ತಾವರಕೆರೆ ಪಟ್ಟಣದಲ್ಲಿ ಶ್ರೀ ರಂಭಾಪುರೀ ಪೀಠದ ಶಾಖಾ ಮಠವಾಗಿ ಶಿಷ್ಯವರ್ಗದಪರಂಪಂರೆಯ ಶ್ರೀ ಶಿಲಾಮಠವು ಕೆಳದಿ ಚನ್ನಮ್ಮಾಜಿಯ ಕಾಲದಿಂದಲೂ ಅಸ್ಥಿತ್ವದಲ್ಲಿದ್ದು, ಧಾರ್ಮಿಕಕಾರ್ಯಗಳಿಂದ ಹೆಸರು ಮಾಡಿದೆ. ಕರ್ತೃಗುರುಗಳಾದ ಶ್ರೀ ರೇವಣಸಿದ್ದ ಶಿವಾಚಾರ್ಯ ಸ್ವಾಮಿಗಳುಉತ್ತಮ ಜ್ಞಾನಿಗಳಾಗಿದ್ದು, ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ.ಇವರ ನಂತರ ಬಹುಕಾಲ ಮಠವು ಖಾಲಿ ಉಳಿದಿದ್ದು ನಂತರದಲ್ಲಿ ಭಕ್ತರ ಒತ್ತಾಸೆಯಂತೆಬಾಳೆಹೊನ್ನೂರಿನ ಶ್ರೀ ರಂಭಾಪುರೀ ಪೀಠದ ಜಗದ್ಗುರುಗಳ ಆಶೀರ್ವಾದದಿಂದ ಶ್ರೀ ಸಿದ್ಧಲಿಂಗಶಿವಾಚಾರ್ಯ ಸ್ವಾಮಿಗಳು ಪಟ್ಟಕ್ಕೆ ಬಂದರು. ಇವರು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಶ್ರೀಮಠವುಜೀರ್ಣಾವಸ್ಥೆಯಲ್ಲಿತ್ತು. ಗುರುಗಳು ಮಠವನ್ನು ಜೀರ್ಣಾಭಿವೃದ್ಧಿಗೊಳಿಸುವಲ್ಲಿ ಶ್ರಮಿಸಿದ್ದು ಜೊತೆಗೆಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದರು. ಶ್ರೀಗಳು ಸಿದ್ಧ ಔಷಧಿಯ ಬಗ್ಗೆ ತಿಳಿದವರಾಗಿದ್ದುಪ್ರತಿ ದಿನ ಕಾಡುಮೇಡು ಅಲೆದು ಗಿಡಮೂಲಿಕೆಗಳನ್ನು ಸಂಗ್ರಹಿಸಿ ಭಕ್ತರಿಗೆ ಚಿಕಿತ್ಸೆ ನೀಡುತ್ತಿದ್ದರು.ಶ್ರೀಗಳು ನಂತರ ತರೀಕೆರೆ ತಾ|| ಗೊಂಡೇನಹಳ್ಳಿಯ ಶ್ರೀ ರೇಣುಕಾರಾಧ್ಯರನ್ನುಉತ್ತರಾಧಿಕಾರಿಗಳನ್ನಾಗಿ ಆಯ್ಕೆ ಮಾಡಿಕೊಂಡರೂ ರೇಣುಕಾರಾಧ್ಯರಿಗೆ ಪಟ್ಟಾಧಿಕಾರ ಮಾಡಿಸುವಮುನ್ನವೇ ಲಿಂಗೈಕ್ಯರಾದರು. 1974 ಮೇ 1 ರಂದು ರಂಭಾಪುರೀ ಜಗದ್ಗುರು ಶ್ರೀ ವೀರಗಂಗಾಧರಭಗವತ್ಪಾದರು ಶ್ರೀ ರೇಣುಕಾರಾಧ್ಯರಿಗೆ ಶ್ರೀ ರೇಣುಕ ಶಿವಾಚಾರ್ಯ ಸ್ವಾಮಿಗಳು ಎಂದು ಅಭಿದಾನವನ್ನಿತ್ತು ಪಟ್ಟಾಧಿಕಾರದ ಅನುಗ್ರಹ ನೀಡಿದರು. ಶ್ರೀ ರೇಣುಕ ಶಿವಾಚಾರ್ಯ ಸ್ವಾಮಿಗಳು ಪ್ರಾಚೀನಪರಂಪರೆಯ ಮಠವನ್ನು ಭಕ್ತರ ಸಹಾಯದೊಂದಿಗೆ ಧಾರ್ಮಿಕವಾಗಿ, ಸಾಮಾಜಿಕವಾಗಿ ಮುನ್ನಡೆಸುತ್ತಿದ್ದಾರೆ. ಶ್ರೀಗಳು ಮಠವು ಆರ್ಥಿಕವಾಗಿ ಸದೃಢವಾಗಬೇಕೆಂದು ಮಠದ ಆಸ್ತಿಯನ್ನು ಅಭಿವೃದ್ಧಿಪಡಿಸಿಆದಾಯ ಮೂಲವನ್ನಾಗಿ ಪರಿವರ್ತಿಸಿದ್ದಾರೆ.ಶ್ರೀಗಳು 1998 ಮೇ 14 ರಂದು ರಂಭಾಪುರೀ ಜಗದ್ಗುರುಗಳ ಖಾಸಾ ಶಾಖಾ ಮಠವಾದಎಡೆಯೂರು ಮಠಕ್ಕೂ ಪಟ್ಟಾಧಿಕಾರ ಹೊಂದಿ ಎರಡೂ ಮಠಗಳನ್ನು ಮುನ್ನಡೆಸಿಕೊಂಡುಬರುತ್ತಿದ್ದಾರೆ. ಶ್ರೀಗಳು 2009 ರ ನವೆಂಬರ್ 15 ರಂದು ಈಗಿನ ಕಿರಿಯ ಶ್ರೀಗಳಾದ ಶ್ರೀ ಅಭಿನವಸಿದ್ಧಲಿಂಗ ಶಿವಾಚಾರ್ಯರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಪಟ್ಟಾಧಿಕಾರದ ಅನುಗ್ರಹ ನೀಡಿದ್ದುಉಭಯ ಶ್ರೀಗಳು ಮಠವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಿಕೊಂಡು ಬರುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ರೇಣುಕ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
6-9-1948
Place :
ಗೊಂಡೇನಹಳ್ಳಿ, ತರೀಕೆರೆ ತಾ||
Pattadikara :
1-5-1974
Photo :
Swamiji Name :
ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
21-1-1977
Place :
ಗೊಂಡೇನಹಳ್ಳಿ, ತರೀಕೆರೆ ತಾ||
Pattadikara :
15-11-2009
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ, ರುದ್ರಾಭಿಷೇಕ, ಹೇಳಿಕೆ. ಮಾರ್ಗಶಿರ ಮಾಸದಲ್ಲಿ ಶ್ರೀ ಉಮಾಮಹೇಶ್ವರ ಜಾತ್ರೆ.
ಭೀಮನ ಅಮವಾಸ್ಯೆಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ. ಬೌದ್ಧ ಪೌರ್ಣಿಮೆಯಂದು ಶ್ರೀ ವೀರಭದ್ರಸ್ವಾಮಿ ಕೆಂಡಾರ್ಚನೆ. ಶಿವರಾತ್ರಿ ಆಚರಣೆ ಹಾಗೂ ವಿಶೇಷ ಪೂಜೆ.
Full Address Kannada
ಶ್ರೀ ಶಿಲಾಮಠ,
ತಾವರಕೆರೆ - 577 213
ಚನ್ನಗಿರಿ ತಾ., ದಾವಣಗೆರೆ ಜಿ.