ಧಾರವಾಡ ಜಿಲ್ಲೆ ಹೆಬ್ಬಳ್ಳಿ ಗ್ರಾಮದ ಹೊರವಲಯದಲ್ಲಿ ಅಸ್ತಿತ್ವದಲ್ಲಿರುವ ಶ್ರೀಶಿವಾನಂದ ಮಠವು ಗದಗದ ಶ್ರೀ ಶಿವಾನಂದ ಮಠದ ಪರಂಪರೆಯಲ್ಲಿ ಬೆಳೆದು ಬಂದಿದೆ.ಶ್ರೀಮಠದ ಸ್ಥಾಪಕರಾದ ಶ್ರೀ ಸದ್ಗುರು ವಾಸುದೇವ ಮಹಾಸ್ವಾಮಿಗಳು ಬಾದಾಮಿತಾಲ್ಲೂಕಿನ ಕೊಪ್ಪ ಗ್ರಾಮದವರಾಗಿದ್ದು ಬಾಲ್ಯದಿಂದಲೂ ಆಧ್ಯಾತ್ಮದತ್ತ ಒಲವು ಹೊಂದಿಗದಗದ ಶ್ರೀ ಶಿವಾನಂದ ಸ್ವಾಮಿಗಳ ಸಂಪರ್ಕಕ್ಕೆ ಬಂದರು.ಶ್ರೀ ಸದ್ಗುರು ವಾಸುದೇವ ಸ್ವಾಮಿಗಳು ಶ್ರೀ ಶಿವಾನಂದರ ಸೇವೆಯಲ್ಲಿ ಪರಿಪಕ್ವಗೊಂಡು ಅವರ ಆಶೀರ್ವಾದದೊಂದಿಗೆ ಸಂಚಾರಕ್ಕೆ ಹೊರಟರು. ನಾಡಿನಾದ್ಯಂತ ಸಂಚರಿಸುತ್ತಾ ಹೆಬ್ಬಳ್ಳಿ ಭಾಗಕ್ಕೆ ಆಗಮಿಸಿದ ಶ್ರೀಗಳು ಇಲ್ಲಿಯೇ ನೆಲೆನಿಂತು ಶ್ರೀ ಶಿವಾನಂದಮಠವನ್ನು ಸ್ಥಾಪಿಸಿದರು. ತಮ್ಮ ಸರಳ ವ್ಯಕ್ತಿತ್ವದಿಂದ ಬಹುಬೇಗನೆ ಅಪಾರ ಭಕ್ತರನ್ನುಸಂಪಾದಿಸಿದ ಶ್ರೀಗಳು ತಮ್ಮ ಆಚರಣೆಗಳ ಮೂಲಕ ಭಕ್ತರಲ್ಲಿ ಧಾರ್ಮಿಕ ಅರಿವನ್ನುಮೂಡಿಸುವಲ್ಲಿ ಶ್ರಮಿಸಿದರು. ಮಠವನ್ನು ಸದಾ ಚಟುವಟಿಕೆಯ ಕೇಂದ್ರವನ್ನಾಗಿಸಿ ಭಕ್ತರನ್ನುಧಾರ್ಮಿಕ ಚಿಂತನೆಗೆ ಒಳಪಡಿಸಿದ ಶ್ರೀಗಳು 1980ರಲ್ಲಿ ಲಿಂಗೈಕ್ಯರಾದರು.ಕರ್ತೃಗುರುಗಳ ನಂತರ ಶ್ರೀ ಸದ್ಗುರು ಬಸವರಾಜ ಸ್ವಾಮಿಗಳು ಶ್ರೀಮಠವನ್ನುಸಮರ್ಥವಾಗಿ ಮುನ್ನಡೆಸಿದ್ದು ಭಕ್ತರ ಸಹಕಾರದೊಂದಿಗೆ ಶ್ರೀಮಠದ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿದರು. ಸೊಲ್ಲಾಪುರದ ಗುರುಕುಲದಲ್ಲಿ ವ್ಯಾಸಂಗ ಮಾಡಿದ್ದ ಶ್ರೀಗಳು ತಮ್ಮವಿಚಾರಧಾರೆಗಳ ಮೂಲಕ ಜನರ ಅಂಧಶ್ರದ್ಧೆ, ಮೂಢನಂಬಿಕೆಗಳನ್ನು ಹೊಡೆದೋಡಿಸಲುಶ್ರಮಿಸಿದರು. ಸ್ವತಃ ಕಾಯಕಯೋಗಿಗಳಾಗಿ ಶ್ರೀಮಠದ ಜಮೀನನ್ನು ಅಭಿವೃದ್ಧಿಪಡಿಸಿದಶ್ರೀಗಳು ಮಠಕ್ಕೆ ಆದಾಯದ ಹರಿವನ್ನು ಹೆಚ್ಚಿಸಿದರು.ಪ್ರಸ್ತುತ 2011ರ ಜೂನ್ 27ರಲ್ಲಿ ಶ್ರೀಮಠದ ಪಟ್ಟಕ್ಕೆ ಬಂದಿರುವ ಶ್ರೀ ಸದ್ಗುರುಬ್ರಹ್ಮಾನಂದ ಸ್ವಾಮಿಗಳು ಪ್ರತಿನಿತ್ಯ ತಮ್ಮ ಶಾಸ್ತ್ರ, ಪ್ರವಚನಗಳ ಮೂಲಕ ಭಕ್ತರನ್ನುಚಿಂತನೆಗೊಳಪಡಿಸುತ್ತಿದ್ದಾರೆ. ಶ್ರೀಮಠದ ರಥೋತ್ಸವವು ಅವರಾತ್ರಿ ಅಮವಾಸ್ಯೆ ನಂತರದಪಾಡ್ಯಕ್ಕೆ ಜರುಗುತ್ತಿದ್ದು ಆ ಸಮಯದಲ್ಲಿ ಕರ್ತೃಗುರುಗಳ ಪುಣ್ಯಸ್ಮರಣೋತ್ಸವನ್ನುನಡೆಸಲಾಗುತ್ತಿದೆ.
Swamiji
Swamiji Name :
ಶ್ರೀ ಸದ್ಗುರು ಬ್ರಹ್ಮಾನಂದ ಸ್ವಾಮಿಗಳು
Date of Birth :
1-7-1962
Place :
ಹೆಬ್ಬಳ್ಳಿ, ಧಾರವಾಡ ಜಿಲ್ಲೆ.
Pattadikara :
27-6-2011
Photo :
Programs
ಪ್ರತಿನಿತ್ಯ ಶ್ರೀಗಳ ಶಾಸ್ತ್ರ ಪ್ರವಚನ ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ.
ಶ್ರಾವಣ ಮಾಸದಲ್ಲಿ ಶಿವನಾಮ ಜಪಯಜ್ಞ, ಪುರಾಣ ಪ್ರವಚನ.
ಕಾರ್ತೀಕ ಮಾಸದಲ್ಲಿ ಶ್ರೀ ಬಸವರಾಜ ಸ್ವಾಮಿಗಳ ಪುಣ್ಯಾರಾಧನೆ.
ಅವರಾತ್ರಿ ಅಮವಾಸ್ಯೆ ನಂತರದ ಪಾಡ್ಯಕ್ಕೆ ಶ್ರೀಮಠದ ರಥೋತ್ಸವ, ಸಾಮೂಹಿಕ ವಿವಾಹಗಳು ಮತ್ತು ಕರ್ತೃಗುರುಗಳ ಪುಣ್ಯಾರಾಧನೆ.
Photos
Full Address Kannada
ಶ್ರೀ ಶಿವಾನಂದ ಮಠ
ಹೆಬ್ಬಳ್ಳಿ - 580 112
ಧಾರವಾಡ ತಾ||, ಜಿ||