Shree Shilavanteshwara Samsthana Matha

Shree Shilavanteshwara Samsthana Matha Claimed

ಶ್ರೀ ಶೀಲವಂತೇಶ್ವರ ಸಂಸ್ಥಾನ ಮಠ

Average Reviews

Description

ಶ್ರೀ ಶೀಲವಂತೇಶ್ವರ ಸಂಸ್ಥಾನ ಮಠ

ಕರ್ತೃ – ಶ್ರೀ ಷ.ಬ್ರ. ಜಡೆಶೀಲವಂತೇಶ್ವರ ಶಿವಾಚಾರ್ಯ ಸ್ವಾಮಿಗಳು

ಶಹಾಪುರ ತಾಲ್ಲೂಕಿನ ಮದ್ದರಕಿ ಗ್ರಾಮವು ಪುರಾತನ ವೀರಶೈವ ಕೇಂದ್ರವಾಗಿದ್ದು ಈ ಗ್ರಾಮದಲ್ಲಿ ಶಾಲಿವಾಹನ ಶಕೆ 722ರಲ್ಲೇ ಸ್ಥಾಪಿತಗೊಂಡಿದೆಯೆಂದುಹೇಳಲಾದ ಅತಿ ಪುರಾತನ ಶ್ರೀ ಶೀಲವಂತೇಶ್ವರ ಸಂಸ್ಥಾನ ಮಠವು ಜಿಲ್ಲೆಯ ಧಾರ್ಮಿಕಇತಿಹಾಸದಲ್ಲಿ ತನ್ನದೇ ಅಧ ಪ್ರಾಮುಖ್ಯತೆಯನ್ನು ಹೊಂದಿದೆ. ಶ್ರೀಮಠವು ಶ್ರೀಮದ್ರಂಭಾಪುರಿ ಪೀಠದ ಶಾಖಾಮಠವಾಗಿದ್ದು ಶಿಷ್ಯವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಪುರಾತನ ಕಾಲದ ಶ್ರೀಮಠದ ಕರ್ತೃಗುರುಗಳೆಂದು ಶ್ರೀ ಷ.ಬ್ರ. ಜಡೆಶೀಲವಂತೇಶ್ವರ ಶಿವಾಚಾರ್ಯ ಸ್ವಾಮಿಗಳನ್ನು ಗುರುತಿಸಲಾಗಿದೆ. ಶ್ರೀಗಳು ಆ ಕಾಲದಲ್ಲೇತುಂಬಾ ಪ್ರಭಾವಿಗಳಾಗಿದ್ದು ದೀರ್ಘ ಅನುಷ್ಠಾನಗಳನ್ನು ಕೈಗೊಂಡು ಲೋಕದ ಜನರಹಿತವನ್ನು ಕಾಪಾಡುತ್ತಿದ್ದರೆಂದು ತಿಳಿದುಬರುತ್ತದೆ. ಇವರ ಸಮಾಧಿ ಗದ್ದುಗೆಯು ಅತಿಪೂಜನೀಯ ಸ್ಥಳವಾಗಿದೆ.ಶ್ರೀ ಶೀಲವಂತೇಶ್ವರ ಸಂಸ್ಥಾನ ಮಠವು ಅತಿ ಪುರಾತನದ್ದಾದ್ದರಿಂದ ಶ್ರೀಮಠವುಆಗಾಗ ದೀರ್ಘಕಾಲ ಖಾಲಿ ಉಳಿದಿರುವಂತೆ ತೋರುತ್ತಿದ್ದು ಆ ಕಾರಣದಿಂದಾಗಿ ಶ್ರೀಮಠದಇತಿಹಾಸವನ್ನು ಮತ್ತು ಪರಂಪರೆಯನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ.ಹಾಗಾಗಿ ಪರಂಪರೆಯ ಕೆಲ ಗುರುಗಳನ್ನು ಮಾತ್ರ ಗುರುತಿಸಬಹುದಾಗಿದೆ. ಅವರುಗಳು ಶ್ರೀದಿಗಂಬರೇಶ್ವರ ಶಿವಾಚಾರ್ಯ ಸ್ವಾಮಿಗಳು, ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯಸ್ವಾಮಿಗಳು ಹಾಗೂ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು.ಹಿಂದಿನ ಗುರುಗಳಾದ ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಈಭಾಗದಲ್ಲಿ ನಡೆದಾಡುವ ದೇವರೆಂದೇ ಭಕ್ತರಿಂದ ಗುರುತಿಸಿಕೊಂಡಿದ್ದವರು. ತಮ್ಮ ಧಾರ್ಮಿಕಆಚರಣೆಗಳಿಂದ, ಅನುಷ್ಠಾನಾದಿ ಉಪದೇಶಾಮೃತಗಳಿಂದ ಭಕ್ತರಿಗೆ ಸನ್ಮಾರ್ಗ ತೋರುತ್ತಾಅವರ ಕಷ್ಟಸುಖಗಳಿಗೆ ಸ್ಪಂದಿಸುತ್ತಿದ್ದರು. ಯಾವುದೇ ಸಮಯದಲ್ಲೂ ವಿಚಲಿತರಾಗದೆಶಾಂತತೆಯಿಂದ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರೆಂದು ತಿಳಿದುಬರುತ್ತದೆ.ಮೂಲತಃ ಕೆಲ್ಲೂರು ಗ್ರಾಮದಲ್ಲಿ 1886ರಲ್ಲಿ ಜನಿಸಿದರೆಂದು ಹೇಳಲಾಗುವಶ್ರೀಗಳು ಬಾಲ್ಯದಿಂದಲೂ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿಕೊಂಡವರು. ಯಡ್ರಾಮಿಯಲ್ಲಿಸಂಸ್ಕøತ ಹಾಗೂ ವೇದಾಧ್ಯಯನ ಮಾಡಿದ ಶ್ರೀಗಳು ಶ್ರೀಮಠದ ಪಟ್ಟಾಧಿಕಾರ ವಹಿಸಿಕೊಂಡು ಸುಧೀರ್ಘ ಕಾಲ ಶ್ರೀಮಠದ ಸಮಗ್ರ ಭಕ್ತರ ಏಳಿಗೆಗಾಗಿ ಶ್ರಮವಹಿಸಿದ್ದಾರೆ. 114ವರ್ಷಗಳ ಸಾರ್ಥಕ ಜೀವನ ನಡೆಸಿ ಭಕ್ತರ ಉದ್ಧಾರಕ್ಕಾಗಿ ಶ್ರಮಿಸಿದ ಶ್ರೀಗಳು 1999ರಜನವರಿ 9ರಲ್ಲಿ ಲಿಂಗೈಕ್ಯರಾದರು. ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ತಮ್ಮಜೀವಿತಾವಧಿಯಲ್ಲಿಯೇ ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಶೀಲವಂತೇಶ್ವರ ಶಿವಾಚಾರ್ಯ ಸ್ವಾಮಿಗಳನ್ನು ಉತ್ತರಾಧಿಕಾರಿಗಳನ್ನಾಗಿ ನೇಮಿಸಿಕೊಂಡು 1995ರ ನವೆಂಬರ್ 18ರಲ್ಲಿಪಟ್ಟಾಧಿಕಾರದ ಅನುಗ್ರಹ ನೀಡಿ ಪರಿಪಕ್ವಗೊಳಿಸಿದರು.ಶ್ರೀ ಶೀಲವಂತೇಶ್ವರ ಶಿವಾಚಾರ್ಯ ಸ್ವಾಮಿಗಳು 1985ರಲ್ಲೇ ಶ್ರೀಮಠಕ್ಕೆ ಆಗಮಿಸಿಹಿರಿಯ ಗುರುಗಳ ಸೇವೆಯಲ್ಲಿ ನಿರತರಾಗಿದ್ದವರು. ಇವರು ಹುಬ್ಬಳ್ಳಿ, ರಾಯಭಾಗ ಮತ್ತುಶಿವಯೋಗ ಮಂದಿರಗಳಲ್ಲಿ ಅಧ್ಯಯನ ಮಾಡಿದವರು. ಶ್ರೀಮಠಕ್ಕೆ ಬಂದು ಹಿರಿಯಗುರುಗಳ ಸೇವೆಯಲ್ಲಿ ತೊಡಗುವ ಶ್ರೀಗಳು ಗುರುಗಳ ಮಾರ್ಗದರ್ಶನದಲ್ಲಿ ಧಾರ್ಮಿಕಸಂಸ್ಕಾರವನ್ನು ಪಡೆದು ಪರಿಪಕ್ವಗೊಂಡರು. ಗುರುಗಳು ಶಿವಪೂಜೆ ಮತ್ತು ಧರ್ಮೋಪದೇಶಕಾರ್ಯದಲ್ಲಿ ನಿರತರಾದರೆ ಇವರು ಮಠದ ಅಭಿವೃದ್ಧಿ ಕಡೆಗೆ ಗಮನಹರಿಸಿದರು.ಶ್ರೀ ಶೀಲವಂತೇಶ್ವರ ಶಿವಾಚಾರ್ಯರು ಗುರುಗಳ ತರುವಾಯ ಭಕ್ತರ ಸಹಕಾರದೊಂದಿಗೆ ಸುತ್ತಮುತ್ತಲಿನ ಗ್ರಾಮಸ್ಥರನ್ನು ಸಂಘಟಿಸಿ ಧರ್ಮವನ್ನು ಪ್ರಚುರಪಡಿಸುವುದರಜೊತೆಯಲ್ಲಿ ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮವಹಿಸುತ್ತಿದ್ದಾರೆ. ಶ್ರೀಗಳು ಸ್ವತಃಕಾಯಕಯೋಗಿಗಳಾಗಿ, ಶ್ರೀಮಠದ ಜಮೀನನ್ನು ನೀರಾವರಿಗೊಳಪಡಿಸಿ ಹೆಚ್ಚು ಆದಾಯಬರುವಂತೆ ಮಾಡಿದ್ದಾರೆ. ಹಾಗೂ ಆ ಮೂಲಕ ಶ್ರೀಮಠವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ.ಶ್ರೀಮಠವು ಪುರಾತನ ಕಾಲದ್ದಾಗಿದ್ದು ಇದಕ್ಕೆ ಶಾಖಾಮಠಗಳು ಕೂಡಬಹಳಷ್ಟಿದ್ದು ಕಾಲಕ್ರಮೇಣ ಸ್ವತಂತ್ರ ಮಠಗಳಾಗಿ ಗುರುತಿಸಿಕೊಂಡಿವೆಯೆಂದು ತಿಳಿದುಬರುತ್ತದೆ. ಪ್ರಸ್ತುತ ಶಹಾಪುರ ತಲ್ಲೂಕಿನ ಗುತ್ತಿಪೇಟೆ, ದೇವದುರ್ಗ, ಯಳವಾರ, ಬೆಂಡೆಬೊಂಬಳಿಹಾಗೂ ಸುರಪುರ ತಾಲ್ಲೂಕಿನ ಲಕ್ಷಂಪುರ, ಸಿದ್ದಾಪುರ ಮುಂತಾದ ಕಡೆಗಳಲ್ಲಿ ಶಾಖಾಮಠಗಳನ್ನು ಹೊಂದಿದ್ದು ಅವುಗಳನ್ನು ಅಭಿವೃದ್ಧಿಗೊಳಿಸುವತ್ತ ಶ್ರೀಗಳು ಗಮನಹರಿಸಿದ್ದಾರೆ.ಶ್ರೀಗಳು ಶ್ರೀಮಠದಲ್ಲಿ ಪ್ರತಿ ಅಮವಾಸ್ಯೆಗೆ ಶಿವಾನುಭವ ಚಿಂತನಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು, ಪುಷ್ಯ ಮಾಸದಲ್ಲಿ ಶ್ರೀ ಹಿರಿಯ ಗುರುಗಳಪುಣ್ಯಾರಾದನೆಯನ್ನು ನಡೆಸುತ್ತಾರೆ. ಶ್ರಾವಣ ಮಾಸದಲ್ಲಿ ಶಿವಾನುಭವ ಗೋಷ್ಠಿ ಹಾಗೂವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಮಹಾನಮವಮಿಯಲ್ಲಿ ಶ್ರೀದೇವಿಪುರಾಣ ಪಾರಾಯಣ ಮಾಡಿಸಲಾಗುತ್ತದೆ. ಹಾಗೂ ಮಕರ ಸಂಕ್ರಾಂತಿ ನಂತರ ಶ್ರೀಗಳಸಾನಿಧ್ಯದಲ್ಲಿ ಸಮಸ್ತ ಸದ್ಭಕ್ತರು ಶ್ರೀಶೈಲಕ್ಕೆ ಪಾದಯಾತ್ರೆ ಹೋಗುವುದು ಇಲ್ಲಿನ ವಿಶೇಷ.

Swamiji

Swamiji Name :
ಶ್ರೀ ಷ.ಬ್ರ. ಶೀಲವಂತೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
14-5-1967
Place :
ಶಶಿವಾಳ, ಅರಸಿಕೇರಿ ತಾ||
Pattadikara :
18-1-1995
Photo :

Programs

ಪ್ರತಿ ಅಮವಾಸ್ಯೆಗೆ “ಶಿವಾನುಭವ ಚಿಂತನ”
ಪುಷ್ಯ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಶಿವಾನುಭವಗೋಷ್ಠಿ ಹಾಗೂ
ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.
ಮಹಾನವಮಿಗೆ ಶ್ರೀದೇವಿ ಪುರಾಣ ಪಾರಾಯಣ ಹಾಗೂ
ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.
ಮಕರ ಸಂಕ್ರಾಂತಿ ನಂತರ ಶ್ರೀಗಳ ಸಾನಿಧ್ಯದಲ್ಲಿ ಶ್ರೀಶೈಲಕ್ಕೆ
ಪಾದಯಾತ್ರೆ (ಸಮಸ್ತ ಸದ್ಭಕ್ತರ ಜೊತೆ).

Photos

Full Address Kannada

ಶ್ರೀ ಶೀಲವಂತೇಶ್ವರ ಸಂಸ್ಥಾನ ಮಠ
ಮದ್ದರಕಿ - 585 287 ಶಹಾಪುರ
ತಾ||, ಯಾದಗಿರಿ ಜಿ||

Map

Near by Places

ಮದ್ದರಕಿ ಕ್ರಾಸ್ - 2 ಕಿ.ಮೀ.
ಶಹಾಪುರ - 15 ಕಿ.ಮೀ.
ಕಲಬುರ್ಗಿ - 87 ಕಿ.ಮೀ.

Statistic

3 Views
0 Rating
0 Favorite
0 Share
error: Content is protected !!