ಸುಮಾರು 800 ವರ್ಷಗಳ ಹಿಂದೆ ಪರಮಪೂಜ್ಯ ಶ್ರೀ ಪತ್ರಿಸ್ವಾಮಿಗಳೆಂಬುವರುಸಂಚಾರದಲ್ಲಿದ್ದಾಗ ಜೊನ್ನಿಕೇರಿ ಪ್ರದೇಶಕ್ಕೆ ಆಗಮಿಸಿ ಇಲ್ಲಿ ಸುಧೀರ್ಘ ಕಾಲ ಅನುಷ್ಠಾನಕೈಗೊಂಡು ಈ ಪ್ರದೇಶವನ್ನು ಸುಕ್ಷೇತ್ರವನ್ನಾಗಿ ಪರಿವರ್ತಿಸಿದ್ದರು. ಆಗ ಈ ಪ್ರದೇಶದಲ್ಲಿಬರೀ ಕಾಡಿತ್ತೆಂದು ಆ ಕಾಡಿನ ನಡುವೆ ಪತ್ರಿವನವಿದ್ದು ಅಲ್ಲಿಯೇ ನೆಲೆಸಿದ್ದ ಶ್ರೀಗಳು 60ವರ್ಷಗಳ ಕಾಲ ಕೇವಲ ಪತ್ರಿಯನ್ನು ಸೇವಿಸಿ ಕಠೋರ ಅನುಷ್ಠಾನ ಕೈಗೊಂಡಿದ್ದರೆಂದುಹೇಳಲಾಗುತ್ತದೆ. ಹಾಗೂ ಸುಧೀರ್ಘ ತಪಸ್ಸಿನ ನಂತರ ಶ್ರೀಗಳು ಜೀವಂತ ಸಮಾಧಿಹೋದರೆಂದು ಹೇಳಲಾಗುತ್ತದೆ.ಹೀಗೆ 800 ವರ್ಷಗಳ ಹಿಂದೆ ಮಹಾಮಹಿಮ ತಪಸ್ವಿಗಳ ತಪೋವನವಾಗಿದ್ದ ಈಪ್ರದೇಶದಲ್ಲಿ 2012ರಲ್ಲಿ ಸ್ಥಾಪಿತಗೊಂಡ ಮಠವೇ ಶ್ರೀ ತಪೋವನ ಪತ್ರಿಸ್ವಾಮಿ ಸಂಸ್ಥಾನಮಠ. ಶ್ರೀಮಠದ ಸ್ಥಾಪನೆಯಲ್ಲಿ ಗುಂಡಪ್ಪ ವಕೀಲರೆಂಬ ಮಾಜಿ ಶಾಸಕರು ಪ್ರಮುಖ ಪಾತ್ರವಹಿಸಿದ್ದು ಶ್ರೀಮಠದ ಪ್ರಥಮ ಪೀಠಾಧಿಪತಿಗಳಾಗಿ ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳು2015ರ ಮಾರ್ಚ್ 31ರಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ.ಶ್ರೀ ಶಿವಕುಮಾರ ಸ್ವಾಮಿಗಳು ಹುಬ್ಬಳ್ಳಿಯ ಮೂರು ಸಾವಿರ ಮಠ ಹಾಗೂಶಿವಯೋಗ ಮಂದಿರಗಳಲ್ಲಿ ಆಧ್ಯಾತ್ಮಿಕ ಶಿಕ್ಷಣ ಪಡೆದು ಚಿತ್ರದುರ್ಗದ ಶ್ರೀ ಶಿವಮೂರ್ತಿಶರಣರ ಕೃಪಾಶೀರ್ವಾದದಲ್ಲಿ ಬೆಳೆದವರು. ಗುಂಡಪ್ಪ ವಕೀಲರ ಜೊತೆಗೆ ಶ್ರೀಮಠದಸ್ಥಾಪನೆಗೆ ಶ್ರಮಿಸಿದ ಶ್ರೀಗಳು ಶ್ರೀಮಠದ ಅಧಿಕಾರ ವಹಿಸಿಕೊಂಡು ಸಮರ್ಥವಾಗಿಮುನ್ನಡೆಸಿಕೊಂಡು ಬರುತ್ತಿದ್ದಾರೆ.ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಯುಗಾದಿ ಆದ 7 ನೇದಿನಕ್ಕೆ ಶ್ರೀ ಪತ್ರಿಸ್ವಾಮಿಗಳ ಜಾತ್ರೆ 5 ದಿನಗಳ ಕಾಲ ನಡೆಯುತ್ತದೆ. ಈ ಸಮಯದಲ್ಲಿ ವಿವಿಧಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿರುತ್ತವೆ. ಹಾಗೂಶ್ರೀಮಠದ ವತಿಯಿಂದ ಕಲ್ಯಾಣ ಮಂಟಪವನ್ನು ನಿರ್ಮಿಸಿದ್ದು ಈ ಭಾಗದ ಬಡವರಿಗೆಅನುಕೂಲವಾಗಿದೆ.
Swamiji
Swamiji Name :
ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳು
Date of Birth :
7-3-1989
Place :
ಚಟ್ನಳ್ಳಿ, ಶಹಾಪುರ ತಾ||
Pattadikara :
31-3-2015
Photo :
Programs
ಪ್ರತಿ ಅಮವಾಸ್ಯೆ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ,
ಯುಗಾದಿ ಆದ 7ನೇ ದಿನಕ್ಕೆ ಪತ್ರಿಸ್ವಾಮಿ ಜಾತ್ರೆ
(5 ದಿನಗಳವರೆಗೆ) ಹಾಗೂ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.
Photos
Full Address Kannada
ಶ್ರೀ ತಪೋವನ ಪತ್ರಿಸ್ವಾಮಿ ಸಂಸ್ಥಾನ ಮಠ
ಜೊನ್ನಿಕೇರಿ, ಕೊಳ್ಳೂರು ಪೋಸ್ಟ್.
ಔರಾದ್ ತಾ||, ಬೀದರ್ ಜಿ||