ದಾವಣಗೆರೆ ನಗರದ ಹಳೇಪೇಟೆ ಬಡಾವಣೆಯಲ್ಲಿ ಶ್ರೀ ರಂಭಾಪುರಿ ಪೀಠದಶಾಖಾನುವರ್ತಿ ಪ್ರಾಚೀನ ಮಠವು ‘ಶ್ರೀಹಿರೇಮಠ’ ಎಂಬ ಹೆಸರಿನಲ್ಲಿ ಸ್ಥಾಪನೆಯಾಗಿತ್ತು.ತದನಂತರ ಶ್ರೀ ಮಠವು ಶಾಮನೂರು ರಸ್ತೆಯಲ್ಲಿನ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ.ಶ್ರೀ ಹಿರೇಮಠವು ಪ್ರಾಚೀನ ಕಾಲದ್ದೆಂದು ಹೇಳಲಾದರೂ ಕಾಲಮಾನದ ಬಗ್ಗೆ ನಿಖರವಾಗಿತಿಳಿದುಬರುವುದಿಲ್ಲ. 1882ರಲ್ಲಿ ಶ್ರೀಮಠದ ಪಟ್ಟಕ್ಕೆ ಬಂದ ಶ್ರೀ ಮಹಾಲಿಂಗ ಶಿವಾಚಾರ್ಯರನಂತರದ ಪರಂಪರೆ ಲಭ್ಯವಿದೆ. ಆದರೆ ಶ್ರೀಗಳು 1909ರ ಡಿಸೆಂಬರ್ 16ರಲ್ಲಿ ಲಿಂಗೈಕ್ಯರಾದನಂತರ ಶ್ರೀಮಠವು ಮತ್ತೊಮ್ಮೆ ಖಾಲಿ ಉಳಿಯಿತು.ತದನಂತರ 1953ರ ಆಗಸ್ಟ್ 15ರಂದು ಶ್ರೀ ಸದ್ಯೋಜಾತ ಶಿವಾಚಾರ್ಯಸ್ವಾಮಿಗಳು ತಮ್ಮ 10ನೇ ವಯಸ್ಸಿನಲ್ಲಿ ಮಠದ ಉತ್ತರಾಧಿಕಾರಿಗಳಾಗಿ ನೇಮಕಗೊಂಡುಪಟ್ಟಾಧಿಕಾರ ಸ್ವೀಕರಿಸಿದರು. ನಂತರ ಶ್ರೀಮದ್ ರಂಭಾಪುರಿ ಪೀಠದ ಜಗದ್ಗುರುಗಳಾದ ಶ್ರೀವೀರಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳ ಶಿಷ್ಯರಾಗಿ ಬೆಳೆದ ಶ್ರೀಗಳು ಜಗದ್ಗುರುಗಳಕೃಪಾಶೀರ್ವಾದದಿಂದ ಪರಿಪಕ್ವಗೊಂಡರು.ಶ್ರೀಗಳು ಮಠದ ಆಡಳಿತವನ್ನು ನೋಡಿಕೊಳ್ಳುತ್ತಲೇ ದಾವಣಗೆರೆಯಮಾ.ಸಾ.ಬ. ಪದವಿ ಕಾಲೇಜಿನ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ವಿದ್ಯಾರ್ಥಿಗಳಶ್ರೇಯೋಭಿವೃದ್ಧಿಗೆ ಶ್ರಮಿಸಿದರು. ಹಾಗೂ ತಮ್ಮ ಕಾಯಕ ನಿಷ್ಠೆಯಿಂದ ಇತರರಿಗೂಮಾದರಿಯಾಗಿ ಆದರ್ಶಪ್ರಾಯರೆನಿಸಿದರು. ಶ್ರೀಗಳು ತಮ್ಮ ಕಾಯಕದಿಂದ ಬಂದಹಣವನ್ನು ಸದ್ವಿನಿಯೋಗಗೊಳಿಸಿಕೊಂಡು ಮಠವನ್ನು ಅಭಿವೃದ್ಧಿಗೊಳಿಸಿ ಶಾಮನೂರುರಸ್ತೆಯಲ್ಲಿ ನೂತನ ಕಟ್ಟಡ ನಿರ್ಮಿಸಿ ಮಠದ ಆಡಳಿತವನ್ನು ಅಲ್ಲಿಗೆ ಸ್ಥಳಾಂತರಿಸಿದರು.ಶ್ರೀಗಳು ದಾವಣಗೆರೆಯ ಭಕ್ತವೃಂದಕ್ಕೆ ಮತ್ತು ವಿದ್ಯಾರ್ಥಿಗಳಿಗೆ ಸಮರ್ಥಮಾರ್ಗದರ್ಶನ ನೀಡುವುದರ ಜೊತೆಗೆ ಧರ್ಮಜಾಗೃತಿಯನ್ನು ಮಾಡುತ್ತಿದ್ದರು. ಹೀಗೆಶ್ರೀಮಠ ಮತ್ತು ಸಮಾಜಗಳೆರಡರ ಅಭಿವೃದ್ಧಿಗೆ ಶ್ರಮಿಸಿದ ಶ್ರೀಗಳು ಲಿಂಗೈಕ್ಯರಾದ ನಂತರಅವರ ಗದ್ದುಗೆಯನ್ನು ಮಠದ ಆವರಣದಲ್ಲಿಯೇ ನಿರ್ಮಿಸಿ ಪ್ರತಿನಿತ್ಯ ಪೂಜೆ ನಡೆಯುವಂತೆಭಕ್ತರು ನೋಡಿಕೊಂಡಿದ್ದಾರೆ.
Swamiji
Swamiji Name :
ಲಿಂ. ಶ್ರೀ ಷ.ಬ್ರ. ಡಾ. ಸದ್ಯೋಜ್ಯಾತ ಶಿವಾಚಾರ್ಯ ಮಹಾಸ್ವಾಮಿಗಳು
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ. ಲಿಂ. ಶ್ರೀ ಷ.ಬ್ರ. ಡಾ. ಸದ್ಯೋಜ್ಯಾತ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು.