Shree Shivanand Matha, Kundgol

Shree Shivanand Matha, Kundgol Claimed

ಶ್ರೀ ಶಿವಾನಂದ ಮಠ, ಕುಂದಗೋಳ

Average Reviews

Description

ಶ್ರೀ ಶಿವಾನಂದ ಮಠ, ಕುಂದಗೋಳ

ಕರ್ತೃ ಪೂಜ್ಯ ಲಿಂ. ಶ್ರೀ ಬಸವೇಶ್ವರ ಮಹಾಸ್ವಾಮಿಗಳು

ಧಾರವಾಡ ಜಿಲ್ಲೆ ಕುಂದಗೋಳ ಪಟ್ಟಣದ ಮಧ್ಯಭಾಗದಲ್ಲಿ 1948ರಲ್ಲಿಪರಮಪೂಜ್ಯ ಶ್ರೀ ಬಸವೇಶ್ವರ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಶಿವಾನಂದಮಠವು ತನ್ನ ವಿಶಿಷ್ಟ ಸಂಪ್ರದಾಯದ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಹಾಗೂಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳ ಮೂಲಕ ಈ ಭಾಗದಲ್ಲಿ ಪ್ರಸಿದ್ಧಿಗೊಂಡಿದೆ.ಶ್ರೀ ಬಸವೇಶ್ವರ ಮಹಾಸ್ವಾಮಿಗಳು ಗದಗದ ಶ್ರೀ ಶಿವಾನಂದ ಮಠದ ಶ್ರೀಶಿವಾನಂದ ಮಹಾಸ್ವಾಮಿಗಳ ಪ್ರಮುಖ ಶಿಷ್ಯರು. ಗುರುಗಳ ಸೇವೆಯಲ್ಲಿ ಸಾರ್ಥಕತೆಕಂಡುಕೊಂಡಿದ್ದ ಶ್ರೀಗಳು 1948ರಲ್ಲಿ ಗದಗದಿಂದ ಕುಂದಗೋಳಕ್ಕೆ ಆಗಮಿಸಿ ಶ್ರೀ ಶಿವಾನಂದಮಠವನ್ನು ಸ್ಥಾಪಿಸಿದರು. ಗುರುಗಳು ಕೇವಲ ಆಧ್ಯಾತ್ಮಿಕತೆಗೆ ಗಮನ ಕೊಡದೆ ಸಾಮಾಜಿಕಹಾಗೂ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಮೂಲಕ ಅಪಾರ ಭಕ್ತ ಬಳಗವನ್ನುಸಂಪಾದಿಸಿಕೊಂಡರು.ಶ್ರೀಗಳು ಶ್ರೀಮಠವನ್ನು ಸ್ಥಾಪಿಸಿದ ಪ್ರಾರಂಭದಲ್ಲೇ ವಿದ್ಯಾರ್ಥಿನಿಲಯವನ್ನುಸ್ಥಾಪಿಸಿ ಕಲಿಯುವ ಬಡಮಕ್ಕಳ ವಿದ್ಯಾಭ್ಯಾಸ ಹಾಗೂ ದಾಸೋಹಕ್ಕೆ ನೆರವಾದರು. ಭಕ್ತರಸಹಕಾರದೊಂದಿಗೆ ವಿದ್ಯಾರ್ಥಿನಿಲಯವನ್ನು ವಿಸ್ತರಿಸಿದ್ದಲ್ಲದೆ ಜಗದ್ಗುರು ಶ್ರೀ ಶಿವಾನಂದವಿದ್ಯಾಪೀಠವನ್ನು ಸ್ಥಾಪಿಸಿ ಅದರಡಿಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು.ಹಿಂದಿನ ಶ್ರೀಗಳಾದ ಶ್ರೀ ಬಸವರಾಜ ಸ್ವಾಮಿಗಳು ಶ್ರೀಮಠದ ಹಾಗೂ ಶಿಕ್ಷಣಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದರು. ಪ್ರಸ್ತುತ ಶ್ರೀಗಳಾದ ಪೂಜ್ಯ ಶ್ರೀಬಸವೇಶ್ವರ ಮಹಾಸ್ವಾಮಿಗಳು 2008ರ ಜುಲೈ 15ರಂದು ಶ್ರೀಮಠದ ಅಧಿಕಾರ ಸ್ವೀಕರಿಸಿದ್ದುಕರ್ತೃಗುರುಗಳ ಹಾಗೂ ಪರಂಪರೆಯ ಆಶಯದಂತೆ ಶ್ರೀಮಠವನ್ನು ಸಮರ್ಥವಾಗಿಮುನ್ನಡೆಸಿಕೊಂಡು ಬರುತ್ತಿದ್ದಾರೆ.ಶ್ರೀಮಠದ ವತಿಯಿಂದ ನಡೆಯುತ್ತಿರುವ ಶ್ರೀ ಶಿವಾನಂದ ವಿದ್ಯಾಪೀಠದಅಡಿಯಲ್ಲಿ ಪ್ರಾಥಮಿಕ ಶಿಕ್ಷಣದಿಂದ ಪದವಿಪೂರ್ವ ಶಿಕ್ಷಣವರೆಗಿನ ಶಿಕ್ಷಣ ಸಂಸ್ಥೆಗಳುಕಾರ್ಯ ನಿರ್ವಹಿಸುತ್ತಲಿವೆ ಹಾಗೂ ಸಂಸ್ಕøತ ವೇದ ಪಾಠಶಾಲೆ, ಶ್ರೀ ಬಸವೇಶ್ವರ ಯೋಗತರಬೇತಿ ಕೇಂದ್ರಗಳು ಈ ಭಾಗದ ಸಾಂಸ್ಕøತಿಕ ಸೌರಭವನ್ನು ಹೆಚ್ಚಿಸಿವೆ.

Swamiji

Swamiji Name :
ಪೂಜ್ಯ ಶ್ರೀ ಬಸವೇಶ್ವರ ಮಹಾಸ್ವಾಮಿಗಳು
Date of Birth :
15-3-1969
Pattadikara :
15-7-2008
Photo :

Programs

ಪ್ರತಿ ನಿತ್ಯ ಸಾಮೂಹಿಕ ಪ್ರಾಥನೆ
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ.
ಮಾಘಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.

Institutions

ಶ್ರೀ ಬಸವೇಶ್ವರ ಯೋಗ ತರಬೇತಿ ಕೇಂದ್ರ.
ಸಂಸ್ಕøತ ವೇದ ಪಾಠಶಾಲೆ ಪೂರ್ವ ಪ್ರಾಥಮಿಕ ಶಾಲೆ / ಹಿಂದಿ ಪಾಠಶಾಲೆ.
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ.
ಪದವಿ ಪೂರ್ವ ಕಾಲೇಜು. ವಿದ್ಯಾರ್ಥಿ / ವಿದ್ಯಾರ್ಥಿನಿಯರ
ವಸತಿ ನಿಲಯ.

Photos

Full Address Kannada

ಶ್ರೀ ಶಿವಾನಂದ ಮಠ
ಕುಂದಗೋಳ - 581 113
ಧಾರವಾಡ ಜಿ||

Map

Near by Places

ಹುಬ್ಬಳ್ಳಿ - 20 ಕಿ.ಮೀ.
ಲಕ್ಷ್ಮೇಶ್ವರ - 30 ಕಿ.ಮೀ.
ಧಾರವಾಡ - 40 ಕಿ.ಮೀ.

Statistic

402 Views
0 Rating
0 Favorite
0 Share
error: Content is protected !!