Shree Shivakshetra Matha

Shree Shivakshetra Matha Claimed

ಶ್ರೀ ಶಿವಕ್ಷೇತ್ರ ಮಠ

Average Reviews

Description

ಶ್ರೀ ಶಿವಕ್ಷೇತ್ರ ಮಠ – ಚಂದೂಪುರ

ಕರ್ತೃ – ಶ್ರೀ ಷ.ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು

ಮಂಡ್ಯ ಜಿˉÉ್ಲಯ ಮದ್ದೂರು ತಾಲ್ಲೂಕು ಕೇಂದ್ರದಿಂದ 15 ಕಿ.ಮೀ.ದೂರದಲ್ಲಿರುವ ಚಂದೂಪುರ ಗ್ರಾಮದ ಹೊರವಲಯದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಶಿವಕ್ಷೇತ್ರಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಪ್ರಚಲಿತದಲ್ಲಿದೆ. ಶ್ರೀಮದ್ ರಂಭಾಪುರಿಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿರುವ ಶ್ರೀ ಶಿವಕ್ಷೇತ್ರಮಠದ ಕರ್ತೃ ಗುರುಗಳೆಂದು ಶ್ರೀ ಷ.ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳನ್ನುಗುರುತಿಸˉÁಗಿದ್ದು ಇವರ ಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲ.ಶ್ರೀ ಷ.ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಧರ್ಮನಿಷ್ಠರಾಗಿದ್ದುತಮ್ಮ ಅನುಷ್ಠಾನ ಬಲದಿಂದ ಭಕ್ತರನ್ನು ಸನ್ಮಾರ್ಗದಲ್ಲಿ ಮುನ್ನಡೆಸಿ ಅವರಸಹಕಾರದೊಂದಿಗೆ ಶ್ರೀ ಮಠವನ್ನು ಸ್ಥಾಪಿಸಿದ್ದು ಸುತ್ತಮುತ್ತಲಿನಲ್ಲಿ ಹೆಸರಾಗಿದ್ದರು ಎಂದುತಿಳಿದು ಬರುತ್ತದೆ. ಆದರೆ ಅವರ ನಂತರ ಬಂದ ಶ್ರೀಗಳ ಬಗ್ಗೆ ತಿಳಿದು ಬರುವುದಿಲ್ಲ. ಅವರನಂತರ 3ನೇ ಶ್ರೀಗಳಾಗಿ ಶ್ರೀ ಷ.ಬ್ರ. ಮಹಾಲಿಂಗ ಶಿವಾಚಾರ್ಯರು ಶ್ರೀ ಮಠವನ್ನುಮುನ್ನಡೆಸಿದ್ದು ಭಕ್ತರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುವಲ್ಲಿ ಶ್ರಮಿಸಿದ್ದರು.ಶ್ರೀ ಶಿವಕ್ಷೇತ್ರ ಮಠದ 4ನೇ ಪೀಠಾಧಿಪತಿಗಳಾಗಿ ಪಟ್ಟಕ್ಕೆ ಬಂದಿರುವ ಈಗಿನಹಿರಿಯ ಶ್ರೀಗಳಾದ ಶ್ರೀ ಷ.ಬ್ರ. ಮಹಾಲಿಂಗ ಶಿವಾಚಾರ್ಯ ಸ್ವಾಮಿಗಳು 3ನೇ ಶ್ರೀಗಳಹೆಸರನ್ನೇ ಅಭಿದಾನ ಪಡೆದು ಅಧಿಕಾರಕ್ಕೆ ಬಂದವರು. ಶ್ರೀಗಳು ಸುಧೀರ್ಘ ಕಾಲ ಶ್ರೀಮಠವನ್ನು ಮುನ್ನಡೆಸಿದ್ದು ಶ್ರೀ ಮಠದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ.ಈ ಮಧ್ಯೆ 1968ರಲ್ಲಿ ಶ್ರೀಗಳು ಮುಡುಕತೊರೆ ಮಠದ ಅಧಿಕಾರ ವಹಿಸಿಕೊಂಡುಚಂದೂಪುರದ ಶ್ರೀ ಮಠಕ್ಕೆ ಶ್ರೀ ಷ.ಬ್ರ. ಷಡಕ್ಷರ ಶಿವಾಚಾರ್ಯ ಸ್ವಾಮಿಗಳನ್ನು ಅಧಿಕಾರಕ್ಕೆತಂದರು. ಶ್ರೀ ಷಡಕ್ಷರ ಸ್ವಾಮಿಗಳು ಹಿರಿಯ ಶ್ರೀಗಳ ಆಶೀರ್ವಾದ ಬಲದೊಂದಿಗೆ ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿ ಇತ್ತೀಚೆಗೆ ಲಿಂಗೈಕ್ಯರಾಗಿದ್ದಾರೆ. ಆದ ಕಾರಣ ಹಿರಿಯಶ್ರೀಗಳೇ ಶ್ರೀ ಮಠದ ಧಾರ್ಮಿಕ ಆಚರಣೆಗಳನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಮಹಾಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು
Place :
ಹೊನ್ನಲಗೆರೆ, ಮದ್ದೂರು ತಾ||
Photo :

Programs

ಪ್ರತಿ ತಿಂಗಳು ಹುಣ್ಣಿಮೆಗೆ ವಿಶೇಷ ಪೂಜೆ

Photos

Full Address Kannada

ಶ್ರೀ ಶಿವಕ್ಷೇತ್ರ ಮಠ ಚಂದೂಪುರ,
ಹೊನ್ನಲಗೆರೆ ಪೋಸ್ಟ್ - 571 422
ಮದ್ದೂರು ತಾ||, ಮಂಡ್ಯ ಜಿಲ್ಲೆ

Map

Near by Places

ಕೆ.ಎಂ.ದೊಡ್ಡಿ - 10 ಕಿ.ಮೀ.
ಮದ್ದೂರು - 15 ಕಿ.ಮೀ.
ಮಳವಳ್ಳಿ - 25 ಕಿ.ಮೀ.
ಮಂಡ್ಯ - 30 ಕಿ.ಮೀ.

Statistic

13 Views
0 Rating
0 Favorite
0 Share
error: Content is protected !!