Shree Tryumbeshwara Matha

Shree Tryumbeshwara Matha Claimed

ಶ್ರೀ ತ್ರ್ಯಂಬಕೇಶ್ವರ ಮಠ

Average Reviews

Description

ಶ್ರೀ ತ್ರ್ಯಂಬಕೇಶ್ವರ ಮಠ

ಕರ್ತೃ – ಪೂಜ್ಯ ಶ್ರೀ ಮಹಾದೇವ ಮಹಾಸ್ವಾಮಿಗಳು

ತಿರುಮಲಕೂಡಲು ನರಸೀಪುರದ ಮಧ್ಯಭಾಗದ ತೇರಿನ ಬೀದಿಯಲ್ಲಿ ಶ್ರೀಮದ್ರಂಭಾಪುರಿ ಪೀಠದ ಶಾಖಾಮಠವಾಗಿ ಬೆಳೆದು ಬಂದಿರುವ ಶ್ರೀ ತ್ರ್ಯಂಬಕೇಶ್ವರ ಮಠವುಅಸ್ತಿತ್ವದಲ್ಲಿದೆ. ಸುಮಾರು 150 ವರ್ಷಗಳ ಇತಿಹಾಸ ಹೊಂದಿರುವ ಶ್ರೀಮಠಕರ್ತೃಗುರುಗಳೆಂದು ಪೂಜ್ಯ ಶ್ರೀ ಮಹಾದೇವ ಮಹಾಸ್ವಾಮಿಗಳನ್ನು ಗುರುತಿಸˉÁಗಿದ್ದುಕರ್ತೃ ಶ್ರೀಗಳು ಕಾರಣಾಂತರಗಳಿಂದ ಮಠವನ್ನು ತ್ಯಜಿಸಿ ಸಂಚಾರ ಹೋದರೆಂದುಹೇಳˉÁಗಿದೆ.ಕರ್ತೃಗುರುಗಳ ನಂತರ ಕೆಲಕಾಲ ಶ್ರೀಮಠವು ಖಾಲಿ ಉಳಿದು ಧಾರ್ಮಿಕಆಚರಣೆಗಳು ಕುಂಠಿತಗೊಳ್ಳತೊಡಗಿದಾಗ ಊರಿನ ಜನರೇ ಮಠದ ಧಾರ್ಮಿಕಕಾರ್ಯಗಳನ್ನು ಮುನ್ನಡೆಸಿಕೊಂಡು ಬಂದಿದ್ದರು. ನಂತರ ಬಸ್ಕಂಡಕ್ಟರ್ ವೃತ್ತಿಮಾಡುತ್ತಿದ್ದ ಪೂಜ್ಯ ಶ್ರೀ ಚನ್ನಪ್ಪನವರು ಮಠದ ಧಾರ್ಮಿಕ ಕಾರ್ಯಗಳಿಗೆ ನೆರವಾಗುತ್ತಾಬಂದಿದ್ದು ಕ್ರಮೇಣ ಶ್ರೀಮಠದ ಅಂಗವೇ ಆಗಿ ಹೋದರು. ನಿತ್ಯ ಶ್ರೀಮಠದಲ್ಲಿ ಧಾರ್ಮಿಕಆಚರಣೆಗಳನ್ನು ನಡೆಸುತ್ತಾ ತಮ್ಮ ಸನ್ನಡತೆ, ಸದಾಚಾರ, ಶಿವಪೂಜಾನಿಷ್ಠತೆಯಿಂದ ಭಕ್ತರಪ್ರೀತಿಯನ್ನು ಸಂಪಾದಿಸಿದ್ದ ಶ್ರೀ ಚನ್ನಪ್ಪ ಸ್ವಾಮಿಗಳು ತಮ್ಮ 65ನೇ ವಯಸ್ಸಿನಲ್ಲಿ ಶ್ರೀ ಷ.ಬ್ರ.ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳೆಂಬ ಅಭಿದಾನ ಪಡೆದು ಶ್ರೀಮಠದಅಧಿಕಾರವನ್ನು ಅಧಿಕೃತವಾಗಿ ವಹಿಸಿಕೊಂಡರು.ತಮ್ಮ ಇಳಿವಯಸ್ಸಿನಲ್ಲಿ ಮಠದ ಅಧಿಕಾರ ವಹಿಸಿಕೊಂಡ ಶ್ರೀಗಳು ಶ್ರೀಮಠದಲ್ಲಿಧಾರ್ಮಿಕ ಆಚರಣೆಗಳೊಂದಿಗೆ ಸಾಮಾಜಿಕವಾಗಿಯೂ ಕಾರ್ಯಕ್ರಮಗಳನ್ನು ನಡೆಸುತ್ತಾಭಕ್ತರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುತ್ತಿದ್ದರು. ‘ತಮಗಾಗಿ ಏನು ಇಲ್ಲ, ಸಮಾಜಕ್ಕೆ ಎˉÁ್ಲ’ಎಂದು ನಂಬಿದ್ದ ಶ್ರೀಗಳು ತಮ್ಮ ಪೂರ್ವಾಶ್ರಮದಲ್ಲಿ ಸಂಪಾದಿಸಿದ್ದನ್ನೆಲ್ಲವನ್ನೂ ಮಠಹಾಗೂ ಸಮಾಜಕ್ಕೆ ನೀಡಿ ಲಿಂಗೈಕ್ಯರಾದರು. ಶ್ರೀಗಳ ಐಕ್ಯಾ ನಂತರ ಭಕ್ತರೇ ಶ್ರೀಗಳ ಸಮಾಧಿಗದ್ದುಗೆ ನಿರ್ಮಿಸಿ ಮಠದ ಹಳೆಯ ಕಟ್ಟಡ ತೆಗೆದು ನೂತನ ಕಟ್ಟಡ ನಿರ್ಮಿಸಿ ಈಗಿನಶ್ರೀಗಳಾದ ಶ್ರೀ ಷ.ಬ್ರ. ವೀರೇಶ ಶಿವಾಚಾರ್ಯ ಸ್ವಾಮಿಗಳನ್ನು 1990ರಲ್ಲಿ ಪಟ್ಟಕ್ಕೆ ತಂದರು.ಪ್ರಸ್ತುತ ಶ್ರೀಗಳು ಪರಂಪರೆಯ ಹಾದಿಯಲ್ಲಿ ಮುನ್ನಡೆಯುತ್ತಾ ಶ್ರೀಮಠವನ್ನುಅಭಿವೃದ್ಧಿಪಡಿಸುತ್ತಿದ್ದಾರೆ. ಹಿರಿಯ ಗುರುಗಳ ಗದ್ದುಗೆ ಪಕ್ಕದಲ್ಲಿ ಶ್ರೀ ಜಗದ್ಗುರುರೇಣುಕಾಚಾರ್ಯರ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು ಪ್ರತಿನಿತ್ಯ ಪೂಜೆ ನಡೆಯಲ್ಪಡುತ್ತಿದೆ.

Swamiji

Swamiji Name :
ಶ್ರೀ ಷ.ಬ್ರ. ವೀರೇಶ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
1950
Place :
ಕಿರುಗಾವಲು, ಮಳವಳ್ಳಿ ತಾ||
Pattadikara :
1990
Photo :

Programs

ರೇಣುಕಾ ಜಯಂತಿ ಹಾಗೂ ಬಸವ ಜಯಂತಿ ಆಚರಣೆ ಆಷಾಡ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ

Photos

Full Address Kannada

ಶ್ರೀ ತ್ರ್ಯಂಬಕೇಶ್ವರ ಮಠ
ತೇರಿನ ಬೀದಿ, ಟಿ. ನರಸೀಪುರ - 571 124
ಟಿ. ನರಸೀಪುರ ತಾ|| ಮೈಸೂರು ಜಿಲ್ಲೆ

Map

Near by Places

ಮೈಸೂರು - 30 ಕಿ.ಮೀ.
ಚಾಮರಾಜನಗರ - 30 ಕಿ.ಮೀ.
ನಂಜನಗೂಡು - 30 ಕಿ.ಮೀ.
ಮಳವಳ್ಳಿ - 35 ಕಿ.ಮೀ.

Statistic

37 Views
0 Rating
0 Favorite
0 Share
error: Content is protected !!