Shree Shivalingeshwara Virakta Matha – Madana Hipparaga

Shree Shivalingeshwara Virakta Matha – Madana Hipparaga Claimed

ಶ್ರೀ ಶಿವಲಿಂಗೇಶ್ವರ ವಿರಕ್ತಮಠ - ಮಾದನಹಿಪ್ಪರಗಾ

Average Reviews

Description

ಶ್ರೀ ಶಿವಲಿಂಗೇಶ್ವರ ವಿರಕ್ತ ಮಠ ಮಾದನಹಿಪ್ಪರಗಾ

ಕರ್ತೃ ಶ್ರೀ ಮ.ನಿ.ಪ್ರ. ಆದಿ ಶಿವಲಿಂಗೇಶ್ವರ ಮಹಾಸ್ವಾಮಿಗಳು

ಮಾದನ ಹಿಪ್ಪರಗಾ ಗ್ರಾಮದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಶಿವಲಿಂಗೇಶ್ವರವಿರಕ್ತಮಠವು ಬಸವಾದಿ ಶಿವಶರಣರು ಹಾಕಿಕೊಟ್ಟ ತತ್ತ್ವಾದರ್ಶಗಳನ್ನು ಸಮರ್ಥವಾಗಿಜನರಿಗೆ ತಲುಪಿಸುವ ಮೂಲಕ ಈ ಭಾಗದಲ್ಲಿ ಸಾಮಾಜಿಕ ಕ್ರಾಂತಿಯನ್ನು ಮಾಡಿದೆ. ಶ್ರೀಆದಿಶಿವಲಿಂಗೇಶ್ವರ ಮಹಾಸ್ವಾಮಿಗಳು ಶ್ರೀಮಠದ ಕರ್ತೃಗುರುಗಳಾಗಿದ್ದು ಶರಣರು ಕಂಡುಕನಸು ನನಸಾಗಬೇಕೆಂದು ಅಭಿಲಾಕ್ಷೆಪಟ್ಟು ಧರ್ಮವನ್ನು ಬೆಳೆಸಿದವರು. ನಿತ್ಯಶಿವಾನುಭವಗೋಷ್ಠಿಗಳ ಮೂಲಕ ಗ್ರಾಮದ ಜನರನ್ನು ಸಂಸ್ಕಾರವಂತರನ್ನಾಗಿ ಮಾಡಿದಶ್ರೀಗಳ ಕಾರಣದಿಂದಾಗಿ ಇಂದು ಶ್ರೀಮಠ ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿಬೆಳೆದುಬಂದಿದೆ.ಕರ್ತೃಗುರುಗಳ ನಂತರದ ಪರಂಪರೆ ಬಗ್ಗೆ ಸ್ಪಷ್ಟತೆಯಿಲ್ಲ. ಶ್ರೀ ಮ.ನಿ.ಪ್ರ.ಶಾಂತಲಿಂಗ ಮಹಾಸ್ವಾಮಿಗಳಿಂದ ಮುಂದುವರೆದ ಪರಂಪರೆ ದಾಖಲಾಗಿದೆ. ಶ್ರೀ ಹಾನಗಲ್ಲಕುಮಾರ ಶಿವಯೋಗಿಗಳು ಮತ್ತು ಹಾವೇರಿಯ ಶ್ರೀ ಶಿವಬಸವ ಮಹಾಸ್ವಾಮಿಗಳಸಮಕಾಲೀನರಾದ ಶ್ರೀ ಶಾಂತಲಿಂಗ ಸ್ವಾಮಿಗಳು ವೀರಶೈವ ಸಮಾಜವನ್ನುಸಂಘಟನಾತ್ಮಕವಾಗಿ ಬೆಳೆಸಿ 1944ರಲ್ಲಿ ಲಿಂಗೈಕ್ಯರಾದರು. ಇವರ ನಂತರ ಬಂದ ಹಿಂದಿನಶ್ರೀಗಳಾದ ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಗಳು ಹಾನಗಲ್ಲ ಶ್ರೀ ಕುಮಾರಮಹಾಸ್ವಾಮಿಗಳ ಕೃಪಾಶೀರ್ವಾದದಿಂದ ಬೆಳೆದು ಮಾದನಹಿಪ್ಪರಗಿ ಮಠದ ಅಧಿಕಾರವನ್ನು1945ರಲ್ಲಿ ಸ್ವೀಕರಿಸಿದರು.ಶ್ರೀ ಶಿವಲಿಂಗ ಮಹಾಸ್ವಾಮಿಗಳ ಕಾಲದಲ್ಲಿ ಶ್ರೀಮಠವು ಸರ್ವತೋಮುಖಅಭಿವೃದ್ಧಿ ಕಂಡಿತು. ಮಠದ ಹಳೆಯ ಕಟ್ಟಡವನ್ನು ತೆಗೆಸಿ ಭವ್ಯವಾದ ನೂತನ ಕಟ್ಟಡವನ್ನುನಿರ್ಮಿಸಿದ ಶ್ರೀಗಳು ಪರಂಪರೆಯ ಗುರುಗಳ ಗದ್ದುಗೆಗಳನ್ನು ನವೀಕರಿಸಿದರು.ಶ್ರೀಮಠದೊಂದಿಗೆ ಹಾವೇರಿಯ ಶ್ರೀ ಹುಕ್ಕೇರಿ ಮಠದ ಆಡಳಿತವನ್ನು ನಡೆಸುತ್ತಾ ಎರಡೂಮಠಗಳನ್ನು ಅಭಿವೃದ್ಧಿಪಡಿಸಿದರು. ಅಪಾರ ಸಂಖ್ಯೆಯ ಭಕ್ತಬಳಗವನ್ನು ಸಂಪಾದಿಸಿದ್ದಶ್ರೀಗಳು ಶರಣರ ಸಂದೇಶಗಳನ್ನು ಜನ ಸಮುದಾಯಕ್ಕೆ ಹಂಚಿ ಸುಸಂಸ್ಕøತ ಸಮಾಜವನ್ನುನಿರ್ಮಿಸಿದರು. ಇಂತಹ ಮಹಾಮಹಿಮರು 2008ರ ಡಿಸೆಂಬರ್ 13ರಲ್ಲಿ ಲಿಂಗೈಕ್ಯರಾದರು.ಶ್ರೀಗಳ ಐಕ್ಯಾ ನಂತರ ಮಠದ ಭಕ್ತರೇ ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಅಭಿನವ ಶಿವಲಿಂಗಮಹಾಸ್ವಾಮಿಗಳನ್ನು 2014ರ ಮೇ 12ರಲ್ಲಿ ಶ್ರೀಮಠದ ಪಟ್ಟಕ್ಕೆ ತಂದಿದ್ದು ಶ್ರೀಗಳು ಹಿಂದಿನಗುರುಗಳ ಹಾದಿಯಲ್ಲಿ ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಅಭಿನವ ಶಿವಲಿಂಗ ಮಹಾಸ್ವಾಮಿಗಳು
Date of Birth :
10-09-1993
Place :
ಚಚಡಿ, ಸವದತ್ತಿ ತಾ||
Pattadikara :
12-05-2014
Photo :

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ, ಶ್ರೀಗಳ ದರ್ಶನ, ಭಜನೆ, ಸಾಮೂಹಿಕ ವಿವಾಹಗಳು
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ಶ್ರೀಗಳ ಪಾದಪೂಜೆ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು
ಪ್ರತಿ ವರ್ಷ ಆಗೆ ಹುಣ್ಣಿಮೆಯಂದು ಶ್ರೀ ಆದಿಶಿವಲಿಂಗೇಶ್ವರ ಸ್ವಾಮಿ ರಥೋತ್ಸವ ಡಿಸಂಬರ್ 8 ರಿಂದ 13ರವರೆಗೆ ಲಿಂ|| ಶ್ರೀ ಮ.ನಿ.ಪ್ರ. ಶಾಂತಲಿಂಗ ಮಹಾಸ್ವಾಮಿಗಳು ಮತ್ತು ಲಿಂ|| ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವ ಹಾಗೂ ವಿಶೇಷವಾಗಿ ದನಗಳ ಜಾತ್ರೆ ಮತ್ತು ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ

Photos

Full Address Kannada

ಶ್ರೀ ಶಿವಲಿಂಗೇಶ್ವರ ವಿರಕ್ತ ಮಠ
ಮಾದನಹಿಪ್ಪರಗಾ - 585236
ಆಳಂದ ತಾ||, ಕಲಬುರಗಿ ಜಿಲ್ಲೆ

Map

Near by Places

ಆಳಂದ - 30 ಕಿ.ಮೀ.
ಕಲಬುರಗಿ - 75 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!