ಹಿರೇಸಾವಳಗಿ ಗ್ರಾಮದ ಹೊರವಲಯದಲ್ಲಿ ಶ್ರೀ ಶಿವಲಿಂಗೇಶ್ವರ ಸಂಸ್ಥಾನಮಠವು ಸ್ಥಾಪನೆಯಾಗಿದ್ದು ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿಅಭಿವೃದ್ದಿಗೊಂಡು ಸಮಾಜವನ್ನು ಬೆಳೆಸಿದೆ. ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳೆಂದರೇಈ ಭಾಗದಲ್ಲಿ ಬಹುದೊಡ್ಡ ಹೆಸರು. ಹಿರೇಸಾವಳಗಿ ಸಮೀಪದ ಕೊಳ್ಳೂರು ಗ್ರಾಮದಲ್ಲಿಜನಿಸಿದ ಶಿವಯೋಗಿಗಳು ಹಿರೇಸಾವಳಗಿಯ ಬೆಟ್ಟದ ಮೇಲೆ ಅನುಷ್ಠಾನಗೊಂಡುತಪೋಸಿದ್ದಿಯನ್ನು ಸಾದಿಸಿಕೊಂಡರು. ಶ್ರೀಗಳ ಪವಾಡಗಳಿಂದ ಅನುಗ್ರಹಿತರಾದ ಜನರುಗುರುಗಳಿಗೋಸ್ಕರ ಹಿರೇಸಾವಳಗಿಯಲ್ಲಿ ಮಠವನ್ನು ಸ್ಥಾಪಿಸಿದ ನಂತರ ಗುರುಗಳು ಅಲ್ಲಿನೆಲೆನಿಂತು ಮತ್ತೆ ಸಂಚಾರಕ್ಕೆ ಹೊರಟರು.ಶ್ರೀ ಶಿವಲಿಂಗೇಶ್ವರರು ಕರ್ನಾಟಕ, ಆಂಧ್ರ, ಮಹಾರಾಷ್ಟ್ರಗಳಲ್ಲಿ ಸಂಚರಿಸಿ ಜ್ಞಾನ,ಅನ್ನ, ವಸ್ತ್ರ ಅಂದರೆ ತ್ರಿವಿಧ ದಾಸೋಹ ಮಾಡಿ ಸಮಸ್ತ ಭಕ್ತರ ಉದ್ದಾರ ಮಾಡಿದ್ದಾರೆ.ದೆಹಲಿ ಔರಂಗಜೇಬ ಬಾದಷಹ, ಕಲಬುರಗಿಯ ಶ್ರೀ ಖಾಜಾ ಬಂದೇನವಾಜರಿಂದ ಗೌರವಪಡೆದು ಸುರಪುರ ದೊರೆಯಿಂದ ಪಾದ ಪೂಜೆ ಮಾಡಿಸಿಕೊಂಡು ಕರುಬೆಟ್ಟ ಶ್ರೀ ಸಿದ್ದರಾಮದೇಸಾಯಿಗೆ ಆಶೀರ್ವದಿಸಿ ಮುನ್ನೂರಾ ಅರವತ್ತಕ್ಕೂ ಹೆಚ್ಚು ಗುಡಿ ಮಠಗಳನ್ನು ಸ್ಥಾಪಿಸಿಕೊನೆಗೆ ಗೋಕಾಕ್ ಸಮೀಪದ ಸಾವಳಗಿಯಲ್ಲಿ ಮಠವನ್ನು ಸ್ಥಾಪಿಸಿ ತಮ್ಮಯೋಗಭೂಮಿಯನ್ನಾಗಿ ಮಾಡಿಕೊಂಡು ಅಲ್ಲಿಯೇ ನಿರ್ವಿಕಲ್ಪ ಸಮಾದಿ ಹೊಂದಿದರು.ಇವರ ನಂತರ ಗುರುಗಳ ಶಿಷ್ಯ ಶ್ರೀ ಮಹಾಂತೇಶ್ವರ ಮಹಾಸ್ವಾಮಿಗಳು ಗುರುಗಳಅಪ್ಪಣೆಯಂತೆ ಮಠದ ಪರಂಪರೆಯನ್ನು ಮುಂದುವರೆಸಿದ್ದಾರೆ.ಹಿಂದೂ – ಮುಸಲ್ಮಾನ ಬಾವೈಕ್ಯತಾ ಕೇಂದ್ರವಾಗಿ ಪ್ರಸಿದ್ದಿಗೆ ಬಂದಿರುವಶ್ರೀಮಠದ ಆಚರಣೆಗಳಲ್ಲಿ ವೀರಶೈವರ ಜೊತೆಗೆ ಮುಸಲ್ಮಾನರೂ ಹೆಚ್ಚಿನ ಸಂಖ್ಯೆಯಲ್ಲಿಪಾಲ್ಗೊಳ್ಳುತ್ತಾರೆ. ಹಿಂದಿನ ಶ್ರೀಗಳಾದ ಶ್ರೀ.ಮ.ನಿ.ಪ್ರ. ಮಲ್ಲಿಕಾರ್ಜುನ ಮಹಾಸ್ವಾಮಿಗಳು1968ರಲ್ಲಿ ಶ್ರೀಮಠದ ಅಧಿಕಾರವನ್ನು ವಹಿಸಿಕೊಂಡು ಸಮಷ್ಠಿ ಸಮಾಜದ ಅಭಿವೃದ್ದಿಗಾಗಿದುಡಿದು 2002ರ ಸೆಪ್ಟಂಬರ್ 24ರಲ್ಲಿ ಲಿಂಗೈಕ್ಯರಾಗಿದ್ದಾರೆ. ಈಗಿನ ಶ್ರೀಗಳಾದ ಶ್ರೀ.ಮ.ನಿ.ಪ್ರ.ಗುರುನಾಥ ಮಹಾಸ್ವಾಮಿಗಳು ಶ್ರೀಮಠದ 15ನೇ ಪೀಠಾದಿಪತಿಗಳಾಗಿ 1999ರ ಜನವರಿ13ರಲ್ಲಿ ಅಧಿಕಾರ ಸ್ವೀಕರಿಸಿದ್ದು ಶ್ರೀಮಠವನ್ನು ಪ್ರಗತಿ ಪತದತ್ತ ಮುನ್ನಡೆಸಿದ್ದಾರೆ. ಶ್ರೀಮಠದರಥೋತ್ಸವವು ಪ್ರತಿ ವರ್ಷ ದವನದ ಹುಣ್ಣಿಮೆಯಲ್ಲಿ ಜರುಗುತ್ತಿದ್ದು ಅಸಂಖ್ಯ ಭಕ್ತರುಪಾಲ್ಗೊಳ್ಳುತ್ತಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಗುರುನಾಥ ಮಹಾಸ್ವಾಮಿಗಳು
Date of Birth :
22-5-1992
Place :
ಹಿರೇಸಾವಳಗಿ, ಕಲಬುರಗಿ ಜಿಲ್ಲೆ.
Pattadikara :
13-01-1999
Photo :
Programs
ಪ್ರತಿ ಸೋಮವಾರ ಮತ್ತು ಅಮವಾಸ್ಯೆಗೆ ಶ್ರೀಮಠದಲ್ಲಿ ಭಜನಾ ಕಾರ್ಯಕ್ರಮ
ಮಕರ ಸಂಕ್ರಾಂತಿ ಆಚರಣೆ * ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ
ದಸರದಲ್ಲಿ ಶ್ರೀಮಠದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ಮತ್ತು ಆಯುಧ ಪೂಜೆ
ಪ್ರತಿ ವರ್ಷ ಸೆಪ್ಟಂಬರ್ 24ರಂದು ಲಿಂ|| ಶ್ರೀ.ಮ.ನಿ.ಪ್ರ. ಮಲ್ಲಿಕಾರ್ಜುನ ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವ
ದವನದ ಹುಣ್ಣಿಮೆಗೆ ಶ್ರೀಮಠದ ರಥೋತ್ಸವದ ನಂತರ ಊರ ಭಕ್ತರಿಂದ “ಪಲ್ಲಕ್ಕಿ ಬಿನ್ನ” ಮಾಡುವುದು
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ ಪದವಿಪೂರ್ವ ಕಾಲೇಜ್
Photos
Full Address Kannada
ಶ್ರೀ ಶಿವಲಿಂಗೇಶ್ವರ ಸಂಸ್ಥಾನ ಮಠ
ಹಿರೇಸಾವಳಗಿ - 585 101
ಕಲಬುರಗಿ ತಾ||, ಜಿ