ಮಂಡ್ಯ ಜಿˉÉ್ಲ ಮದ್ದೂರು ತಾಲ್ಲೂಕಿನ ಮಡೇನಹಳ್ಳಿ ಗ್ರಾಮದ ಮಧ್ಯಭಾಗದಲ್ಲಿಅಸ್ತಿತ್ತ್ವದಲ್ಲಿರುವ ಶ್ರೀ ತೋಂಟದಾರ್ಯ ಮಠವು ತನ್ನ ವಿರಕ್ತ ಸಂಪ್ರದಾಯದ ಆಚರಣೆಗಳಮೂಲಕ ಜನರಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಅರಿವನ್ನು ಮೂಡಿಸುವಲ್ಲಿ ಶ್ರಮಿಸುತ್ತಿದೆ.ಈಗ್ಗೆ ನೂರು ವರ್ಷಗಳ ಹಿಂದೆ ಸ್ಥಾಪಿತಗೊಂಡಿರುವ ಶ್ರೀ ತೋಂಟದಾರ್ಯ ಮಠದಸ್ಥಾಪಕ ಗುರುಗಳು ಪ.ಪೂ. ಶ್ರೀ ಮಹಾಂತ ಸ್ವಾಮಿಗಳು.ಮೂಲ ಟಿ.ನರಸೀಪುರ ತಾಲ್ಲೂಕು ಕಿದರಹಳ್ಳಿಯ ಮಠದವರಾದ ಕರ್ತೃಗುರುಗಳು ಅಲ್ಲಿಂದ ಸಂಚಾರ ಹೊರಟು ಅಲ್ಲಲ್ಲಿ ನೆˉÉನಿಂತು ಭಕ್ತರನ್ನುದ್ದರಿಸುತ್ತಾ ಈ ಭಾಗಕ್ಕೆಆಗಮಿಸಿದ್ದು ಮಡೇನಹಳ್ಳಿ ಭಕ್ತರ ಒತ್ತಾಸೆ ಮೇರೆಗೆ ಇಲ್ಲಿಗೆ ಸಮೀಪದ ಕೆರೆಯ ದಡದಲ್ಲಿ ಶ್ರೀಮಠವನ್ನು ಸ್ಥಾಪಿಸಿದರು. ಶ್ರೀಗಳು ಶ್ರೀಮಠವನ್ನು 15ನೇ ಶತಮಾನದ ಧಾರ್ಮಿಕಚಳುವಳಿಯ ಹರಿಕಾರ ಶ್ರೀ ತೋಂಟದ ಸಿದ್ದಲಿಂಗೇಶ್ವರರ ಸ್ಮರಣಾರ್ಥ ಶ್ರೀ ಮಠವನ್ನು ಶ್ರೀತೋಂಟದಾರ್ಯ ಮಠವೆಂದು ಕರೆದರು.ಶ್ರೀ ಮಹಾಂತ ಸ್ವಾಮಿಗಳು ಸದಾ ಭಕ್ತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಾ ಶ್ರೀಸದಾಶಿವ ದೇವರನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ಆಯ್ಕೆಮಾಡಿಕೊಂಡರು. 1955ರಲ್ಲಿಶ್ರೀ ಮಠದ ಅಧಿಕಾರ ವಹಿಸಿಕೊಂಡ ಶ್ರೀ ಸದಾಶಿವ ಸ್ವಾಮಿಗಳು ಬಸವಾದಿ ಶರಣರತತ್ತ್ವಗಳ ಪ್ರಚಾರಕರಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ಶ್ರೀಗಳು 1995ರಲ್ಲಿಈಗಿನ ಹಿರಿಯ ಶ್ರೀಗಳಾದ ಶ್ರೀ ಮ.ನಿ.ಪ್ರ. ಮಹಾಂತೇಶ ಸ್ವಾಮಿಗಳನ್ನು ಅಧಿಕಾರಕ್ಕೆ ತಂದು2007ರಲ್ಲಿ ಲಿಂಗೈಕ್ಯರಾದರು.ಶ್ರೀ ಮಹಾಂತೇಶ ಸ್ವಾಮಿಗಳು ಶ್ರೀ ಮಠವನ್ನು ಪರಂಪರೆಗೆ ಅನುಗುಣವಾಗಿಸಮರ್ಥವಾಗಿ ಮುನ್ನಡೆಸಿಕೊಂಡು ಬಂದಿದ್ದು ತಮ್ಮ ಸಾಮಾಜಿಕ ಕಳಕಳಿಯ ಮೂಲಕಭಕ್ತರಲ್ಲಿನ ಮೌಡ್ಯ, ಕಂದಾಚಾರಗಳನ್ನು ನಿವಾರಿಸಲು ಶ್ರಮಿಸುತ್ತಿದ್ದಾರೆ. ಪ್ರಖರ ಧಾರ್ಮಿಕಚಿಂತಕರಾದ ಶ್ರೀಗಳು ಶ್ರೀ ಮ.ನಿ.ಪ್ರ. ಅರುಣಾಚಲ ಸ್ವಾಮಿಗಳನ್ನು ತಮ್ಮಉತ್ತರಾಧಿಕಾರಿಗಳನ್ನಾಗಿ ಆಯ್ಕೆ ಮಾಡಿಕೊಂಡು 2007ರ ಸೆಪ್ಟಂಬರ್ 27ರಲ್ಲಿಪಟ್ಟಾಧಿಕಾರದ ಅನುಗ್ರಹ ನೀಡಿದ್ದಾರೆ. ಪ್ರಸ್ತುತ ಉಭಯ ಶ್ರೀಗಳು ಶ್ರೀ ಮಠವನ್ನು ಅಭಿವೃದ್ಧಿಪಥದತ್ತ ಮುನ್ನಡೆಸುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಮಹಾಂತೇಶ ಸ್ವಾಮಿಗಳು
Date of Birth :
26-11-1959
Place :
ಮಡೇನಹಳ್ಳಿ, ಮದ್ದೂರು ತಾ||
Pattadikara :
1995
Photo :
Swamiji Name :
ಶ್ರೀ ಮ.ನಿ.ಪ್ರ. ಅರುಣಾಚಲ ಸ್ವಾಮಿಗಳು
Date of Birth :
07-04-1993
Place :
ಮಡೇನಹಳ್ಳಿ, ಮದ್ದೂರು ತಾ||
Pattadikara :
27-09-2007
Photo :
Programs
ಬಸವ ಜಯಂತಿ ಆಚರಣೆ ಭಾದ್ರಪದ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಮತ್ತು ಶ್ರೀ ಸಿದ್ದೇಶ್ವರ ದೇವಸ್ಥಾನದ ಕುಂಭಾಭಿಷೇಕ ಶಿವರಾತ್ರಿಯಲ್ಲಿ ಉಪನ್ಯಾಸ / ಪ್ರವಚನ
Photos
Full Address Kannada
ಶ್ರೀ ತೋಂಟದಾರ್ಯ ಮಠ
ಮಡೇನಹಳ್ಳಿ - 571 422
ಮದ್ದೂರು ತಾ||, ಮಂಡ್ಯ ಜಿಲ್ಲೆ