ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಕೇಂದ್ರದಿಂದ ಕೇವಲ 07 ಕಿ.ಮೀ.ದೂರದಲ್ಲಿರುವ ಗುಂಡೇಗಾಲ ಗ್ರಾಮದ ಹೊರವಲಯದ ತೋಟದಲ್ಲಿ ಅಸ್ತಿತ್ತ್ವದಲ್ಲಿರುವಶ್ರೀ ಶಿವಯೋಗೀಶ್ವರ ತೋಟದ ಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಚಟುವಟಿಕೆಗಳ ಮುಖೇನ ಪ್ರಚಲಿತದಲ್ಲಿದೆ. ಪುರಾತನ ಕಾಲದಲ್ಲಿ ಉತ್ತರದಕಡೆಯಿಂದ ಬಂದ ಶಿವಯೋಗಿಗಳೊಬ್ಬರು ಶ್ರೀಮಠವನ್ನು ಸ್ಥಾಪಿಸಿದರು ಎಂದುಹೇಳಲಾಗುತ್ತಿದ್ದು ಮಲೆ ಮಹದೇಶ್ವರರ ಕಾಲದಿಂದಲೂ ಶ್ರೀಮಠವು ಅಸ್ತಿತ್ತ್ವದಲ್ಲಿದೆ.ಶ್ರೀಮಠವು ಪುರಾತನದ್ದಾದರೂ ಗುರುಪರಂಪರೆಯ ಬಗ್ಗೆ ನಿಖರವಾಗಿ ತಿಳಿದುಬರುವುದಿಲ್ಲ. ಶ್ರೀಮಠದ ಮೂಲ ಮಠವು ಮೊದಲು ತೋಟದಲ್ಲಿಯೇ ಇದ್ದು ಪಂಜಿನಕಳ್ಳರ ಕಾಟಕ್ಕೆ ಬೇಸತ್ತು ಭಕ್ತರ ಅಪೇಕ್ಷೆಯಂತೆ ಈಗ್ಗೆ ನೂರು ವರ್ಷಗಳ ಹಿಂದೆ ಊರಒಳಗಡೆಗೆ ಸ್ಥಳಾಂತರವಾಗಿತ್ತು. ಆನಂತರ ಈಗ್ಗೆ 25 ವರ್ಷಗಳ ಹಿಂದೆ ಪ್ರಸ್ತುತ ಶ್ರೀಗಳುಊರ ಹೊರಗೆ ತೋಟದಲ್ಲಿ ಮಠ ಕಟ್ಟಿ 1991ರಲ್ಲಿ ಶ್ರೀಮಠವನ್ನು ಸ್ಥಳಾಂತರಿಸಿದ್ದಾರೆ ಎಂದುತಿಳಿದು ಬರುತ್ತದೆ. ಬಹುಶಃ ಶ್ರೀಮಠ ಆಗಾಗ್ಗೆ ಸ್ಥಳಾಂತರಗೊಂಡಿದ್ದರಿಂದ ಶ್ರೀಮಠದಇತಿಹಾಸ ನಿಖರವಾಗಿ ದೊರೆಯುವುದಿಲ್ಲ.ಕರ್ತೃ ಗುರುಗಳ ನಂತರದ ಇತಿಹಾಸದಲ್ಲಿ ಶ್ರೀ ಕಾಯಕದ ಸ್ವಾಮಿಗಳೆಂಬುವರುಇದ್ದರು ಎಂದು ಹೇಳಲಾಗಿದೆ. ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಮಹಾಂತಮಹಾಸ್ವಾಮಿಗಳು 1981ರಲ್ಲಿಯೇ ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ವೃಷಭ ರಾಜೇಂದ್ರಮಹಾಸ್ವಾಮಿಗಳನ್ನು ಪಟ್ಟಕ್ಕೆ ತಂದು 1991ರಲ್ಲಿ ಲಿಂಗೈಕ್ಯರಾಗಿದ್ದಾರೆ. ಪ್ರಸ್ತುತ ಶ್ರೀಗಳುಶ್ರೀಮಠವನ್ನು ನೂತನವಾಗಿ ನಿರ್ಮಿಸಿ ಮಠದ ಆಡಳಿತವನ್ನು ಇಲ್ಲಿಗೆ ಸ್ಥಳಾಂತರಿಸಿದ್ದುಶ್ರೀಮಠದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ.ಶ್ರೀಮಠದಲ್ಲಿ ಪುರಾತನವಾದ ಗಾರೆಯಲ್ಲಿ ಮಾಡಿದ ಭಾವಿಯೊಂದಿದ್ದು ಮಠದಆವರಣದಲ್ಲಿ ಎರಡು ಗದ್ದುಗೆಗಳಿವೆ. ನಿತ್ಯ ಪೂಜೆಗೆ ಒಳಪಟ್ಟಿರುವ ಗದ್ದುಗೆಗಳಿಗೆ ವಿಶೇಷಸಂಧರ್ಭಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಪ್ರತಿ ವರ್ಷಬಸವ ಜಯಂತಿ ಆಚರಣೆಯು ನಡೆಯುತ್ತಿದ್ದು ಹಾಗೆಯೇ ಜೂನ್ ತಿಂಗಳಲ್ಲಿ ಪ್ರಸ್ತುತಶ್ರೀಗಳ ಹುಟ್ಟು ಹಬ್ಬವನ್ನು ಆಚರಿಸಲಾಗುತ್ತದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ವೃಷಭ ರಾಜೇಂದ್ರ ಮಹಾಸ್ವಾಮಿಗಳು
Date of Birth :
22-06-1969
Place :
ಗುಂಡೇಗಾಲ, ಕೊಳ್ಳೇಗಾಲ ತಾ||
Pattadikara :
1981
Photo :
Programs
ಬಸವ ಜಯಂತಿ ಆಚರಣೆ
ಪ್ರತಿ ವರ್ಷ ಜೂನ್ ತಿಂಗಳಲ್ಲಿ ಪ್ರಸ್ತುತ
ಶ್ರೀಗಳ ಹುಟ್ಟು ಹಬ್ಬ ಆಚರu
Photos
Full Address Kannada
ಶ್ರೀ ಶಿವಯೋಗೀಶ್ವರ ತೋಟದ ಮಠ
ಗುಂಡೇಗಾಲ, ಪಾಳ್ಯ ಪೋ - 571 440
ಕೊಳ್ಳೇಗಾಲ ತಾ||, ಚಾಮರಾಜನಗರ ಜಿಲ್ಲೆ