Shree Shivayogeshwara Brahanmatha – Hinchageri

Shree Shivayogeshwara Brahanmatha – Hinchageri Claimed

ಶ್ರೀ ಶಿವಯೋಗೇಶ್ವರ ಬೃಹನ್ಮಠ - ಹಿಂಚಗೇರಿ

Average Reviews

Description

ಶ್ರೀ ಶಿವಯೋಗೇಶ್ವರ ಬೃಹನ್ಮಠ ಹಿಂಚಗೇರಿ

ಶ್ರೀ ಷ.ಬ್ರ. ಶಿವರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು

ಕಲಬುರಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ಹಿಂಚಗೇರಿ ಗ್ರಾಮವು ತಾಲ್ಲೂಕುಕೇಂದ್ರದಿಂದ ಕೇವಲ 6 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರವಲಯದ ಜಮೀನಿನಲ್ಲಿಅಸ್ತಿತ್ವದಲ್ಲಿರುವ ಮಠವೇ ಶ್ರೀ ಶಿವಯೋಗೇಶ್ವರ ಬೃಹನ್ಮಠ. ಶ್ರೀಮದ್ ರಂಭಾಪುರಿ ಪೀಠದಶಾಖಾಮಠವಾಗಿ ಗುರುತಿಸಿಕೊಳ್ಳುತ್ತಿರುವ ಶ್ರೀ ಶಿವಯೋಗೇಶ್ವರ ಬೃಹನ್ಮಠದ ಸ್ಥಾಪಕರುಈಗಿನ ಗುರುಗಳಾದ ಶ್ರೀ ಷ.ಬ್ರ. ಶಿವರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು.ಸುಮಾರು 30 ವರ್ಷಗಳ ಹಿಂದೆ ಅಫಜಲಪುರ ತಾಲ್ಲೂಕಿನ ಬಂದರವಾಡದಿಂದಸಂಚಾರ ಬಂದ ಶ್ರೀ ಷ.ಬ್ರ. ಶಿವರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು ಈ ಸ್ಥಳದಲ್ಲಿಮಠವನ್ನು ಸ್ಥಾಪಿಸಿಕೊಂಡು ಧಾರ್ಮಿಕ ಕಾರ್ಯಗಳನ್ನು ಆರಂಭಿಸಿದರು. ಆ ಸಮಯದಲ್ಲಿಶ್ರೀಗಳ ಆಚರಣೆಗಳಿಗೆ, ಸಾಮಾಜಿಕ ಕಳಕಳಿಗೆ ಮನಸೋತ ಗ್ರಾಮದ ಹಾಗೂ ಸುತ್ತಲಿನಭಕ್ತವೃಂದ ಶ್ರೀಮಠಕ್ಕೆ ನಡೆದುಕೊಳ್ಳತೊಡಗಿ ಶ್ರೀಮಠವು ಅಭಿವೃದ್ಧಿಗೊಂಡಿದೆ.ಶ್ರೀಗಳು ಶಿವಪೂಜಾನಿಷ್ಠರಾಗಿದ್ದು ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳು,ಸಾಮಾಜಿಕ ಚಟುವಟಿಕೆಗಳ ಮೂಲಕ ಮಠವನ್ನು ಸದಾ ಚಟುವಟಿಕೆಯಕೇಂದ್ರಬಿಂದುವನ್ನಾಗಿಸಿದ್ದಾರೆ. ಶ್ರೀಗಳು ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆಪ್ರತಿ ಅಮಾವಾಸ್ಯೆ ಹುಣ್ಣಿಮೆಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು, ಶ್ರಾವಣ ಮಾಸದಲ್ಲಿನಿತ್ಯ ರುದ್ರಾಭಿಷೇಕ ಹಾಗೂ ವಿವಿಧ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡುಬರುತ್ತಿದ್ದಾರೆ ಶ್ರೀಮಠದ ಜಾತ್ರಾಮಹೋತ್ಸವ (ರಥೋತ್ಸವ)ವನ್ನು ಪ್ರತಿ ವರ್ಷಶ್ರೀರಾಮನವಮಿಯಂದು ವಿಜೃಂಭಣೆಯಿಂದ ಜರುಗಿಸಿಕೊಂಡು ಬರಲಾಗುತ್ತಿದೆ.

Swamiji

Swamiji Name :
ಶ್ರೀ ಷ.ಬ್ರ. ಶಿವರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು
Date of Birth :
06-11-1960
Place :
ಬಂದರವಾಡ, ಅಫಜಲಪುರ ತಾ||
Photo :

Programs

ಶ್ರಾವಣ ಮಾಸದಲ್ಲಿ ರುದ್ರಾಭಿಷೇಕ ಮತ್ತು ವಿಶೇಷ ಪೂಜೆ, ವಿವಿಧ ಕಾರ್ಯಕ್ರಮಗಳು
ಶ್ರೀ ರಾಮ ನವಮಿ ದಿನದಂದು ಶ್ರೀ ಮಠದ ರಥೋತ್ಸವ

Photos

Full Address Kannada

ಶ್ರೀ ಶಿವಯೋಗೇಶ್ವರ ಬೃಹನ್ಮಠ
ಹಿಂಚಗೇರಿ - 585 301
ಅಫಜಲಪುರ ತಾ||, ಕಲಬುರಗಿ ಜಿಲ್ಲೆ

Map

Near by Places

ಚೌಡಪುರ 30 ಕಿ.ಮೀ.
ಕಲಬುರಗಿ 70 ಕಿ.ಮೀ.
ಅಫಜಲಪುರ 6 ಕಿ.ಮೀ.

Statistic

0 Views
0 Rating
0 Favorite
0 Share
error: Content is protected !!