Shree Shantalingeshwara Virakta – Nimbala

Shree Shantalingeshwara Virakta – Nimbala Claimed

ಶ್ರೀ ಶಾಂತಲಿಂಗೇಶ್ವರ ವಿರಕ್ತ ಮಠ ನಿಂಬಾಳ

Average Reviews

Description

ಶ್ರೀ ಶಾಂತಲಿಂಗೇಶ್ವರ ವಿರಕ್ತ ಮಠ – ನಿಂಬಾಳ

ಕರ್ತೃ ಶ್ರೀ ಮ.ನಿ.ಪ್ರ. ಶಾಂತಲಿಂಗೇಶ್ವರ ಮಹಾಸ್ವಾಮಿಗಳು

ಶ್ರೀ ಶಾಂತಲಿಂಗೇಶ್ವರ ವಿರಕ್ತ ಮಠ – ನಿಂಬಾಳಗುಲ್ಬರ್ಗಾ ಜಿಲ್ಲೆ ಆಳಂದ ತಾಲ್ಲೂಕಿನ ನಿಂಬಾಳ ಗ್ರಾಮದ ಮಧ್ಯಭಾಗದಲ್ಲಿಅಸ್ತಿತ್ವದಲ್ಲಿರುವ ಶ್ರೀ ಶಾಂತಲಿಂಗೇಶ್ವರ ವಿರಕ್ತಮಠವು ತನ್ನ ಧಾರ್ಮಿಕ, ಸಾಮಾಜಿಕ ಹಾಗೂಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿಗುರುತಿಸಿಕೊಂಡಿದೆ. ದುಧನಿ ಗ್ರಾಮದ ವಿರಕ್ತ ಮಠದ ಮಠಾಧೀಶರಾದ ಪೂಜ್ಯ ಶ್ರೀಶಾಂತಲಿಂಗೇಶ್ವರರು ಶ್ರೀಮಠದ ಕರ್ತೃಗುರುಗಳು.ಪೂಜ್ಯ ಶ್ರೀ ಶಾಂತಲಿಂಗೇಶ್ವರರು ಮಹಾರಾಷ್ಟ್ರದ ದುಧನಿ ಗ್ರಾಮದ ವಿರಕ್ತಮಠದಮಠಾಧೀಶರೂ ಶ್ರೀಮಠವನ್ನು ಮುನ್ನಡೆಸಿಕೊಂಡು ಬಂದಿದ್ದರು. ಆದರೆ ದುದನಿ ಮಠದಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಮಹಾಲಿಂಗ ಮಹಾಸ್ವಾಮಿಗಳು ಅಧಿಕಾರಕ್ಕೆ ಬಂದಮೇಲೆ ಈ ಮಠವು ಖಾಲಿ ಉಳಿಯಿತು. ಅಂದಿನಿಂದ ಮಠವು ಪೂರ್ಣ ಜೀರ್ಣಾವಸ್ಥೆಗೆಬಂದಿತು.ತದನಂತರ 1973ರಲ್ಲಿ ದುಧನಿ ಮಠದ ಅಧಿಕಾರವನ್ನು ವಹಿಸಿಕೊಂಡ ಈಗಿನಶ್ರೀಗಳಾದ ಶ್ರೀ ಮ.ನಿ.ಪ್ರ. ಜಡೆ ಶಾಂತಲಿಂಗೇಶ್ವರ ಮಹಾಸ್ವಾಮಿಗಳು 1974ರಿಂದ ಇಲ್ಲಿಗೆಬಂದು ನೆಲೆಸತೊಡಗಿದರು. ಅಂದಿನಿಂದ ಮಠವು ಜೀರ್ಣಾಭಿವೃದ್ಧಿಗೊಳ್ಳತೊಡಗಿತು.ಹಳೆಯ ಕಟ್ಟಡವನ್ನು ನವೀಕರಣಗೊಳಿಸಿ ಹೊಸ ಕಟ್ಟಡವನ್ನು ನಿರ್ಮಿಸಿದ್ದಾರೆ. ಶ್ರೀಗಳುಬಂದ ನಂತರ ಶ್ರೀಮಠದ ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ಚುರುಕುಗೊಳಿಸಿದರು.ಶ್ರೀ ಮ.ನಿ.ಪ್ರ. ಜಡೆ ಶಾಂತಲಿಂಗೇಶ್ವರ ಮಹಾಸ್ವಾಮಿಗಳು “ಮೌನತಪಸ್ವಿ”ಗಳೆಂದೇ ಪ್ರಸಿದ್ಧರಾಗಿದ್ದಾರೆ. 1982ರಿಂದ ಮೌನವ್ರತವನ್ನು ಪ್ರಾರಂಭಿಸಿ ಈ ತನಕಮುಂದುವರೆಸಿಕೊಂಡು ಬಂದಿರುವುದು ವಿಶೇಷ. ಮೌನವ್ರತದಲ್ಲಿಯೇ ಕರ್ನಾಟಕ,ಮಹಾರಾಷ್ಟ್ರದಾದ್ಯಂತ ಅಪಾರ ಭಕ್ತಬಳಗವನ್ನು ಹೊಂದಿರುವ ಶ್ರೀಗಳು ಮಠದ ಎಲ್ಲಾಕಾರ್ಯಗಳನ್ನು ಮೌನದಲ್ಲಿಯೇ ವ್ಯವಸ್ಥಿತವಾಗಿ ನಡೆಸುತ್ತಾ ಬಂದು ಅಭಿವೃದ್ಧಿಪಡಿಸಿದ್ದಾರೆ.ಮಠದಲ್ಲಿ ಕರ್ತೃ ಗುರುಗಳಾದ ಶ್ರೀ ಶಾಂತಲಿಂಗೇಶ್ವರರ ಕರ್ತೃ ಗದ್ದುಗೆನಿರ್ಮಾಣವಾಗಿದೆ. ಈ ಗದ್ದುಗೆಗೆ ನಿತ್ಯ ರುದ್ರಾಭಿಷೇಕ ಪೂಜೆ ನೆರವೇರುತ್ತಿದ್ದು ವಿಶೇಷಸಂದರ್ಭಗಳಲ್ಲಿ ವಿಶೇಷ ಪೂಜೆ ಕಾರ್ಯಕ್ರಮಗಳು ಜರಗುತ್ತದೆ. ಶ್ರೀಮಠದಲ್ಲಿ ಪ್ರತಿನಿತ್ಯಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಅಮವಾಸ್ಯೆಗೆ ಶ್ರೀಗಳ ದರ್ಶನ ಏರ್ಪಾಡಾಗಿರುತ್ತದೆ.ಶ್ರೀಗಳು ಪ್ರತಿವರ್ಷ ಶಿವರಾತ್ರಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಂಡುಬರುತ್ತಿದ್ದು ಛಟ್ಟಿ ಅಮವಾಸ್ಯೆ ಆದ 3ನೇ ದಿನಕ್ಕೆ ಶ್ರೀ ಮಠದ ಜಾತ್ರಾ ಮಹೋತ್ಸವವನ್ನುಆಯೋಜಿಸುತ್ತಿದ್ದಾರೆ. ಈ ಎಲ್ಲಾ ಸಂದರ್ಭಗಳಲ್ಲಿ ಪುರಾಣ ಪ್ರವಚನ ತಮ್ಮ ಧಾರ್ಮಿಕಹಾಗೂ ಸಾಹಿತಿಕ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಿ ಜನರನ್ನು ಸನ್ಮಾರ್ಗಕ್ಕೆತರುವಲ್ಲಿ ಶ್ರಮಿಸಲಾಗುತ್ತಿದೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಜಡೆ ಶಾಂತಲಿಂಗೇಶ್ವರ ಮಹಾಸ್ವಾಮಿಗಳು
Date of Birth :
23-02-1942
Place :
ಜಡೆ ಹಿರೇಮಠ, ಸೊರಬ ತಾ||
Pattadikara :
1973
Photo :

Programs

ಪ್ರತಿ ಅಮವಾಸೆಗೆ ಶ್ರೀಗಳ ದರ್ಶನ
ಶಿವರಾತ್ರಿಗೆ ವಿಶೇಷ ಪೂಜೆ
ಛಟ್ಟೆ ಅಮವಾಸೆ ಆದ 3ನೇ ದಿನಕ್ಕೆ ಶ್ರೀ ಮಠದ ಜಾತ್ರಾ ಮಹೋತ್ಸವ

Photos

Full Address Kannada

ಶ್ರೀ ಶಾಂತಲಿಂಗೇಶ್ವರ ವಿರಕ್ತ ಮಠ
ನಿಂಬಾಳ - 585236
ಆಳಂದ ತಾ||, ಕಲಬುರಗಿ ಜಿಲ್ಲೆ

Map

Near by Places

ನಿಂಬರ್ಗಾ - 22 ಕಿ.ಮೀ.
ಆಳಂದ - 35 ಕಿ.ಮೀ.
ಕಲಬುರಗಿ - 60 ಕಿ.ಮೀ.

Statistic

3 Views
0 Rating
0 Favorite
0 Share
error: Content is protected !!