Shree Sulaphala Matha – Kalaburgi

Shree Sulaphala Matha – Kalaburgi Claimed

ಶ್ರೀ ಸುಲಫಲ್ ಮಠ - ಕಲಬುರಗಿ

Average Reviews

Description

ಶ್ರೀ ಸುಲಫಲ್ ಮಠ – ಕಲಬುರಗಿ

ಕರ್ತೃ – ಶ್ರೀ ಷ.ಬ್ರ. ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು

ಕಲಬುರಗಿ ನಗರದ ಶಾಹಾಬಜಾರ್ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಶ್ರೀಸುಲಫಲ್ ಮಠವು ಸುಮಾರು ನಾಲ್ಕುನೂರು ವರ್ಷಕ್ಕೂ ಅಧಿಕ ಇತಿಹಾಸವನ್ನುಹೊಂದಿದ್ದು ನಗರದ ಪ್ರಮುಖ ಮಠಗಳಲ್ಲಿ ಒಂದಾಗಿ ಬೆಳೆದಿದೆ. ಶ್ರೀ ಮಠವು ಹದಿನೈದನೇಶತಮಾನದ ಸುಮಾರಿಗೆ ಸುಲಫಲಪುರದಲ್ಲಿ ಸ್ಥಾಪಿತಗೊಂಡು ನಂತರದ ಕಾಲಘಟ್ಟದಲ್ಲಿಇಲ್ಲಿಗೆ ಎರಡು ತಲೆಮಾರುಗಳ ಹಿಂದೆ ಕಲಬುರಗಿ ನಗರಕ್ಕೆ ಸ್ಥಳಾಂತರಗೊಂಡಿದ್ದರಿಂದ ಶ್ರೀಮಠಕ್ಕೆ ಶ್ರೀ ಸುಲಫಲ್ ಮಠವೆಂದು ಕರೆಯಲಾಗುತ್ತದೆ.ಶ್ರೀ ಸುಲಫಲ್ ಮಠದ ಕರ್ತೃಗುರುಗಳೆಂದು ಶ್ರೀ. ಷ.ಬ್ರ. ಮಹಾಂತಶಿವಾಚಾರ್ಯ ಮಹಾಸ್ವಾಮಿಗಳನ್ನು ಗುರುತಿಸಲಾಗಿದ್ದು ಶ್ರೀಗಳು ಬಳ್ಳಾರಿ ಜಿಲ್ಲೆತಂಬರಹಳ್ಳಿಯ ತೆಗ್ಗಿನಕೆರೆ ಹಿರೇಮಠದವರು. ಕರ್ತೃಗಳು ಲೋಕಸಂಚಾರಕ್ಕೆ ಹೊರಟುದೇಶದ ನಾನಾ ಭಾಗಗಳಲ್ಲಿ ಸಂಚರಿಸಿ ಸುಲಫಲ್ಪುರಕ್ಕೆ ಬಂದು ನೆಲೆಸುತ್ತಾರೆ. ಗುರುಗಳುಇಲ್ಲಿಗೆ ಬರುವ ಮೊದಲು ಸುಲ್ತಾನ್ಪುರ, ರಾಜಾಪುರ, ಚಿಕ್ಕಲಿಂಗದಳ್ಳಿ, ಪೇಟೆಶಿರೂರುಮುಂತಾದ ಗ್ರಾಮಗಳಲ್ಲಿ ನೆಲೆನಿಂತು ಧರ್ಮ ಪ್ರಚಾರ ಕೈಗೊಂಡು ಅಲ್ಲೆಲ್ಲಾ ಮಠಗಳನ್ನುಸ್ಥಾಪಿಸಿರುತ್ತಾರೆ. ಸುಲಫಲ್ಪುರಕ್ಕೆ ಆಗಮಿಸಿದ ಶ್ರೀಗಳು ಇಲ್ಲಿ ಶ್ರೀಮಠವನ್ನು ಸ್ಥಾಪಿಸಿ ತಮ್ಮಕರ್ತೃತ್ವ ಶಕ್ತಿಯಿಂದ ಮುನ್ನಡೆಸಿದ್ದರು.ಹೀಗೆ ಶ್ರೀ. ಷ.ಬ್ರ. ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳಿಂದಸ್ಥಾಪಿತಗೊಂಡ ಶ್ರೀಮಠದ ಪರಂಪರೆಯಲ್ಲಿ ಒಟ್ಟು 20 ಜನ ಗುರುಗಳು ಅಧಿಕಾರನಡೆಸಿದ್ದಾರೆಂದು ಹೇಳಲಾಗುತ್ತದೆ. ಈ ಮಠದ ಪರಂಪರೆಯಲ್ಲಿ ಶ್ರೀ ಷ.ಬ್ರ. ಮಹಾಂತಶಿವಾಚಾರ್ಯರು, ಶ್ರೀ ಷ.ಬ್ರ. ಚನ್ನವೀರ ಶಿವಚಾರ್ಯರು ಹಾಗೂ ಶ್ರೀ ಷ.ಬ್ರ. ಗುರುಲಿಂಗಶಿವಾಚಾರ್ಯರು ಈ ಮೂರು ಹೆಸರುಗಳನ್ನೇ ಪಟ್ಟಾಧೀಕಾರದ ಸಂದರ್ಭದಲ್ಲಿ ಅಭಿದಾನಪಡೆದುಕೊಳ್ಳುತ್ತಿರುವ ಕಾರಣ ಮಠದ ಪರಂಪರೆಯು ಈ ಮೂರು ಹೆಸರುಗಳಲ್ಲಿ ಬೆಳೆದುಬಂದಿದೆ. ಸುಲಫಲ್ಪುರ ಗ್ರಾಮದಲ್ಲಿ ಅಸ್ತಿತ್ವದಲ್ಲಿದ್ದ ಶ್ರೀಮಠವು ಹದಿನೇಳನೆಯಗುರುಗಳಾದ ಶ್ರೀ. ಷ.ಬ್ರ. ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳ ತನಕ ಅಲ್ಲಿಯೇಮುಂದುವರೆದಿದ್ದು ಹದಿನೆಂಟನೇ ಗುರುಗಳಾದ ಶ್ರೀ. ಷ.ಬ್ರ. ಗುರುಲಿಂಗ ಶಿವಚಾರ್ಯಮಹಾಸ್ವಾಮಿಗಳ ಕಾಲದಲ್ಲಿ ಕಲಬುರಗಿ ನಗರದ ಶಹಾಬಜಾರ ಪ ್ರದೇಶಕ್ಕೆಸ್ಥಳಾಂತರಗೊಂಡಿದೆ.ಮೊದಲಿನಿಂದಲೂ ಕಲಬುರಗಿ ನಗರದಲ್ಲಿ ಶ್ರೀ ಸುಲಫಲ್ ಮಠದಶಾಖಾಮಠವು ಅಸ್ತಿತ್ವದಲ್ಲಿದ್ದು ಶ್ರೀಮಠದ ಮೂಲ ಮಠವು ಇಲ್ಲಿಗೆ ಸ್ಥಳಾಂತರಗೊಂಡನಂತರ ಕಲಬುರಗಿ ನಗರದ ಮಠವು ಕೇಂದ್ರಮಠವಾಗಿ ಅಭಿವೃದ್ಧಿಗೊಂಡಿದೆ. ಧಾರ್ಮಿಕಆಚರಣೆಗಳಿಗೆ ಮಾತ್ರ ಸೀಮಿತಗೊಂಡಿದ್ದ ಇಲ್ಲಿನ ಕಾರ್ಯಚಟುವಟಿಕೆಗಳು ಕೇಂದ್ರಮಠವಾದ ನಂತರ ವೀರಶೈವರ ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಚಟುವಟಿಕೆಗಳಕೇಂದ್ರ ಬಿಂದುವಾಗಿ ಬೆಳೆಯಿತು.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಡಾ|| ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳುಶ್ರೀಮಠದ ಪಟ್ಟಕ್ಕೆ ಬಂದ ನಂತರ ಶ್ರೀಮಠವು ಸರ್ವತೋಮುಖವಾಗಿ ಅಭಿವೃದ್ದಿಗೊಂಡಿದೆ.ಶ್ರೀಗಳು ಅತ್ಯಂತ ಚಿಕ್ಕವಯಸ್ಸಿನಲ್ಲಿ ಶ್ರೀಮಠದ ಪಟ್ಟಾಧಿಕಾರಿಗಳಾಗಿ ಜವಾಬ್ದಾರಿವಹಿಸಿಕೊಂಡಾಗ ಖಾಲಿ ಮಠದ ಹಳೆಯ ಕಟ್ಟಡ ಮಾತ್ರವಿತ್ತು. ಆದರೆ ಇದೀಗಸುವರ್ಣರಂಜಿತ ಬೃಹತ್ ಪ್ರಮಾಣದ ಶ್ರೀಮಠವು ಬೆಳೆದು ನಿಂತಿದೆ. “ಮಠದಿಂದಸ್ವಾಮಿಯಾಗಬಾರದು, ಸ್ವಾಮಿಯಿಂದ ಮಠವಾಗಬೇಕೆನ್ನುವ” ಎಂಬ ಸಂದೇಶವನ್ನುಸಾರುತ್ತಿದ್ದಾರೆ ಈಗಿನ ಶ್ರೀಗಳು.“ಬಸವಣ್ಣನೇ ತಂದೆ-ತಾಯಿ, ಬಸವಣ್ಣನೇ ಬಂಧು-ಬಳಗ”ವೆಂದು ಹೇಳುವಮೂಲಕ ಪಂಚಪೀಠಗಳ ಶಾಖಾ ಮಠವೊಂದರ ಪಟ್ಟಾಧಿಕಾರಿಯಾಗಿರುವ ಶ್ರೀ ಷ.ಬ್ರ. ಡಾ||ಮಹಾಂತ ಶಿವಾಚಾರ್ಯರು ವಿನೂತನವಾದ ವಿಚಾರಕ್ರಾಂತಿಯನ್ನೇ ಮಾಡುತ್ತಿದ್ದಾರೆ.ಗುರುಸ್ತಲ-ವಿರಕ್ತ ಎಂಬ ಸೀಮೆ ಉಲ್ಲಂಘಿಸಿ, ಪಂಚಾಚಾರ್ಯರು – ಬಸವಣ್ಣನವರುಎಂಬ ಅಂತರವನ್ನು ಕಡಿಮೆಗೊಳಿಸಿ ಗುರು ವಿರಕ್ತರೊಂದೆಯೆಂಬ ಸಮತೆ ಸಾರಿದಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳ ಕನಸನ್ನು ಸಾಕಾರಗೊಳಿಸಿ, ತಮ್ಮ ಮೊನಚಾದವಿಚಾರದಾರೆಯಿಂದ ಭಕ್ತರ ಬಾಳು ಬೆಳಗುತ್ತಿರುವ ಮಹನೀಯರು ಶ್ರೀ ಷ.ಬ್ರ. ಡಾ||ಮಹಾಂತ ಶಿವಾಚಾರ್ಯರು.ಶ್ರೀ ಷ.ಬ್ರ. ಡಾ|| ಮಹಾಂತ ಶಿವಾಚಾರ್ಯರು ಜ್ಯಾತಾತೀತಮನೋಭಾವನೆಯನ್ನು ಹೊಂದಿ ಸರ್ವರೂ ಸಮಾನವಾಗಿ ಬದುಕಬೇಕು ಎಂಬಮನೋಭಾವನೆಯನ್ನು ಹೊಂದಿ ವೀರಶೈವ ಧರ್ಮವನ್ನು ನಿಜವಾದ ಅರ್ಥದಲ್ಲಿಬೆಳೆಸುತ್ತಿದ್ದಾರೆ. ಶ್ರೀಗಳು ಪ್ರತಿ ವರ್ಷದ ಭಾದ್ರಪದ ಮಾಸ ಬಹುಳ ತೃತೀಯದಂದು ಹಿಂದಿನಶ್ರೀಗಳಾದ ಲಿಂ. ಶ್ರೀ. ಷ.ಬ್ರ. ಚನ್ನವೀರ ಶಿವಯೋಗಿಗಳ ಪುಣ್ಯಾರಾಧನೆ ಕಾರ್ಯಕ್ರಮವನ್ನುಹಮ್ಮಿಕೊಳ್ಳುತ್ತಿದ್ದು ಆ ಸಮಯದಲ್ಲಿ ಆರೋಗ್ಯ ಶಿಬಿರ, ಮಹಿಳಾ ಗೋಷ್ಠಿ, ನಗೆ ಹಬ್ಬ, ಕೃಷಿಗೋಷ್ಠಿ, ಮಠಾಧೀಶರ ಸಮ್ಮೇಳನ, ಮಕ್ಕಳ ಗೋಷ್ಠಿ, ಸಾಮೂಹಿಕ ವಿವಾಹಗಳು ಹೀಗೆಹನ್ನೊಂದು ದಿನಗಳ ಪರ್ಯಂತ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನುನಡೆಸುತ್ತಾರೆ. ಶ್ರೀಮಠದಲ್ಲಿ ಪ್ರತಿ ವರ್ಷ ಬಸವಾದಿ ಶಿವಶರಣರ ಜಯಂತಿಗಳನ್ನುಆಚರಿಸಿಕೊಂಡು ಬರಲಾಗುತ್ತಿದೆ.

Swamiji

Swamiji Name :
ಶ್ರೀ ಷ.ಬ್ರ. ಡಾ. ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು
Place :
ಗುಳನೂರು, ಅಫಜಲಪುರ ತಾ||
Photo :

Programs

ಭಾದ್ರಪದ ಮಾಸ ಬಹುಳ ತೃತೀಯದಂದು ಲಿಂ|| ಶ್ರೀ ಷ.ಬ್ರ. ಚನ್ನವೀರ ಶಿವಯೋಗಿಗಳ ಪುಣ್ಯಸ್ಮರಣೋತ್ಸವ
ನಿಮಿತ್ಯ, ಆರೋಗ್ಯ ಶಿಬಿರ, ಮಹಿಳಾ ಗೋಷ್ಠಿ, ಕೃಷಿ ಮೇಳ, ಮಕ್ಕಳ ಗೋಷ್ಠಿ, ನಗೆ ಹಬ್ಬ, ಮಠಾದೀಶರ ಗೋಷ್ಠಿ (ಸಮ್ಮೇಳನ), ಸಾಮೂಹಿಕ ವಿವಾಹಗಳು ಹಾಗೂ 11 ದಿನಗಳ ಕಾಲ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು ಶ್ರೀ ಬಸವೇಶ್ವರ ಜಯಂತಿ, ಕನಕದಾಸ ಜಯಂತಿ, ವಾಲ್ಮೀಕಿ ಜಯಂತಿ, ಅಂಬೇಡ್ಕರ್ ಜಯಂತಿ, ಈದ್ ಮಿಲಾದ್, ಅಂಬಿಗರ ಚೌಡಯ್ಯ ಜಯಂತಿ ಆಚರಣೆ

Institutions

ಐ.ಟಿ.ಐ. ಕಾಲೇಜು ವಿದ್ಯಾರ್ಥಿ ನಿಲಯ

Photos

Full Address Kannada

ಶ್ರೀ ಸುಲಫಲ್ ಮಠ
ಶಹಾಬಜಾರ್, ಕಲಬುರಗಿ - 585 101

Map

Near by Places

ಬಸ್ಸ್ಟ್ಯಾಂಡ್ - 4 ಕಿ.ಮೀ.
ರೈಲ್ವೇ ನಿಲ್ದಾಣ - 4 ಕಿ.ಮೀ.

Statistic

3 Views
0 Rating
0 Favorite
0 Share
error: Content is protected !!