ರಾಯಚೂರು ಜಿˉÉ್ಲ ಸಿಂಧನೂರು ತಾಲ್ಲೂಕಿನ ಯದ್ದಲದೊಡ್ಡಿ ಗ್ರಾಮವುತಾಲ್ಲೂಕು ಕೇಂದ್ರದಿಂದ 22 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರವಲಯದಲ್ಲಿಸುಮಾರು 15ನೇ ಶತಮಾನದಲ್ಲಿ ಶ್ರೀ ಮ.ನಿ.ಪ್ರ. ಸಿದ್ದಲಿಂಗ ಶಿವಯೋಗಿಗಳವರಿಂದಸ್ಥಾಪಿತಗೊಂಡಿದೆಯೆಂದು ಹೇಳˉÁಗುವ ಶ್ರೀ ಸುವರ್ಣಗಿರಿ ವಿರಕ್ತಮಠವು ಅಸ್ತಿತ್ವದಲ್ಲಿದ್ದುಸಮಾಜದಲ್ಲಿ ತುಂಬಿರುವ ಅಂಧಕಾರವನ್ನು ಹೊಡೆದೋಡಿಸುವ ಕೆಲಸವನ್ನು ನಿರ್ವಹಿಸಿಕೊಂಡು ಬರುತ್ತಿದೆ.15ನೇ ಶತಮಾನದಲ್ಲಿ ಎಡೆಯೂರಿನ ಜಗದ್ಗುರು ಶ್ರೀ ಸಿದ್ದಲಿಂಗೇಶ್ವರರುನೂರಾಒಂದು ವಿರಕ್ತರನ್ನೊಡಗೂಡಿ ದೇಶಸಂಚಾರ ಮಾಡುತ್ತಾ ಭಕ್ತರರಿಗೆ ಸದ್ಭೋದನೆಗಳನ್ನು ಮಾಡುತ್ತಾ ಜನರನ್ನುದ್ಧರಿಸುತ್ತಾ ಮುಂದುವರೆಯುತ್ತಿದ್ದರು. ಇಂತಹಮಹಾಮಹಿಮ ನೂರೊಂದು ವಿರಕ್ತರಲ್ಲಿ ಒಬ್ಬರಾದ ಯದ್ದಲದೊಡ್ಡಿಯ ಶ್ರೀ ಮ.ನಿ.ಪ್ರ.ಸಿದ್ಧಲಿಂಗ ಶಿವಯೋಗಿಗಳು ಯದ್ದಲದೊಡ್ಡಿಗೆ ಆಗಮಿಸಿ ನೆˉÉನಿಂತು ಭಕ್ತರಿಗೆ ವೀರಶೈವಲಿಂಗಾಯತ ಧರ್ಮಾಚರಣೆಗಳ ಮಹತ್ವವನ್ನು ಉಪದೇಶಿಸುತ್ತಿದ್ದರು.ಶ್ರೀ ಸಿದ್ಧಲಿಂಗ ಶಿವಯೋಗಿಗಳು ಭಕ್ತರಿಗೆ ಸನ್ಮಾರ್ಗ ತೋರಿ ಲಿಂಗೈಕ್ಯರಾದನಂತರ ಅವರ ಗದ್ದುಗೆಯನ್ನು ಭಕ್ತರೇ ನಿರ್ಮಿಸಿ ಶ್ರೀಮಠವನ್ನು ಕಟ್ಟಿಸಿದ್ದಾರೆ. ಕಾಲ ಕ್ರಮೇಣಮಠವು ನಶಿಸಿ ಹೋಗುವ ಸಂದರ್ಭದಲ್ಲಿ ಶ್ರೀಮಠವನ್ನು ಒಳಬಳ್ಳಾರಿಯ ಶ್ರೀ ಚನ್ನಬಸವತಾತನವರು ಜೀರ್ಣೋದ್ಧಾರ ಮಾಡಿದ್ದರು. ಹೀಗಾಗಿ ಶ್ರೀಮಠವು ತನ್ನ ಅಸ್ತಿತ್ವವನ್ನುಉಳಿಸಿಕೊಂಡು ಬಂದಿದೆ.2002ರ ಫೆಬ್ರವರಿ 19ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ಬಂದ ಈಗಿನಶ್ರೀಗಳಾದ ಶ್ರೀ ಮ.ನಿ.ಪ್ರ. ಮಹಾಲಿಂಗ ಸ್ವಾಮಿಗಳು ಶ್ರೀಮಠವನ್ನು ವಿಸ್ತರಿಸುವ ಮೂಲಕಪುನರ್ ಜೀಣೋದ್ಧಾರಗೊಳಿಸಿ ಶಾಶ್ವತ ಕಲ್ಲಿನ ಕಟ್ಟಡವನ್ನು ನಿರ್ಮಿಸುತ್ತಿದ್ದು, ಹಲವಾರುಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಗೂ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಯೋಜನೆಗಳನ್ನು ರೂಪಿಸಿಕೊಂಡು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡುಬರುತ್ತಿದ್ದಾರೆ. ಶ್ರೀಗಳು ಶ್ರೀಮಠದಲ್ಲಿ ಪ್ರತಿವರ್ಷ ಗೌರಿ ಹುಣ್ಣಿಮೆಗೆ ಶ್ರೀ ಹಿರಿಯ ಗುರುಗಳಪುಣ್ಯಾರಾಧನೆಯನ್ನು ನಡೆಸುತ್ತಾ ಬಂದಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಮಹಾಲಿಂಗ ಸ್ವಾಮಿಗಳು
Date of Birth :
16-1-1969
Place :
ಪಾಮನಕಲ್ಲೂರು ಮಾನ್ವಿ ತಾ||
Pattadikara :
18-2-2002
Photo :
Programs
ಶಾª್ರÀಣ ಮಾಸದ ಮೂರನೇ ಶುಕ್ರವಾರ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ. ಗೌರಿ ಹುಣ್ಣಿಮೆಗೆ ಕರ್ತೃಗುರುಗಳ ಪುಣ್ಯಾರಾಧನೆ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು. ಶಿವರಾತ್ರಿಗೆ ವಿಶೇಷ ಪೂಜೆ ಹಾಗೂ ಜಾಗರಣೆ.