ಬೀದರ್ ಜಿಲ್ಲಾ ಕೇಂದ್ರದಿಂದ 50 ಕಿ.ಮೀ. ಅಂತರದಲ್ಲಿರುವ ಹೆಡಗಾಪುರಗ್ರಾಮದ ಮಧ್ಯಭಾಗದಲ್ಲಿ ಅಸ್ತಿತ್ವದಲ್ಲಿರುವ ಪುರಾತನ ಪರಂಪರೆಯ ಶ್ರೀ ಶಿವಲಿಂಗೇಶ್ವರಸಂಸ್ಥಾನ ಮಠವು ಶ್ರೀಮದ್ ಉಜ್ಜಯಿನಿ ಪೀಠದ ಶಾಖಾಮಠವಾಗಿ ಶಿಷ್ಯವರ್ಗದಪರಂಪರೆಯಲ್ಲಿ ಬೆಳೆದು ಬಂದಿದೆ. ಶ್ರೀಮಠದ ಕರ್ತೃಗುರುಗಳು ಶ್ರೀ ಶಿವಲಿಂಗ ಸ್ವಾಮಿಪಟ್ಟದ ದೇವರು ಎಂದು ತಿಳಿದುಬರುತ್ತದೆ.ಶ್ರೀಮಠದ ಇತಿಹಾಸ ಹಾಗೂ ಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲವಾದರೂಪರಂಪರೆಯಲ್ಲಿ ಬಂದಿರುವ ಗುರುಗಳು ಧರ್ಮಪ್ರಚಾರ ಮಾಡುತ್ತಾ ಬಂದಿದ್ದಾರೆ. ಹಿಂದಿನಶ್ರೀಗಳಾದ ಶ್ರೀ ಷ.ಬ್ರ. ಸಂಗನಬಸವ ಪಟ್ಟದದೇವರು ಇದೇ ಗ್ರಾಮದವರಾಗಿದ್ದುಶ್ರೀಮಠವನ್ನು ಭಕ್ತರ ಸಹಕಾರದೊಂದಿಗೆ ಸಮರ್ಥವಾಗಿ ಮುನ್ನಡೆಸಿ 1953ರ ನವೆಂಬರ್15ರಲ್ಲಿ ಲಿಂಗೈಕ್ಯರಾದರು. ಇದಾದ ಕೆಲ ಸಮಯ ಪೂಜ್ಯ ಶ್ರೀ ಮಳೇಂದ್ರ ದೇಶಿಕರು ಖಾಲಿಇದ್ದ ಮಠದ ಧಾರ್ಮಿಕ ಆಚರಣೆಗಳನ್ನು ನಡೆಸಿದ್ದಾರೆ. ಆದರೆ ಇವರು ಶ್ರೀಮಠದಪಟ್ಟವನ್ನು ಸ್ವೀಕರಿಸಿರುವುದಿಲ್ಲ.ಶ್ರೀ ಮಳೇಂದ್ರ ದೇಶಿಕರು ಇರುವಾಗಲೇ 1961ರ ಡಿಸೆಂಬರ್ 22ರಲ್ಲಿ ಶ್ರೀಮಠದಪಟ್ಟಕ್ಕೆ ಬಂದವರು ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು.ಇವರನ್ನು ಪಟ್ಟಕ್ಕೆ ತಂದವರು ಭಾಲ್ಕಿ ಹಿರೇಮಠದ ಲಿಂ. ಶ್ರೀ ಚನ್ನಬಸವ ಪಟ್ಟದ್ದೇವರು. ಶ್ರೀಶಿವಲಿಂಗ ಶಿವಾಚಾರ್ಯರು ಸುಧೀರ್ಘ 5 ದಶಕಗಳ ಕಾಲ ಶ್ರೀಮಠವನ್ನು ಮುನ್ನಡೆಸಿದ್ದುಅಪಾರ ಭಕ್ತ ಬಳಗವನ್ನು ಸಂಪಾದಿಸಿಕೊಂಡು ಅವರ ಸಹಕಾರದೊಂದಿಗೆ ಶ್ರೀಮಠವನ್ನುಅಭಿವೃದ್ಧಿಗೊಳಿಸಿದ್ದಾರೆ. 2013ರ ಡಿಸೆಂಬರ್ 22ರಂದು ಶ್ರೀಗಳ ಪಟ್ಟಾಧಿಕಾರದ ಸುವರ್ಣಮಹೋತ್ಸವ ನಡೆದು ಶ್ರೀಗಳ ಬೆಳ್ಳಿ ತುಲಾಭಾರ ಮಾಡಲಾಯಿತು. ಶ್ರೀಗಳು ಆ ಬೆಳ್ಳಿಯನ್ನುಮಾರಾಟ ಮಾಡಿ ಶ್ರೀಮಠದ ಗೋಪುರ ನಿರ್ಮಿಸಿದ್ದಾರೆ. ಶ್ರೀಮಠದಲ್ಲಿ 5 ಗದ್ದುಗೆಗಳುಕಾಣಸಿಗುತ್ತಿದ್ದು, ಶ್ರೀ ಮಳೇಂದ್ರ ದೇಶಿಕರ ಗದ್ದುಗೆ ಶ್ರೀಮಠದ ಹೊಲದಲ್ಲಿದೆ. ಶ್ರೀಮಠದಲ್ಲಿಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ ಮತ್ತು ದವನದ ಹುಣ್ಣಿಮೆಗೆ ಕರ್ತೃಗುರುಗಳಪುಣ್ಯ ಸ್ಮರಣೋತ್ಸವ ಕಾರ್ಯಕ್ರಮಗಳು ಆಯೋಜನೆಗೊಂಡಿರುತ್ತವೆ.
Swamiji
Swamiji Name :
ಶ್ರೀ ಷ.ಬ್ರ. ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
1944
Place :
ಘೋಣಸಗಿ, ವಿಜಯಪುರ ತಾ||
Pattadikara :
22-12-1961
Photo :
Programs
ಅಕ್ಕಮಹಾದೇವಿ ಜಯಂತಿ, ಹನುಮ ಜಯಂತಿ ಹಾಗೂ ಗುರುಪೂರ್ಣಿಮೆ ಆಚರಣೆ.
ಶ್ರಾವಣ ಮಾಸದಲ್ಲಿ ನಿತ್ಯ ಪ್ರವಚನ ಮತ್ತು ಭಜನೆ.
ದವನದ ಹುಣ್ಣಿಮೆಗೆ ಕರ್ತೃಗುರುಗಳ ಪುಣ್ಯಾರಾಧನೆ.
Photos
Full Address Kannada
ಶ್ರೀ ಶಿವಲಿಂಗೇಶ್ವರ ಸಂಸ್ಥಾನ ಮಠ
ಹೆಡಗಾಪುರ - 585 436
ಔರಾದ್ ತಾ||, ಬೀದರ್ ಜಿ||