Shree Sutturu Shakha Pattada Matha

Shree Sutturu Shakha Pattada Matha Claimed

ಶ್ರೀ ಸುತ್ತೂರು ಶಾಖಾ ಪಟ್ಟದ ಮಠ

Average Reviews

Description

ಶ್ರೀ ಸುತ್ತೂರು ಶಾಖಾ ಪಟ್ಟದ ಮಠ – ಗೋಪಿಶೆಟ್ಟಿಯೂರು

ಕರ್ತೃ – ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ 40 ಕಿ.ಮೀ.ದೂರದಲ್ಲಿರುವ ಗೋಪಿಶೆಟ್ಟಿಯೂರು ಗ್ರಾಮದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಸುತ್ತೂರು ಶಾಖಾಪಟ್ಟದ ಮಠವು ಪೂಜ್ಯ ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳಅಮೃತ ಹಸ್ತದಿಂದ 1940 ರಲ್ಲಿ ಸ್ಥಾಪಿತಗೊಂಡಿದೆ. ಇಂದಿಗೂ ಶ್ರೀಮಠವು ಸುತ್ತೂರುಜಗದ್ಗುರುಗಳ ಆಶಿರ್ವಾದ ಹಾಗೂ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ.ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಹತ್ತಿರವಿದ್ಯಾಭ್ಯಾಸವನ್ನು ಮಾಡಿ ಆಧ್ಯಾತ್ಮ ಶಿಕ್ಷಣದ ಅರಿವನ್ನು ಹೊಂದಿದ್ದ ವಿದ್ವಾನ್ ಶ್ರೀ ಷ.ಬ್ರ.ಗುರು ಮಹಾಸ್ವಾಮಿಗಳ ಸೇವೆಯನ್ನು ಗುರುತಿಸಿದ ಜಗದ್ಗುರುಗಳು ಅವರನ್ನುಗೋಪಿಶೆಟ್ಟಿಯೂರಿನಲ್ಲಿ ತಾವು ಸ್ಥಾಪಿಸಿದ್ದ ಶ್ರೀ ಪಟ್ಟದ ಮಠದ ಪ್ರಥಮ ಗುರುಗಳನ್ನಾಗಿಪಟ್ಟಕ್ಕೆ ತಂದರು. ನಂತರ ಶ್ರೀ ಗುರು ಸ್ವಾಮಿಗಳು ಜಗದ್ಗುರುಗಳ ಮಾರ್ಗದರ್ಶನದಲ್ಲಿ, ಭಕ್ತರಸಹಕಾರದೊಂದಿಗೆ ಶ್ರೀಮಠವನ್ನು ಆಧುನಿಕ ರೀತಿಯಲ್ಲಿ ಕಟ್ಟಿ ಬೆಳೆಸಿದರು.ಶ್ರೀ ಷ.ಬ್ರ. ಗುರು ಸ್ವಾಮಿಗಳು ಇಲ್ಲಿಗೆ ಬಂದ ಮೇಲೆ ಸುತ್ತಲಿನ ಗ್ರಾಮಗಳ ಜನರಿಗೆಆಧ್ಯಾತ್ಮದ ಸಂಸ್ಕಾರವನ್ನು ನೀಡಿ ಭಕ್ತರನ್ನು ಸನ್ಮಾರ್ಗದೆಡೆಗೆ ಕೊಂಡೊಯ್ಯುವಲ್ಲಿಯಶಸ್ವಿಯಾಗಿದ್ದರು. ಶ್ರೀಮಠಕ್ಕೆ ರೂಡಿಸಿಕೊಂಡಿದ್ದ ಐದು ಎಕರೆ ಜಮೀನನ್ನು ನೀರಾವರಿಗೆಯೋಗ್ಯಗಳಿಸಿ ಶ್ರೀಮಠಕ್ಕೆ ಹೆಚ್ಚಿನ ಆದಾಯ ಬರುವಂತೆ ಮಾಡಿದರು. ಶಿಕ್ಷಣ ಪ್ರೇಮಿಗಳಾದಶ್ರೀಗಳು ಅನೇಕ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿ ಅವರ ವಿದ್ಯಾರ್ಜನೆಗೆಸಹಾಯಕರಾಗಿದ್ದರು. ಹಾಗೆಯೇ ಈ ಗ್ರಾಮದಲ್ಲಿ ಬಸವ ಬಳಗ, ಅಕ್ಕನ ಬಳಗಗಳನ್ನುಸ್ಥಾಪಿಸಿ ಆ ಮುಖೇನ ಬಸವ ಜಯಂತಿ, ಅಕ್ಕನ ಜಯಂತಿಗಳ ಆಚರಣೆಗಳನ್ನುಪ್ರಾರಂಭಿಸಿದ ಶ್ರೀಗಳು 1999ರ ಆಗಸ್ಟ್ 20ರಂದು ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಬಸವಣ್ಣ ಸ್ವಾಮಿಗಳು 2000ದ ಆಗಸ್ಟ್ 24ರಂದುಶ್ರೀ ಸುತ್ತೂರು ಜಗದ್ಗುರುಗಳ ಮಾರ್ಗದರ್ಶನದಲ್ಲಿ ಶ್ರೀಮಠದ ಪಟ್ಟಕ್ಕೆ ಬಂದಿದ್ದುಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಶ್ರೀಮಠದಲ್ಲಿ ಯಾತ್ರಿ ನಿವಾಸವನ್ನುನಿರ್ಮಿಸಿರುವ ಶ್ರೀಗಳು ಪ್ರತಿ ವರ್ಷ ಮಲೆಮಾದೇಶ್ವರ ಬೆಟ್ಟಕ್ಕೆ ಹೋಗುವ ಭಕ್ತರಿಗೆ ವಸತಿಹಾಗೂ ಪ್ರಸಾದದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಬಸವಣ್ಣ ಸ್ವಾಮಿಗಳು
Date of Birth :
16-08-1975
Place :
ತಿಮ್ಮರಾಜಪುರ, ಕೊಳ್ಳೇಗಾಲ ತಾ||
Pattadikara :
24-08-2000
Photo :

Programs

ಅಕ್ಕಮಹಾದೇವಿ ಜಯಂತಿ ಆಚರಣೆ ಬಸವ ಜಯಂತಿ
ಆಚರಣೆ ಶ್ರಾವಣ ಮಾಸದಲ್ಲಿ ಲಿಂ|| ಶ್ರೀ ಷ.ಬ್ರ. ಗುರುಸ್ವಾಮಿಗಳ ಪುಣ್ಯಾರಾಧನೆ
ಶ್ರೀ ಶಿವರಾತ್ರೇಶ್ವರ ಜಯಂತಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳು

Photos

Full Address Kannada

ಶ್ರೀ ಸುತ್ತೂರು ಶಾಖಾ ಪಟ್ಟದ ಮಠ
ಗೋಪಿಶೆಟ್ಟಿಯೂರು, ರಾಮಾಪುರ ಪೋ - 571 444
ಕೊಳ್ಳೇಗಾಲ ತಾ||, ಚಾಮರಾಜನಗರ ಜಿಲ್ಲೆ

Map

Near by Places

ರಾಮಾಪುರ - 2 ಕಿ.ಮೀ.
ಎಂ.ಎಂ.ಹಿಲ್ಸ್ - 40 ಕಿ.ಮೀ.
ಕೊಳ್ಳೇಗಾಲ - 40 ಕಿ.ಮೀ.
ಚಾಮರಾಜನಗರ - 90 ಕಿ.ಮೀ.

Statistic

16 Views
0 Rating
0 Favorite
0 Share
error: Content is protected !!