ಶಿಗ್ಗಾಂವ ತಾಲ್ಲೂಕು ಕೇಂದ್ರದಿಂದ 25 ಕಿ.ಮೀ. ದೂರದಲ್ಲಿರುವ ಹೋತನಹಳ್ಳಿಗ್ರಾಮದಲ್ಲಿ ಶ್ರೀ ಸಿಂಧಗಿ ಮಠವು ಸ್ಥಾಪಿತಗೊಂಡಿದ್ದು ಈ ಭಾಗದ ಜನರ ಧಾರ್ಮಿಕಆಚರಣೆಗಳ ಕೇಂದ್ರಬಿಂದುವಾಗಿದೆ ಹಾಗೂ ಶ್ರೀ ಮಠವು ಶ್ರೀ ರಂಭಾಪುರಿ ಪೀಠದಶಾಖಾಮಠವಾಗಿದ್ದರೂ ಗುರುವಿರಕ ್ತರ ಸಮನ್ವತೆಯ ಧಾರ್ಮಿಕ ಕೇಂದ ್ರವಾಗಿಕಂಗೊಳಿಸುತ್ತಿದೆ. ಇದಕ್ಕೆ ಕಾರಣ ಶ್ರೀ ಸಿಂಧಗಿ ಶಾಂತವೀರ ಪಟ್ಟಾಧ್ಯಕ್ಷರು.ಶ್ರೀ ಸಿಂಧಗಿ ಪಟ್ಟಾಧ್ಯಕ್ಷರು ಎಂದಾಕ್ಷಣ ನೆನಪಾಗುವುದು ಶ್ರೀ ಹಾನಗಲ್ಲು ಕುಮಾರಸ್ವಾಮಿಗಳು ಹಾಗೂ ಹಾವೇರಿ ಹುಕ್ಕೇರಿ ಮಠದ ಶ್ರೀ ಶಿವಬಸವ ಸ್ವಾಮಿಗಳು. ಶ್ರೀ ಸಿಂಧಗಿಪಟ್ಟಾದ್ಯಕ್ಷರು ಈ ಇಬ್ಬರೂ ಮಹಾಮಹಿಮರ ಶಿಷ್ಯೋತ್ತಮರಾಗಿದ್ದು ಅವರ ನಂತರದಕಾಲಘಟ್ಟದಲ್ಲಿ ವೀರಶೈವ ಸಮಾಜದ ಏಳಿಗೆಗಾಗಿ ತಮ್ಮನ್ನೇ ಅರ್ಪಿಸಿಕೊಂಡಿದ್ದವರು.ಹಾಗೆಯೇ ಸಮಾಜದ ಕೆಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮಾರ್ಗವಾಗಿದ್ದರು.ಶ್ರೀ ಸಿಂಧಗಿ ಪಟ್ಟಾದ್ಯಕ್ಷರು ಹುಕ್ಕೇರಿ ಮಠದಿಂದ ಹೊರಬಂದು ಶ್ರೀ ಕುಮಾರೇಶ್ವರಧಾರ್ಮಿಕ ಪಾಠಶಾಲೆಯನ್ನು ಹಾವೇರಿಯಲ್ಲಿ ಸ್ಥಾಪಿಸಿ ವೀರಶೈವ ಸಮಾಜದ ವಟುಗಳನ್ನುಧಾರ್ಮಿಕ ತಳಹದಿಯ ಮೇಲೆ ಸಿದ್ಧಗೊಳಿಸಿದವರು. ಇದರ ಫಲಾನುಭವಿಗಳು ಇಂದುರಾಜ್ಯದ ತುಂಬೆಲ್ಲಾ ಮಠಗಳಿಗೆ ಮಠಾಧೀಶರಾಗಿ ಹಂಚಿಹೋಗಿದ್ದಾರೆ. ಇಂತಹ ಪುಣ್ಯಪುರುಷರು 1975ರಲ್ಲಿ ಹೋತನಹಳ್ಳಿಯಲ್ಲಿ ಶ್ರೀ ಸಿಂಧಗಿ ಮಠವನ್ನು ಸ್ಥಾಪಿಸಿದ್ದು ಈ ಭಾಗದಜನರಿಗೆ ಹೆಮ್ಮೆಯ ಸಂಗತಿ.ಈಗಿನ ಶ್ರೀಗಳಾದ ಶ್ರೀ ಶಂಭುಲಿಂಗ ಪಟ್ಟಾಧ್ಯಕ್ಷರು 2001ರಲ್ಲಿ ಶ್ರೀಮಠದಪಟ್ಟಾಧಿಕಾರ ವಹಿಸಿಕೊಂಡು ಮಠವನ್ನು ಮುನ್ನಡೆಸುತ್ತಿದ್ದಾರೆ. ಶ್ರೀಗಳನ್ನು ಹಾವೇರಿಯ ಶ್ರೀಸಿಂಧಗಿ ಮಠದ ಆಡಳಿತವನ್ನು ನೋಡಿಕೊಳ್ಳುತ್ತಿರುವ ಗದಗಿನ ತೋಂಟದಾರ್ಯ ಮಠದಶ್ರೀ ಡಾ. ತೋಂಟದಾರ್ಯ ಸ್ವಾಮಿಗಳು 1992ರಲ್ಲಿ ನೇಮಿಸಿದ್ದಾರೆ. ಶ್ರೀ ಶಂಭುಲಿಂಗಪಟ್ಟಾಧ್ಯಕ್ಷರು ಶ್ರೀಮಠವನ್ನು ಅಭಿವೃದ್ಧಿಗೊಳಿಸಿ ಹೊಸ ಸಹಸ್ರಮಾನದಲ್ಲಿ ಮಠದಆಡಳಿತವನ್ನು ವಹಿಸಿಕೊಂಡು ಮುನ್ನಡೆದಿದ್ದಾರೆ. ಶ್ರೀಮಠದಲ್ಲಿ ಯುಗಾದಿಯಲ್ಲಿ 15 ದಿನಗಳಕಾಲ ಪುರಾಣ ಹಾಗೂ ಸಾಮೂಹಿಕ ವಿವಾಹಗಳು ನಡೆಯುತ್ತವೆ.
Swamiji
Swamiji Name :
ಶ್ರೀ ಮ.ಘ.ಚ. ಶಂಭುಲಿಂಗ ಪಟ್ಟಾಧ್ಯಕ್ಷರು
Date of Birth :
27-7-1960
Place :
ಸಿಂಧಗಿ, ಸಿಂಧಗಿ ತಾ||
Pattadikara :
2001
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ.
ಯುಗಾದಿಯಲ್ಲಿ 15 ದಿನ ಪುರಾಣ,
ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಕಾರ್ಯಕ್ರಮಗಳು
Photos
Full Address Kannada
ಶ್ರೀ ಸಿಂಧಗಿ ಮಠ
ಹೋತನಹಳ್ಳಿ- 581 203
ಶಿಗ್ಗಾಂವ ತಾ., ಹಾವೇರಿ ಜಿ.