Shree Sugureshwara Matha

Shree Sugureshwara Matha Claimed

ಶ್ರೀ ಸೂಗೂರೇಶ್ವರ ಮಠ

Average Reviews

Description

ಶ್ರೀ ಸೂಗೂರೇಶ್ವರ ಮಠ

ಕರ್ತೃ – ಶ್ರೀ ಷ.ಬ್ರ. ಗುರುಲಿಂಗೇಶ್ವರ ಮಹಾಸ್ವಾಮಿಗಳು

ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ನಗನೂರು ಗ್ರಾಮದಿಂದ ಸುಮಾರುಒಂದು ಕಿ.ಮೀ. ಅಂತರದಲ್ಲಿರುವ ಗುಡ್ಡದ ಮೇಲೆ ಸ್ಥಾಪಿತಗೊಂಡಿರುವ ಶ್ರೀ ಸೂಗೂರೇಶ್ವರಮಠವು ಶ್ರೀಮದ್ ಉಜ್ಜಯಿನಿ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿಬೆಳೆದು ಬಂದಿದೆ. ಶ್ರೀಮಠದ ಇತಿಹಾಸದ ಬಗ್ಗೆ ಹಾಗೂ ಪ್ರಾಚೀನತೆಯ ಬಗ್ಗೆ ಸ್ಪಷ್ಟಮಾಹಿತಿಗಳ ಅಲಭ್ಯತೆಯಿಂದ ದಾಖಲಿಸಲು ಸಾಧ್ಯವಾಗುವುದಿಲ್ಲ. ಪುರಾತನ ಕಾಲದಲ್ಲಿ ಶ್ರೀಸೂಗೂರೇಶ್ವರರು ಲೋಕಸಂಚಾರದಲ್ಲಿದ್ದಾಗ ನಗನೂರಿಗೆ ಆಗಮಿಸಿ ಶ್ರೀಮಠವನ್ನುಸ್ಥಾಪಿಸಿದರು ಎನ್ನಲಾಗುತ್ತದೆ. ಆದರೆ ಅನಂತರ ಬಂದಿರಬಹುದಾದ ಗುರುಗಳ ಬಗ್ಗೆಸ್ಪಷ್ಟತೆಯಿಲ್ಲ.ಬಹುಶಃ ದೀರ್ಘ ಕಾಲ ಖಾಲಿ ಉಳಿದಿರುವ ಶ್ರೀಮಠವನ್ನು ಶ್ರೀ ಷ.ಬ್ರ.ಗುರುಲಿಂಗೇಶ್ವರ ಮಹಾಸ್ವಾಮಿಗಳು ಜೀರ್ಣೋದ್ಧಾರ ಮಾಡಿ ತಮ್ಮ ಧಾರ್ಮಿಕ ಆಚರಣೆಗಳಮೂಲಕ ಪ್ರಚಲಿಕ್ಕೆ ತಂದಿದ್ದಾರೆ. ಆದ್ದರಿಂದ ಶ್ರೀ ಗುರುಲಿಂಗೇಶ್ವರ ಶಿವಾಚಾರ್ಯರನ್ನೇಶ್ರೀಮಠದ ಕರ್ತೃಗುರುಗಳೆಂದು ಪರಿಗಣಿಸಲಾಗಿದೆ. ಶ್ರೀಗಳು ಭಕ್ತರ ಸಹಕಾರದೊಂದಿಗೆಶ್ರೀಮಠವನ್ನು ಅಭಿವೃದ್ಧಿಗೊಳಿಸಿದ್ದು ಅಪಾರ ಸಂಖ್ಯೆಯ ಭಕ್ತರನ್ನು ಶ್ರೀಮಠಕ್ಕೆ ಸೆಳೆದಿದ್ದಾರೆ.ಶ್ರೀ ಗುರುಲಿಂಗೇಶ್ವರ ಶಿವಾಚಾರ್ಯರ ನಂತರ ಶ್ರೀಮಠದ ಉತ್ತರಾಧಿಕಾರಿಗಳಾಗಿನೇಮಕಗೊಂಡವರು ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಸೂಗೂರೇಶ್ವರ ಶಿವಾಚಾರ್ಯಸ್ವಾಮಿಗಳು. ಶ್ರೀಗಳು ಶ್ರೀಮಠಕ್ಕೆ ನೇಮಕಗೊಂಡು ನಂತರ ಮೈಸೂರಿನ ಸುತ್ತೂರು ಮಠದಗುರುಕುಲದಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ಶ್ರೀಮಠದ ಪಟ್ಟಾಧಿಕಾರವನ್ನು 2005ರನವೆಂಬರ್ 23ರಲ್ಲಿ ಸ್ವೀಕರಿಸಿದ್ದಾರೆ.ಶ್ರೀಗಳು ಪರಂಪರೆಯ ಗುರುಗಳಂತೆಯೇ ಶ್ರೀಮಠದ ಧಾರ್ಮಿಕ ಆಚರಣೆಗಳನ್ನುಮುಂದುವರೆಸಿಕೊಂಡು ಬಂದಿದ್ದು, ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.ಶ್ರೀಮಠದಲ್ಲಿ ಛಟ್ಟಿ ಅಮವಾಸ್ಯೆ ನಂತರದ ಪಂಚಮಿಯಿಂದ ವತ್ಸಲ ಹುಣ್ಣಿಮೆಯವರೆಗೆಪುರಾಣ ಪ್ರವಚನಗಳನ್ನು ನಡೆಸುತ್ತಿದ್ದು ಕೊನೆಯ ದಿನ ಕುಂಭ ಮೆರವಣಿಗೆಯೊಂದಿಗೆಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.

Swamiji

Swamiji Name :
ಶ್ರೀ ಷ.ಬ್ರ. ಸೂಗೂರೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
19-7-1981
Place :
ನಗನೂರು, ಸುರಪುರ ತಾ||
Pattadikara :
23-11-2005
Photo :

Programs

ಛಟ್ಟ್ಟಿ ಅಮವಾಸ್ಯೆ ಪಂಚಮಿಂiÀಂದು ಪುÀರಾಣ ಪ್ರವಚನ ಕಾರ್ಯಕ್ರಮ.
ವತ್ಸಲ ಹುಣ್ಣಿಮೆ ದಿನದಂದು ಪುರಾಣ ಮಹಾ ಮಂಗಳ ಹಾಗೂ
ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ಕುಂಭ ಮೆರವಣಿಗೆ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ವಿಶೇಷ ಪೂಜೆ
ಮತ್ತು ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ,
ಕೊನೆಯ ಮಂಗಳವಾರದಂದು “ಪರ್ವ” ಕಾರ್ಯಕ್ರಮ.

Institutions

ಪೂರ್ವ / ಕಿರಿಯ ಪ್ರಾಥಮಿಕ ಶಾಲೆ.

Photos

Full Address Kannada

ಶ್ರೀ ಸೂಗೂರೇಶ್ವರ ಮಠ
ನಗನೂರು - 585 216
ಸುರಪುರ ತಾ||, ಯಾದಗಿರಿ ಜಿ||

Map

Near by Places

ನಗನೂರು - 1 ಕಿ.ಮೀ.
ಕೆಂಭಾವಿ - 8 ಕಿ.ಮೀ.
ಸುರಪುರ - 30 ಕಿ.ಮೀ.
ಶಹಾಪುರ - 30 ಕಿ.ಮೀ.

Statistic

149 Views
0 Rating
0 Favorite
0 Share
error: Content is protected !!