ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿ ಸಾವಿರಾರು ವರ್ಷಗಳಿಂದ ಆಯಾಕಾಲಘಟ್ಟದಲ್ಲಿ ಅನೇಕ ಪರಂಪರೆಗಳು ಹುಟ್ಟಿ ನಾಡಿಗೆ ತಮ್ಮದೇ ಆದ ಕೊಡುಗೆಯನ್ನುನೀಡಿರುವುದನ್ನು ಕಾಣಬಹುದು. ಇಂತಹ ಪರಂಪರೆಗಳಲ್ಲಿ ಇತ್ತೀಚೆಗೆ 18-19ನೇಶತಮಾನದಲ್ಲಿ ಪ್ರಾರಂಭವಾದ ಕಲಬುರಗಿಯ ಶ್ರೀ ಶರಣಬಸವೇಶ್ವರ ಮಹಾ ದಾಸೋಹಪರಂಪರೆ ಪ್ರಮುಖವಾದುದು. ತನ್ನ ಧಾರ್ಮಿಕ, ಸಾಮಾಜಿಕ, ಸಾಹಿತ್ಯಿಕ ಹಾಗೂ ನಿತ್ಯದಾಸೋಹದ ಕ್ರಮಗಳಿಂದಾಗಿ ನಾಡಿನಲ್ಲಿಯೇ ಹೆಸರುವಾಸಿಯಾಗಿರುವ ಶ್ರೀ ಶರಣಬಸವೇಶ್ವರ ಸಂಸ್ಥಾನ ಮಠವು ಈ ಪರಂಪರೆಗೆ ಕಾರಣಕರ್ತರಾಗಿದ್ದು ನಾಡಿನಾದ್ಯಂತಹಲವಾರು ಮಠಗಳು ಈ ಪರಂಪರೆಯಲ್ಲಿ ಬೆಳೆದು ಬಂದಿವೆ.ಕಲಬುರಗಿ ನಗರದ ಮಧ್ಯಭಾಗದಲ್ಲಿರುವ ಶ್ರೀ ಶರಣಬಸವೇಶ್ವರ ಸಂಸ್ಥಾನಮಠದ ಕರ್ತೃಗುರುಗಳು ಪರಮಪೂಜ್ಯ ಶ್ರೀ ಶರಣಬಸವೇಶ್ವರರು. ಕರ್ತೃಗುರುಗಳುಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಅರಳಗುಂಡಿಗೆ ಗ್ರಾಮದಲ್ಲಿ ಜನಿಸಿ ಬಡತನದಬದುಕನ್ನು ಕಂಡವರು. ಅಲ್ಪ ಭೂಮಿಯನ್ನು ಹೊಂದಿದ್ದ ಗುರುಗಳು ಅದರಲ್ಲೇ ಬೆಳೆ ಬೆಳೆದುತಮ್ಮ ಕಾಯಕತತ್ವ ಹಾಗೂ ದಾಸೋಹಗಳಿಂದಾಗಿ ಸುತ್ತಮುತ್ತಲಿನ ಅಜ್ಞಾನಿಗಳ ಕಣ್ಣುತೆರೆಸಿದ ಜ್ಞಾನಿಗಳು. ಮೊದಲಿನಿಂದಲೂ ತಮ್ಮ ಸಾಂಸಾರಿಕ ಬದುಕಿನೊಂದಿಗೆ ಆಧ್ಯಾತ್ಮವನ್ನುಮೈಗೂಡಿಸಿಕೊಂಡಿದ್ದ ಶರಣರು ತಮ್ಮ ಮನೆಗುರುಗಳಾದ ಕಲಕೇರಿಯ ಹಿರೇಮಠದ ಶ್ರೀಮರುಳಸಿದ್ದ ಸ್ವಾಮಿಗಳ ಆಶೀರ್ವಾದದೊಂದಿಗೆ ಲೋಕೋದ್ಧಾರದ ಕನಸನ್ನು ಕಂಡವರು.ಶ್ರೀ ಶರಣ ಬಸವೇಶ್ವರರು ಸಮಾಜವನ್ನು ತಿದ್ದುವ ಕಾಯಕದೊಂದಿಗೆ ಹಸಿವನ್ನುನೀಗಿಸುವ ಮಹಾದಾಸೋಹಿಗಳಾಗಿ ಬೆಳೆಯುತ್ತಾ ಸಮಾಜದ ಉದಾ್ಧರಕ್ಕಾಗಿಲೋಕಸಂಚಾರವನ್ನು ಕೈಗೊಂಡರು. ಹೀಗೆ ಸಂಚಾರದಲ್ಲಿ ಕರ್ನಾಟಕದಾದ್ಯಂತ ಸಂಚರಿಸಿಅನೇಕ ಪ್ರದೇಶಗಳಲ್ಲಿ ನೆಲೆ ನಿಂತು ವೀರಶೈವ ಲಿಂಗಾಯತ ಧರ್ಮಾಚರಣೆಗಳ ಬಗ್ಗೆಉಪದೇಶ ನೀಡಿದರು. ಸುಮಾರು 1781ರ ಸುಮಾರಿನಲ್ಲಿ ಶರಣ ಶ್ರೀ ಆದಿದೊಡ್ಡಪ್ಪನವರಕೋರಿಕೆಯ ಮೇರೆಗೆ ಕಲಬುರಗಿ ನಗರಕ್ಕೆ ಆಗಮಿಸಿ ಅವರ ಮಹಾಮನೆಯಲ್ಲಿ ನೆಲೆನಿಂತಶ್ರೀ ಶರಣ ಬಸವೇಶ್ವರರು ತಮ್ಮ ದಾಸೋಹ ಸಿದ್ಧಾಂತಗಳಿಂದ ಈ ಭಾಗದಲ್ಲಿ ಅಪಾರಸೇವೆಯನ್ನು ಮಾಡಿ ಭಕ್ತರನ್ನುದ್ಧರಿಸಿದರು.ಶ್ರೀ ಶರಣಬಸವೇಶ್ವರರು ಜ್ಯಾತಾತೀತ ಮನೋಭಾವದವರು. ತಮ್ಮ ಮಠದಲ್ಲಿಜ್ಯಾತಾತೀತ ಮನೋಭಾವದಿಂದ ಸಹಬಾಳ್ವೆ ಮತ್ತು ಸೌಹಾರ್ದತೆಯ ಬದುಕು ಸಮಾಜದಲ್ಲಿಮೂಡುವಂತೆ ಮಾಡಿ ಕೋಮು ಸೌಹಾರ್ದತೆಯ ವಾತಾವರಣ ನಿರ್ಮಿಸಿದರು. ಅಂದಿನಮುಸ್ಲಿಂ ದೊರೆಗಳು ಶರಣರ ಧಾರ್ಮಿಕ ಹಾಗೂ ದಾಸೋಹ ಕ್ರಮಗಳಿಗೆ ಮನಸೋತು 158ಸಹಾಯಕರಾಗಿದ್ದರು. ಶರಣರು ತಾವು ಸ್ಥಾಪಿಸಿದ ದಾಸೋಹ ಮಠದಲ್ಲಿ ಅನಾಥರಿಗೆ,ದೂರದ ಭಕ್ತರಿಗೆ, ದೀನದಲಿತರಿಗೆ ನಿತ್ಯ ದಾಸೋಹ ನಡೆಸುತ್ತಾ ತಮ್ಮ ಕೊನೆಯವರೆಗೂಸಮಷ್ಠಿ ಸಮಾಜದ ಉದ್ಧಾರಕ್ಕೆ ದುಡಿದು 1822ರಲ್ಲಿ ಲಿಂಗೈಕ್ಯರಾದರು. ಕರ್ತೃಗುರುಗಳಕಾಲಾನಂತರ ಶ್ರೀ ಆದಿ ದೊಡ್ಡಪ್ಪ ಶರಣರು ಮಠದ ಅಧಿಕಾರವನ್ನು ವಹಿಸಿಕೊಂಡುಮಹಾದಾಸೋಹ ಮಠವನ್ನು ಮುನ್ನಡೆಸಿದರು.ಪರಂಪರೆಯ ಏಳನೇ ಗುರುಗಳಾದ ಹಿಂದಿನ ಶರಣ ಶ್ರೀ ದೊಡ್ಡಪ್ಪ ಅಪ್ಪನವರುಅಭಿವನ ಶರಣ ಬಸವೇಶ್ವರರೆಂದೇ ಹೆಸರಾಗಿದ್ದರು. ಸುಮಾರು ನಲವತ್ತು ವರ್ಷಗಳ ಕಾಲಶ್ರೀಮಠದ ಆಡಳಿತವನ್ನು ನಿರ್ವಹಿಸಿದ ಶರಣರು ಶ್ರೀ ಮಠದ ಚಿತ್ರಣವನ್ನೇ ಬದಲಿಸಿದರು.ತ್ರಿಕಾಲ ಪೂಜೆ, ಜಂಗಮ ದಾಸೋಹ ಮಾಡುತ್ತಾ ಕಾಯಕತತ್ವಕ್ಕೆ ಬೆಲೆ ನೀಡಿದ ಶರಣರುಮಠದ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದರು. ಇವರಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಿಂದ ಪ್ರಭಾವಿತರಾಗಿದ್ದ ಮಹಾತ್ಮಗಾಂಧೀಜಿಯವರು 1925ರ ಏಪ್ರಿಲ್ 24 ರಂದು ಶ್ರೀಮಠಕ್ಕೆ ಬೇಟಿ ನೀಡಿ ಗುರುಗಳಆಶೀರ್ವಾದ ಪಡೆದಿದ್ದರು. ಗುರುಗಳು ಸಹ ಸ್ವತಂತ್ರ ಚಳುವಳಿಗೆ ಅಪಾರವಾದದೇಣಿಗೆಯನ್ನು ನೀಡಿ ಭಾರತದ ಸ್ವಾತಂತ್ರ ಸಂಗ್ರಾಮದ ಭಾಗವಾಗಿದ್ದರು. ಗುರುಗಳುಕನ್ನಡನಾಡಿನ ಏಕೀಕರಣ ಚಳುವಳಿ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶದಸ್ವಾತಂತ್ರ್ಯ ಹೋರಾಟಕ್ಕೆ ತಮ್ಮದೇ ಆದ ಕೊಡುಗೆ ನೀಡಿ, ದೇಶ ಪ್ರೇಮ ಹಾಗೂ ಭಾಷಾಪ್ರೇಮದ ಸಂಕೇತವಾಗಿದ್ದರು.ಶರಣ ಶ್ರೀ ದೊಡ್ಡಪ್ಪ ಅಪ್ಪನವರ ನಂತರ ಅಧಿಕಾರಕ್ಕೆ ಬಂದ ಈಗಿನ ಶ್ರೀಗಳಾದಶ್ರೀ ಶರಣ ಬಸವಪ್ಪ ಅಪ್ಪನವರು ಅಭಿವೃದ್ದಿಯ ಹರಿಕಾರರು. 1935ರ ನವೆಂಬರ್ 14ರಂದುಜನಿಸಿದ ಶ್ರೀಗಳು ಕಲಬುರಗಿ ಹಾಗೂ ಧಾರವಾಡಗಳಲ್ಲಿ ವಿದ್ಯಾಭ್ಯಾಸ ಮುಗಿಸಿ 1983ರಲ್ಲಿಶ್ರೀ ಶರಣ ಬಸವೇಶ್ವರ ಸಂಸ್ಥಾನ ಮಠದ ಮಹಾದಾಸೋಹ ಪೀಠಾಧಿಪತಿಗಳಾಗಿ ಅಧಿಕಾರಸ್ವೀಕರಿಸಿದರು. ಕರ್ನಾಟಕ ವಿಶ್ವ ವಿದ್ಯಾನಿಲಯದ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರಾಗಿ,ಕಲಬುರಗಿ ಸ್ನಾತ್ತಕೋತ್ತರ ಕೇಂದ್ರದ ಸ್ಥಾನಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ, ಕಲಬುರಗಿವಿಶ್ವವಿದ್ಯಾನಿಲಯದ ಪಂಚವಾರ್ಷಿಕ ಅಭಿವೃದಿ್ಧಯೋಜನೆಯ ಸದಸ್ಯರಾಗಿ,ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ, ಅಖಿಲ ಭಾರತ ವೀರಶೈವಮಹಾಸಭೆಯ ಅಧ್ಯಕ್ಷರಾಗಿ ಹೀಗೆ ನಾಡಿನ ವಿವಿಧ ಸಂಘ ಸಂಸ್ಥೆಗಳಲ್ಲಿ ಉನ್ನತಹುದ್ದೆಗಳನ್ನು ಪಡೆದು ಸಮಾಜ ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ಶ್ರೀಗಳು ಅಧಿಕಾರಕ್ಕೆಬಂದ ಮೇಲೆ ಮಹಾದಾಸೋಹ ಮಠವು ಶೈಕ್ಷಣಿಕ, ಸಾಹಿತ್ಯಿಕ, ಆರ್ಥಿಕ ಹಾಗೂಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಸಾಧನೆಯನ್ನು ಸಾಧಿಸಿದೆ.ಶ್ರೀಮಠವು ಸಾಹಿತ್ಯಿಕ ಚಟುವಟಿಕೆಗಳ ಕೇಂದ್ರ ಬಿಂದುವಾಗಿದೆ. ಕಲಬುರಗಿಯಲ್ಲಿನಡೆದ ಅಖಿಲ ಭಾರತ ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಶ್ರೀಮಠದ ಆಶ್ರಯದಲ್ಲಿನಡೆದಿರುವುದು ದಾಖಲಾರ್ಹ ವಿಚಾರವಾಗಿದೆ. ಶ್ರೀ ಶರಣ ಬಸಪ್ಪ ಅಪ್ಪನವರು ಅಧಿಕಾರಕ್ಕೆಬಂದ ನಂತರ ಕರ್ತೃಗುರುಗಳನ್ನು ಕುರಿತಂತೆ ಕನ್ನಡ, ತೆಲುಗು, ಮರಾಠಿ ಭಾಷೆಗಳಲ್ಲಿಪುರಾಣಗಳನ್ನು ಬರೆಸಿ ಪ್ರಕಟಿಸಿದ್ದಾರೆ. ಮಠದ ವತಿಯಿಂದ ಈವರೆಗೆ “ವಚನ ಚಳುವಳಿ”,“ಬಸವಣ್ಣನವರ ಷಟ್ಸ್ಥಲದ ವಚನಗಳು”, ಡಾ ಶರಣಬಸಪ್ಪ ಅಪ್ಪ ಅವರ ಮಹಾದಾಸೋಹ ಸೂತ್ರಗಳು ಈ ರೀತಿ ಸುಮಾರು ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಲಾಗಿದೆ.ಹಾಗೆಯೇ ವಿವಿಧ ಲೇಖಕರು ಬರೆದ ಸಾಹಿತ್ಯ ಕೃತಿಗಳಿಗೆ ಪ್ರೋತ್ಸಾಹ ನೀಡುತ್ತಾಬರಲಾಗುತ್ತಿದೆ. ಮಠದ ವತಿಯಿಂದ “ದಾಸೋಹ ಜ್ಞಾನರತ್ನ” ಎಂಬ ಪಾಕ್ಷಿಕ ಪತ್ರಿಕೆಯನ್ನುಪ್ರಕಟಿಸಲಾಗುತ್ತಿದ್ದು ಮಠದಲ್ಲಿ ಸಾಹಿತ್ಯ ಕಮ್ಮಟಗಳನ್ನು ಏರ್ಪಡಿಸಿ ಶರಣಸಾಹಿತ್ಯವನ್ನುಪ್ರಚಾರಗೊಳಿಸಲಾಗುತ್ತಿದೆ. ಹಾಗೂ ಶರಣಬಸವೇಶ್ವರರ ಪುರಾಣವನ್ನು ಹಳ್ಳಿ ಹಳ್ಳಿಗಳಲ್ಲಿಹಮ್ಮಿಕೊಳ್ಳಲಾಗುತ್ತಿದ್ದು ಪುರಾಣ ನಡೆಸುವ ಸಂಘಸಂಸ್ಥೆಗಳಿಗೆ ನೆರವು ನೀಡಿಶರಣಬಸವೇಶ್ವರರ ತತ್ವಗಳು ಜನಮನಕ್ಕೆ ಮುಟ್ಟುವಂತೆ ಮಾಡಿದ್ದಾರೆ.ಶ್ರೀ ಶರಣ ಬಸವೇಶ್ವರ ಸಂಸ್ಥಾನ ಮಠವು ಶೈಕ್ಷಣಿಕ ಹಾಗೂ ಸಾಂಸ್ಕøತಿಕಕ್ಷೇತ್ರಗಳಿಗೂ ಅಪಾರವಾದ ಕೊಡುಗೆಯನ್ನು ನೀಡಿದೆ. 1918ರಲ್ಲಿಯೇ ಶ್ರೀ ಶರಣಬಸವೇಶ್ವರವಿದ್ಯಾವರ್ಧಕ ಸಂಘವು ಸ್ಥಾಪಿತಗೊಂಡಿದ್ದು ಇಂದು ಹತ್ತಾರು ಶಾಲಾಕಾಲೇಜುಗಳನ್ನುಹೊಂದಿ ಹೆಮ್ಮರವಾಗಿ ಬೆಳೆದಿದೆ. ಶ್ರೀಮಠದ ವತಿಯಿಂದ ಶಿವಶರಣರ ಜೀವನ ಹಾಗೂದಾಸೋಹ ಸಂಸ್ಕøತಿಯನ್ನು ಗಮನದಲ್ಲಿರಿಸಿಕೊಂಡು ಸಾಹಿತ್ಯ, ಸಂಗೀತ, ಚಿತ್ರಕಲೆ,ವಾಸ್ತುಶಿಲ್ಪ, ಕೃಷಿ, ಕೈಗಾರಿಕೆ, ಶಿಕ್ಷಣ, ಸ್ತ್ರೀ ವಿಮೋಚನೆ, ಸಮಾಜಸೇವೆ ಹಾಗೂ ರಾಜಕೀಯಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಗುರುತಿಸಿ ಒಂದು ಲಕ್ಷ ರೂಪಾಯಿ ಮೌಲ್ಯದ“ದಾಸೋಹ ಜ್ಞಾನರತ್ನ” ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
Swamiji
Swamiji Name :
ಪರಮ ಪೂಜ್ಯ ಶ್ರೀ ಡಾ. ಶರಣ ಬಸವಪ್ಪ ಅಪ್ಪನವರು
Date of Birth :
14-11-1935
Place :
ಅರಳಗುಂಡಿಗೆ, ಜೇವರ್ಗಿ ತಾ||
Pattadikara :
1983
Photo :
Programs
ಪ್ರತಿ ಸೋಮವಾರ ಹಾಗೂ ಅಮಾವಾಸ್ಯೆಯಂದು ಸಾಂಸ್ಕøತಿಕ ಶಿವಾನುಭವ ಉಪನ್ಯಾಸ ಕಾರ್ಯಕ್ರಮಗಳು
ಪಾಲ್ಗುಣ ಮಾಸದಲ್ಲಿ ಮಹಾದಾಸೋಹಿ ಶ್ರೀ ಶರಣ ಬಸವೇಶ್ವರರ ರಥೋತ್ಸವ, ಉಪನ್ಯಾಸ ಮಾಲಿಕೆಗಳು, ವಿವಿಧ ಧಾರ್ಮಿಕ, ಸಾಂಸ್ಕøತಿಕ, ಸಾಹಿತ್ಯಿಕ ಕಾರ್ಯಕ್ರಮಗಳು
ಶ್ರಾವಣ ಮಾಸದಲ್ಲಿ ಸಾಂಸ್ಕøತಿಕ ಶಿವಾನುಭವ ಸಂಕೀರ್ತನ, ಉಪನ್ಯಾಸ ಮಾಲಿಕೆ ಹಾಗೂ ಪುರಾಣ ಪ್ರವಚನ
Institutions
ಸಂಸ್ಕøತ ವೇದ ಪಾಠಶಾಲೆ
ಸಂಗೀತ ಪಾಠಶಾಲೆ
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
ಪದವಿ ಪೂರ್ವ, ಪದವಿ ಕಾಲೇಜ್
ವಿದ್ಯಾರ್ಥಿ ನಿಲಯ
ಗೋ ಶಾಲೆ