Shree Swatantra Siddalingeshwara Sukshetra Dakshina Kashi Sri Gavi Matha
Claimed
ಶ್ರೀ ಸ್ವಂತಂತ್ರ ಸಿದ್ದಲಿಂಗೇಶ್ವರ ಸುಕ್ಷೇತ್ರ ದಕ್ಷಿಣ ಕಾಶಿ ಶ್ರೀ ಗವಿಮಠ
Average Reviews
Description
ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರ ಸುಕ್ಷೇತ್ರ, ದಕ್ಷಿಣ ಕಾಶಿ ಶ್ರೀ ಗವಿಮಠ
ಕರ್ತೃ – ಪರಮ ಪೂಜ್ಯ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರರು
ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿ 15ನೇ ಶತಮಾನ ಪ್ರಮುಖ ಕಾಲಘಟ್ಟ.ಶ್ರೀ ತೋಂಟದ ಸಿದ್ದಲಿಂಗೇಶ್ವರರು ನೂರೊಂದು ವಿರಕ್ತರೊಡನೆ ಸಂಚಾರ ಹೊರಟುಧರ್ಮ ಪ್ರಸಾರ ಕಾರ್ಯ ಕೈಗೊಂಡ ಕಾಲಘಟ್ಟ. ಇಂತಹ ಕಾಲಘಟ್ಟದಲ್ಲಿ ತೋಂಟದಸಿದ್ದಲಿಂಗೇಶ್ವರರ ಸಹವರ್ತಿಗಳಾಗಿ ಅವರೊಡನೆ ದೇಶದಾದ್ಯಂತ ಸಂಚರಿಸಿದವರೇ ಶ್ರೀಸ್ವತಂತ್ರ ಸಿದ್ದಲಿಂಗೇಶ್ವರರು. ಈರ್ವರೂ ಉತ್ತರದ ಹಿಮಾಲಯದವರೆಗೆ ಸಂಚಾರಕೈಗೊಂಡು ಸಿದ್ದಿಪುರುಷರಾಗಿ ಕರ್ನಾಟಕ ನಾಡಿಗೆ ಹಿಂತಿರುಗಿ ಭಕ್ತರಿಗೆ ಧರ್ಮಭೋದನಾಕಾರ್ಯ ಮಾಡಿದವರು. ನಂತರ ಶ್ರೀ ತೋಂಟದ ಸಿದ್ದಲಿಂಗೇಶ್ವರರು ತುಮಕೂರು ಮಾರ್ಗವಾಗಿ ಯಡೆಯೂರಿಗೆ ತೆರಳಿದೆರೆ, ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರರು ತಿಪಟೂರು, ಹಾಸನ,ಕೊಡಗು ಮಾರ್ಗವಾಗಿ ಕಾಪನಹಳ್ಳಿಯ ರಾಜರಾಜಗಿರಿ ಬೆಟ್ಟದ ಗವಿಯಲ್ಲಿ ನೆˉÉನಿಂತರು.ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರರು ಸಂಚಾರದಲ್ಲಿ ಪರಿಪೂರ್ಣ ಸಿದ್ದಿಪಡೆದುಕೊಂಡವರು. ಕಾಪನಹಳ್ಳಿಗೆ ಬರುವ ಮುಂಚೆ ಕಾವೇರಿ-ಹೇಮಾವತಿ-ಲಕ್ಷ್ಮಣತೀರ್ಥಸಂಗಮದಲ್ಲಿ ಅನುಷ್ಠಾನಗೊಂಡು ಆ ಭಾಗದ ಜನರನ್ನು ಸನ್ಮಾರ್ಗದತ್ತ ಕೊಂಡೊಯ್ದವರು.ಅಲ್ಲಿಂದ ಸಂಚರಿಸುತ್ತಾ ಕಾಪನಹಳ್ಳಿ ಬೆಟ್ಟದ ಗವಿಯಲ್ಲಿ ಅನುಷ್ಠಾನಗೊಂಡರು.ಧೀರ್ಘಾನುಷ್ಠಾನದಿಂದ ಪ್ರಸಿದ್ದಿಗೊಂಡ ಶ್ರೀಗಳು ತಮ್ಮ ಉಪದೇಶಾಮೃತಗಳಿಂದ ಅಸಂಖ್ಯಭಕ್ತರ ಆರಾಧ್ಯ ದೈವವಾದರು. ಸಮಾಜದಲ್ಲಿನ ಮೌಡ್ಯತೆಗಳನ್ನು ಹೊಡೆದೋಡಿಸುವಲ್ಲಿಶ್ರಮಿಸಿದ್ದ ಶ್ರೀಗಳು 12ನೇ ಶತಮಾನದ ಶರಣರ ತತ್ತ್ವಗಳನ್ನು ನಾಡಿನಾದ್ಯಂತ ಪಸರಿಸಿದ್ದರು.ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರರು ಆಧ್ಯಾತ್ಮ ಸಿದ್ದಿಪುರುಷರಾಗಿ ಗುರುತಿಸಿಕೊಂಡಂತೆಕೃತಿಕಾರರಾಗಿ, ವಚನಕಾರರಾಗಿ, ಸಮಾಜೋದ್ದಾರಕರಾಗಿ ಗುರುತಿಸಿಕೊಂಡಿದ್ದರು.ಬಸವಾದಿ ಶರಣರ ವಚನಗಳಿಂದ ಪ್ರೇರೇಪಿತಗೊಂಡಿದ್ದ ಸಿದ್ದಲಿಂಗೇಶ್ವರರು ತಮ್ಮದೇದಾಟಿಯಲ್ಲಿ 770ಕ್ಕೂ ಅಧಿಕ ವಚನಗಳನ್ನು ರಚಿಸಿದ್ದಾರೆಂದು ತಿಳಿದುಬರುತ್ತದೆ. ಆದರೆಇಂದು ನಮಗೆ ಅವರ 435 ವಚನಗಳು ಮಾತ್ರ ಉಪಲಬ್ದವಿವೆ. ಹಾಗೆಯೇ “ಜಂಗಮರಗಳೆ” ಮತ್ತು “ಮುಕ್ತಾಯ ಕಂಠಮಾˉÉ” ಎಂಬ ಕೃತಿಗಳು ಉಪಲಬ್ದವಿವೆ. ಶ್ರೀಸಿದ್ದಲಿಂಗೇಶ್ವರರ ವಚನಗಳಲ್ಲಿ ಜೀವನ ಮೌಲ್ಯಗಳು. ಸಮಾಜದಲ್ಲಿನ ಮೌಡ್ಯತೆ, ಆಧ್ಯಾತ್ಮಮುಂತಾದ ಅಂಶಗಳು ಕಂಡುಬರುತ್ತವೆ. ತಮ್ಮ ಸಾಹಿತ್ಯದ ಮೂಲಕ ಸಮಾಜವನ್ನುತಿದ್ದುವಲ್ಲಿ ಶ್ರಮಿಸಿದ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರರು ಅಪಾರ ಶಿಷ್ಯ ಬಳಗವನ್ನು ಹೊಂದಿದ್ದುಇವರ ಕರ್ತೃ ಗದ್ದುಗೆಯು ಶ್ರೀಮಠದ ಆವರಣದಲ್ಲಿದ್ದು ಇಂದಿಗೂ ಲಕ್ಷಾಂತರ ಭಕ್ತರಶ್ರದ್ಧಾಭಕ್ತಿಯ ಕೇಂದ್ರವಾಗಿ ಅಸಂಖ್ಯಾ ಭಕ್ತರನ್ನು ಸಲಹುತ್ತಿದೆ.ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರರ ನಂತರದ ಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲ. ಶ್ರೀಗಳಕರ್ತೃ ಗದ್ದುಗೆಯನ್ನು ಭಕ್ತರೇ ಸ್ಥಾಪಿಸಿ ನಿತ್ಯಪೂಜೆಗೆ ಒಳಪಡಿಸಿದ್ದು ಶ್ರೀಮಠದನಿರ್ವಹಣೆಯನ್ನು ಏಜೆಂಟ್ ಮನೆತನದವರು ನೋಡಿಕೊಂಡು ಹೋಗುತ್ತಿದ್ದರೆಂದುತಿಳಿದುಬರುತ್ತದೆ. ಈ ಕುಟುಂಬದಲ್ಲಿ ಜನಿಸಿದ ಪ್ರಮುಖರು ಕನಕಪುರ, ಮರಳೇಗವಿ ಮಠದಶ್ರೀ ಕಾˉÁಗ್ನಿ ರುದ್ರಮುನಿ ಸ್ವಾಮಿಗಳು. ಏಜೆಂಟ್ ಕುಂಟುಂಬದವರ ಹಾಗೂ ಭಕ್ತರನಿರ್ವಹಣೆಯಲ್ಲಿದ್ದ ಶ್ರೀಮಠವು ಹೈದರಾಲಿಯವರ ಆಳ್ವಿಕೆಯಲ್ಲಿ ಅನೇಕ ನೆರವನ್ನು ಪಡೆದುಉಚ್ಛ್ರಾಯ ಸ್ಥಿತಿಯಲ್ಲಿದ್ದದ್ದು ಕಂಡುಬರುತ್ತದೆ. ಹೈದರಾಲಿಯು ಶ್ರೀಮಠಕ್ಕೆ ಹಿಂದೂಅರೇಬಿಕ್ ಶೈಲಿಯಲ್ಲಿ ಕಟ್ಟಡ ಕಟ್ಟಿಸಿಕೊಟ್ಟಿದ್ದು ಇತ್ತೀಚೆಗೆ ಪ್ರವಾಹಕ್ಕೆ ಸಿಲುಕಿದಾಗ 2006ರಲ್ಲಿಮತ್ತೆ ಜೀರ್ಣೋದ್ದಾರ ಕಂಡು ಹೊಸ ಕಟ್ಟಡದೊಂದಿಗೆ ಮುನ್ನಡೆಯುತ್ತಿದೆ.ಶ್ರೀಮಠದಲ್ಲಿ ಕರ್ತೃ ಗುರುಗಳ ನಂತರ ನಮಗೆ ಕಂಡುಬರುವ ಶ್ರೀಗಳೆಂದರೆಹಿಂದಿನ ಶ್ರೀಗಳಾದ ಶ್ರೀ ನಿ.ಪ್ರ. ಚಂದ್ರಶೇಖರ ಮಹಾಸ್ವಾಮಿಗಳು. 1979ರಲ್ಲಿ ಶ್ರೀ ಗವಿಮಠದಪಟ್ಟಾಧಿಕಾರ ಸ್ವೀಕರಿಸಿದ ಶ್ರೀಗಳು ಶ್ರೀಮಠದ ಧಾರ್ಮಿಕ ಆಚರಣೆಗಳನ್ನುಚುರುಕುಗೊಳಿಸಿದರು. ಭಕ್ತರ ಸಹಕಾರದೊಂದಿಗೆ ಶ್ರೀಮಠವನ್ನು ಸಮರ್ಥವಾಗಿಮುನ್ನಡೆಸಿದ ಶ್ರೀಗಳು 2006ರಲ್ಲಿ ಆಗಿನ ಕರ್ನಾಟಕ ಸರ್ಕಾರದಉಪಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರ ಸಹಕಾರದೊಂದಿಗೆ ಶ್ರೀಮಠಕ್ಕೆ ನೂತನಕಟ್ಟಡವನ್ನು ನಿರ್ಮಿಸಿ ಅಭಿವೃದ್ದಿಗೊಳಿಸಿದರು. ತಾವಿರುವಾಗˉÉೀ ಈಗಿನ ಶ್ರೀಗಳನ್ನುಉತ್ತರಾಧಿಕಾರಿಗಳಾಗಿ ನೇಮಸಿದ ಶ್ರೀಗಳು 2011ರ ಜನವರಿ 02ರಂದು ಲಿಂಗೈಕ್ಯರಾದರು.ಶ್ರೀ ನಿ.ಪ್ರ. ಚಂದ್ರಶೇಖರ ಮಹಾಸ್ವಾಮಿಗಳ ಐಕ್ಯಾ ನಂತರ 2011ರ ಜೂನ್24ರಲ್ಲಿ ಶ್ರೀ ಗವಿಮಠದ ಅಧಿಕಾರ ಸ್ವೀಕರಿಸಿದವರು ಶ್ರೀ ನಿ.ಪ್ರ.ಸ್ವ. ಸ್ವತಂತ್ರ ಬಸವಲಿಂಗಸ್ವಾಮಿಗಳು. ಶ್ರೀಗಳು ಕನಕಪುರ ಮರಳೇಗವಿ ಮಠದಲ್ಲಿ ಆಧ್ಯಾತ್ಮ ಶಿಕ್ಷಣ ಪಡೆದಿದ್ದುಶ್ರೀಗವಿಮಠದ ಪಟ್ಟಕ್ಕೆ ಬರುವ ಮುಂಚೆ 11ವರ್ಷಗಳ ಕಾಲ ಅರಕಲಗೂಡು ತಾ|| ಶಿರದನಹಳ್ಳಿಬಸವ ಕˉÁ್ಯಣ ಮಠವನ್ನು ಮುನ್ನಡೆಸಿದ್ದರು. ತದ ನಂತರ ಶ್ರೀಗವಿ ಮಠದ ಅಧಿಕಾರಸ್ವೀಕರಿಸಿದ್ದ ಶ್ರೀಗಳು ಇತ್ತೀಚೆಗೆ ಶ್ರೀ ಮಠದಿಂದ ಹೊರನಡೆದಿದ್ದಾರೆ. ಶ್ರೀಗವಿ ಮಠದವ್ಯಾಜ್ಯವೂ ಕೋರ್ಟ್ ಕಟಕಟೆಯಲ್ಲಿ ಇತ್ತೀಚೆಗೆ ತೀರ್ಮಾನವಾಗಿದ್ದು ಶ್ರೀ ಗವಿಮಠವುಹಾರನಹಳ್ಳಿಯ ಶ್ರೀ ಕೋಡಿಮಠದ ಸುಪರ್ದಿಗೆ ಒಳಪಟ್ಟಿದೆ. ಪ್ರಸ್ತುತ ಹಾರನಹಳ್ಳಿ ಮಠದ ಶ್ರೀಶ್ರೀ ಶಿವನಾಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಶ್ರೀ ಗವಿಮಠದ ಸಂಪೂರ್ಣಅಧಿಕಾರ ಹೊಂದಿದ್ದಾರೆ.
Swamiji
Swamiji Name :
ಶ್ರೀ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು
Photo :
Programs
ಪ್ರತಿ ಅಮವಾಸೆಗೆ ವಿಶೇಷ ಪೂಜೆ ¥ತಿÀ್ರ ಹುಣ್ಣಿಮೆಗೆ "ಬೆಳದಿಂಗಳ ಚಿಂತನ ಗೋಷ್ಠಿ" £ವ Àರಾತ್ರಿಗೆ "ಉಯ್ಯಾˉÉ ಉತ್ಸವ" ಮಾಘ ಮಾಸದಲ್ಲಿ ಶ್ರೀ ಮಠದ ಜಾತ್ರೆ ಮಕರಸಂಕ್ರಾಂತಿಗೆ "ಕವಿಗೋಷ್ಠಿ" ಮಾರ್ಗಶಿರ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾˉÉ ಗೋಶಾˉÉ
Photos
Full Address Kannada
ಶ್ರೀ ಸ್ವಂತಂತ್ರ ಸಿದ್ದಲಿಂಗೇಶ್ವರ ಸುಕ್ಷೇತ್ರ ದಕ್ಷಿಣ ಕಾಶಿ
ಶ್ರೀ ಗವಿಮಠ ಕಾಪನಹಳ್ಳಿ, ಬೂಕನಕೆರೆ ಪೋ. - 571 812
ಕೆ.ಆರ್.ಪೇಟೆ ತಾ||, ಮಂಡ್ಯ ಜಿˉÉ್ಲ