Shree Shivayoga Mandira, Kalena Halli

Shree Shivayoga Mandira, Kalena Halli Claimed

ಶ್ರೀ ಶಿವಯೋಗ ಮಂದಿರ, ಕಾಳೇನಹಳ್ಳಿ

Average Reviews

Description

ಶ್ರೀ ಶಿವಯೋಗ ಮಂದಿರ, ಕಾಳೇನಹಳ್ಳಿ

ಕರ್ತೃ ಶ್ರೀ ಮ.ನಿ.ಪ್ರ. ರುದ್ರಮುನಿ ಮಹಾಸ್ವಾಮಿಗಳು

ವೀರಶೈವ ಮಹಾಸಭೆಯ ಸ್ಥಾಪಕರೂ ಹಾಗೂ ಶಿವಯೋಗ ಮಂದಿರಸ್ಥಾಪಕರೂ ಆದ ಹಾನಗಲ್ಲು ಶ್ರೀ ಕುಮಾರ ಸ್ವಾಮಿಗಳು ಮಲೆನಾಡಿಗೆ ಧರ್ಮ ಪ್ರಚಾರಕ್ಕೆಬಂದಾಗ ಭಕ್ತರ ಅಪೇಕ್ಷೆಯಂತೆ ಕುಮದ್ವತಿ, ವೃಷಭಾವತಿ ನದಿಗಳ ಸಂಗಮ ಕ್ಷೇತ್ರದಲ್ಲಿ1912ರಲ್ಲಿ ಶಿವಯೋಗ ಮಂದಿರದ ಶಾಖೆಯನ್ನು ಸ್ಥಾಪಿಸಿದರು.ಈ ರೀತಿ ಭಕ್ತರ ಅಪೇಕ್ಷೆಯಂತೆ ಪ್ರಾರಂಭಗೊಂಡ ಶ್ರೀಮಠಕ್ಕೆ ಶ್ರೀಗಳು ಬ್ರಿಟಿಷ್ಸರ್ಕಾರದಿಂದ ನೂರಾರು ಎಕರೆ ಕಾಡನ್ನು ಮಂಜೂರು ಮಾಡಿಸುತ್ತಾರೆ. ಶ್ರೀಮಠಕ್ಕೆ ಕೆಲವುಸಾಧಕರು ಬಾಗಲಕೋಟೆ ಕಡೆಯಿಂದ ಬಂದು ನೆಲೆಸುತ್ತಾರೆ. ಅಂತಹ ಸಾಧಕರಲ್ಲಿಪ್ರಮುಖರೆನಿಸಿದ್ದ ಶ್ರೀ ರುದ್ರಮುನಿ ದೇಶಿಕರಿಗೆ ಶ್ರೀ ಕುಮಾರ ಸ್ವಾಮಿಗಳು ಈ ಮಠವನ್ನುಒಪ್ಪಿಸಿ ಧರ್ಮಪ್ರಚಾರಕ್ಕೆ ಮುನ್ನಡೆಯುತ್ತಾರೆ.ಶ್ರೀಮಠವು ನಂತರದಲ್ಲಿ ಶ್ರೀ ಮ.ನಿ.ಪ್ರ. ರುದ್ರಮುನಿ ಮಹಾಸ್ವಾಮಿಗಳಿಂದಅಭಿವೃದ್ಧಿ ಪಥದತ್ತ ಮನ್ನಡೆಯಿತು. ಕಾಡಿನ ಮಧ್ಯದಲ್ಲಿದ್ದ ಶ್ರೀ ಮಠವನ್ನು ಭಕ್ತರ ಸಹಕಾರದೊಂದಿಗೆ ಸ್ವಂತ ಪರಿಶ್ರಮದಿಂದ, ತಮ್ಮ ಅನುಷ್ಠಾನದ ಬಲದಿಂದ ಮುನ್ನಡೆಸಿದ್ದಾರೆ.ಹಾಗೆಯೇ ಧಾರ್ಮಿಕ ಆಚರಣೆಯಿಂದ ಭಕ್ತರನ್ನು ಆಕರ್ಷಿಸಿಕೊಂಡು ಈ ಸ್ಥಳವನ್ನು ಜಾಗೃತಸ್ಥಳವನ್ನಾಗಿ ರೂಪಿಸಿದ್ದಾರೆ. ಶ್ರೀಗಳು ಶ್ರೀಮಠದ ಅಭಿವೃದ್ಧಿಯ ಜೊತೆಗೆ ಗೋಶಾಲೆಯನ್ನೂ ಪ್ರಾರಂಭಿಸಿ ಜೊತೆಗೆ ವಿಭೂತಿ ತಯಾರಿಕೆಯನ್ನೂ ಪ್ರಾರಂಭಿಸುತ್ತಾರೆ.ಶ್ರೀ ರುದ್ರಮುನಿ ಸ್ವಾಮಿಗಳು ಮೊದಲು ಕಪ್ಪನಹಳ್ಳಿ ಭಾಗದ ನದಿ ದಡದಲ್ಲಿಮಠವನ್ನು ಅಭಿವೃದ್ಧಿಪಡಿಸಿ ನಂತರ ನದಿಯ ಇನ್ನೊಂದು ಬದಿಗೆ ಬಂದು ಕಾಳೇನಹಳ್ಳಿಭಾಗದಲ್ಲೂ ಮಠವನ್ನು ಸ್ಥಾಪಿಸಿ ಎರಡೂ ಕಡೆಯಲ್ಲೂ ಅಭಿವೃದ್ಧಿ ಪಡಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ.ಮನಿ.ಪ್ರ. ರೇವಣಸಿದ್ದ ಸ್ವಾಮಿಗಳು ಹಿರಿಯ ಗುರುಗಳಿಂದಅಭಿವೃದ್ಧಿಗೊಂಡ ಮಠಗಳನ್ನು ಸಮರ್ಥವಾಗಿ ಕಾಯಕಯೋಗದಿಂದ ಮುನ್ನಡೆಸಿದ್ದಾರೆ.ಸಂಗಮ ಸ್ಥಳದಲ್ಲಿ ಶ್ರೀ ಸಂಗಮೇಶ್ವರ ದೇವಸ್ಥಾನವಿದ್ದು ಇದರ ಪಕ್ಕದಲ್ಲಿ ಹಿಂದಿನ ಶ್ರೀಗಳಾದಶ್ರೀ ರುದ್ರಮುನಿ ದೇಶಿಕರ ಗದ್ದುಗೆ ಮಂಟಪ ಮಾಡಲಾಗಿದೆ.ಹಾಗೆಯೇ ಪ್ರತಿ ತಿಂಗಳು ಶಿವಾನುಭವಗೋಷ್ಠಿ ಹಾಗೂ ವಿವಿಧ ಧಾರ್ಮಿಕ,ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ನಾಡಿನ ಪ್ರಮುಖ ದಾರ್ಶನಿಕರನ್ನು ಕರೆಸಿಧಾರ್ಮಿಕ ಹಾಗೂ ಸಾಹಿತ್ಯಿಕ ವಿಚಾರಗೋಷ್ಠಿಗಳ ಮೂಲಕ ಜನಜಾಗೃತಿ ಮಾಡುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ರೇವಣಸಿದ್ದ ಸ್ವಾಮಿಗಳು
Date of Birth :
2-3-1947
Place :
ಬಸವನ ಬಾಗೇವಾಡಿ ಬಿಜಾಪುರ ಜಿ||
Pattadikara :
1-2-1977
Photo :

Programs

ಪ್ರತಿ ಅಮವಾಸ್ಯೆಯಲ್ಲಿ “ಶಿವಾನುಭವ ಗೋಷ್ಠಿ”. ಮಾಘಮಾಸದಲ್ಲಿ ಶ್ರೀ ಮಠದ ಜಾತ್ರೆ, ಸಾಮೂಹಿಕ ವಿವಾಹಗಳು. ಸೀಗೆ ಹುಣ್ಣಿಮೆಯಂದು ಅಡ್ಡಪಲ್ಲಕಿ ಉತ್ಸವ ಹಾಗೂ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು. ಶ್ರೀ ಮ.ನಿ.ಪ್ರ. ರುದ್ರಮುನಿ ಮಹಾಸ್ವಾಮಿಗಳ ಪುಣ್ಯಾರಾಧನೆ.

Institutions

ಸಂಸ್ಕøತ ಪಾಠಶಾಲೆ ಪ್ರೌಢಶಾಲೆ ಗೋಶಾಲೆ

Photos

Full Address Kannada

ಶ್ರೀ ಶಿವಯೋಗ ಮಂದಿರ, ಕಾಳೇನಹಳ್ಳಿ ಸಾಲೂರು ಪೋಸ್ಟ್ - 577 214 ಶಿಕಾರಿಪುರ ತಾ., ಶಿವಮೊಗ್ಗ ಜಿ.

Map

Near by Places

ಶಿಕಾರಿಪುರ - 5 ಕಿ.ಮೀ. ಸಾಲೂರು - 6 ಕಿ.ಮೀ. ಶಿವಮೊಗ್ಗ - 55 ಕಿ.ಮೀ.

Statistic

11 Views
0 Rating
0 Favorite
0 Share
error: Content is protected !!