Shree Suvarnagiri Samsthana Viraktamatha (Kalmatha)

Shree Suvarnagiri Samsthana Viraktamatha (Kalmatha) Claimed

ಶ್ರೀ ಸುವರ್ಣಗಿರಿ ಸಂಸ್ಥಾನ ವಿರಕ್ತಮಠ (ಕಲ್ಮಠ)

Average Reviews

Description

ಶ್ರೀ ಸುವರ್ಣಗಿರಿ ಸಂಸ್ಥಾನ ವಿರಕ್ತಮಠ (ಕಲ್ಮಠ)

ಕರ್ತೃ – ಪೂಜ್ಯ ಶ್ರೀ ರುದ್ರ ಶಿವಯೋಗಿಗಳು

ಕನಕಗಿರಿ ಐತಿಹಾಸಿಕ ಹಿನ್ನೆಲೆಯುಳ್ಳ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಇಲ್ಲಿಪ್ರಮುಖವಾಗಿ ಕಂಡುಬರುವುದು ಶ್ರೀಸುವರ್ಣಗಿರಿ ಸಂಸ್ಥಾನ ವಿರಕ್ತಮಠ(ಕಲ್ಮಠ). ಶ್ರೀಮಠವುತನ್ನದೇ ಆಗಿರುವಂಥ ಇತಿಹಾಸವನ್ನ ಒಳಗೊಂಡಿದ್ದು, ಈ ಊರಿಗೆ ಕನಕಗಿರಿ ಎಂಬ ಹೆಸರುಬರಲು ಶ್ರೀಮಠದ ಹೆಸರೆ ಕಾರಣವಾಗಿರಬಹುದೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.ಶ್ರೀಮಠವು 12ನೇ ಶತಮಾನದಲ್ಲಿ ಅಲ್ಲಮಪ್ರಭುವು ಲೋಕಸಂಚಾರ ಕೈಗೊಂಡಾಗ ಈಊರಿನಲ್ಲಿ ತಂಗಿದ್ದು, ಹೊರಡುವ ವೇಳೆಯಲ್ಲಿ ಶ್ರೀಮಠವನ್ನು ಸ್ಥಾಪಿಸಿ ಶ್ರೀರುದ್ರದೇವ ಎಂಬಬಾಲಕನಿಗೆ ಅಧಿಕಾರವನ್ನು ವಹಿಸಿಕೊಟ್ಟಿರುವರೆಂಬ ಪ್ರತೀತಿ. ಅವರೇ ಶ್ರೀಮಠದಕರ್ತೃಗುರುಗಳಾದ ಶ್ರೀ ರುದ್ರ ಶಿವಯೋಗಿಗಳು. ಅಲ್ಲಿಂದ ಇಲ್ಲಿಯವರೆಗೆ ಶ್ರೀಮಠವು 28ತಲೆಮಾರುಗಳ ಗುರುಪರಂಪರೆಯನ್ನ ಹೊಂದಿದೆ. 15ನೇ ಶತಮಾನದ ಪ್ರೌಢದೇವರಾಯನಕಾಲದಲ್ಲಿದ್ದ 101 ವಿರಕ ್ತರಲ್ಲಿ ‘ಕಲ್ಲುಮಠದ ರುದ ್ರದೇವ’ ಎಂಬುವವರುಶ್ರೀಮಠದವರಾಗಿದ್ದಾರೆ. ಇದಕ್ಕೆ ‘ಶಿವತತ್ತ್ವ ರತ್ನಾಕರ’ವು ಆಧಾರವನ್ನು ಒದಗಿಸುತ್ತದೆ.ಶ್ರೀಮಠವು ಅಂದಿನಿಂದ ತನ್ನದೇಯಾಗಿರುವ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕಕಾರ್ಯಗಳನ್ನು ಮಾಡಿಕೊಂಡು ಬಂದಿದೆ.ಶ್ರೀಮಠದ 25ನೇ ಪೀಠಾಧಿಪತಿಗಳಾಗಿದ್ದ ಶ್ರೀರುದ್ರಸ್ವಾಮಿಗಳವರ ಧಾರ್ಮಿಕವಿಚಾರಗಳಿಗೆ ಮಾರುಹೋಗಿ ಹೈದ್ರಾಬಾದ್ ನಿಜಾಮನು ಏಳು ಹಳ್ಳಿಗಳನ್ನು ಜಹಗೀರುಕೊಟ್ಟಿರುವುದು ಇತಿಹಾಸ. ಇವರ ತರುವಾಯ ಲಿಂ|| ಶ್ರೀಚನ್ನಮಲ್ಲ ಶಿವಯೋಗಿಗಳುಅಧಿಕಾರಕ್ಕೆ ಬರುತ್ತಾರೆ. ಇವರು ಪಂಡಿತರಾಗಿದ್ದು, ಇಂಗ್ಲೀಷ, ಹಿಂದಿ, ಉರ್ದು, ಸಂಸ್ಕೃತ,ಕನ್ನಡ ಭಾಷೆಯಲ್ಲಿ ಪ್ರಭುತ್ವವನ್ನು ಪಡೆದವರಾಗಿದ್ದರು. ಹೈದ್ರಾಬಾದ ನಿಜಾಮ ಅರಸರುಶ್ರೀಗಳನ್ನು ಕರೆಯಿಸಿಕೊಂಡು ಸಲಹೆ, ಆಶೀರ್ವಾದವನ್ನು ಪಡೆಯುತ್ತಿದ್ದರು ಎಂಬುದಕ್ಕೆಅರಸರು ಶ್ರೀಮಠಕ್ಕೆ ನೀಡಿರುವ ದಾನದತ್ತಿಗಳೇ ಸಾಕ್ಷಿಯಾಗಿವೆ. ಬೇಡಿದವರಿಗೆ ಬೇಡಿದ್ದನ್ನು,ಕೇಳಿದವರಿಗೆ ಕೇಳಿದ್ದನ್ನು ಕೊಡುವ ಕರುಣಾಮಯಿಯಾಗಿದ್ದರು. ಶ್ರೀಗಳು ವಳಬಳ್ಳಾರಿಯಲಿಂ||ಚನ್ನಬಸವ ತಾತನವರನ್ನು ಚಿಕ್ಕವರಿರುವಾಗಲೇ ಕರೆತಂದು, ಶಾಸ್ತ್ರ, ಆಚಾರ-ವಿಚಾರವನ್ನು ಕಲಿಸಿ ಶ್ರೀಮಠದ ಶಾಖಾಮಠಗಳಾದ ವಳಬಳ್ಳಾರಿ, ನದೀಚಾಗಿ, ಪಾಮನಕೆಲೂರು, ಎದ್ದಲದೊಡ್ಡಿ, ಗಿಣಿವಾರ, ಅಯನೂರ ಹಾಗೂ ಕೋಸಿಗಿ ಮಠಗಳಿಗೆ ಪಾರ್ಥಿವಸಂವತ್ಸರ ಮಾಘ ಬಹುಳದಂದು ಅಧಿಕಾರವನ್ನು ವಹಿಸಿಕೊಟ್ಟಿರುವುದು ಅವರು ಕೈಕೊಂಡಮಹತ್ವದ ಕಾರ್ಯಗಳಲ್ಲೊಂದಾಗಿದೆ. ಕೊನೆಯಲ್ಲಿ ಶಾಖಾಮಠವಾದ ಮೆದಿಕಿನಾಳಮಠದಲ್ಲಿ 1954ರಲ್ಲಿ ಲಿಂಗೈಕ್ಯರಾದರು.ಮಠಮಾರ್ಗದರ್ಶನಶ್ರೀ ಚನ್ನಮಲ್ಲಶಿವಯೋಗಿಗಳು ಲಿಂಗೈಕ್ಯರಾದ ನಂತರ ಶ್ರೀಮಠವು ಹೊಂದಿರುವಸಾವಿರಾರು ಎಕರೆ ಭೂಮಿ, ನೂರಾರು ಶಾಖಾಮಠಗಳ ಆಸ್ತಿಯಿಂದಾಗಿ ಸರ್ಕಾರವುಶ್ರೀಮಠವನ್ನು 15 ವರ್ಷಗಳ ಕಾಲ ತನ್ನ ಸ್ವಾದೀನಕ್ಕೆ ತೆಗೆದುಕೊಂಡಿತು. ತದನಂತರ1971ರಲ್ಲಿ ಲಿಂ|| ಶ್ರೀಮ.ನಿ.ಪ್ರ. ರುದ್ರಮುನಿ ಮಹಾಸ್ವಾಮಿಗಳನ್ನು ಶ್ರೀಮಠದಉತ್ತರಾಧಿಕಾರಿಗಳನ್ನಾಗಿ ನೇಮಿಸಿದರು.ಹೈದ್ರಾಬಾದ ಕರ್ನಾಟಕವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅತೀಹಿಂದುಳಿದ ಪ್ರದೇಶವೆಂಬುದು ಎಲ್ಲರಿಗೂ ತಿಳಿದ ವಿಚಾರ. ಅದರಲ್ಲಿಯೂ ಕೊಪ್ಪಳ ಜಿಲ್ಲೆಯಕನಕಗಿರಿ ಪ್ರದೇಶವು ಮಳೆ ಆಧಾರಿತ ಬೇಸಾಯದಿಂದಾಗಿ ಈ ಭಾಗದ ಜನತೆ ಬಡತನದಬೇಗೆಯಲ್ಲಿ ತಮ್ಮ ಜೀವನವನ್ನ ಸಾಗಿಸುತ್ತಿದ್ದಾರೆ. ಇಂತಹ ಪ್ರದೇಶದಲ್ಲಿ ಅಭಿವೃದ್ಧಿಯನ್ನುಸಾಧಿಸುವುದು ಕಷ್ಟದ ಕೆಲಸ. ಈ ಪ್ರದೇಶ ಅಭಿವೃದ್ಧಿಯನ್ನು ಪಡೆಯಬೇಕಾದರೆ ಕೇವಲಶಿಕ್ಷಣದಿಂದ ಮಾತ್ರ ಸಾಧ್ಯವೆಂದು ಮನಗಂಡ ಶ್ರೀರುದ್ರಮುನಿ ಮಹಾಸ್ವಾಮಿಗಳುಶ್ರೀರುದ್ರಸ್ವಾಮಿ ಗ್ರಾಮೀಣ ವಿದ್ಯಾವರ್ಧಕ ಸಂಘ(ರಿ) ಕನಕಗಿರಿಯೆಂಬ ಸಂಸ್ಥೆಯನ್ನು ಕಟ್ಟಿಅದರಡಿಯಲ್ಲಿ 1988ರಲ್ಲಿ ಶ್ರೀಶಿವಯೋಗಿಚನ್ನಮಲ್ಲ ಪ್ರಾಥಮಿಕ ಶಾಲೆಯನ್ನು ಮತ್ತು1992ರಲ್ಲಿ ಶ್ರೀರುದ್ರಸ್ವಾಮಿ ಪ್ರೌಢಶಾಲೆಯನ್ನು ಕನಕಗಿರಿಯಲ್ಲಿ ಪ್ರಾರಂಭಿಸಿದರು. ಈಸಂಸ್ಥೆಯು ಉಚಿತವಾಗಿ ಬಡಮಕ್ಕಳಿಗೆ ಶಿಕ್ಷಣವನ್ನ ಕೊಡುವ ಕೆಲಸವನ್ನ ಮಾಡುತ್ತಿದೆ.ಅಂದು ಶ್ರೀಗಳು ಹಚ್ಚಿಹೋದ ಸಸಿಯು ಇಂದು ಚಿಗುರೊಡೆಯುತ್ತಿದೆ. ಶಿಕ್ಷಣ ಪ್ರೇಮಿಗಳಾದಶ್ರೀಗಳು ಅನೇಕ ಕಡೆಗಳಲ್ಲಿ ಶಿಕ್ಷಣವನ್ನು ಪೆÇ್ರೀತ್ಸಾಹಿಸುವ ಸಲುವಾಗಿ ಭೂಮಿಯನ್ನುದಾನವಾಗಿ ಸರ್ಕಾರಕ್ಕೆ ನೀಡಿದ್ದಾರೆ. (ಕನಕಗಿರಿಯಲ್ಲಿ 17 ಎಕರೆ, ಬೇವೂರಲ್ಲಿ 2 ಎಕರೆ,ಮಂಗಳೂರಲ್ಲಿ 4 ಎಕರೆ 10ಗುಂಟೆ,ಜಾಲಿಹಾಳಲ್ಲಿ 4 ಎಕರೆ, ಗಾಂಧಿನಗರದಲ್ಲಿ 2 ಎಕರೆ, 2ಎಕರೆ ಕುಡಿಯುವ ನೀರಿನ ಕೆರೆಗೆ.) ಅಷ್ಟೆ ಅಲ್ಲದೆ ಅನೇಕ ಗ್ರಾಮಗಳ ಅಭಿವೃದ್ಧಿಗೋಸ್ಕರಲಕ್ಷಾಂತರ ರೂಪಾಯಿಗಳ ಧನ ಸಹಾಯವನ್ನು ಮಾಡುವ ಮೂಲಕ ಸರ್ಕಾರದಕೆಲಸವನ್ನು ಶ್ರೀಗಳು ಮಾಡಿರುವರು. ಲಿಂ||ರುದ್ರಮುನಿ ಮಹಾಸ್ವಾಮಿಗಳು ಶ್ರೀಮಠದಅಧಿಕಾರವನ್ನು ವಹಿಸಿಕೊಂಡ ಮೇಲೆ ಶ್ರೀಮಠದ ಸಮಸ್ಯೆಗಳನ್ನು ಬಗೆಹರಿಸುವ ಮೂಲಕಕನಕಗಿರಿ, ಮಂಗಳೂರು, ಮೆದಿಕಿನಾಳ ಗ್ರಾಮಗಳಲ್ಲಿ ಶ್ರಾವಣ ಮಾಸ ಹಾಗೂ ಇನ್ನಿತರಸಂದರ್ಭಗಳಲ್ಲಿ ಪುರಾಣ ಕಾರ್ಯಕ್ರಮವನ್ನು ಮಾಡಿ, ಸಾವಿರಾರು ಬಡವರ ಉಚಿತಸಾಮೂಹಿಕ ವಿವಾಹಗಳನ್ನು ಮಾಡುವ ಮೂಲಕ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವನಿಜವಾದ ಸನ್ಯಾಸಿಯಾಗಿ ಬೆಳಗಿ ಶ್ರೀಶಕೆ 1926ನೆ ತಾರಣನಾಮ ಸಂವತ್ಸರ ಶ್ರಾವಣ ಬಹುಳದಶಮಿಯಂದು ಇಹಲೋಕವನ್ನು ತೊರೆದರು.12611-05-2005ರ ಬುಧವಾರದಂದು ಶ್ರೀ ಮ.ನಿ.ಪ್ರ. ಡಾ|| ಚೆನ್ನಮಲ್ಲಸ್ವಾಮಿಗಳುಅಧಿಕಾರವನ್ನು ಸ್ವೀಕರಿಸಿದರು. ಶ್ರೀಗಳ ಪೂರ್ವನಾಮ ಕಲಿದೇವರು, ಇವರು ನಾಡಿನಹೆಸರಾಂತ ಸಂಗೀತಗಾರರು, ಸಾಹಿತಿಗಳು ಆಗಿರುವ ಶ್ರೀರಾಜಗುರು ಗುರುಸ್ವಾಮಿ ಕಲಿಕೇರಿಮತ್ತು ಶ್ರೀಮತಿ ಶಾರದಾ ಕಲಿಕೇರಿಯವರ ನಾಲ್ಕನೇ ಪುತ್ರರು. ಪ್ರಾಥಮಿಕ ಅಭ್ಯಾಸದಿಂದಪದವಿಪೂರ್ವ ಅಭ್ಯಾಸವು ಗದಗದಲ್ಲಿ, ನಂತರ ಶ್ರೀ ಶಿವಯೋಗಮಂದಿರದಲ್ಲಿ ಯೋಗ,ಸಂಸ್ಕ್ರತ ಅಭ್ಯಾಸ. ಪದವಿ ಅಧ್ಯಯನವು ಮೈಸೂರಿನ ಶ್ರೀ ಸುತ್ತೂರು ಶಿವರಾತ್ರೀಶ್ವರಗುರುಕುಲದಲ್ಲಿ, ಸ್ನಾತಕೋತ್ತರ ಎಂ.ಎ., ಮತ್ತು “ಶೂನ್ಯಸಂಪಾದನೆ:ಅಭ್ಯಾಸ ಪರಂಪರೆ”ಎಂಬ ವಿಷಯ ಕುರಿತು ಪಿ.ಹೆಚ್ಡಿ ಪದವಿಯನ್ನು ಧಾರವಾಡದ ಕರ್ನಾಟಕವಿಶ್ವವಿದ್ಯಾಲಯದಿಂದ ಪಡೆದುಕೊಂಡಿದ್ದಾರೆ. ಡಾ|| ಶ್ರೀ ಚೆನ್ನಮಲ್ಲಸ್ವಾಮಿಗಳು ಶ್ರೀಮಠಕ್ಕೆಬಂದ ಮೇಲೆ ಶ್ರೀಮಠದಲ್ಲಿ ಹಿಂದಿನಿಂದ ಬಂದಿರುವ ಸಂಪ್ರದಾಯ, ಆಚರಣೆಗಳನ್ನುಚಾಚೂ ತಪ್ಪದೆ ನಡೆಸಿಕೊಂಡು ಬರಲಾಗುತ್ತಿದೆ. ಶ್ರೀಮಠದಲ್ಲಿ ಹೊಸದಾಗಿ ಶ್ರೀ ಬಸವೇಶ್ವರಜಯಂತಿಯನ್ನು ಶ್ರೀಗಳು ಬಂದ ಮೇಲೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಇದರಅಂಗವಾಗಿ ಹಲವಾರು ಸಾಮಾಜಿಕವಾದ, ವೈಚಾರಿಕವಾದ ವಿನೂತನ ಕಾರ್ಯಕ್ರಮಗಳನ್ನುಹಮ್ಮಿಕೊಳ್ಳುವ ಮೂಲಕ ಈ ಭಾಗದಲ್ಲಿ ವಿಶಿಷ್ಟವಾದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕಜಾಗ್ರತಿಯನ್ನುಂಟು ಮಾಡಲಾಗುತ್ತಿದೆ.

ಶಾಖಾಮಠಗಳು : –

ಕೊಪ್ಪಳ ಜಿಲ್ಲೆ :
1)ಗಂಗಾವತಿ ತಾಲ್ಲೂಕ- ಗಡ್ಡಿ, ಬೇವಿನಹಾಳ, ಕಾರಟಗಿ, ಮೈಲಾಪುರ, ನವಲಿ.
2)ಕುಷ್ಟಗಿ ತಾಲ್ಲೂಕ- ತಾವರಗೇರಿ, ಸಾಸ್ವಿಹಾಳ, ಬೇವೂರ, ಕಲ್ಲೂರು, ವಣಗೇರಿ, ಮಂಗಳೂರು.

ರಾಯಚೂರ ಜಿಲ್ಲೆ :
1)ಸಿಂಧನೂರ ತಾಲ್ಲೂಕ- ರೌಡಕುಂದ, ಮುಕ್ಕುಂದ, ಜಾಲಿಹಾಳ, ಹಂಚಿನಾಳ,
ದಡೇಸುಗೂರು, ಕಲ್ಮಂಗಿ, ಕೆಂಗಲ್, ಸೋಮಲಾಪುರ, ಚನ್ನಳ್ಳಿ, ವಳಬಳ್ಳಾರಿ, ನದೀಚಾಗಿ,
ಪಾಮನ ಕೆಲ್ಲೂರು, ಎದ್ದಲದೊಡ್ಡಿ, ಗಿಣಿವಾರ, ಅಯನೂರು, ಕೋಸಿಗಿ.
2)ಲಿಂಗಸುಗೂರು ತಾಲ್ಲೂಕ- ಕಸಬಾ ಕೆಲೂರ, ಕುನಿ ಕೆಲೂರ, ಮೆದಿಕಿನಹಾಳ, ಹಡಗಲಿ,
ತುರಡಗಿ, ಮುದಗಲ್ಲ.

ಬಾಗಲಕೋಟ ಜಿಲ್ಲೆ:
ಹುನಗುಂದ ತಾಲ್ಲೂಕ- ಕಂದಗಲ್ಲ, ನಂದವಾಡಗಿ.
ಬಳ್ಳಾರಿ ಜಿಲ್ಲೆ : ಹೊಸಪೇಟೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಡಾ. ಚನ್ನಮಲ್ಲ ಸ್ವಾಮಿಗಳು
Date of Birth :
6-11-1979
Pattadikara :
11-5-2005
Photo :

Programs

ಬಸವ ಜಯಂತಿಯಂದು ವಿಶೇಷ ಸಾಂಸ್ಕøತಿಕ ಕಾರ್ಯಕ್ರಮಗಳು.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಪ್ರಯುಕ್ತ ಶಿವಾನುಭವ ಗೋಷ್ಠಿ. ಪುರಾಣ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಾಮೂಹಿಕ ವಿವಾಹಗಳು.

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ.
ಸಂಗೀತ ಪಾಠಶಾಲೆ. ವಿದ್ಯಾರ್ಥಿ ನಿಲಯ.

Photos

Full Address Kannada

ಶ್ರೀ ಸುವರ್ಣಗಿರಿ ಸಂಸ್ಥಾನ ವಿರಕ್ತಮಠ (ಕಲ್ಮಠ)
ಕನಕಗಿರಿ - 583283
ಗಂಗಾವತಿ ತಾ||, ಕೊಪ್ಪಳ ಜಿ||

Map

Near by Places

ಗಂಗಾವತಿ - 22 ಕಿ.ಮೀ.
ಕೊಪ್ಪಳ - 40 ಕಿ.ಮೀ.

Statistic

13 Views
0 Rating
0 Favorite
0 Share
error: Content is protected !!