ಕ ಬುರಗಿ ಜಿಲ್ಲಾ ಕೇಂದ್ರದಿಂದ 10 ಕಿ.ಮೀ. ದೂರದಲ್ಲಿರುವ ಹಿರೇನಂದೂರುಗ್ರಾಮದಲ್ಲಿ ಸುಮಾರು 8 ಶತಮಾನಗಳಷ್ಟು ಪುರಾತನ ಶ್ರೀ ತೋಪಿನಕಟ್ಟಿ ಹಿರೇಮಠವುಅಸ್ತಿತ್ತ್ವದಲ್ಲಿದ್ದು ಈ ಭಾಗದ ಪ್ರಮುಖ ಮಠಗಳಲ್ಲಿ ಒಂದಾಗಿ ಬೆಳೆದಿದೆ. ಶ್ರೀಮದ್ರಂಭಾಪುರಿ ಪೀಠದ ಶಾಖಾಮಠವಾಗಿ ಪಂಚಪೀಠಗಳ ಸಂಪ ್ರದಾಯವನ್ನುಪಾಲಿಸಿಕೊಂಡು ಬಂದಿರುವ ಶ್ರೀ ತೋಪಿನಕಟ್ಟಿ ಹಿರೇಮಠದ ಕರ್ತೃಗುರುಗಳೆಂದುಶ್ರೀ.ಷ.ಬ್ರ.ಮಲಯ ಶಾಂತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳನ್ನು ಗುರುತಿಸಲಾಗಿದೆ.ಶ್ರೀಮಠದ ಕರ್ತೃಗುರುಗಳು ಹಿಮಾಲಯದಿಂದ ಕನ್ಯಾಕುಮಾರಿಯವರೆಗೆಪ್ರವಾಸವನ್ನು ಕೈಗೊಂಡು ಧರ್ಮಪ್ರಚಾರ ಮಾಡಿದ ಮಹಾಪುರುಷರು. ಶ್ರೀಗಳುಹಿರೇನಂದೂರು ಗ್ರಾಮಕ್ಕೆ ಆಗಮಿಸಿ ನೆಲೆಗೊಂಡು ಶ್ರೀಮಠವನ್ನು ಸ್ಥಾಪಿಸಿದ್ದು ಇಲ್ಲಿವೀರಶೈವ ಧರ್ಮದ ಬೆಳವಣಿಗೆಗೆ ಶ್ರಮಿಸಿ ಪುನಃ ದಕ್ಷಿಣದ ಕಡೆಗೆ ಸಂಚಾರ ಹೊರಟರು.ಗುರುಗಳು ಮಹಾ ಪಂಡಿತರಾಗಿದ್ದು ತಾವು ನೆಲೆನಿಂತ ಜಾಗಗಳನೆಲ್ಲಾ ಸುಕ್ಷೇತ್ರವನ್ನಾಗಿಮಾಡುತ್ತಾ ಶ್ರೀ ರೇವಣಸಿದ್ದರು ಪ್ರಾರಂಭಮಾಡಿದ್ದ ಶಿವಗಂಗೆಯ ಮೇಲಣಗವಿ ಗವಿಮಠದಮಠಾಧ್ಯಕ್ಷರಾಗಿ ವೀರಶೈವ ಧರ್ಮ ವಿಸ್ತಾರವಾಗಿ ಬೆಳೆಯಲು ನೆರವಾದರು. ಗುರುಗಳುಪುನಃ ಸಂಚಾರ ಕೈಗೊಂಡು ಹಿರೇನಂದೂರು ಗ್ರಾಮಕ್ಕೆ ಮರಳಿ ಇಲ್ಲಿಗೆ ಸಮೀಪದ ಬೆಟ್ಟದಲ್ಲಿಅನುಷ್ಠಾನಗೊಂಡು ಅಲ್ಲಿ ಗಂಗೆ ಉದ್ಭವವಾಗುವಂತೆ ಮಾಡಿದರೆಂಬ ಜನಪದ ಐತಿಹ್ಯವಿದೆ.ಇಂದಿಗೂ ಗ್ರಾಮಕ್ಕೆ ಸಮೀಪ ಗಂಗೆ ಬೆಟ್ಟವೆಂಬ ಶಿಖರವಿದ್ದು ಅಲ್ಲಿ ಎಂದೂ ಬತ್ತದ ಚಿಲುಮೆಇರುವುದನ್ನು ಕಾಣಬಹುದು.ಕರ್ತೃಗುರುಗಳ ನಂತರದ ಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲ. ಹಿಂದಿನಗುರುಗಳಾದ ಶ್ರೀ.ಷ.ಬ್ರ. ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು ಅಪ್ರತಿಮಪಂಡಿತರಾಗಿ ಪಂಚಪೀಠಾಧೀಶರ ಪ್ರೋತ್ಸಾಹದೊಂದಿಗೆ ಧರ್ಮ ಪ್ರಚಾರ ಕೈಗೊಂಡರು.ಶ್ರೀಗಳು 1938ರಲ್ಲಿ ಶ್ರೀಮಠದ ಪಟ್ಟಕ್ಕೆ ಬಂದಿದ್ದು ಅಪಾರ ಶಿಷ್ಯ ಬಳಗವನ್ನು ಹೊಂದಿದ್ದರು.ಗುರುಗಳ ಅವಿರತ ಸೇವೆಯನ್ನು ಗುರುತಿಸಿದ ಕರ್ನಾಟಕ ಸರ್ಕಾರ ರಾಜ್ಯ ಪ್ರಶಸ್ತಿ ನೀಡಿಗೌರವಿಸಿದೆ. ಇಂತಹ ಮಹಾಮಹಿಮ ಶ್ರೀಗಳು 1982ರಲ್ಲಿ ಈಗಿನ ಶ್ರೀಗಳಾದ ಶ್ರೀ.ಷ.ಬ್ರ.ಚಂದ್ರಮೌಳೇಶ್ವರ ಶಿವಾಚಾರ್ಯರನ್ನು ಪಟ್ಟಕ್ಕೆ ತಂದು 1994ರಲ್ಲಿ ಲಿಂಗೈಕ್ಯರಾಗಿದ್ದಾರೆ.ಪ್ರಸ್ತುತ ಶ್ರೀಗಳು ಪರಂಪರೆಯ ಹಾದಿಯಲ್ಲಿ ಶ್ರೀಮಠದ ಸರ್ವತೋಮುಖ ಅಭಿವೃದ್ದಿಗಾಗಿಅವಿರತ ಶ್ರಮಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
12-12-1972
Place :
ಹಿರೇನಂದೂರು, ಕಲಬುರಗಿ ತಾ||
Pattadikara :
1982
Photo :
Programs
ಪ್ರತಿ ಅಮವಾಸಗೆ ವಿಶೇಷ ಪೂಜೆ
ಜನವರಿ ಪಂಚಮಿ ತಿಥಿಗೆ ಶ್ರೀಮಠದ ರಥೋತ್ಸವ
ಶ್ರಾವಣ ಮಾಸದಲ್ಲಿ ಪಲ್ಲಕಿ ಉತ್ಸವ
Photos
Full Address Kannada
ಶ್ರೀ ತೋಪಿನ ಕಟ್ಟಿ ಹಿರೇಮಠ
ಹಿರೇನಂದೂರು - 585 228
ಕಲಬುರಗಿ ತಾ||, ಜಿಲ್ಲೆ