Shree Siddalingeshwara Samsthana Hirematha Alanda
Claimed
ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠ ಆಳಂದ
Average Reviews
Description
ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠ – ಆಳಂದ
ಕರ್ತೃ ಶ್ರೀ ಷ.ಬ್ರ. ಮಹಾಂತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
ಕಲಬುರಗಿ ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ ಒಂದಾದ ಇತಿಹಾಸ ಪ್ರಸಿದ್ಧಆಳಂದ ಪಟ್ಟಣದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠವು ಈಭಾಗದ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಉಜ್ಜಯಿನಿ ಪೀಠದ ಶಾಖಾಮಠವಾಗಿಬೆಳೆದು ಬಂದಿರುವ ಶ್ರೀಮಠದ ಮೂಲ ಗುರುಗಳು ಪೂಜ್ಯ ಶ್ರೀ ಷ.ಬ್ರ. ಮಹಾಂತೇಶ್ವರಶಿವಾಚಾರ್ಯ ಮಹಾಸ್ವಾಮಿಗಳು.ಕರ್ತೃಗುರುಗಳು ತಪೆÇೀನಿಷ್ಠರಾಗಿದ್ದು ತಮ್ಮ ಅನುಷ್ಠಾನಗಳಿಂದ ಹೆಸರಾಗಿದ್ದವರು.ಲೋಕಸಂಚಾರದಲ್ಲಿದ್ದ ಶ್ರೀಗಳು ಆಳಂದ ಪಟ್ಟಣದಲ್ಲಿ ಶ್ರೀಮಠವನ್ನು ಸ್ಥಾಪಿಸಿ ಆಚಾರ್ಯರುಪ್ರತಿಪಾದಿಸಿದ ವೀರಶೈವ ಸಿದ್ದಾಂತವನ್ನು ಪ್ರಚುರಪಡಿಸಿದರು. ಅಷ್ಟಾವರಣ, ಪಂಚಾಚಾರ,ಷಟ್ಸ್ಥಲಗಳನ್ನು ಬೋಧಿಸಿ ಈ ತತ್ತ್ವಗಳ ಆದಾರದ ಮೇಲೆ ವೀರಶೈವ ಧರ್ಮ ಬೆಳೆಯಲುಪೂರಕ ವಾತಾವರಣ ಸೃಷ್ಠಿಸಿದರು. ಈ ರೀತಿಯಾಗಿ ಕರ್ತೃಗುರುಗಳಿಂದ ಪ್ರಸಿದ್ಧಿಗೆ ಬಂದಶ್ರೀಮಠದ ಪರಂಪರೆಯಲ್ಲಿ ಈವರೆಗೂ 25 ಜನ ಶ್ರೀಗಳು ಪಟ್ಟಾಧಿಕಾರ ಸ್ವೀಕರಿಸಿ ಮಠವನ್ನುಮುನ್ನಡೆಸಿದ್ದಾರೆಂದು ಹೇಳಲಾಗುತ್ತದೆ.ಶ್ರೀಮಠಕ್ಕೆ ಪಟ್ಟಾಧಿಕಾರವನ್ನು ವಹಿಸಿಕೊಳ್ಳುವ ಶ್ರೀಗಳು ಅನುಕ್ರಮಣಿಕೆಯಲ್ಲಿ ಶ್ರೀಷ.ಬ್ರ. ಮಹಾಂತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಷ.ಬ್ರ. ಸಿದ್ದರಾಮಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯಮಹಾಸ್ವಾಮಿಗಳೆಂದು ಈ ಮೂರು ಹೆಸರುಗಳನ್ನು ಅಭಿಧಾನ ಪಡೆದು ಶ್ರೀಮಠದಅಧಿಕಾರವನ್ನು ಮುನ್ನಡೆಸಿದ್ದು ಈ ಕಾರಣದಿಂದಾಗಿ ಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳುಶಿವಯೋಗ ಮಂದಿರದಲ್ಲಿ ಸಂಸ್ಕøತ, ವೇದಾಧ್ಯಯನಗಳ್ನು ಅಭ್ಯಸಿಸಿ ತದನಂತರ ಶ್ರೀಮಠಕ್ಕೆಪಟ್ಟಾಧಿಕಾರದ ಅನುಗ್ರಹ ಪಡೆದರು. ಶ್ರೀಗಳು ಶ್ರೀಮಠವನ್ನು ಸದಾ ಚಟುವಟಿಕೆಗಳಕೇಂದ್ರಬಿಂದುವನ್ನಾಗಿಸಿದ್ದು ಶ್ರೀಮಠದ ಕಟ್ಟಡವನ್ನು ಜೀರ್ಣಾಭಿವೃದ್ದಿಗೊಳಿಸಿದ್ದಾರೆ. ಶ್ರೀಗಳುಶ್ರೀಮಠದ ಜಮೀನನ್ನು ಅಭಿವೃದ್ಧಿಪಡಿಸಿ ಶ್ರೀಮಠದ ಆದಾಯವನ್ನು ಹೆಚ್ಚಿಸಿದಲ್ಲದೆ1994ರಲ್ಲಿ ಶ್ರೀ ಸಿದ್ದಲಿಂಗೇಶ್ವರ ಶಿವಾಚಾರ್ಯ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಅದರಡಿಯಲ್ಲಿಅನೇಕ ಶಾಲೆಗಳನ್ನು ತೆರೆದಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು
Place :
ದಾಸೋಳ, ಹುನಗುಂದ ತಾ||
Photo :
Programs
ಆಗಸ್ಟ್/ಸೆಪ್ಟಂಬರ್ನಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
ಗುರು ಪೂರ್ಣಿಮೆಯಂದು ಶ್ರೀಮಠದ ಗುರುಗಳ ಪಾದ ಪೂಜೆ ಕಾರ್ಯಕ್ರಮ
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
Photos
Full Address Kannada
ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠ
ಆಳಂದ - 585 302
ಆಳಂದ ತಾ||, ಕಲಬುರಗಿ ಜಿಲ್ಲೆ