Shree Tenkalagudu Brahanmatha

Shree Tenkalagudu Brahanmatha Claimed

ಶ್ರೀ ತೆಂಕಲಗೂಡು ಬೃಹನ್ಮಠ

Average Reviews

Description

ಶ್ರೀ ತೆಂಕಲಗೂಡು ಬೃಹನ್ಮಠ – ಯಸಳೂರು

ಕರ್ತೃ – ಶ್ರೀ ಷ.ಬ್ರ. ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು

ಸಕಲೇಶಪುರ ತಾಲ್ಲೂಕಿನ ಯಸಳೂರು ಗ್ರಾಮದಲ್ಲಿ ಶ್ರೀಮದ್ ಉಜ್ಜಯಿನಿಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿರುವ ಶ್ರೀತೆಂಕಲಗೂಡು ಬೃಹನ್ಮಠವು ಅಸ್ತಿತ್ವದಲ್ಲಿದ್ದು ತನ್ನ ಶ್ರೀಮಂತ ಗುರುಪರಂಪರೆ ಹಾಗೂಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದ ಪ್ರಮುಖ ಮಠವಾಗಿ ಗುರುತಿಸಿಕೊಂಡಿದೆ.ಯಸಳೂರಿನ ತೆಂಕಣ (ಉತ್ತರ) ಭಾಗದಲ್ಲಿ ಶ್ರೀಮಠವು ಸ್ಥಾಪಿತಗೊಂಡಿರುವುದರಿಂದಶ್ರೀಮಠಕ್ಕೆ ಶ್ರೀ ತೆಂಕಲಗೂಡು ಬೃಹನ್ಮಠವೆಂಬ ಹೆಸರು ಬಂದಿದೆ.19ನೇ ಶತಮಾನದ ಅಂತ್ಯಭಾಗದಲ್ಲಿ ಸ್ಥಾಪಿತಗೊಂಡಿರುವ ಶ್ರೀಮಠದಕರ್ತೃಗುರುಗಳು ಶ್ರೀ.ಷ.ಬ್ರ. ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು. ಶ್ರೀ ಚನ್ನಬಸವಶಿವಾಚಾರ್ಯರು ಯಸಳೂರಿನಲ್ಲಿ ಮಠ ಸ್ಥಾಪಿಸಿದ್ದರೂ ಸದಾ ಸಂಚಾರದಲ್ಲಿದ್ದು ವೀರಶೈವಧರ್ಮದ ಬೆಳವಣಿಗೆಗೆ ಸಹಾಯಕರಾಗಿದ್ದರು. ಹಾಸನ, ಕೊಡಗು, ಚಿಕ್ಕಮಗಳೂರು ಹಾಗೂಸುತ್ತಮುತ್ತಲಿನ ಜಿಲ್ಲೆಗಳಿಗೆ ತೆರಳಿ ಧರ್ಮೋಪದೇಶ ನೀಡಿ ಅಪಾರ ಭಕ್ತಬಳಗವನ್ನುಸಂಪಾದಿಸಿದ್ದ ಶ್ರೀಗಳು ಧರ್ಮವನ್ನು ಸಮಾಜದಲ್ಲಿ ನೆಲೆಗೊಳಿಸಲು ಬಹುವಾಗಿ ಶ್ರಮಿಸಿಮಠವನ್ನು ಅಭಿವೃದ್ಧಿಗೊಳಿಸಿದ್ದರು.ಕರ್ತೃಗುರುಗಳು ಪೂರ್ವದಲ್ಲಿ ಹಾಸನ ತಾಲ್ಲೂಕು ದೊಡ್ಡಗದ್ದವಳ್ಳಿ ಗ್ರಾಮದಮಠಸ್ಥರು. ಕ್ರಮೇಣ ಯಸಳೂರಿಗೆ ಆಗಮಿಸಿದ ಕರ್ತೃಗಳು ಇಲ್ಲಿಯೇ ನೆಲೆನಿಂತುಭವಿಷ್ಯದಲ್ಲಿ ಮಠವು ಪ್ರಜ್ವಲವಾಗಿ ಬೆಳಗಬೇಕೆಂಬ ದೂರಾಲೋಚನೆಯಿಂದ ಮಠವನ್ನುಸದೃಡವಾಗಿ ಬೆಳೆಸಿದರು. ಕರ್ತೃಗುರುಗಳ ನಂತರ ಶ್ರೀಮಠದ ಪಟ್ಟಕ್ಕೆ ಬಂದವರು ಹಿಂದಿನಶ್ರೀಗಳಾದ ಶ್ರೀ ಷ.ಬ್ರ. ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು.ಕರ್ತೃ ಗುರುಗಳು ಸದೃಡವಾಗಿ ಕಟ್ಟಿದ್ದ ಶ್ರೀ ಬೃಹನ್ಮಠವನ್ನು ಅಷ್ಟೇ ಸಮರ್ಥವಾಗಿಮುನ್ನಡೆಸಿಕೊಂಡು ಬಂದವರು ಶ್ರೀ ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು.ಗುರುಗಳು ಸಂಸ್ಕøತ, ವೇದ, ಆಗಮಗಳನ್ನು ಬಲ್ಲವರಾಗಿ ವೀರಶೈವ ವಿಶಿಷ್ಪಾದ್ವೈತವನ್ನುಅಧ್ಯಯನ ಮಾಡಿದ್ದರು. ಶ್ರೀಗಳು ಶಿವಪೂಜಾನಿಷ್ಠರಾಗಿ ಸಮಾಜದಲ್ಲಿ ಧಾರ್ಮಿಕವಾತಾವರಣವನ್ನು ಮೂಡಿಸುವಲ್ಲಿ ಬಹುವಾಗಿ ಶ್ರಮಿಸಿದರು. ಲೌಕಿಕ ಜಗತ್ತಿಗಿಂತ ಅಲೌಕಿಕತೆಕಡೆಗೆ ಹೆಚ್ಚಿನ ಆಸಕ್ತಿಯಿಂದಿದ್ದ ಶ್ರೀಗಳು ಶ್ರೀಮಠದಲ್ಲಿ ಕೆಲವು ಅಭಿವೃದ್ಧಿ ಕಾರ್ಯಗಳನ್ನುನಡೆಸಿದರು. ಹೀಗೆ ಸದಾ ಭಕ್ತರ ಒಳಿತಿಗಾಗಿ ಶ್ರಮಿಸಿದ ಶ್ರೀ ನೀಲಕಂಠ ಶಿವಾಚಾರ್ಯರು1980ರಲ್ಲಿ ಲಿಂಗೈಕ್ಯರಾದರು.ತೆಂಕಲಗೂಡು ಬೃಹನ್ಮಠದ ಮೂರನೇ ಪೀಠಾಧ್ಯಕ್ಷರಾಗಿ ಆಗಮಿಸಿದ ಈಗಿನಶ್ರೀಗಳಾದ ಶ್ರೀ ಷ.ಬ್ರ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಹಿಂದಿನಶ್ರೀಗಳಿರುವಾಗಲೇ 1979ರ ಏಪ್ರಿಲ್ 29ರಂದು ಶ್ರೀಮದ್ ರಂಭಾಪುರಿ ಪೀಠದ ಆಗಿನಜಗದ್ಗುರು ಶ್ರೀ ವೀರರುದ್ರಮುನಿ ಶಿವಾಚಾರ್ಯರಿಂದ ಪಟ್ಟಾಧಿಕಾರದ ಅನುಗ್ರಹವನ್ನುಪಡೆದರು. ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ಗುರುಗಳು ನಂತರ ಇತಿಹಾಸ ಮತ್ತುತತ್ವಶಾಸ್ತ್ರಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ಜೊತೆಗೆ ರಾಷ್ಟ್ರಭಾಷೆ ಹಿಂದಿಯಲ್ಲೂಪದವಿ ಪಡೆದಿದ್ದಾರೆ. ಈ ರೀತಿಯಾಗಿ ವಿದ್ಯಾಸಂಪನ್ನರಾಗಿರುವ ಶ್ರೀಗಳು ನಾಡಿನಾದ್ಯಂತಸಂಚರಿಸಿ ಧಾರ್ಮಿಕ ವಿಚಾರಗಳ ಬಗ್ಗೆ ಉಪನ್ಯಾಸ ನೀಡಿ ಧರ್ಮಜಾಗೃತಿಗೊಳಿಸುತ್ತಿದ್ದಾರೆ.ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಶ್ರೀಮಠದ ಧಾರ್ಮಿಕಆಚರಣೆಗಳನ್ನು ಚುರುಕುಗೊಳಿಸಿದ್ದು ಶ್ರಾವಣ ಮಾಸದಲ್ಲಿ ನಿತ್ಯ ಶಿವಪೂಜೆ, ಅನುಷ್ಠಾನಹಾಗೂ ಪ್ರವಚನ ನಡೆಸುತ್ತಾ ಬಂದಿದ್ದಾರೆ ಮತ್ತು ಈ ಸಮಯದಲ್ಲಿ ಶಿವದೀಕ್ಷೆ ಕಾರ್ಯಕ್ರಮ,ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಮಠದಲ್ಲಿಕರ್ತೃಗುರುಗಳು ಹಾಗೂ ಹಿಂದಿನ ಗುರುಗಳ ಗದ್ದುಗೆಗಳಿದ್ದು ನಿತ್ಯ ಪೂಜೆಗೆ ಒಳಪಟ್ಟಿವೆ.ಪ್ರಸ್ತುತ ಶ್ರೀಗಳು ಶ್ರೀಮಠವನ್ನು ಜೀರ್ಣೋದ್ಧಾರಗೊಳಿಸಿದ್ದು ಭಕ್ತರಸಹಕಾರದೊಂದಿಗೆ ಹೊಸ ಕಟ್ಟಡಗಳನ್ನು ನಿರ್ಮಿಸಿದ್ದಾರೆ ಹಾಗೂ ಈ ಭಾಗದ ಬಡಮಕ್ಕಳವಿದ್ಯಾಭ್ಯಾಸಕ್ಕಾಗಿ ಮಠದ ವತಿಯಿಂದ ಎಂಟು ಎಕರೆ ಜಮೀನು ಹಾಗೂ ಐವತ್ತು ಸಾವಿರರೂಪಾಯಿ ದೇಣಿಗೆಯನ್ನು ನೀಡಿ ಯಸಳೂರಿನಲ್ಲಿ ಪ್ರೌಢಶಾಲೆಯನ್ನು ಪ್ರಾರಂಭಿಸಲುಕಾರಣಕರ್ತರಾಗಿದ್ದು ಈ ಪ್ರೌಢಶಾಲೆಯನ್ನು ಮೇಲ್ದರ್ಜೆಗೇರಿಸಿ ಪದವಿಪೂರ್ವ ಕಾಲೇಜನ್ನುಸ್ಥಾಪಿಸಲು ನೆರವಾಗಿದ್ದಾರೆ. ಮಠದ ಜಮೀನನ್ನು ಅಭಿವೃದ್ಧಿಗೊಳಿಸಿರುವ ಶ್ರೀಗಳು ಇದರಲ್ಲಿಕಾಫಿ ತೋಟ, ಗದ್ದೆಯನ್ನೊಳಗೊಂಡಂತೆ ಕೃಷಿ ಕಾರ್ಯಕೈಗೊಂಡು ಮಠದಆದಾಯವನ್ನು ಹೆಚ್ಚಿಸಿದ್ದಾರೆ.ಶ್ರೀಮಠವು ಶ್ರೀಮದ್ ಉಜ್ಜಯಿನಿ ಸದ್ದರ್ಮ ಸಿಂಹಾಸನಾ ಪೀಠದಶಾಖಾಮಠವಾಗಿ ಧಾರ್ಮಿಕ ಆಚರಣೆಗಳು ಹಾಗೂ ಪರಂಪರೆಯನ್ನುಮುಂದುವರೆಸಿಕೊಂಡು ಬಂದಿದ್ದು ಇನ್ನುಳಿದಂತೆ ಸ್ವತಂತ್ರ ಅಸ್ತಿತ್ತ್ವ ಹಾಗೂ ವ್ಯವಹಾರವನ್ನುಹೊಂದಿದೆ.

Swamiji

Swamiji Name :
ಶ್ರೀ ಷ.ಬ್ರ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
02-10-1952
Place :
ಬಂಕಾಪುರ, ಶಿಗ್ಗಾಂವ ತಾ||
Pattadikara :
29-4-1979
Photo :

Programs

ಪ್ರತಿ ಹುಣ್ಣಿಮೆಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ಸಭೆ
ಶ್ರಾವಣ ಮಾಸದಲ್ಲಿ ಶಿವಪೂಜೆ, ಅನುಷ್ಠಾನ, ಪ್ರವಚನ
ಉಚಿತ ಸಾಮೂಹಿಕ ವಿವಾಹಗಳು ಹಾಗೂ ಶಿವದೀಕ್ಷೆ ಕಾರ್ಯ

Photos

Full Address Kannada

ಶ್ರೀ ತೆಂಕಲಗೂಡು ಬೃಹನ್ಮಠ
ಯಸಳೂರು - 573137
ಸಕಲೇಶಪುರ ತಾ||, ಹಾಸನ ಜಿಲ್ಲೆ

Map

Near by Places

ಕೆರೋಡಿ - 4 ಕಿ.ಮೀ.
ಕೊಡ್ಲಿಪೇಟೆ - 5 ಕಿ.ಮೀ.
ಬಾಳುಪೇಟೆ - 25 ಕಿ.ಮೀ.
ಸಕಲೇಶಪುರ - 35 ಕಿ.ಮೀ.

Statistic

17 Views
0 Rating
0 Favorite
0 Share
error: Content is protected !!