ಚಾಮರಾಜನಗರ ಜಿಲ್ಲಾ ಕೇಂದ್ರದಿಂದ 22 ಕಿ.ಮೀ. ದೂರದಲ್ಲಿರುವಅರಕಲವಾಡಿ ಗ್ರಾಮದ ಮಧ್ಯಭಾಗದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಸಿದ್ದಮಲ್ಲೇಶ್ವರ ಪಟ್ಟದಮಠವು ಸೋಮನಹಳ್ಳಿ ಶ್ರೀ ಪಟ್ಟದ ಮಠದ ಶಾಖಾ ಮಠವಾಗಿದೆ. ತನ್ನ ವಿಶಿಷ್ಟ ಧಾರ್ಮಿಕ,ಸಾಮಾಜಿಕ ಕಾರ್ಯಚಟುವಟಿಕೆಗಳ ಮುಖಾಂತರ ಸಮಾಜದ ಉನ್ನತಿಗೆ ಶ್ರಮಿಸುತ್ತಿರುವಶ್ರೀ ಮಠವನ್ನು 1932ರಲ್ಲಿ ಪೂಜ್ಯ ಶ್ರೀ ಸಿದ್ದಮಲ್ಲಿಕಾರ್ಜುನ ಮಹಾಸ್ವಾಮಿಗಳು ಸ್ಥಾಪಿಸಿದ್ದಾರೆ.ಸೋಮನಹಳ್ಳಿಯಿಂದ ಸಂಚಾರ ಹೊರಟ ಶ್ರೀ ಸಿದ್ದಮಲ್ಲಿಕಾರ್ಜುನಮಹಾಸ್ವಾಮಿಗಳು ಈ ಪ್ರದೇಶಕ್ಕೆ ಆಗಮಿಸಿ ಅರಕಲವಾಡಿ ಗ್ರಾಮದ ಹೊರವಲಯದಲ್ಲಿಅನುಷ್ಠಾನದಲ್ಲಿದ್ದಾಗ ಭಕ್ತರ ಅಪೇಕ್ಷೆ ಮೇರೆಗೆ ಮಠವನ್ನು ಸ್ಥಾಪಿಸಿದರು. ತದ ನಂತರ ತಮ್ಮಆಚರಣೆಗಳ ಮೂಲಕ ಭಕ್ತರನ್ನು ಧರ್ಮ ಮಾರ್ಗದಲ್ಲಿ ಕೊಂಡೊಯ್ದ ಶ್ರೀಗಳು 1965ರಲ್ಲಿಊರ ಹೊರಗಿದ್ದ ಶ್ರೀ ಮಠವನ್ನು ಈಗಿರುವ ಸ್ಥಳಕ್ಕೆ ಸ್ಥಳಾಂತರಿಸಿದ್ದರು.ಕರ್ತೃ ಗುರುಗಳ ನಂತರ ಶ್ರೀಮಠಕ್ಕೆ ಶ್ರೀ ರಾಚಪ್ಪ ಸ್ವಾಮಿಗಳು ಬಂದು ನೆಲೆಸಿದ್ದುಕೆಲವು ವರ್ಷಗಳ ಕಾಲ ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಿದ್ದಾರೆ. ಇವರನಂತರ ಶ್ರೀಮಠವು ಸುಮಾರು 15 ವರ್ಷಗಳ ಕಾಲ ಖಾಲಿ ಉಳಿದಿದ್ದು ಆಗ ಗ್ರಾಮಸ್ಥರಕೋರಿಕೆಯಂತೆ ಸೋಮನಹಳ್ಳಿ ಶ್ರೀ ಪಟ್ಟದ ಮಠದ ಶ್ರೀ ಸಿದ್ದಮಲ್ಲ ಮಹಾಸ್ವಾಮಿಗಳು1997ರ ಆಗಸ್ಟ್ 27ರಂದು ಈಗಿನ ಶ್ರೀಗಳಾದ ಶ್ರೀ ಷ.ವೇ.ಬ್ರ. ಬಸವಣ್ಣ ಸ್ವಾಮಿಗಳನ್ನುಕರೆತಂದು ಶ್ರೀಮಠಕ್ಕೆ ಪಟ್ಟಾಧಿಕಾರದ ಅನುಗ್ರಹ ನೀಡಿದರು.ಪ್ರಸ್ತುತ ಶ್ರೀ ಬಸವಣ್ಣ ಸ್ವಾಮಿಗಳ ಕಾಲದಲ್ಲಿ ಶ್ರೀಮಠವುಜೀರ್ಣೋದ್ಧಾರಗೊಂಡಿದ್ದು ಧಾರ್ಮಿಕ ಆಚರಣೆಗಳು ಚುರುಕುಗೊಂಡಿವೆ. ಶ್ರೀಗಳುಶ್ರೀಮಠದಲ್ಲಿ ಸಭಾಭವನ, ಸಿದ್ದಮಲ್ಲೇಶ್ವರ ಕಲ್ಯಾಣಮಂಟಪ, ವಿದ್ಯಾರ್ಥಿ ನಿಲಯಗಳನ್ನುಪ್ರಾರಂಭಿಸಿದ್ದು ಊರಿನ ಭಕ್ತರಿಗೋಸ್ಕರ ಸಾರ್ವಜನಿಕ ಶೌಚಾಲಯಗಳನ್ನು ಕಟ್ಟಿಸಿದ್ದಾರೆ.ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಶ್ರಾವಣ ಮಾಸದಲ್ಲಿ ಪ್ರಸ್ತುತ ಶ್ರೀಗಳವರ್ದಂತಿ ಮಹೋತ್ಸವ ಕಾರ್ಯಕ್ರಮಗಳು ನಡೆಯುತ್ತಿದ್ದು ಕಾರ್ತಿಕ ಮಾಸದಲ್ಲಿಪ್ರವಚನವಿರುತ್ತದೆ.
Swamiji
Swamiji Name :
ಶ್ರೀ ಷ.ವೇ.ಬ್ರ. ಬಸವಣ್ಣ ಸ್ವಾಮಿಗಳು
Date of Birth :
1971
Place :
ದೊಡ್ಡರಾಯನಪೇಟೆ, ಚಾಮರಾಜನಗರ ತಾ||
Pattadikara :
27-08-1997
Photo :
Programs
ಶಿವರಾತ್ರಿ ಮಾಸದಲ್ಲಿ ಪ್ರಸ್ತುತ ಶ್ರೀಗಳ ವರ್ದಂತಿ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು (ಶಿವದೀಕ್ಷಾ ಕಾರ್ಯಕ್ರಮ) ಕಾರ್ತೀಕ ಮಾಸದಲ್ಲಿ ನಾಲ್ಕು ಸೋಮವಾರ ದೀಪೋತ್ಸವ ಮತ್ತು ಪ್ರವಚನ, ಭಜನೆ ಇತ್ಯಾದಿ ಕಾರ್ಯಕ್ರಮಗಳು ಬಸವ ಜಯಂತಿ ಆಚರಣೆ
Institutions
ವಿದ್ಯಾರ್ಥಿ ನಿಲಯ
Photos
Full Address Kannada
ಶ್ರೀ ಸಿದ್ದಮಲ್ಲೇಶ್ವರ ಪಟ್ಟದ ಮಠ
ಅರಕಲವಾಡಿ - 571 127
ಚಾಮರಾಜನಗರ ತಾ|| ಮತ್ತು ಜಿಲ್ಲೆ