Shree Teggina Matha

Shree Teggina Matha Claimed

ಶ್ರೀ ತೆಗ್ಗಿನ ಮಠ

Average Reviews

Description

ಶ್ರೀ ತೆಗ್ಗಿನ ಮಠ

ಶ್ರೀ ಷ.ಬ್ರ. ಚನ್ನವೀರ ಶಿವಾಚಾರ್ಯ ಸ್ವಾಮಿಗಳು

ಜಗದ್ಗುರು ಶ್ರೀ ರಂಭಾಪುರಿ ಪೀಠದ ಶಾಖಾ ಮಠವಾದ ಶ್ರೀ ತೆಗ್ಗಿನಮಠವನ್ನುಶ್ರೀ ಷ.ಬ್ರ. ಚನ್ನವೀರ ಸ್ವಾಮಿಗಳು ಸುಮಾರು 17ನೇ ಶತಮಾನದ ಮಧ್ಯಭಾಗದಲ್ಲಿಹರಪನಹಳ್ಳಿ ಪಟ್ಟಣದಲ್ಲಿ ಸ್ಥಾಪಿಸಿದರು. ಮೊದಲು ಕೋಟೆಯ ಒಳಗಡೆ ಇದ್ದ ಹಿರೇಮಠವುಕೋಟೆಯ ಅವಸಾನದ ನಂತರ ಊರ ಸಮೀಪದ ತಗ್ಗಿನ ಜಾಗಕ್ಕೆ ಸ್ಥಳಾಂತರಗೊಂಡಿದ್ದರಿಂದ ಈ ಮಠಕ್ಕೆ ತೆಗ್ಗಿನಮಠ ಎಂದು ಹೆಸರು ಬಂದಿದೆ. ಮಠದ ಪರಂಪರೆಯಲ್ಲಿ ಐದುಜನ ಸ್ವಾಮಿಗಳನ್ನು ಮಾತ್ರ ಗುರುತಿಸಬಹುದಾಗಿದೆ.4ನೇ ಶ್ರೀಗಳಾದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಕಾಯಕಯೋಗಿಗಳು ಮತ್ತು ಧರ್ಮನಿಷ್ಠರಾಗಿದ್ದರು. ಶ್ರೀಗಳು ಮಠದಲ್ಲಿ ವೇದ, ಜ್ಯೋತಿಷ್ಯ ಮತ್ತುಸಂಗೀತವನ್ನು ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಆಶ್ರಯದಾತರಾಗಿದ್ದರು. ಶ್ರೀಗಳುವಿದ್ಯಾರ್ಥಿಗಳ ಜೊತೆಗೆ ಭಕ್ತರಿಗೂ ನಿತ್ಯ ಪ್ರಸಾದದ ವ್ಯವಸ್ಥೆಯನ್ನು ಮಾಡುತ್ತಿದ್ದರಿಂದ ಮಠಕ್ಕೆದಾಸೋಹ ಮಠ ಎಂದು ಕರೆಯುತ್ತಿದ್ದರು.ಇವರ ನಂತರ ಪಟ್ಟಕ್ಕೆ ಬಂದ 5ನೇ ಶ್ರೀಗಳಾದ ಶ್ರೀ ಚಂದ್ರಮೌಳೇಶ್ವರ ಸ್ವಾಮಿಗಳುಮಹಾನ್ ಪಂಡಿತರಾಗಿದ್ದು, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಶ್ರೀಗಳು ಸ್ವತಃಸ್ನಾತಕೋತ್ತರ ಪದವಿ ಪಡೆದವರಾಗಿದ್ದು, ಶ್ರೀಶೈಲ ಜಗದ್ಗುರುಗಳು ಸ್ಥಾಪನೆ ಮಾಡಿದಹರಿಹರದ ನೂತನ ಮಹಾವಿದ್ಯಾಲಯಕ್ಕೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ಶ್ರೀಗಳು1969ರಲ್ಲಿ ಹರಪನಹಳ್ಳಿಯಲ್ಲಿ ಶ್ರೀ ತೆಗ್ಗಿನಮಠ ಆಟ್ರ್ಸ್ ಅಂಡ್ ಎಜುಕೇಷನ್ ಸೊಸೈಟಿಯನ್ನು ಸ್ಥಾಪನೆ ಮಾಡಿ ಸಂಸ್ಥೆಯ ಮೂಲಕ ಶಿಕ್ಷಕರ ತರಬೇತಿ ಶಾಲೆ, ಸಂಸ್ಕøತ ಪಾಠಶಾಲೆ,ಬಿ.ಎಡ್ ತರಬೇತಿ ಸಂಸ್ಥೆ, ಆರ್ಯುವೇದ ಕಾಲೇಜುಗಳು, ಉಚಿತ ವಿದ್ಯಾರ್ಥಿ ನಿಲಯಗಳುಸೇರಿದಂತೆ ಸುಮಾರು 40 ಸಂಸ್ಥೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.ಶ್ರೀಮಠವು ಜ್ಯೋತಿಷ್ಯ, ವೈದಿಕ ಹಾಗೂ ಆಗಮಗಳನ್ನು ಕಲಿಯುವ ಪಂಡಿತರಿಗೆಆಶ್ರಯ ಕೊಟ್ಟಿದೆ. 1998 ರ ಫೆಬ್ರವರಿ 1 ರಂದು ಪಟ್ಟಾಧಿಕಾರದ ಬೆಳ್ಳಿಹಬ್ಬ ಕಂಡ ಗುರುಗಳುಇದೇ ಸಂದರ್ಭದಲ್ಲಿ ಷಷ್ಠ್ಯಬ್ಧಿ ಕಾರ್ಯಕ್ರಮವನ್ನು ಆಚರಿಸಿಕೊಂಡು ಈ ಇಳಿವಯಸ್ಸಿನಲ್ಲಿಯೂ ಕುಗ್ಗದ ಉತ್ಸಾಹದೊಂದಿಗೆ ಮಠವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
3-9-1937
Place :
ನಾಗತಿ ಬಸಾಪುರ ಹೂವಿನಹಡಗಲಿ ತಾ||
Pattadikara :
6-2-1973
Photo :

Programs

ಪುಷ್ಯ ಮಾಸದಲ್ಲಿ ಮಕರ ಸಂಕ್ರಾಂತಿಯ ಆಚರಣೆ.
ಮಾಘ ಮಾಸದಲ್ಲಿ ಮಹಾಶಿವರಾತ್ರಿ ಜಾಗರಣೆ ನಿಮಿತ್ತ ಮಹಾತ್ಮರ ನಾಟಕ ಪ್ರದರ್ಶನ.
ಆಶ್ವೀಜ ಶುದ್ಧದಶಮಿಗೆ ಶ್ರೀಗಳು ರಜತ ಪೀಠವನ್ನು ಅಲಂಕರಿಸುವುದರ ಮೂಲಕ ವಿಜಯದಶಮಿಯಂದು ದರ್ಶನ ಮತ್ತು ಶಮೀ ಆಶೀರ್ವಾದ ದಯಪಾಲಿಸುವುದು.
ಕಾರ್ತೀಕ ಮಾಸದಲ್ಲಿ ಘೃತದೀಪ ಸ್ಥಾಪನೆ ಹಾಗೂ ವಿಜೃಂಭಣೆಯ ಕಾರ್ತೀಕೋತ್ಸವ.
ವೈಶಾಖ ಮಾಸದಲ್ಲಿ ಬಹುಳ ಸಪ್ತಮಿಗೆ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರ ಪುಣ್ಯಾರಾಧನೆ ಮತ್ತು ಸಾಮೂಹಿಕ ವಿವಾಹ ಹಾಗೂ ವಿವಿಧ ಧಾರ್ಮಿಕ/ಸಾಂಸ್ಕøತಿಕ ಕಾರ್ಯಕ್ರಮಗಳು. ಅಧಿಕ ಬಾದ್ರಪದ ತೃತೀಯ ಶ್ರೀ ಷ.ಬ್ರ. ಚಂದ್ರಮೌಳೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮದಿನೊತ್ಸವ ಯುಗಾದಿ ಅಮಾವಾಸ್ಯೆ ಲಿಂ|| ಶ್ರೀ ಚಂದ್ರಶೇಖರ ಶಿವಾಚಾರ್ಯಸ್ವಾಮಿಗಳ ಕರ್ತೃಗದ್ದುಗೆಗೆ ರುದ್ರಾಭಿಷೇಕ.

Institutions

ಶ್ರೀ ತೆಗ್ಗಿನಮಠ ಆಟ್ರ್ಸ್ ಅಂಡ್ ಎಜುಕೇಷನ್ ಸೊಸೈಟಿ,
ಶ್ರೀ ತೆಗ್ಗಿನಮಠ ವೈದಿಕ, ಜೋತಿಷ್ಯ, ಸಂಸ್ಕøತ ಪಾಠಶಾಲೆ, ಬಿ.ಪಿ.ಎಡ್, ಬಿ.ಎಡ್., ಫಾರ್ಮಸಿ, ಆಯುರ್ವೇದ ಕಾಲೇಜುಗಳು.

Photos

Full Address Kannada

ಶ್ರೀ ತೆಗ್ಗಿನ ಮಠ
ಹರಪನಹಳ್ಳಿ - 583 131,
ದಾವಣಗೆರೆ ಜಿ.

Map

Near by Places

ಹರಿಹರ - 40 ಕಿ.ಮೀ.
ಕೊಟ್ಟೂರು - 30 ಕಿ.ಮೀ.
ಹಡಗಲಿ - 30 ಕಿ.ಮೀ.
ದಾವಣಗೆರೆ - 50 ಕಿ.ಮೀ.

Statistic

260 Views
0 Rating
0 Favorite
0 Share
error: Content is protected !!