ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ತೆಂಗಳಿ ಗ್ರಾಮವು ಜಿಲ್ಲಾ ಕೇಂದ್ರದಿಂದ40ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಮಧ್ಯಭಾಗದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಶಾಂತೇಶ್ವರಹಿರೇಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮುಖೇನ ಈ ಭಾಗದಪ್ರಮುಖ ಧಾರ್ಮಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ. ಶ್ರೀಮದ್ ರಂಭಾಪುರಿ ಪೀಠದಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿರುವ ಶ್ರೀ ಶಾಂತೇಶ್ವರಹಿರೇಮಠ ಕರ್ತೃಗುರುಗಳು ಶ್ರೀ.ಷ.ಬ್ರ. ಶಾಂತೇಶ್ವರ ಯತಿವರ್ಯರು.ಶ್ರೀ ಶಾಂತೇಶ್ವರ ಹಿರೇಮಠದ ಮೂಲ ಮಠವು ಮಂಗಲಗಿ ಗ್ರಾಮದಲ್ಲಿದ್ದು ಇಲ್ಲಿನಶ್ರೀಗಳೇ ಆ ಮಠದಲ್ಲಿಯೂ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.ಕರ್ತೃಗುರುಗಳಾದ ಶ್ರೀ. ಶಾಂತೇಶ್ವರ ಯತಿರ್ಯರು ಪವಾಡಪುರುಷರಾಗಿದ್ದು ತಮ್ಮಪವಾಡಗಳಿಂದ ಮನೆ ಮಾತಾಗಿದ್ದರು. ವೀರಶೈವ ಧರ್ಮದ ತತ್ತ್ವಾಚರಣೆಗಳನ್ನುಪ್ರಚುರಪಡಿಸುತ್ತಾ ಧರ್ಮಪ್ರಚಾರಕಾರ್ಯದಲ್ಲಿ ನಿರತರಾಗಿದ್ದರು. ಇಂತಹ ಪವಾಡ ಪುರುಷಶ್ರೀಗಳ ಹೆಸರಿನಿಂದಲೇ ಶ್ರೀಮಠವನ್ನು ಇಂದಿಗೂ ಕರೆಯಲಾಗುತ್ತಿದೆ.ಕರ್ತೃಗುರುಗಳ ನಂತರದ ಪರಂಪರೆಯಲ್ಲಿ ಈವರೆಗೂ 10ಜನ ಶ್ರೀಗಳುಶ್ರೀಮಠದ ಪಟ್ಟಾಧಿಕಾರವನ್ನು ಸ್ವೀಕರಿಸಿ ಅಧಿಕಾರಕ್ಕೆ ಬಂದಿದ್ದು ಶ್ರೀಮಠವನ್ನುಅಭಿವೃದ್ದಿಪಡಿಸಿದ್ದಾರೆ. ಶ್ರೀಮಠದ ಪರಂಪರೆಯ ಗುರುಗಳೆಲ್ಲರೂ ವೀರಶೈವ ಧರ್ಮದಪ್ರಚಾರಕರಾಗಿ ಮತ್ತು ಧರ್ಮದ ಬೆಳವಣಿಗೆಯ ಸಾದಕರಾಗಿ ಶ್ರಮಿಸಿ ವೀರಶೈವ ಧರ್ಮವುಈ ಭಾಗದಲ್ಲಿ ಗಟ್ಟಿಯಾಗಿ ನೆಲೆಗೊಳ್ಳುವಂತೆ ಮಾಡಿದರು. ಶ್ರೀಮಠದ ಧಾರ್ಮಿಕಆಚರಣೆಗಳ ಜೊತೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಚರಿಸುತ್ತಾ ಧರ್ಮದ ಬಗೆಗೆಭಕ್ತರಲ್ಲಿ ಅರಿವನ್ನು ಮೂಡಿಸುವಲ್ಲಿ ಶ್ರಮಿಸಿದರು.ಶ್ರೀಮಠದ ಪರಂಪರೆಯಲ್ಲಿ ಆಗಿ ಹೋಗಿರುವ 9 ಜನ ಶ್ರೀಗಳಲ್ಲಿ 5 ಜನ ಶ್ರೀಗಳಗದ್ದುಗೆಗಳು ಮೂಲ ಮಂಗಲಗಿ ಗ್ರಾಮದ ಶ್ರೀಮಠದಲ್ಲಿದ್ದು 4ಜನ ಶ್ರೀಗಳ ಗದ್ದುಗೆಗಳುತೆಂಗಳಿಯ ಶ್ರೀಮಠದಲ್ಲಿವೆ, ಈ ಎಲ್ಲಾ ಗದ್ದುಗೆಗಳೂ ನಿತ್ಯ ಪೂಜೆಗೆ ಒಳಪಟಿದ್ದು, ಇಲ್ಲಿನಶ್ರೀಗಳೇ ಉಭಯ ಮಠಗಳನ್ನೂ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಮಠದ ಹಿಂದಿನಶ್ರೀಗಳಾದ ಶ್ರೀ.ಷ.ಬ್ರ. ಮಡಿವಾಳೇಶ್ವರ ಶಿವಾಚಾರ್ಯ ಸ್ವಾಮಿಗಳು ಶ್ರೀಮಠವನ್ನು ಧಾರ್ಮಿಕಹಾಗೂ ಸಾಮಾಜಿಕವಾಗಿ ಅಭಿವೃದ್ದಿಪಡಿಸಿದ್ದಾರೆ.ಶ್ರೀ ಮಡಿವಾಳೇಶ್ವರ ಶಿವಾಚಾರ್ಯರು ಶಿವಪೂಜಾನಿಷ್ಠರಾಗಿ ಅಷ್ಪಾವರಣ,ಪಂಚಾಚಾರ ಹಾಗೂ ಷಟ್ಸ್ಥಲ ಸಿದ್ದಾಂತದ ಪ್ರಕಾರ ಮಠದಲ್ಲಿ ಧಾರ್ಮಿಕ ಆಚರಣೆಗಳನ್ನುನಡೆಸುತ್ತಾ ಆಚಾರ ವಿಚಾರ ಒಂದಾಗಿ ಬದುಕಿ ಅಪಾರ ಶಿಷ್ಯ ಸಂಪತ್ತನ್ನು ಗಳಿಸಿದ್ದವರು.ಅಸಂಖ್ಯ ಭಕ್ತಬಳಗದ ಪ್ರೀತಿಯನ್ನು ಸಂಪಾದಿಸಿದ್ದ ಶ್ರೀಗಳು ಅವರ ಸಹಕಾರದಿಂದಿಗೆಶ್ರೀಮಠಕ್ಕೆ ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಿದರು. ತಮ್ಮ ಆಚರಣೆಗಳ ಮೂಲಕ ಭಕ್ತರಮನಸ್ಸಿನಲ್ಲಿ ನೆಲೆಗೊಂಡಿರುವ ಶ್ರೀಗಳು 1984ರಲ್ಲಿ ಲಿಂಗೈಕ್ಯರಾಗಿದ್ದಾರೆ.129ಶ್ರೀ ಮಡಿವಾಳೇಶ್ವರ ಶಿವಾಚಾರ್ಯರು ಐಕ್ಯಗೊಂಡ ನಂತರ ಶ್ರೀಮಠಕ್ಕೆ ಶ್ರೀಶರಣಬಸವ ಸ್ವಾಮಿಗಳನ್ನು ಉತ್ತರಾಧಿಕಾರಿಗಳನ್ನಾಗಿ ನೇಮಕಗೊಳಿಸಲಾಯಿತು. ಶ್ರೀಗಳುಮುರುಗೋಡದಲ್ಲಿ ತಮ್ಮ ಪ್ರೌಡ ಶಿಕ್ಷಣವನ್ನು ಮುಗಿಸಿ ಹುಬ್ಬಳ್ಳಿ ಮೂರು ಸಾವಿರ ಮಠದಲ್ಲಿಕಾಲೇಜು ವ್ಯಾಸಂಗವನ್ನು ಪೂರ್ಣಗೊಳಿಸಿದರು. ತದನಂತರ ಧಾರವಾಡದಮುರುಫಾಮಠದಲ್ಲಿದ್ದು ಆಧುನಿಕ ವೀರಶೈವ ಪುರಾಣಗಳು ಎಂಬ ವಿಷಯದ ಮೇಲೆಪಿ.ಹೆಚ್.ಡಿ. ಪದವಿ ಪಡೆದರು ಹಾಗೂ ಧಾರವಾಡದಲ್ಲಿಯೇ ಸಂಸ್ಕøತ ಮತ್ತುವೇದಾದ್ಯಯನವನ್ನು ಮಾಡಿದ್ದಾರೆ.ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿ ಶ್ರೀಮಠಕ್ಕೆ ಮರಳಿದ ಶ್ರೀಗಳು ಶ್ರೀಮಠದಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದರು. ತಮ್ಮ ಕ್ರಿಯಾಶೀಲತೆಯಿಂದ ಮಠದಲ್ಲಿಕಾರ್ಯಕ್ರಮಗಳನ್ನು ನಡೆಸುತ್ತಾ ಶ್ರೀಮಠಕ್ಕೆ ಭಕ್ತರನ್ನು ಸಂಪಾದಿಸಿಕೊಂಡು ಅವರಸಹಕಾರದೊಂದಿಗೆ ಶ್ರೀಮಠವನ್ನು ಅಭಿವೃದ್ದಿಪಡಿಸುತ್ತಿದ್ದಾರೆ. ಶ್ರೀಮಠದ ಧಾರ್ಮಿಕ ಹಾಗೂಸಾಮಾಜಿಕ ಕಾರ್ಯಕ್ರಮಗಳನ್ನು ಹಂತಹಂತವಾಗಿ ವಿಸ್ತರಿಸಿದ ಶ್ರೀಗಳು ತದನಂತರವಷ್ಟೇ2013ರ ಮೇ 16ರಲ್ಲಿ ಶ್ರೀಮಠಕ್ಕೆ ಪಟ್ಟಾಧಿಕಾರದ ಅನುಗ್ರಹ ಸ್ವೀಕರಿಸಿದರು. ಶ್ರೀಗಳಿಗೆಪಟ್ಟಾಧಿಕಾರದ ಅನುಗ್ರಹ ನೀಡಿದವರು ಹೊನ್ನಕಿರಣಗಿಯ ಗುರುಗಳು.ಶ್ರೀಗಳು ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳ ಜೊತೆಗೆ ಶ್ರೀರೇಣುಕಾಚಾರ್ಯ ಜಯಂತಿಯನ್ನು ಆಚರಿಸುತ್ತಿದ್ದು ಆ ಸಮಯದಲ್ಲಿ ಪುರಾಣ ಪ್ರವಚನಹೇಳಿಸಲಾಗುತ್ತದೆ. ಹಾಗೂ ದೀಪಾವಳಿಯ ಚತುದ ಶಿಗೆ ಲಿಂ|| ಶ್ರೀ.ಷ.ಬ್ರ. ಮಡಿವಾಳೇಶ್ವರಮಹಾಸ್ವಾಮಿಗಳ ಪುಣ್ಯಾರಾಧನೆ ನಡೆಸಲಾಗುತ್ತದೆ. ಶ್ರೀಮಠದ ಮೂಲ ಮಠವಾದಮಂಗಲಗಿಯ ಮಠದಲ್ಲಿ ಯುಗಾದಿಯಿಂದ 5 ದಿನಗಳ ಕಾಲ ಶ್ರೀ ಹಿರಿಯ ಗುರುಗಳಪುಣ್ಯಾರಾಧನೆ ನಡೆಸುತ್ತಿದ್ದು ಆ ಸಮಯದಲ್ಲಿ ಪುರಾಣ ಪ್ರವಚನ ಸೇರಿದಂತೆ ವಿವಿಧಕಾರ್ಯಕ್ರಮಗಳನ್ನು ಆಯೋಜನೆಗೊಂಡಿರುತ್ತವೆ.ರ್
Swamiji
Swamiji Name :
ಶ್ರೀ ಷ.ಬ್ರ. ಡಾ. ಶಾಂತಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
28-8-1978
Place :
ತೆಂಗಳಿ, ಚಿತ್ತಾಪುರ ತಾ||
Pattadikara :
16-5-2013
Photo :
Programs
ದೀಪಾವಳಿಯ ಚತುದರ್ಶಿಯಂದು ಲಿಂ|| ಷ.ಬ್ರ. ಶ್ರೀ. ಮಡಿವಾಳೇಶ್ವರ ಸ್ವಾಮಿಗಳ ಪುಣ್ಯಾರಾಧನೆ ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ ಹಾಗೂ ವಿಶೇಷ ಪೂಜೆ
ಮೂಲ ಮಂಗಲಗಿಯ ಮಠದಲ್ಲಿ ಯುಗಾದಿಯಿಂದ 5 ದಿನಗಳ ಕಾಲ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ, ಪುರಾಣ ಪ್ರವಚನ. ವಿವಿಧ ಕಾರ್ಯಕ್ರಮಗಳು.
Photos
Full Address Kannada
ಶ್ರೀ ಶಾಂತೇಶ್ವರ ಹಿರೇಮಠ ತೆಂಗಳಿ,
ಮಳಖೇಡ ಪೋ - 585 317
ಚಿತ್ತಾಪುರ ತಾ||, ಕಲಬುರಗಿ ಜಿಲ್ಲೆ