ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ಸುಕ್ಷೇತ್ರ ಪೇಠಶಿರೂರು ಗ್ರಾಮದಲ್ಲಿಅಸ್ತಿತ್ವದಲ್ಲಿರುವ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ವಿರಕ್ತ ಮಠವು ಯಡೆಯೂರುಸಿದ್ದಲಿಂಗೇಶ್ವರರ ಕಾಲದಲ್ಲಿ ಸುಮಾರು 500 ವರ್ಷಗಳ ಹಿಂದೆ ಸ್ಥಾಪಪಿತಗೊಂಡಿತ್ತೆಂದುಹೇಳಲಾಗುತ್ತಿದ್ದು ಶ್ರೀಮಠದ ನಂತರದ ಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲ. ಶ್ರೀಯಡೆಯೂರು ಸಿದ್ದಲಿಂಗೇಶ್ವರರು ತಮ್ಮ ನೂರೊಂದು ವಿರಕ್ತರೊಡನೆ ನಾಡಿನಾದ್ಯಂತಸಂಚಾರ ಹೊರಟು ಪೇಠಶಿರೂರು ಗ್ರಾಮಕ್ಕೆ ಆಗಮಿಸಿ ಇಲ್ಲಿ ನೆಲೆನಿಂತಿದ್ದು ಭಕ್ತರಅಪೇಕ್ಷೆಯಂತೆ ತಮ್ಮ ಶಿಷ್ಯರನ್ನು ಇಲ್ಲಿ ನೆಲೆಗೊಳಿಸಿ ಮುಂದುವರೆದರೆಂದು ತಿಳಿದುಬರುತ್ತದೆ.ಕರ್ತೃಗುರುಗಳ ನಂತರದ ಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲ ಶ್ರೀಮಠದ ಹಿಂದಿನಶ್ರೀಗಳಾದ ಶ್ರೀ ಮ.ನಿ.ಪ್ರ. ಶಿವಪಂಚಾಕ್ಷರ ಮಹಾಸ್ವಾಮಿಗಳು ಶ್ರೀಮಠಕ್ಕೆ ಆಗಮಿಸಿ ಧಾರ್ಮಿಕಆಚರಣೆಗಳನ್ನು ಮುನ್ನಡೆಸಿಕೊಂಡು ಬಂದಿದ್ದರು. ಶ್ರೀಗಳು ಇದೇ ಮಠದಲ್ಲಿ 24 ವರ್ಷಭಕ್ತರಿಗೆ ಸನ್ಮಾರ್ಗ ತೋರಿದ್ದು ಪಟ್ಟಾಧಿಕಾರ ಸ್ವೀಕರಿಸದೇ ಇರುವುದು ವಿಶೇಷ. ಶ್ರೀಗಳು1977ರ ಮಾರ್ಚ್ 31ರಲ್ಲಿ ಲಿಂಗೈಕ್ಯರಾಗಿದ್ದು ಇವರು ಐಕ್ಯಗೊಂಡ ನಂತರ 33 ವರ್ಷಗಳಕಾಲ ಶ್ರೀಮಠವು ಖಾಲಿ ಉಳಿದಿದೆ.ಸುಮಾರು 3 ದಶಕಗಳಿಗೂ ಅಧಿಕ ಕಾಲ ಶ್ರೀಮಠಕ್ಕೆ ಯಾರೂ ಪೀಠಾದಿಪತಿಗಳುಇಲ್ಲದ ಕಾರಣ ಸರಿಯಾದ ವ್ಯವಸ್ಥೆ ಇಲ್ಲದ್ದರಿಂದ ಶ್ರೀಮಠದ ಅಭಿವೃದ್ದಿಕಾರ್ಯಕ್ರಮಗಳಾಗಲೀ, ಧಾರ್ಮಿಕ ಕಾರ್ಯಕ್ರಮಗಳಾಗಲೀ ನಡೆದುಬಂದಿರಲಿಲ್ಲ. ಆಗಊರಿನ ಮುಖಂಡರು, ಹಿರಿಯರು, ಸಮಸ್ತ ಭಕ್ತಾದಿಗಳು ಕೂಡಿ ಈಗಿನ ಶ್ರೀಗಳಾದಶ್ರೀ ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳಿಗೆ 2009ರ ಏಪ್ರಿಲ್ 04ರಲ್ಲಿ ಶ್ರೀಮಠದಪೀಠಾದಿಪತಿಗಳಾಗಿ ಅಧಿಕಾರ ನೀಡಿದರು.ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಶ್ರೀಮಠಕ್ಕೆ ಬಂದ ನಂತರ ಶ್ರೀಮಠದಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಚುರುಕುಗೊಮಡಿದ್ದು ಶ್ರೀಮಠವುಜೀರ್ಣೋದ್ದಾರಗೊಂಡು ಅಭಿವೃದ್ದಿ ಪಥದಲ್ಲಿ ಮುನ್ನಡೆದಿದೆ. ಶ್ರೀಗಳು ಸ್ವತಃಕಾಯಕಯೋಗಿಗಳಾಗಿ ಶ್ರೀಮಠದ ಜಮೀನನ್ನು ಅಭಿವೃದ್ದಿಪಡಿಸುತ್ತಾ ಶ್ರೀಮಠದ ಆದಾಯವನ್ನು ಹೆಚ್ಚಿಸಿದ್ದಾರೆ. ಪ್ರತಿ ವರ್ಷ ಚೈತ್ರ ಶುದ್ದ ದಶಮಿಗೆ ಲಿಂ. ಶ್ರೀ ಶಿವಪಂಚಾಕ್ಷರಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವ ಮತ್ತು ಪ್ರಸ್ತುತ ಶ್ರೀಗಳ ವರ್ದಂತಿ ಮಹೋತ್ಸವವಿಜೃಂಬಣೆಯಿಂದ ನಡೆಯುತ್ತದೆ.
Swamiji
Swamiji Name :
ಶ್ರೀ.ಮ.ನಿ.ಪ್ರ.ಸ್ವ. ಸಿದ್ದಲಿಂಗ ಮಹಾಸ್ವಾಮಿಗಳು
Date of Birth :
6-10-1973
Place :
ಚಿಕ್ಕಸಿಂದಗಿ, ಸಿಂದಗಿ ತಾ||
Pattadikara :
04-04-2009
Photo :
Programs
ಪ್ರತಿ ನಿತ್ಯ ಕತೃ ಗದ್ದುಗೆಗೆ ರುದ್ರಾಭಿಷೇಕ
ಚೈತ್ರ ಶುದ್ಧ ದಶಮಿಗೆ ಶ್ರೀ ಹಿರಿಯ ಗುರುಗಳ ಪುಣ್ಯ ಸ್ಮರಣೋತ್ಸವ ಮತ್ತು ಪ್ರಸ್ತುತ ಶ್ರೀಗಳ ವರ್ದಂತಿ ಮಹೋತ್ಸವ ಮತ್ತು ಸಾಂಸ್ಕøತಿಕ ಕಾರ್ಯಕ್ರಮ
ಶ್ರಾವಣ ಮಾಸದಲ್ಲಿ ರುದ್ರಾಭಿಷೇಕ ಹಾಗೂ 63 ಬಸವಾದಿ ಪ್ರಮಥರ ಜೀವನ ಚರಿತ್ರೆ
Photos
Full Address Kannada
ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ವಿರಕ್ತ ಮಠ
ಪೇಠ ಶಿರೂರು - 585 317
ಚಿತ್ತಾಪುರ ತಾ||, ಕಲಬುರಗಿ ಜಿಲ್ಲೆ