Shree Tontadarya Viraktamatha

Shree Tontadarya Viraktamatha Claimed

ಶ್ರೀ ತೋಂಟದಾರ್ಯ ವಿರಕ್ತಮಠ

Average Reviews

Description

ಶ್ರೀ ತೋಂಟದಾರ್ಯ ವಿರಕ್ತಮಠ

ಕರ್ತೃ ಶ್ರೀ ಮ.ನಿ.ಪ್ರ. ತೋಂಟದಾರ್ಯ ಶಿವಯೋಗಿಗಳು

ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಕುರುವತ್ತಿ ಗ್ರಾಮವು ಧಾರ್ಮಿಕಕೇಂದ್ರವಾಗಿದ್ದು ಇಲ್ಲಿನ ಶ್ರೀ ಬಸವೇಶ್ವರ ದೇವಸ್ಥಾನವು ಜಿಲ್ಲೆಯ ಪ್ರಮುಖ ಧಾರ್ಮಿಕನೆಲೆಗಳಲ್ಲೊಂದಾಗಿದೆ. ಇಲ್ಲಿ ಸುಮಾರು 1750ರ ಆಸುಪಾಸಿನಲ್ಲಿ ಶ್ರೀ ತೋಂಟದಾರ್ಯಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ತೋಂಟದಾರ್ಯ ವಿರಕ್ತಮಠವು ತನ್ನಪರಂಪರೆಯಲ್ಲಿ ಬಂದಿರುವ ಗುರುಗಳ ತಪೋಶಕ್ತಿಯಿಂದಾಗಿ ಪ್ರಸಿದ್ಧಿ ಪಡೆದಿದೆ.ಶ್ರೀಮಠದ ಕರ್ತೃಗುರುಗಳಾದ ಶ್ರೀ ತೋಂಟದಾರ್ಯ ಸ್ವಾಮಿಗಳು ಕೆಳದಿಯಅರಸ ಬೂದಿಬಸಪ್ಪ ನಾಯಕನಿಗೆ ಆಶೀರ್ವಾದ ಮಾಡಿ ತಮ್ಮ ಪವಾಡವನ್ನು ತೋರಿದ್ದಕ್ಕಾಗಿಬೂದಿ ಬಸಪ್ಪ ನಾಯಕನು ಈಗಿರುವ ಮಠವನ್ನು ಕಟ್ಟಿಸಿಕೊಟ್ಟು, ಮಠದ ಸುತ್ತಮುತ್ತಲಿನಜಾಗವನ್ನು ಉಂಬಳಿಯಾಗಿ ಕೊಟ್ಟು ಮಠದ ಬೆಳವಣಿಗೆಗೆ ಕಾರಣನಾದನೆಂಬುದು ಪ್ರತೀತಿ.ಶ್ರೀ ತೋಂಟದಾರ್ಯ ಸ್ವಾಮಿಗಳು ತಪೋನಿಷ್ಠರಾಗಿದ್ದು ತಮ್ಮ ಅನುಷ್ಠಾನಬಲದಿಂದ, ಧಾರ್ಮಿಕ ಆಚರಣೆಗಳಿಂದ ಶ್ರೀಮಠಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರನ್ನು ಸೆಳೆದುಶ್ರೀಮಠವನ್ನು ಮುನ್ನಡೆಸಿದ್ದಾರೆ. ಶ್ರೀಗಳು ಸಾಹಿತಿಗಳೂ ಆಗಿದ್ದು ಅನೇಕ ಕೃತಿಗಳನ್ನು ರಚಿಸಿ“ಶಿವಾನುಭವ ಚರಮೂರ್ತಿ” ಗಳೆಂದು ಹೆಸರು ಪಡೆದು ಮಠವನ್ನು ಪ್ರಸಿದ್ಧಿಗೆ ತಂದರು.ಕರ್ತೃಗುರುಗಳ ನಂತರ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಅಧಿಕಾರಕ್ಕೆ ಬಂದಿದ್ದುಇವರ ಪವಾಡದ ಫಲವಾಗಿ ಈ ಗ್ರಾಮಕ್ಕೆ ಕುರುವತ್ತಿ ಎಂಬ ಹೆಸರು ಬಂದಿದೆಯೆಂಬ ಪ್ರತೀತಿಇದೆ. ನಂತರದ ಎಲ್ಲಾ ಶ್ರೀಗಳು ತೋಂಟದಾರ್ಯ ಎಂಬ ಹೆಸರನ್ನೇ ಅಭಿದಾನ ಪಡೆದುಅಧಿಕಾರ ನಡೆಸಿದ್ದರಿಂದಾಗಿ ಶ್ರೀಮಠದ ಪರಂಪರೆಯ ಬಗ್ಗೆ ಸ್ಪಷ್ಟತೆ ಲಭ್ಯವಿಲ್ಲ.ಈಗಿನ ಶ್ರೀಗಳಾದ ಶ್ರೀ ತೋಂಟದಾರ್ಯ ಸ್ವಾಮಿಗಳು 13ನೆಯವರೆಂದುಹೇಳಲಾಗಿದ್ದು 1974ರಲ್ಲಿ ಪಟ್ಟಕ್ಕೆ ಬಂದಿದಾರೆ. ಶ್ರೀಗಳು ಹೆಚ್ಚು ಧರ್ಮನಿಷ್ಠರಾಗಿದ್ದು1989ರಿಂದ ಇಲ್ಲಿಯವರೆಗೂ ಶ್ರೀಮಠದಲ್ಲೇ ಅನುಷ್ಠಾನಕ್ಕೆ ಕುಳಿತು ತಪಸ್ಸಿನ ರೀತಿಯಲ್ಲಿಏಕಾಂತವಾಗಿ ಯಾರಿಗೂ ಹೆಚ್ಚು ಕಾಣಿಸದೇ ದೊಡ್ಡ ಸಾಧನೆಯನ್ನೇ ಮಾಡುತ್ತಿದ್ದಾರೆ.ಶ್ರೀಗಳು ಅನುಷ್ಠಾನದಲ್ಲಿದ್ದರೂ ಧಾರ್ಮಿಕ ಆಚರಣೆಗಳು ನಡೆಯುತ್ತಿದ್ದು, ಶ್ರಾವಣ ಮತ್ತುಶಿವರಾತ್ರಿಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.

Swamiji

Swamiji Name :
ಶ್ರೀಮನ್ ನಿರಂಜನ ತೋಂಟದಾರ್ಯ ಮಹಾಸ್ವಾಮಿಗಳು
Place :
ಬಾಗಲಕೋಟೆ
Pattadikara :
1974
Photo :

Programs

ಪ್ರತಿ ಅಮವಾಸ್ಯೆ, ಶಿವರಾತ್ರಿ ಹಾಗೂ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ.

Photos

Full Address Kannada

ಶ್ರೀ ತೋಂಟದಾರ್ಯ ವಿರಕ್ತಮಠ
ಕುರುವತ್ತಿ - 583 217 ಹೂವಿನಹಡಗಲಿ
ತಾ||, ಬಳ್ಳಾರಿ ಜಿ||

Map

Near by Places

ಹೊಳಲು - 8 ಕಿ.ಮೀ.
ಹರಪನಹಳ್ಳಿ - 33 ಕಿ.ಮೀ.
ನೀಲಗುಂದ ಕ್ರಾಸ್ - 30 ಕಿ.ಮೀ.

Statistic

28 Views
0 Rating
0 Favorite
0 Share
error: Content is protected !!