Shree Siddeshwara Samsthana Kattimani Hirematha

Shree Siddeshwara Samsthana Kattimani Hirematha Claimed

ಶ್ರೀ ಸಿದ್ದೇಶ್ವರ ಸಂಸ್ಥಾನ ಕಟ್ಟೀಮನಿ ಹಿರೇಮಠ

Average Reviews

Description

ಶ್ರೀ ಸಿದ್ದೇಶ್ವರ ಸಂಸ್ಥಾನ ಕಟ್ಟೀಮನಿ ಹಿರೇಮಠ

ಕರ್ತೃ – ಶ್ರೀ ಷ.ಬ್ರ. ಸಿದ್ದಪ್ಪಯ್ಯ ಶಿವಾಚಾರ್ಯ ಸ್ವಾಮಿಗಳು

ಕೊಪ್ಪಳ ತಾಲ್ಲೂಕಿನ ಅಳವಂಡಿ ಗ್ರಾಮದಲ್ಲಿ ಶ್ರೀ ಷ.ಬ್ರ.ಸಿದ್ದಪ್ಪಯ್ಯ ಶಿವಾಚಾರ್ಯಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಸಿದ್ದೇಶ್ವರ ಸಂಸ್ಥಾನ ಕಟ್ಟಿಮನಿ ಹಿರೇಮಠವುಅಸ್ತಿತ್ವದಲ್ಲಿದ್ದು ಈ ಭಾಗದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದೆ.ಪ್ರಾಚೀನ ಕಾಲದ್ದೆಂದು ಹೇಳಲಾದ ಶ್ರೀಮಠವು ಉಜ್ಜಯಿನಿ ಪೀಠದ ಶಾಖಾಮಠವಾಗಿಪುತ್ರವರ್ಗದ ಸಂಪ್ರದಾಯದಲ್ಲಿ ಬೆಳೆದುಬಂದಿದೆ.ಕರ್ತೃಗುರುಗಳಾದ ಶ್ರೀ ಸಿದ್ದಪ್ಪಯ್ಯ ಶಿವಾಚಾರ್ಯ ಸ್ವಾಮಿಗಳು ಮಹಾಮಹಿಮರಾಗಿದ್ದು ತಪೋನಿಷ್ಠರಾಗಿದ್ದರು ಎಂದು ತಿಳಿದುಬರುತ್ತದೆ. ಶ್ರೀಗಳು ಸಿದ್ಧಾಂತ ಶಿಖಾಮಣಿ,ಷಟ್ಸ್ಥಳ, ಅಷ್ಟಾವರಣ ಮತ್ತು ಪಂಚಾಚಾರಗಳ ಬಗ್ಗೆ ಉಪದೇಶ ಮಾಡುತ್ತಾ ಭಕ್ತರಿಗೆವೀರಶೈವ ಧರ್ಮದ ಬಗ್ಗೆ ಆಳವಾದ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದರು.ಶ್ರೀಗಳಿಗೆ ಅಪಾರವಾದ ಭಕ್ತಸಮೂಹ ಇದ್ದು, ಶಿಷ್ಯವರ್ಗವು ಅಪಾರ ಸಂಖ್ಯೆಯಲ್ಲಿತ್ತು ಎಂದುತಿಳಿದುಬರುತ್ತದೆ. ಶ್ರೀಗಳ ಶಿಷ್ಯವರ್ಗವು ಶ್ರೀಗಳ ಅಪ್ಪಣೆಯಂತೆ ಶ್ರೀಮಠದ ಅಭಿವೃದ್ಧಿಕಾರ್ಯಗಳನ್ನು ಕೈಗೊಂಡು ಶ್ರೀಮಠವು ಆರ್ಥಿಕವಾಗಿ ಸಬಲಗೊಳ್ಳುವಂತೆ ಮಾಡಿದ್ದಾರೆ.ಕರ್ತೃಗುರುಗಳ ನಂತರ ಪರಂಪರೆಯ ಬಗ್ಗೆ ನಿಖರತೆ ಇಲ್ಲ. ಹಿಂದಿನ ಶ್ರೀಗಳಾದಶ್ರೀ ಸಿದ್ದಲಿಂಗ ಶಿವಾಚಾರ್ಯರು ಶ್ರೀಮಠದ ಆಡಳಿತವನ್ನು ವಹಿಸಿಕೊಂಡು ಮಠವನ್ನುಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸಲು ಶ್ರಮಿಸಿದ್ದಾರೆ. ಶ್ರೀ ಸಿದ್ದಲಿಂಗ ಶಿವಾಚಾರ್ಯರುಸೋಲಾಪುರ ಮತ್ತು ಕಾಶಿಯಲ್ಲಿ ವಿದ್ಯಾಭ್ಯಾಸ ಮಾಡಿ ಶ್ರೀಮಠಕ್ಕೆ ಆಗಮಿಸಿದವರು.ಶ್ರೀಗಳು ಮಾಘಮಾಸದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿ ರಥೋತ್ಸವವು ಜರುಗುವ ವ್ಯವಸ್ಥೆಮಾಡಿದ್ದು ಜೊತೆಗೆ ಶ್ರೀಮಠದ ಆಸ್ತಿಯನ್ನು ಅಭಿವೃದ್ಧಿಗೊಳಿಸಿ ಶ್ರೀಮಠದ ಆರ್ಥಿಕ ಪರಿಸ್ಥಿತಿಸುಧಾರಿಸಿದ್ದಾರೆ. ಶ್ರೀಗಳು ಲಿಂಗೈಕ್ಯರಾದ ನಂತರ ಕೆಲಕಾಲ ಶ್ರೀಮಠವು ಖಾಲಿ ಉಳಿದಿದೆ.ಈಗಿನ ಶ್ರೀಗಳಾದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು 2005ರ ಫೆಬ್ರವರಿ14ರಂದು ಶ್ರೀಮಠಕ್ಕೆ ಪಟ್ಟಾಧಿಕಾರಗೊಂಡಿದ್ದು ಶ್ರೀಮಠದ ಧಾರ್ಮಿಕ ಆಚರಣೆಗಳನ್ನುಚುರುಕುಗೊಳಿಸಿದರು. ಶ್ರೀಗಳು ಯುವಕರಾಗಿದ್ದು ಹೆಚ್ಚು ಕ್ರಿಯಾಶೀಲರಾಗಿ ಭಕ್ತರಸಹಕಾರದೊಂದಿಗೆ ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
10-10-1992
Place :
ಅಳವಂಡಿ, ಕೊಪ್ಪಳ ತಾ||
Pattadikara :
14-2-2005
Photo :

Programs

ಅಮವಾಸ್ಯೆಗೆ ರುದ್ರಾಭಿಷೇಕ ಮತ್ತು ವಿಶೇಷ ಪೂಜೆ.
ಮಾಘ ಮಾಸದಲ್ಲಿ ಶ್ರೀಮಠದ ರಥೋತ್ಸವ ಹಾಗೂ ವಿವಿಧ ಧಾರ್ಮಿಕ,
ಸಾಂಸ್ಕøತಿಕ ಕಾರ್ಯಕ್ರಮಗಳು. ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ.
ದಸರಾದಲ್ಲಿ ಅಡ್ಡಪಲ್ಲಕ್ಕಿ ಉತ್ಸವ.

Photos

Full Address Kannada

ಶ್ರೀ ಸಿದ್ದೇಶ್ವರ ಸಂಸ್ಥಾನ
ಕಟ್ಟೀಮನಿ ಹಿರೇಮಠ ಅಳವಂಡಿ - 583226
ಕೊಪ್ಪಳ ತಾ||, ಜಿ||

Map

Near by Places

ಕೊಪ್ಪಳ - 30 ಕಿ.ಮೀ. ಮುಂಡರಗಿ - 10 ಕಿ.ಮೀ. ಗದಗ - 50 ಕಿ.ಮೀ.

Statistic

8 Views
0 Rating
0 Favorite
0 Share
error: Content is protected !!