Shree Shivalinga Matha

Shree Shivalinga Matha Claimed

ಶ್ರೀ ಶಿವಲಿಂಗೇಶ್ವರ ಮಠ

Average Reviews

Description

ಶ್ರೀ ಶಿವಲಿಂಗೇಶ್ವರ ಮಠ, ಮೂಡಿ

ಕರ್ತೃ – ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು

ಶಿವಮೊಗ್ಗ ಜಿˉÉ್ಲಯ ಮೂಡಿ ಗ್ರಾಮದ ಶ್ರೀ ಶಿವಲಿಂಗೇಶ್ವರ ಮಠವು ಸುಮಾರು400 ವರ್ಷಗಳ ಹಿಂದೆ ಶ್ರೀ ಶಿವಲಿಂಗೇಶ್ವರ ಸ್ವಾಮಿಗಳೆಂಬ ಮಹಾಶಿವಯೋಗಿಗಳಿಂದಸ್ಥಾಪನೆಯಾಗಿದೆ ಎಂದು ಹೇಳˉÁಗುತ್ತದೆ. ಇವರ ಪರಮ ಶಿಷ್ಯರಾದ ಶ್ರೀ ಸಾವಳಗೀಶ್ವರರುಹಾಗೂ ಸೊಲಭೇಶ್ವರರು ಈ ಪರಂಪರೆಯನ್ನು ಮುನ್ನಡೆಸಿದ್ದಾರೆ.ಶ್ರೀ ಶಿವಲಿಂಗೇಶ್ವರರು ತುರಬೀಗುಡ್ಡದಲ್ಲಿ ಅನುಷ್ಠಾನದಲ್ಲಿದ್ದಾಗ ಇವರ ಇಬ್ಬರುಶಿಷ್ಯೋತ್ತಮರಲ್ಲಿ ಒಬ್ಬರಾದ ಶ್ರೀ ಸೊಲಭೇಶ್ವರರು ಮೂಡಿಯ ಹೊರಭಾಗದ ವರದಾನದಿದಡದಲ್ಲಿ ಅನುಷ್ಠಾನ ಕೈಗೊಂಡು ತಮ್ಮ ಶಿಷ್ಯರಿಗೆ ಶ್ರೀ ಶಿವಲಿಂಗೇಶ್ವರರು ಎಂದು ಅಭಿದಾನವಿತ್ತು ಮೂಡಿಯಲ್ಲಿ ಮಠ ಸ್ಥಾಪನೆಯಾಗಲು ಕಾರಣರಾದರು. ಶ್ರೀಗಳು ಮೂಲ ಶ್ರೀಶಿವಲಿಂಗೇಶ್ವರರಿಂದ ಪ್ರಾರಂಭವಾಗಿದ್ದ ಪರಂಪರೆಯನ್ನು ಮೂಡಿಯಲ್ಲಿ ಮುನ್ನಡೆಸಿದ್ದಾರೆ.ಹೀಗೆ ಮಹಾಮಹಿಮ ತಪಸ್ವಿಗಳ ಅನುಷ್ಠಾನದಿಂದ ಧಾರ್ಮಿಕ ಕೇಂದ್ರಬಿಂದುವಾಗಿದ್ದ ಮಠವು ಕಾˉÁನಂತರ ಜೀರ್ಣಗೊಳ್ಳತೊಡಗಿತು. ಆ ಸಮಯದಲ್ಲಿ ಶ್ರೀ ಶ್ರೀಕಂಠಸ್ವಾಮಿಗಳು, ಶ್ರೀ ಚಿದಾನಂದ ಸ್ವಾಮಿಗಳು, ಶ್ರೀ ನವಲಪ್ಪಯ್ಯ ಸ್ವಾಮಿಗಳು ಅಧಿಕಾರವಹಿಸಿಕೊಂಡು ಭಕ್ತರಿಗೆ ಮಾರ್ಗದರ್ಶನ ನೀಡಿದ್ದಾರೆ. ಆದರೆ ಇವರುಗಳ ತರುವಾಯಗುರುಗಳಿಲ್ಲದೆ ಪೂರ್ಣ ಜೀರ್ಣಾವಸ್ಥೆಗೆ ತಲುಪಿದ್ದ ಮಠಕ್ಕೆ ಶ್ರೀ ಚನ್ನವೀರ ಸ್ವಾಮಿಗಳುಪಟ್ಟಾಧಿಕಾರ ವಹಿಸಿಕೊಳ್ಳುತ್ತಾರೆ.ಶ್ರೀ ಚನ್ನವೀರ ಸ್ವಾಮಿಗಳು ಮಠದ ಅಧಿಕಾರಕ್ಕೆ ಬಂದಾಗಿನಿಂದ ಮಠದಲ್ಲಿಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ನಾಂದಿ ಹಾಡಿದರು. ಹಾಗೆಯೇಜೀರ್ಣಾವಸ್ಥೆಯಲ್ಲಿದ್ದ ಮಠಕ್ಕೆ ಭಕ್ತರ ಸಹಕಾರದೊಂದಿಗೆ ಪೂರ್ಣ ಪ್ರಮಾಣದ ಹೊಸಕಟ್ಟಡವನ್ನು ನಿರ್ಮಿಸಿದರು. ಈ ಭಾಗದಲ್ಲಿ ಶ್ರೀಗಳನ್ನು ಜನರು ಪ್ರೀತಿ ಗೌರವಗಳಿಂದ“ಮೂಡಿಯ ಅಪ್ಪಗಳು” ಎಂದೇ ಕರೆಯುತ್ತಿದ್ದರು.ಪ್ರಸ್ತುತ ಶ್ರೀಗಳಾದ ಶ್ರೀ ಸದಾಶಿವ ಸ್ವಾಮಿಗಳು 2004 ರಲ್ಲಿ ಮಠದ ಅಧಿಕಾರವಹಿಸಿಕೊಂಡು ಶ್ರೀಮಠವನ್ನು ಧಾರ್ಮಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಪಥದತ್ತಕೊಂಡೊಯ್ಯುತ್ತಿದ್ದಾರೆ. ಮೂಲ ಶ್ರೀ ಶಿವಲಿಂಗೇಶ್ವರರು ಮತ್ತು ಶ್ರೀ ಸಾವಳಗೀಶ್ವರರಗದ್ದುಗೆಗಳು ತುರುಬೇಗುಡ್ಡದಲ್ಲಿ ಇದ್ದು ಶ್ರೀ ಸೊಲಭೇಶ್ವರರ ಗದ್ದುಗೆ ಮೂಡಿಯ ವರದಾನದಿದಡದಲ್ಲಿದೆ. ನಂತರ ಅಧಿಕಾರದಲ್ಲಿದ್ದ ಸ್ವಾಮಿಗಳ ಗದ್ದುಗೆಗಳು ಶ್ರೀಮಠದ ಆವರಣದಲ್ಲಿವೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಸದಾಶಿವ ಮಹಾಸ್ವಾಮಿಗಳು
Date of Birth :
15-6-1976
Place :
ಶೆಟ್ಟಿಗಾನಹಳ್ಳಿ ಕೋˉÁರ ತಾ||
Pattadikara :
4-2-2004
Photo :

Programs

ಮಾಘಮಾಸದಲ್ಲಿ ಶ್ರೀ ಶಿವಲಿಂಗೇಶ್ವರ ಮಹಾ ರಥೋತ್ಸವ ಹಾಗೂ ಅಡ್ಡಪಲ್ಲಕ್ಕಿ ಉತ್ಸವ. ಶಿವರಾತ್ರಿ, ಬಸವಜಯಂತಿ ಹಾಗೂ ಕಾರ್ತೀಕ ಮಾಸದಲ್ಲಿ ವಿಶೇಷ ಪೂಜೆ. ಊರ ಒಳಗೆ ಮಠ

Institutions

ಪ್ರೌಢ ಶಾˉÉ ಸಂಸ್ಕøತ ಪಾಠಶಾˉÉ ವಿದ್ಯಾರ್ಥಿ ನಿಲಯ / ಅನಾಥಾಶ್ರಮ

Photos

Full Address Kannada

ಶ್ರೀ ಶಿವಲಿಂಗೇಶ್ವರ ಮಠ ಮೂಡಿ - 577 434 ಸೊರಬ ತಾ||, ಶಿವಮೊಗ್ಗ ಜಿ||

Map

Near by Places

ಸೊರಬ - 35 ಕಿ.ಮೀ ರಾಣೆಬೆನ್ನೂರು - 70 ಕಿ.ಮೀ ಹಾವೇರಿ - 45 ಕಿ.ಮೀ ಶಿರಸಿ - 55 ಕಿ.ಮೀ.

Statistic

97 Views
0 Rating
0 Favorite
0 Share
error: Content is protected !!