Shree Shivayogiprabhu Matha – Yalakoda

Shree Shivayogiprabhu Matha – Yalakoda Claimed

ಶ್ರೀ ಶಿವಯೋಗಿಪ್ರಭು ಮಠ - ಯಲಗೋಡ

Average Reviews

Description

ಶ್ರೀ ಶಿವಯೋಗಿಪ್ರಭು ಮಠ – ಯಲಗೋಡ

ಕರ್ತೃ – ಪೂಜ್ಯ ಶ್ರೀ ಪರಮಾನಂದ ಶಿವಯೋಗಿಗಳು

ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಯಲಗೋಡ ಗ್ರಾಮವು ತಾಲ್ಲೂಕುಕೇಂದ್ರದಿಂದ ನೈರುತ್ಯಕ್ಕೆ ಮೂವತ್ತೆಂಟು ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಹೊರವಲಯದಲ್ಲಿ ಶ್ರೀ ಪರಮಾನಂದೇಶ್ವರ ದೇವಸ್ಥಾನದ ಸಮೀಪ “ಶ್ರೀ ಶಿವಯೋಗಿಪ್ರಭುಮಠ” ಅಥವಾ “ಶ್ರೀ ಪರಮಾನಂದಾ ಆಶ್ರಮ”ವು ಸ್ಥಾಪಿತಗೊಂಡಿದೆ. ಈಗಿನ ಶ್ರೀಗಳಾದಪೂಜ್ಯ ಶ್ರೀ ಗುರುಲಿಂಗ ಮಹಾಸ್ವಾಮಿಗಳೇ ಶ್ರೀಮಠವನ್ನು ಸ್ಥಾಪಿಸಿದ್ದು ಮಠದ ಪ್ರಥಮಪೀಠಾಧಿಪತಿಗಳಾಗಿ ಅಧಿಕಾರವನ್ನು ವಹಿಸಿಕೊಂಡು ಮಠವನ್ನು ಅಭಿವೃದ್ಧಿಪಡಿಸಿದ್ದಾರೆ.ಪೂಜ್ಯ ಶ್ರೀ ಗುರುಲಿಂಗ ಮಹಾಸ್ವಾಮಿಗಳು ಮಹಾರಾಷ್ಟ್ರದ ಸೋಲಾಪುರಜಿಲೆ ್ಲಯ ಅಕ್ಕಲಕೋಟೆ ತಾಲ್ಲೂಕಿನವರಾಗಿದ್ದು ಬಾಲ್ಯದಲ್ಲಿಯೇ ಆಧ್ಯಾತ್ಮವನ್ನುಮೈಗೂಡಿಸಿಕೊಂಡು ಬೆಳೆದವರು. ಸದಾ ತಮ್ಮದೇ ಅಧ್ಯಾತ್ಮಲೋಕದಲ್ಲಿ ವಿಹರಿಸುತ್ತಿದ್ದಶ್ರೀಗಳು ಚಿಕ್ಕವಯಸ್ಸಿನಲ್ಲಿಯೇ ತಮ್ಮ ಮನೆಯನ್ನು ತೊರೆದು ಆಧ್ಯಾತ್ಮ ಸಾಧನೆಯಹಾದಿಯಲ್ಲಿ ಸಂಚಾರ ಹೊರಟರು. ಹೀಗೆ ಕೆಲ ಕಾಲ ಸಂಚಾರ ಕೈಗೊಂಡು ಅಲ್ಲಲ್ಲಿನೆಲೆನಿಲ್ಲುತ್ತಾ ಕೊನೆಗೆ ಯಲಗೋಡ ಗ್ರಾಮಕ್ಕೆ ಆಗಮಿಸುವ ಶ್ರೀಗಳು ಊರ ಹೊರಗಿನ ಶ್ರೀಪರಮಾನಂದೇಶ್ವರ ದೇವಸ್ಥಾನದಲ್ಲಿ ಬಂದು ನೆಲೆಗೊಂಡರು.ಶ್ರೀ ಪರಮಾನಂದೇಶ್ವರ ದೇವಸಾ್ಥನದಲ್ಲಿ ನೆಲೆಗೊಂಡು ಧಾರ್ಮಿಕಕಾರ್ಯಗಳನ್ನು ಕೈಗೊಂಡ ಬಾಲತಪಸ್ವಿಯನ್ನು ಕಂಡ ಗ್ರಾಮಸ್ಥರು ಗುರುಗಳ ಪ್ರಭೆಗೆಮನಸೋತು ಸಂತೋಷದಿಂದ ಗುರುಗಳ ತಪೋನುಷ್ಠಾನಕ್ಕೆ ವ್ಯವಸ್ಥೆಗೊಳಿಸಿದರು.ಗುರುಗಳು ದೇವಸ್ಥಾನದಲ್ಲಿ ಅನುಷ್ಠಾನದಲ್ಲಿರುತ್ತಾ, ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾದೇವಸ್ಥಾನವನ್ನು ಭಕ್ತರ ಸಹಕಾರದೊಂದಿಗೆ ಅಭಿವೃದ್ಧಿಪಡಿಸಿದ್ದು ತಮ್ಮ ಆದ್ಯಾತ್ಮಜೀವನವನ್ನು ಶ್ರೀಮಂತಗೊಳಿಸಿಕೊಂಡರು. ಗುರುಗಳಿಂದಾಗಿ ದೇವಸಾ್ಥನವುಯಾತ್ರಾಸ್ಥಳವಾಗಿ ಮಾರ್ಪಟ್ಟು ದೇವಸ್ಥಾನದ ಆರ್ಥಿಕ ಸ್ಥಿತಿಗತಿ ಉತ್ತಮಗೊಂಡಿತು.ಗುರುಗಳು ದೇವಸ್ಥಾನದ ಪಕ್ಕದಲ್ಲಿ ಜಮೀನನ್ನು ಖರೀದಿಸಿ ನೂತನವಾಗಿ ಮಠವನ್ನುಸ್ಥಾಪಿಸಿ ಪಟ್ಟಾಧಿಕಾರವನ್ನು ವಹಿಸಿಕೊಂಡರು.ಗುರುಗಳು ಶ್ರೀಮಠವನ್ನು ಸ್ಥಾಪಿಸಿ ಅಧಿಕಾರ ವಹಿಸಿಕೊಂಡ ದಿನದಿಂದಈವರೆಗೂ ಕ್ರಿಯಾಶೀಲರಾಗಿ ಮಠದ ಹಾಗೂ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಾ ಗ್ರಾಮದಜನರಲ್ಲಿ ಧಾರ್ಮಿಕ ಸಂಸ್ಕಾರವನ್ನು ಬೆಳೆಸಿದರು. ಕಳೆದ ಎರಡು ದಶಕಗಳಲ್ಲಿ ಶ್ರೀಮಠಹಾಗೂ ಯಲಗೋಡು ಗ್ರಾಮದ ಚಿತ್ರಣವೇ ಬದಲಾಗಿದ್ದು ಗುರುಗಳ ದೂರದೃಷ್ಟಿತ್ತ್ವದಪ್ರತಿಫಲ. ಕಾಯಕಯೋಗಿಗಳಾದ ಗುರುಗಳು ಬಸವಾದಿ ಶಿವಶರಣರ ತತ್ತ್ವಾದರ್ಶಗಳನ್ನುಮೈಗೂಡಿಸಿಕೊಂಡು ಬಸವಪರಂಪರೆಯ ಹಾದಿಯಲ್ಲಿ ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ.ಸುತ ್ತಮುತ ್ತಲಿನ ಗ್ರಾಮದಲ್ಲಿ ಪಾದಯಾತೆ ್ರ ಕೈಗೊಂಡು ಜನರ ದುಶ ್ಚಟಗಳುಮೂಡನಂಬಿಕೆಗಳ ವಿರುದ್ದ ಹೋರಾಡುತ ್ತಲೇ ಅವರಲ್ಲಿ ಕಾಯಕಯೋಗದ217ಪರಿಕಲ್ಪನೆಯನ್ನು ಯಶಸ್ವಿಯಾಗಿ ತುಂಬಿ ಕಾಯಕಯೋಗಿಗಳನ್ನಾಗಿ ಪರಿವರ್ತಿಸಿದ್ದಾರೆ.ಹಾಗೂ ತಮ್ಮ ಸಾಮಾಜಿಕ ಚಟುವಟಿಕೆಗಳ ಮೂಲಕ ಸಮಷ್ಠಿ ಸಮಾಜದ ಒಗ್ಗಟ್ಟಿಗೆಶ್ರಮಿಸುತ್ತಿದ್ದಾರೆ.ಗುರುಗಳು ಶ್ರೀ ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಚಿತ್ತಾಪುರತಾಲ್ಲೂಕಿನ ನಾಲವಾರದ ಶ್ರೀ ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳಕೃಪಾಶೀರ್ವಾದದಲ್ಲಿ ಪರಿಪಕ ್ವಗೊಂಡಿದ್ದು ಶ್ರೀ ತೋಟೇಂದ ್ರ ಶಿವಾಚಾರ್ಯರಸಂಪರ್ಕದಿಂದ ಮಠವನ್ನು ಆಧ್ಯಾತ್ಮದ ನೆಲೆಗಟ್ಟಿನಲ್ಲಿ ಶ್ರೀಮಂತಗೊಳಿಸಿದ್ದಾರೆ. ಗುರುಗಳುಮಠ ಸ್ಥಾಪಿಸಿದ ನಂತರ ಮಠದ ಮುಂಭಾಗದಲ್ಲಿ ದೊರೆತ ಶಿವಲಿಂಗವನ್ನು ಅದೇಸ್ಥಳದಲ್ಲಿಯೇ ಪ್ರತಿಷ್ಠಾಪಿಸಿ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯ ನಿರ್ಮಿಸಿದ್ದಾರೆ. ಈಸ್ಥಳದಲ್ಲಿ ಅಬ್ಬೆ ತುಮಕೂರಿನ ಶ್ರೀ ವಿಶ್ವಾರಾಧ್ಯ ಮಹಾಸ್ವಾಮಿಗಳು ಅನುಷ್ಠಾನಗೊಂಡು ಈಕ್ಷೇತ್ರವನ್ನು ಪವಿತ್ರಗೊಳಿಸಿದ್ದು ಇಂತಹ ಪವಿತ್ರ ಸ್ಥಳವನ್ನು ಶ್ರೀ ಗುರುಲಿಂಗ ಮಹಾಸ್ವಾಮಿಗಳುಸುಕ್ಷೇತ್ರವನ್ನಾಗಿ ಮಾಡಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಿದ್ದಾರೆ.ಗುರುಗಳು ಶ್ರೀಮಠದಲ್ಲಿ ತಮ್ಮ ದುಡಿಮೆಯ ಬಲದಿಂದ ಹಾಗೂ ಭಕ್ತರಸಹಕಾರದಿಂದ ಜಮೀನನ್ನು ರೂಡಿಸಿಕೊಂಡಿದ್ದು ಸ್ವತಃ ತಾವೇ ಕಾಯಕಯೋಗಿಗಳಾಗಿಅಭಿವೃದ್ಧಿಪಡಿಸಿ ಹೆಚ್ಚು ಆದಾಯ ಬರುವಂತೆ ಮಾಡಿಕೊಂಡಿದ್ದಾರೆ. ಶ್ರೀಗಳು ಶ್ರೀಮಠದಲ್ಲಿಶ್ರೀ ಪರಂಜ್ಯೋತಿ ಶಿಕ್ಷಣ ಸಂಸ್ಥೆಯನ್ನು ಪ್ರಾರಂಬಿಸಿದ್ದು ಅದರಡಿಯಲ್ಲಿ ಶಾಲಾಕಾಲೇಜುಗಳನ್ನು ತೆರೆದಿದ್ದು ಗ್ರಾಮೀಣ ಭಾಗದ ಭಕ್ತರಿಗೆ ಅನುಕೂಲವಾಗಿದೆ. ಹಾಗೂಶ್ರೀಮಠದಲ್ಲಿ ವಿದ್ಯಾರ್ಥಿನಿಲಯವನ್ನು ಸ್ಥಾಪಿಸಿದ್ದು ಬಡ ಮಕ್ಕಳಿಗೆ ಆಶ್ರಯವನ್ನು ಕಲ್ಪಿಸಿ,ವಿದ್ಯಾರ್ಜನೆಗೆ ನೆರವಾಗಿದ್ದಾರೆ. ನಿತ್ಯ ಮಠದಲ್ಲಿ ಅನ್ನದಾಸೋಹ ನಡೆಸುತ್ತಾ ಮಠಕ್ಕೆ ಬರುವಭಕ್ತರಿಗೆ ಹಾಗೂ ಅಸಹಾಯಕರಿಗೆ ದಾಸೋಹ ನಡೆಸುತ್ತಿದ್ದಾರೆ.ಗುರುಗಳು ಸಾಹಿತ್ಯಾಸಕ್ತರೂ ಆಗಿದ್ದು ಸ್ವತಃ ತಾವೇ ನೂರಾರು ವಚನಗಳನ್ನುರಚಿಸಿದ್ದಾರೆ ಹಾಗೂ ಆಗಾಗ್ಗೆ ಮಠದಲ್ಲಿ ಧರ್ಮ ಸಮ್ಮೇಳವನ್ನು ನಡೆಸಿ ನಾಡಿನ ವಿದ್ವಾಂಸರಉಪನ್ಯಾಸಗಳನ್ನು ಏರ್ಪಡಿಸುತ್ತಾರೆ. ಗುರುಗಳು ಮಠದಲ್ಲಿ ನಿತ್ಯ ಧಾರ್ಮಿಕಆಚರಣೆಗಳೊಂದಿಗೆ ಪ್ರತಿ ಅಮವಾಸ್ಯೆಗಳಲ್ಲಿ ರುದ್ರಾಭಿಷೇಕ, ಶಿವರಾತ್ರಿ, ಶ್ರಾವಣಗಳಲ್ಲಿವಿಶೇಷ ಪೂಜೆ, ನವರಾತ್ರಿಯಲ್ಲಿ ನಿತ್ಯ ಶ್ರೀದೇವಿ ಪುರಾಣ ಪ್ರವಚನಗಳನ್ನು ನಡೆಸುತ್ತಿದ್ದುಪ್ರತಿವರ್ಷ ಡಿಸೆಂಬರ್ 25 ರಂದು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ವಿವಿಧ ಧಾರ್ಮಿಕ,ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.

Swamiji

Swamiji Name :
ಪೂಜ್ಯ ಶ್ರೀ ಗುರುಲಿಂಗ ಮಹಾಸ್ವಾಮಿಗಳು
Date of Birth :
25-12-1976
Place :
ಅಕ್ಕಲಕೋಟೆ, ಸೊಲಾಪುರ ಜಿ||
Photo :

Programs

ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ ಹಾಗೂ ಪೂಜೆ
ಶಿವರಾತ್ರಿಗೆ ವಿಶೇಷ ಪೂಜೆ, ಜಾಗರಣೆ
ಡಿಸೆಂಬರ್ 25ನೇ ತಾರೀಖು ಶ್ರೀಗಳ ಹುಟ್ಟುಹಬ್ಬ
ನವರಾತ್ರಿಗೆ ಮುತ್ತೈದೆಯರಿಗೆ ಉಡಿ
ತುಂಬುವ ಕಾರ್ಯಕ್ರಮ

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ
ಪದವಿ ಪೂರ್ವ / ಪದವಿ ಕಾಲೇಜ್
ವಿದ್ಯಾರ್ಥಿ ನಿಲಯ
ಗೋ ಶಾ¯

Photos

Full Address Kannada

ಶ್ರೀ ಶಿವಯೋಗಿಪ್ರಭು ಮಠ
ಯಲಗೋಡ - 585 325
ಜೇವರ್ಗಿ ತಾ||, ಕಲಬುರಗಿ ಜಿಲ್ಲೆ

Map

Near by Places

ಕರಿಕೆಹಳ್ಳಿ - 5 ಕಿ.ಮೀ.
ಚಿಗರಹಳ್ಳಿ - 20 ಕಿ.ಮೀ.
ಜೇವರ್ಗಿ - 22 ಕಿ.ಮೀ.
ಕಲಬುರಗಿ - 62 ಕಿ.ಮೀ.

Statistic

57 Views
0 Rating
0 Favorite
0 Share
error: Content is protected !!