ಕರ್ತೃ – ಶ್ರೀ ಷ.ಬ್ರ. ಚಿನ್ನದಕಂತಿ ಚಿಕ್ಕವೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
P Àಲಬುರಗಿ ಜಿಲ್ಲಾ ಕೇಂದ್ರದಿಂದ 13 ಕಿ.ಮೀ. ದೂರದಲ್ಲಿರುವ ಶ್ರೀನಿವಾಸ ಸರಡಗಿಗ್ರಾಮದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಸುಲ್ತಾನಪುರ ಹಿರೇಮಠವು ಶ್ರೀಮದ್ ಉಜ್ಜಯಿನಿ ಪೀಠದಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ. ಶ್ರೀ ಮಠದ ಮೂಲಮಠವು ಕಲಬುರಗಿಗೆ ಸಮೀಪದ ತಾಜ್ಸುಲ್ತಾನಪರದಲ್ಲಿ ಅಸ್ತಿತ್ವದಲ್ಲಿದ್ದು ಕ್ರಮೇಣಶ್ರೀಮಠದ ಗುರುಗಳು ಆಡಳಿತಾತ್ಮಕ ದೃಷ್ಠಿಯಿಂದ ಶ್ರೀನಿವಾಸ ಸರಡಗಿಯೇ ಸೂಕ್ತ ಎಂದುನಿರ್ಧರಿಸಿ ಶ್ರೀಮಠದ ಆಡಳಿತವನ್ನು ಸರಡಗಿಗೆ ಸ್ಥಳಾಂತರಿಸಿರುತ್ತಾರೆ. ಶ್ರೀಮಠದ ಮೂಲಗುರುಗಳು ಶ್ರೀ.ಷ.ಬ್ರ. ಚಿನ್ನದಕಂತಿ ಚಿಕ್ಕವೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು.ಕರ್ತೃಗುರುಗಳು ತಾಜ್ಸುಲ್ತಾನಪುರದಲ್ಲಿ ಅನುಷ್ಠಾನ ನಿರತರಾಗಿದ್ದಾಗ ಅಲ್ಲಿಯಆಳರಸ ಸುಲ್ತಾನನು ಶ್ರೀಗಳ ಪ್ರಭಾವಕ್ಕೆ ಒಳಗಾಗಿ ಬೃಹದಾಕಾರದ ಮಠವನ್ನುಕಟ್ಟಿಸಿಕೊಟ್ಟಿದ್ದಲ್ಲದೆ ಶ್ರೀಮಠದ ಕೆಳಗೆ ಉಂಬಳಿಯನ್ನಾಗಿ ಭೂದಾನ ಮಾಡಿದ್ದು ಒಂದುವಿಶೇಷ. ಕರ್ತೃ ಗುರುಗಳು ಅನಂತ ಪವಾಡಗಳನ್ನು ಮಾಡುತ್ತಾ, ನೊಂದು ಬಂದವರಕಣ್ಣೀರು ಒರೆಸುತ್ತಾ ವೀರಶೈವ ಧರ್ಮದುನ್ನತಿಗಾಗಿ ಸಂಚಾರ ಕೈಗೊಂದು ಧರ್ಮಪ್ರಚಾರಮಾಡಿದರು. ಹೀಗೆ ಸಂಚಾರ ಹೋದ ಗುರುಗಳು ಲಿಂಗದ ಪರಿಕಲ್ಪನೆಯನ್ನು ಕೊಡುತ್ತಾಹಾಸನ ಜಿಲ್ಲೆಯಲ್ಲಿ ಬರುವ ಕುರವತ್ತಿಯ ವಿರಕ್ತಮಠದಲ್ಲಿ ಲಿಂಗೈಕ್ಯರಾಗಿದ್ದು ನೋಡಿದರೆಗುರು ವಿರಕ್ತರ ಸಂಬಂದ ಎಷ್ಟೊಂದು ಗಟ್ಟಿಗೊಂಡಿತ್ತು ಎಂಬುದು ತಿಳಿದುಬರುತ್ತದೆ.ಕರ್ತೃಗುರುಗಳ ನಂತರದ ಪರಂಪರೆಯಲ್ಲಿ ಹತ್ತಕ್ಕೂ ಹೆಚ್ಚಿನ ಗುರುಗಳು ಅಧಿಕಾರ ನಡೆಸಿದ್ದುಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲ.ಪ್ರಸ್ತುತ ಶ್ರೀಗಳಾದ ಶ್ರೀ.ಷ.ಬ್ರ. ರೇವಣಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳುಬಿ.ಎ. ಪದವೀದರರಾಗಿದ್ದು ವೈಧಿಕ ಧರ್ಮದ ಸಿದ್ಧಾಂತವನ್ನು ಹೊಟಗಿಯ ಶ್ರೀ ಚನ್ನವೀರಶಿವಾಚಾರ್ಯರ ಮಠದಿಂದ ಪಡೆದು ಪಾಂಡಿತ್ಯಪ್ರಭೆಯನ್ನು ಬೆಳಗುತ್ತಾ ಆಂಧ್ರ, ಕರ್ನಾಟಕ,ಮಹಾರಾಷ್ಟ್ರದ ಪ್ರಮುಖ ಸ್ಥಳಗಳಲ್ಲಿ ಲೋಕಹಿತಕ್ಕಾಗಿ ಅನುಷ್ಠಾನ ಮಾಡಿ ಅಪಾರ ಭಕ್ತಬಳಗವನ್ನು ಹೊಂದಿದ್ದಾರೆ. 1989ರ ಜೂನ್ 16ರಲ್ಲಿ ಶ್ರೀಮಠದ ಪಟ್ಟಕ್ಕೆ ಬಂದ ಶ್ರೀಗಳುಶ್ರೀಮಠದ ಜೊತೆಯಲ್ಲಿ ತಾಜ್ಸುಲ್ತಾನಪುರದ ಮೂಲ ಮಠ ಹಾಗೂ ಕುರಕೋಟಾದಶಾಖಾಮಠಗಳನ್ನು ಜೀರ್ಣೋದ್ದಾರ ಮಾಡಿದ್ದಾರೆ. ಶ್ರೀಗಳು ಕೇವಲ ಧಾರ್ಮಿಕಆಚರಣೆಗಳಿಗಷ್ಟೇ ಗಮನ ನೀಡದೇ ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳಲ್ಲೂನಿರತರಾಗಿದ್ದು ಸಾಹಿತ್ಯಿಕವಾಗಿಯೂ ಅನೇಕ ಕಾರ್ಯಕ್ರಮಗಳ ರೂಪುರೇಷೆಗಳನ್ನುಸಿದ್ದಪಡಿಸಿ ಯಶಸ್ವಿಗೊಳಿಸಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ರೇವಣಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
05-05-1962
Place :
ಶ್ರೀನಿವಾಸ ಸರಡಗಿ, ಕಲಬುರಗಿ ತಾ||
Pattadikara :
16-06-1989
Photo :
Programs
ಪುಷ್ಯ ಮಾಸ ಅಷ್ಠಮಿಗೆ ಕರ್ತೃ ಶ್ರೀ.ಷ.ಬ್ರ. ಚಿಕ್ಕವೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ ಹಾಗೂ ಸಾಹಿತ್ಯ ಸಮ್ಮೇಳನ, ನೇತ್ರ ಚಿಕಿತ್ಸಾ ಶಿಬಿರ, ರಕ್ತದಾನ ಶಿಬಿರ, ಇನ್ನೂ ಮುಂತಾದ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು
Photos
Full Address Kannada
ಶ್ರೀಸುಲ್ತಾನಪುರ ಹಿರೇಮಠ
ಶ್ರೀನಿವಾಸ ಸರಡಗಿ - 585 102
ಕಲಬುರಗಿ ತಾ||, ಜಿಲ್ಲೆ