಸಿಕೊಂಡು ಅವರಸಹಕಾರದೊಂದಿಗೆ ಶ್ರೀಮಠವನ್ನು ವಿಸ್ತಾರವಾಗಿ ಬೆಳೆಸಿದರು ಎಂದು ತಿಳಿದುಬರುತ್ತದೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಪಟ್ಟದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು1983ರಲ್ಲಿ ಪಟ್ಟಾಧಿಕಾರವನ್ನು ವಹಿಸಿಕೊಂಡು ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ. ಶ್ರೀಗಳುಚಿತ್ರದುರ್ಗದಲ್ಲಿ ಪದವಿ ಶಿಕ್ಷಣ ಮತ್ತು ಸಂಸ್ಕøತ ವೇದಾಧ್ಯಯನ ಮಾಡಿ ಶ್ರೀಮಠದ ಅಧಿಕಾರವಹಿಸಿಕೊಂಡಿದ್ದು ಹಳೆಯ ಕಟ್ಟಡವನ್ನು ತೆಗೆಸಿ ನೂತನ ಕಟ್ಟಡವನ್ನು ಕಟ್ಟಿಸಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಪಟ್ಟದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು
Date of Birth :
1958
Pattadikara :
1983
Photo :
Programs
ಏಪ್ರಿಲ್ 4 ನೇ ತಾರೀಖಿನಂದು ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಮಹೋತ್ಸವ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು.
ಕಾರ್ತೀಕ ಮಾಸದಲ್ಲಿ ಕಾರ್ತಿಕೋತ್ಸವ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು.
Institutions
ಸಂಸ್ಕøತ ಪಾಠಶಾಲೆ ಕಿರಿಯ / ಹಿರಿಯ ಪ್ರಾಥಮಿಕ/ ಪ್ರೌಢ ಶಾಲೆ
Photos
Full Address Kannada
ಶ್ರೀ ಉಜ್ಜಯಿನಿ ಮಠ
ಚಿತ್ರದುರ್ಗ - 577 501
ಚಿತ್ರದುರ್ಗ ತಾ||, ಜಿ||