Shree Surya Simhasana Matha

Shree Surya Simhasana Matha Claimed

ಶ್ರೀ ಸೂರ್ಯಸಿಂಹಾಸನ ಮಠ

Average Reviews

Description

ಶ್ರೀ ಸೂರ್ಯಸಿಂಹಾಸನ ಮಠ

ಕರ್ತೃ – ಪೂಜ್ಯ ಶ್ರೀ ಕಾಯಕದ ಪಂಚಾಕ್ಷರಿ ಮಹಾಸ್ವಾಮಿಗಳು

ಚಾಮರಾಜನಗರ ಜಿಲ್ಲಾ ಕೇಂದ್ರದಿಂದ 08 ಕಿ.ಮೀ. ದೂರದಲ್ಲಿರುವಹಂಡರಹಳ್ಳಿ ಗ್ರಾಮದ ಮಧ್ಯಭಾಗದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಸೂರ್ಯಸಿಂಹಾಸನ ಮಠವುಶ್ರೀ ಶೈಲ ಪೀಠದ ಶಾಖಾ ಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ.ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ ಶ್ರೀಮಠದ ಕರ್ತೃ ಗುರುಗಳೆಂದು ಶ್ರೀಶ್ರೀ ಕಾಯಕದ ಪಂಚಾಕ್ಷರಿ ಮಹಾಸ್ವಾಮಿಗಳನ್ನು ಗುರುತಿಸಲಾಗಿದೆ.ಉತ್ತರದ ಕಡೆಯಿಂದ ಸಂಚಾರ ಬಂದ ಕರ್ತೃ ಗುರುಗಳು ಈ ಗ್ರಾಮದಲ್ಲಿನೆಲೆನಿಂತು ಕುಟೀರ ಸ್ಥಾಪಿಸಿಕೊಂಡು ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಿದ್ದರು. ಗುರುಗಳುದಿನ ನಿತ್ಯ ಊರಿನ ಕೆರೆಯ ಹತ್ತಿರ ಇದ್ದ ಪಾದ್ರಿ ಮರದ ಒಂದು ಕೊಂಬೆಗೆ ಎರಡೂ ಕಾಲನ್ನುಹಾಕಿಕೊಂಡು ತಲೆಕೆಳಗೆ ನೇತಾಡುತ್ತಿದ್ದರು. ಅದು ಅವರ ಕಾಯಕ ವೃತ್ತಿಯಾಗಿತ್ತು. ಆಸಮಯದಲ್ಲಿ ಊರಿನ ಗೌಡರು ಪ್ರತಿ ದಿನ ಅಲ್ಲಿಗೆ ಬಂದು 3 ಕಾಸಿನ ತೂತು ಬಿಲ್ಲೆ ಹಾಗೂಎಲೆ ಅಡಿಕೆಯನ್ನು ಅವರ ತಲೆ ಸ್ಥಾನದಲ್ಲಿಟ್ಟು ಹೋಗುತ್ತಿದ್ದರಂತೆ. ಆಗ ಗುರುಗಳಿಗೆ ಅದುದಿವ್ಯ ದೃಷ್ಠಿಯಲ್ಲಿ ಕಂಡು ಅದನ್ನು ತೆಗೆದುಕೊಂಡು ಬಂದು ದಾಸೋಹದ ವ್ಯವಸ್ಥೆಮಾಡುತ್ತಿದ್ದರಂತೆ. ಆ ಕಾರಣಕ್ಕಾಗಿ ಶ್ರೀಗಳಿಗೆ ಶ್ರೀ ಕಾಯಕದ ಪಂಚಾಕ್ಷರಿ ಸ್ವಾಮಿಗಳೆಂಬಹೆಸರು ಬಂದಿತೆಂದು ಪ್ರತೀತಿ.ಈ ರೀತಿಯಾಗಿ ಕರ್ತೃ ಗುರುಗಳಿಂದ ಜಾಗೃತಗೊಂಡಿದ್ದ ಶ್ರೀಮಠವು ಅವರನಂತರ ಶ್ರೀ ಮಲ್ಲಿಕಾರ್ಜುನ ಪಂಚಾಕ್ಷರಿ ಮಹಾಸ್ವಾಮಿಗಳು, ಶ್ರೀ ಶಿವಾನಂದ ಪಂಚಾಕ್ಷರಿಮಹಾಸ್ವಾಮಿಗಳು ಹಾಗೂ ಶ್ರೀ ವಿದ್ಯಾಭೂಷಣ ಪರ್ವತ ಮಹಾಸ್ವಾಮಿಗಳಮುಖಾಂತರ ಪ್ರಸಿದ್ಧಿ ಪಡೆದಿದೆ. ಪ್ರಸ್ತುತ ಶ್ರೀ ಶ್ರೀ ವಿದ್ವಾನ್ ಪಟ್ಟದ ಪಂಚಾಕ್ಷರಿ ಸ್ವಾಮಿಗಳು1966ರಲ್ಲಿ ಶ್ರೀಮಠದ ಪಟ್ಟಾಧಿಕಾರ ವಹಿಸಿಕೊಂಡು ಪರಂಪರೆಯ ಹಾದಿಯಲ್ಲಿಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಶ್ರೀಮಠವನ್ನುಜೀರ್ಣೋದ್ಧಾರಗೊಳಿಸಿರುವ ಶ್ರೀಗಳು ಪರಂಪರೆಯ ಗುರುಗಳು ರೂಡಿಸಿಕೊಂಡುಬಂದಿದ್ದ ಆಸ್ತಿಯನ್ನು ಕಾಪಾಡಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ.

Swamiji

Swamiji Name :
ಶ್ರೀ ಶ್ರೀ ವಿದ್ವಾನ್ ಪಟ್ಟದ ಪಂಚಾಕ್ಷರಿ ಸ್ವಾಮಿಗಳು
Date of Birth :
06-02-1954
Place :
ಹಂಡರಕಳ್ಳಿ, ಚಾಮರಾಜನಗರ ತಾ||
Pattadikara :
1966
Photo :

Programs

ಪ್ರತಿ ನಿತ್ಯ 2 ಬಾರಿ ಗದ್ದುಗೆಗೆ ಪೂಜೆ
ಭಾನುವಾರ & ಗುರುವಾರ ಶ್ರೀಗಳಿಂದ
ಮಠಕ್ಕೆ ಬಂದ ಭಕ್ತರಿಗೆ ಯಂತ್ರದಾರಣೆ
ವೈಶಾಖ ಶುದ್ದ ಪೌರ್ಣಿಮೆಗೆ
ಲಿಂ|| ಶ್ರೀ ಗುರು ಶಿವಯೋಗಿ ಪಂಚಾಕ್ಷರಿ
ಮಹಾಸ್ವಾಮಿಗಳ ಪುಣ್ಯಾರಾಧನೆ
ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ ಮತ್ತು
ಪಂಚಕಲ್ಯಾಣ ಮಹೋತ್ಸವ ಹಾಗೂ
ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು

Photos

Full Address Kannada

ಶ್ರೀ ಸೂರ್ಯಸಿಂಹಾಸನ ಮಠ
ಹಂಡರಕಳ್ಳಿ, ಮಾದಾಪುರ ಪೋಸ್ಟ್
ಚಾಮರಾಜನಗರ ತಾ|| ಮತ್ತು ಜಿಲ್ಲೆ

Map

Near by Places

ಚಾಮರಾಜನಗರ - 8 ಕಿ.ಮೀ.
ಕೊಳ್ಳೇಗಾಲ - 36 ಕಿ.ಮೀ.
ಮೈಸೂರು - 60 ಕಿ.ಮೀ.

Statistic

16 Views
0 Rating
0 Favorite
0 Share
error: Content is protected !!