ಮುಂಡರಗಿ ಪಟ್ಟಣದ ಕೋಟೆಭಾಗ ಪ್ರದೇಶದಲ್ಲಿ ಇತಿಹಾಸ ಪ್ರಸಿದ್ಧ ಶ್ರೀಲಕ್ಷಿ ್ಮೀನರಸಿಂಹಸ್ವಾಮಿ ದೇವಾಲಯದ ಸಮೀಪದಲ್ಲಿ ಅಸ್ತಿತ ್ವದಲ್ಲಿರುವ ಶ್ರೀತೋಂಟದಾರ್ಯ ಶಾಖಾ ಮಠವು ಗದಗದ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಶಾಖಾಮಠವಾಗಿ ಪ್ರಚಲಿತದಲ್ಲಿದೆ. ಶ್ರೀಮಠದ ಮೂಲ ಮಠವು ಮೊದಲು ಸಂಚಾರಿಪೀಠವಾಗಿದ್ದು ತದನಂತರ ಡಂಬಳಕ್ಕೆ ಸ್ಥಳಾಂತರಗೊಂಡು ಅಲ್ಲಿಂದ ಮುಂದೆ ಗದಗದಲ್ಲಿನೆಲೆಗೊಂಡಿದೆ. ಈ ರೀತಿಯಾಗಿ ಬೆಳೆದುಬಂದಿರುವ ಶ್ರೀಮಠದ ಪರಂಪರೆಯಮೂಲಪುರುಷರು ಪರಮಪೂಜ್ಯ ಶ್ರೀ ತೋಂಟದ ಸಿದ್ದಲಿಂಗ ಶಿವಯೋಗಿಗಳು.ಪುರಾತನ ಪರಂಪರೆಯ ಶ್ರೀಮಠದ ಹಿಂದಿನ ಗುರುಗಳು ಶ್ರೀ ಮ.ನಿ.ಪ್ರ.ವಿರೂಪಾಕ್ಷ ಮಹಾಸ್ವಾಮಿಗಳು. ತನ್ನ ಧಾರ್ಮಿಕ, ಸಾಮಾಜಿಕ ಕಾರ್ಯಚಟುವಟಿಕೆಗಳಮೂಲಕ ಹೆಸರಾಗಿದ್ದ ಶ್ರೀಗಳು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿ 1990ರಲ್ಲಿಲಿಂಗೈಕ್ಯರಾಗಿದ್ದಾರೆ. ಹಿಂದಿನ ಶ್ರೀಗಳ ಐಕ್ಯಾನಂತರ ಸುಮಾರು ಎರಡೂವರೆ ದಶಕಗಳ ಕಾಲಖಾಲಿ ಉಳಿದ ಶ್ರೀಮಠವು ಗದಗಿನ ಶ್ರೀ ಜಗದ್ಗುರು ತೋಂಟದಾರ್ಯ ಮಠದ ನೇರಆಡಳಿತದಲ್ಲಿ ಅಭಿವೃದ್ಧಿಹೊಂದಿದೆ.ಸುಮಾರು ಎರಡೂವರೆ ದಶಕಗಳ ಸುದೀರ್ಘ ಸಮಯದ ನಂತರ ಗದಗಿನಮಠದ ಜಗದ್ಗುರು ಶ್ರೀ ಮ.ನಿ.ಪ್ರ. ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ತಮ್ಮಶಿಷ್ಯರಾದ ಬೆಳಗಾವಿ ಜಿಲ್ಲೆ ಬೈಲೂರಿನ ಶ್ರೀ ಚನ್ನಬಸವೇಶ್ವರ ಜ್ಞಾನಪೀಠ ನಿಷ್ಕಲ ಮಂಟಪದಪೂಜ್ಯರಾಗಿದ್ದ ಶ್ರೀ ಮ.ನಿ.ಪ್ರ. ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳನ್ನುಕರೆತಂದು 2015ರ ಜೂನ್ 08ರಂದು ಮುಂಡರಗಿಯ ಶ್ರೀ ತೋಂಟದಾರ್ಯಶಾಖಾಮಠದ ಅಧಿಕಾರ ವಹಿಸಿದರು.ಶ್ರೀ ಮ.ನಿ.ಪ್ರ. ನಿಜಗುಣಪ್ರಭು ಮಹಾಸ್ವಾಮಿಗಳು ಮೊದಲು ಕೂಡಲಸಂಗಮದಶ್ರೀ ಬಸವಧರ್ಮಪೀಠದ ಜಗದ್ಗುರು ಲಿಂ. ಶ್ರೀ ಲಿಂಗಾನಂದ ಮಹಾಸ್ವಾಮಿಗಳು, ನಂತರಗದುಗಿನ ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳಶಿಷ್ಯರಾಗಿದ್ದುಕೊಂಡು ಆಧ್ಯಾತ್ಮ ಸಾಧನೆಗೈದವರು. ಮುಂದೆ ತಮ್ಮ ಪ್ರವಚನಗಳಿಂದನಾಡಿನಾದ್ಯಂತ ಮನೆಮಾತಾದ ಶ್ರೀಗಳು ಬೆಳಗಾವಿ ಜಿಲ್ಲೆ ಬೈಲೂರಿನಲ್ಲಿ ಶ್ರೀ ಚನ್ನಬಸವೇಶ್ವರಜ್ಞಾನಪೀಠ ನಿಷ್ಕಲಮಂಟಪ ಸ್ಥಾಪಿಸಿದರು. ತದನಂತರ ತಮ್ಮ ಗುರುಗಳ ಅಪೇಕ್ಷೆ ಮೇರೆಗೆಮುಂಡರಗಿಗೆ ಆಗಮಿಸಿ ಶ್ರೀಮಠದ ಅಧಿಕಾರ ಸ್ವೀಕರಿಸಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು
Date of Birth :
24-02-1964
Place :
ಮೈಸೂರು
Pattadikara :
08-06-2015
Photo :
Programs
ಪ್ರತಿ ತಿಂಗಳು 6ನೇ ತಾರಿಖಿನಂದು ಶಿವಾನುಭವಗೋಷ್ಠಿ
ಬಸವ ಜಯಂತಿ ಆಚರಣೆ
ಆಷಾಢ ಮಾಸದಲ್ಲಿ ಒಂದು ತಿಂಗಳು "ಬಸವ ತತ್ತ್ವದ ಪ್ರವಚನ"
ಹಾಗೂ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು
ದಸರಾದಲ್ಲಿ ವಿಶೇಷ ಧಾರ್ಮಿಕ ಆಚರಣೆಗಳು
Institutions
ಕಿರಿಯ / ಹಿರಿಯ ಪ್ರಾಥಮಿಕ ಶಾಲೆ
Photos
Full Address Kannada
ಶ್ರೀ ತೋಂಟದಾರ್ಯ ಶಾಖಾ ಮಠ
ಮುಂಡರಗಿ - 582 118
ಮುಂಡರಗಿ ತಾ||, ಗದಗ ಜಿಲ್ಲೆ