ಮಂಡ್ಯ ಜಿˉÉ್ಲಯ ಮಳವಳ್ಳಿ ತಾಲ್ಲೂಕು ಬೆಳಕವಾಡಿ ಗ್ರಾಮದಲ್ಲಿ ಅಸ್ತಿತ್ತ್ವದಲ್ಲಿರುವಶ್ರೀ ಸಿದ್ದಮಲ್ಲಿಕಾರ್ಜುನ ಸ್ವಾಮಿ ದಾಸೋಹ ಮಠವು ತನ್ನ ದಾಸೋಹ ಕ್ರಮಗಳ ಮೂಲಕಈ ಭಾಗದಲ್ಲಿ ಪ್ರಚಲಿತದಲ್ಲಿದೆ. ಚಾಮರಾಜನಗರ ಜಿˉÉ್ಲ ಗುಂಡ್ಲುಪೇಟೆ ತಾಲ್ಲೂಕುಸೋಮನಹಳ್ಳಿ ಮಠದಿಂದ ಸಂಚಾರ ಬಂದ ಶ್ರೀ ಸಿದ್ದಮಲ್ಲಿಕಾರ್ಜುನ ಮಹಾಸ್ವಾಮಿಗಳು¨ಳಕವಾಡಿಗೆ ಆಗಮಿಸಿ ಅನುಷ್ಠಾನ ಕೈಗೊಂಡಿದ್ದ ಸ್ಥಳದಲ್ಲಿ ಶ್ರೀಮಠವು ಸ್ಥಾಪಿತಗೊಂಡಿದೆ.ಶ್ರೀ ಮಠವನ್ನು 1931ರ ಜೂನ್ 26ರಲ್ಲಿ ಸ್ಥಾಪಿಸˉÁಗಿದೆ.ಹೀಗೆ ಮಹಾನ್ ಧರ್ಮನಿಷ್ಠ, ಅನುಷ್ಠಾನ ಪ್ರಿಯ ಶ್ರೀ ಸಿದ್ದಮಲ್ಲಿಕಾರ್ಜುನಮಹಾಸ್ವಾಮಿಗಳ ಅನುಷ್ಠಾನದಿಂದ ಪುನೀತಗೊಂಡಿದ್ದ ಬೆಳಕವಾಡಿಯ ಸುಕ್ಷೇತ್ರವು ಮುಂದೆಶ್ರೀ ಕೊಟ್ಟೂರು ಮಹಾಸ್ವಾಮಿಗಳು, ಶ್ರೀ ಮೂಗಪ್ಪ ಮಹಾಸ್ವಾಮಿಗಳು ಹಾಗೂ ಹಿಂದಿನಶ್ರೀಗಳಾದ ಶ್ರೀ ಬಸಪ್ಪ ಮಹಾಸ್ವಾಮಿಗಳ ಮುಖಾಂತರ ಹೆಚ್ಚು ಪ್ರಸಿದ್ಧಿಗೆ ಬಂದಿದೆ. ಎˉÁ್ಲಶ್ರೀಗಳು ಶ್ರೀ ಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ಮುನ್ನಡೆಸಿಕೊಂಡು ಬಂದಿದ್ದು ಹಸಿದುಬರುವ ಭಕ್ತರ ಹಸಿವನ್ನು ನೀಗಿಸುವಲ್ಲಿ ಶ್ರಮಿಸಿದ್ದಾರೆ.ಹಿಂದಿನ ಶ್ರೀಗಳಾದ ಶ್ರೀ ಬಸಪ್ಪ ಮಹಾಸ್ವಾಮಿಗಳು ಶ್ರೀ ಮಠದಲ್ಲಿ ಧಾರ್ಮಿಕಆಚರಣೆಗಳ ಮೂಲಕ ಭಕ್ತರಲ್ಲಿ ಧಾರ್ಮಿಕ ಅರಿವನ್ನು ಮೂಡಿಸಿದ್ದು 1994ರಲ್ಲಿಲಿಂಗೈಕ್ಯರಾಗಿದ್ದಾರೆ. ಶ್ರೀ ಬಸಪ್ಪ ಸ್ವಾಮಿಗಳ ಐಕ್ಯಾ ನಂತರ ಶ್ರೀ ಮಠವು ಅಲ್ಪಕಾಲ ಖಾಲಿಉಳಿದಿದ್ದು ತದನಂತರ 2001ರಲ್ಲಿ ಅಧಿಕಾರಕ್ಕೆ ಬಂದವರೇ ಈಗಿನ ಶ್ರೀಗಳಾದ ಪೂಜ್ಯ ಶ್ರೀಪ್ರಭುದೇವ ಸ್ವಾಮಿಗಳು. ಶ್ರೀಗಳಿಗೆ ಅಧಿಕಾರದ ಅನುಗ್ರಹ ನೀಡಿದವರು ಕನಕಪುರದೇಗುಲಮಠದ ಶ್ರೀ ನಿರ್ವಾಣ ಮಹಾಸ್ವಾಮಿಗಳು.ಪ್ರಸ್ತುತ ಶ್ರೀಗಳಾದ ಶ್ರೀ ಪ್ರಭುದೇವ ಸ್ವಾಮಿಗಳು ಶ್ರೀ ಮಠವನ್ನು ಭಕ್ತರಸಹಕಾರದೊಂದಿಗೆ ಅಭಿವೃದ್ಧಿಪಡಿಸಲು ಶ್ರಮಿಸುತ್ತಿದ್ದು ಧಾರ್ಮಿಕ ಆಚರಣೆಗಳನ್ನುಚುರುಕುಗೊಳಿಸಿದ್ದಾರೆ. ಶ್ರೀ ಮಠದಲ್ಲಿ ಪ್ರತಿನಿತ್ಯ ಪೂಜೆಯೊಂದಿಗೆ ಪ್ರತಿ ಹುಣ್ಣಿಮೆಗೆ ವಿಶೇಷಪೂಜೆ ಹಾಗೂ ರುದ್ರಾಭಿಷೇಕ ನಡೆಸುತ್ತಿದ್ದಾರೆ ಮತ್ತು ಕಾರ್ತೀಕ ಮಾಸದಲ್ಲಿ ಲಿಂ. ಶ್ರೀ ಬಸಪ್ಪಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ಪ್ರಭುದೇವ ಸ್ವಾಮಿಗಳು
Date of Birth :
18-10-1957
Place :
ಇಗ್ಗಲೂರು, ಸತ್ಯಮಂಗಳ ತಾ||
Pattadikara :
ಜನವರಿ 2001
Photo :
Programs
ಪ್ರತಿ ಹುಣ್ಣಿಮೆಗೆ ವಿಶೇಷ ಪೂಜೆ
ಕಾರ್ತಿಕ ಮಾಸದಲ್ಲಿ ದೀಪೋತ್ಸವ, ಲಿಂ. ಶ್ರೀ ಬಸಪ್ಪ ಸ್ವಾಮಿಗಳ ಆರಾಧನೆ
Photos
Full Address Kannada
ಶ್ರೀ ಸಿದ್ದಮಲ್ಲಿಕಾರ್ಜುನಸ್ವಾಮಿ ದಾಸೋಹ ಮಠ
ಬೆಳಕವಾಡಿ - 571 430
ಮಳವಳ್ಳಿ ತಾ||, ಮಂಡ್ಯ ಜಿಲ್ಲೆ